DAKSHINA KANNADA
ಉಳ್ಳಾಲದಲ್ಲಿ ಮನೆ ಅವರಣಗೋಡೆ ಕುಸಿತ; ಅತಂಕದಲ್ಲಿ ಮನೆ ಮಂದಿ
ಮಂಗಳೂರು: ನಿನ್ನೆ(ಸೆ.23) ರಾತ್ರಿ ಸುರಿದ ಮಳೆಗೆ ನಗರದ ಹೊರವಲಯ ಉಳ್ಳಾಲ ಟಿಸಿ ರೋಡ್ ಮುಳಿಗುಡ್ಡೆ ಎಂಬಲ್ಲಿ ಮನೆಯ ಅವರಣ ಗೋಡೆ ಮೇಲೆ ಮಣ್ಣು ಕುಸಿದು ಬಿದ್ದಿದ್ದು ಮನೆ ಮಂದಿ ಅತಂಕದಲ್ಲಿದ್ದಾರೆ. ಮನೆಯೊಂದು ಕುಸಿಯುವ ಭೀತಿ ಎದುರಾಗಿದೆ. ರಾತ್ರಿ ಸುಮಾರು 2 ಗಂಟೆ ವೇಳೆಗೆ ಈ ಘಟನೆ ನಡೆದಿದ್ದು ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
(ಸೆ.23)ನಿನ್ನೆ ರಾತ್ರಿ ಮಂಗಳೂರು ಸೇರಿದಂತೆ ನಗರದ ಹೊರವಲಯದ ಪ್ರದೇಶಗಳಲ್ಲಿ ಭಾರೀ ಮಳೆಯಾಗಿದೆ. ಸ್ಥಳಕ್ಕೆ ಉಳ್ಳಾಲ ಪುರಸಭೆ ಅಧಿಕಾರಿಗಳು ಭೇಟಿ ನೀಡಿದ್ದು ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸುವ ಕಾರ್ಯಚರಣೆ ನಡೆಯುತ್ತಿದೆ.
DAKSHINA KANNADA
ಫ್ರಾಡ್ ಕಾಲ್; ಬ್ಯಾಂಕ್ ಖಾತೆಯಿಂದ 76 ಸಾವಿರ ವಂಚನೆ
ಕಾರ್ಕಳ: ಬ್ಯಾಂಕ್ ಅಕೌಂಟ್‌ನಲ್ಲಿ ಸಮಸ್ಯೆಯಾಗಿದ್ದು, ಅದನ್ನು ನಿವಾರಿಸುವುದಾಗಿ ವ್ಯಕ್ತಿಯೊಬ್ಬರಿಗೆ 76 ಸಾವಿರ ರೂ. ವಂಚನೆ ಮಾಡಿರುವ ಘಟನೆ ಕಾರ್ಕಾಳದಲ್ಲಿ ನಡೆದಿದೆ.
ಕಸಬಾ ಗ್ರಾಮದ ಬಾಲಚಂದ್ರ ಅವರು ಆಕ್ಸಿಸ್ ಬ್ಯಾಂಕ್ ಹಾಗೂ ಎಚ್‌ಡಿಎಫ್‌ಸಿ ಬ್ಯಾಂಕ್‌ಗಳಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿದ್ದರು. ಸೆ. 30 ರಂದು ಮನೋಜ್ ಶರ್ಮಾ ಕರೆ ಮಾಡಿ, ಎಚ್‌ಡಿಎಫ್‌ಸಿ ಬ್ಯಾಂಕ್ ಸಮಸ್ಯೆಯನ್ನು ನಿವಾರಿಸುತ್ತೇವೆ ಎಂದು ಹೇಳಿ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು, ಕೊನೆಯದ್ದಾಗಿ ಒಟಿಪಿ ಪಡೆದುಕೊಂಡನು.
ಅ.1 ರಂದು ಸಂಜೆ 4 ರಿಂದ 6 ರ ಅವಧಿಯಲ್ಲಿ ಎರಡೂ ಬ್ಯಾಂಕ್‌ನ ಕ್ರೆಡೀಟ್ ಕಾರ್ಡ್ ಮೂಲಕ 76,118 ರೂ. ಕಡಿತವಾಗಿತ್ತು. ಈ ಬಗ್ಗೆ ಕಾರ್ಕಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ನಡೆಸುತ್ತಿದ್ದಾರೆ.
DAKSHINA KANNADA
ಮಂಗಳೂರಿಗೆ ಬಂದ ಕರ್ನಾಟಕ ಸುವರ್ಣ ರಥ
ಮಂಗಳೂರು: ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿ 50 ವರ್ಷ ಪೂರೈಸಿದ ಹಿನ್ನೆಯಲ್ಲಿ ರಾಜ್ಯದಾದ್ಯಂತ ಸಂಚರಿಸುತ್ತಿರುವ ಸುವರ್ಣ ಕರ್ನಾಟಕ ರಥ ಮಂಗಳೂರಿಗೆ ಆಗಮಿಸಿದೆ.
ರಾಜ್ಯದ ಪ್ರತಿ ಜಿಲ್ಲೆ, ತಾಲೂಕಿನಲ್ಲಿ ಸಂಚರಿಸುವ ಈ ರಥವನ್ನು ದಕ್ಷಿಣ ಕನ್ನಡ ಜಿಲ್ಲೆಗೆ ಸ್ವಾಗತಿಸುವ ಕಾರ್ಯಕ್ರಮ ಸರಳ ರೀತಿಯುಲ್ಲಿ ನಡೆಯಿತು. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವ ಕಾರಣ ಆಧಿಕಾರಿಗಳು ರಥವನ್ನು ಸ್ವಾಗತಿಸಿದ್ದಾರೆ. ಕುದ್ಮುಲ್ ರಂಗರಾವ್ ಸಭಾಂಗಣದಲ್ಲಿ ರಥಕ್ಕೆ ಸ್ವಾಗತ ಕೋರಲಾಗಿದ್ದು, ಅಧಿಕಾರಿಗಳಿಂದಲೇ ಸರಳ ಕಾರ್ಯಕ್ರಮ ಕೂಡಾ ಆಯೋಜಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಸಿ.ಎಲ್. ಆನಂದ್ ಅವರ ನೇತೃತ್ವದಲ್ಲಿ ರಥವನ್ನು ಸ್ವಾಗತಿಸಲಾಗಿದ್ದು, ಜಿಲ್ಲೆಯ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು. ಕಳೆದ ವರ್ಷ ನವೆಂಬರ್ 1 ರಿಂದ ಈ ರಥ ರಾಜ್ಯದಾದ್ಯಂತ ಸಂಚರಿಸಿ ಕರ್ನಾಟಕ ಸುವರ್ಣ ಸಂಭ್ರಮದ ಸಂದೇಶ ಸಾರುತ್ತಿದೆ.
DAKSHINA KANNADA
ಮಾಜಿ ಸಚಿವ ಜನಾರ್ದನ ಪೂಜಾರಿಯಿಂದ ಕುದ್ರೋಳಿ ದಸರಾ ಉದ್ಘಾಟನೆ
ಮಂಗಳೂರು : ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದಲ್ಲಿ ಕಳೆದ 34 ವರ್ಷಗಳಿಂದ ವಿಜೃಂಭಣೆಯ ದಸರಾ ಮಹೋತ್ಸವ ನಡೆಸಲಾಗುತ್ತಿದೆ. ಈ ಬಾರಿಯೂ ವಿಜೃಂಭಣೆಯಿಂದ ನಡೆಯಲಿರುವ ದಸರಾ ಉತ್ಸವಕ್ಕೆ ಇಂದು(ಅ.3) ಮುಂಜಾನೆ ಹನ್ನೊಂದು ಘಂಟೆಗೆ ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ ಚಾಲನೆ ನೀಡಿದ್ದಾರೆ.
ಮುಂಜಾನೆ 8.30ಕ್ಕೆ ಗುರು ಪೂಜೆಯೊಂದಿಗೆ ಕುದ್ರೋಳಿ ಕ್ಷೇತ್ರದ ನವರಾತ್ರಿ ಉತ್ಸವದ ಧಾರ್ಮಿಕ ವಿಧಿವಿಧಾನ ಆರಂಭಗೊಂಡಿತ್ತು. ನಾರಾಯಣ ಗುರುಗಳಿಗೆ, ಕ್ಷೇತ್ರದ ದೇವರು ಹಾಗೂ ಪರಿವಾರ ದೈವಗಳಿಗೆ ವಿಶೇಷ ಪೂಜೆಯ ಬಳಿಕ ನವರಾತ್ರಿ ಉತ್ಸವದ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ಶಾರದೆಯನ್ನು ಹೊತ್ತು ತಂದ ಭಕ್ತರು ಇಲ್ಲಿನ ದರ್ಬಾರ್ ಹಾಲ್‌ನಲ್ಲಿ ಶಾರದೆಯನ್ನು ಪ್ರತಿಷ್ಠಾಪಿಸುವ ಮೂಲಕ ದಸರಾ ಉತ್ಸವಕ್ಕೆ ವಿದ್ಯುಕ್ತ ಚಾಲನೆ ನೀಡಲಾಗಿದೆ.
ಇದನ್ನೂ ಓದಿ : ವಿಶ್ವ ವಿಖ್ಯಾತ ಮೈಸೂರು ದಸರಾಕ್ಕೆ ಅದ್ದೂರಿ ಚಾಲನೆ
ಕುದ್ರೋಳಿ ಗೋಕರ್ಣನಾಥೇಶ್ವರ ದೇವಸ್ಥಾನದ ಪುನರ್ ನಿರ್ಮಾಣದ ರೂವಾರಿ ಹಾಗೂ ದಸರಾ ಉತ್ಸವದ ಕಾರಣೀಕರ್ತರು ಮಾಜಿ ಕೇಂದ್ರ ಸಚಿವ ಬಿ.ಜನಾರ್ಧನ ಪೂಜಾರಿ. ಈ ಬಾರಿ ಅವರೇ ದಸರಾ ಉತ್ಸವವನ್ನು ಹಲವು ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದಾರೆ. ಈ ಬಾರಿಯ ದಸರಾ ಮಹೋತ್ಸವದ ಪ್ರತಿಯೊಂದ ವಿಚಾರವನ್ನು ಗಮನಿಸಿರುವ ಜನಾರ್ಧನ ಪೂಜಾರಿಯವರು ಕಳೆದೆರಡು ದಿನಗಳಿಂದ ಕ್ಷೇತ್ರಕ್ಕೆ ನಿರಂತರ ಭೇಟಿ ನೀಡಿ ದಸರಾ ಸಿದ್ಧತೆಗಳನ್ನು ವೀಕ್ಷಣೆ ಮಾಡಿದ್ದರು. ಇಂದು ದಸರಾ ಉದ್ಘಾಟನೆಗೆ ದರ್ಬಾರ್ ಹಾಲ್‌ನಲ್ಲಿ ನಡೆದುಕೊಂಡೇ ಬಂದ ಪೂಜಾರಿಯವರು ಗಮನ ಸೆಳೆದಿದ್ದರು. ಕ್ಷೇತ್ರದ ಆಡಳಿತ ಮಂಡಳಿ ಹಾಗೂ ಗಣ್ಯ ಅತಿಥಿಗಳು ದಸರಾ ಉದ್ಘಾಟನೆಯ ಸಂದರ್ಭದಲ್ಲಿ ಭಾಗವಹಿಸಿ, ಶಾರದೆ ಹಾಗೂ ನವದುರ್ಗೆಯರ ಆಶೀರ್ವಾದ ಪಡೆದುಕೊಂಡಿದ್ದಾರೆ.
- DAKSHINA KANNADA7 days ago
ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು
- BIG BOSS4 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- BIG BOSS4 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್
- BIG BOSS4 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!