LATEST NEWS
ದೇಶಾದ್ಯಂತ 77ನೇ ಸ್ವಾತಂತ್ರ್ಯೋತ್ಸವ-ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ದೆಹಲಿ: ದೇಶಾದ್ಯಂತ ಆ.15ರ ಇಂದು ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ, ಸಡಗರ ಮನೆ ಮಾಡಿದೆ. ಬ್ರಿಟಿಷ್ ಆಳ್ವಿಕೆಯಿಂದ ತನ್ನ ಸ್ವಾತಂತ್ರ್ಯವನ್ನು ಗುರುತಿಸುವ ಸಾಮಾನ್ಯ ಹೆಮ್ಮೆಯೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು 77ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದರು.
ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಗೆ ಮೂರು ಸೇನಾಪಡೆಗಳು ಗೌರವ ಸಲ್ಲಿಸಿದವು.
ಇದಕ್ಕೂ ಮುನ್ನ ರಾಜ್‌ಘಾಟ್‌ಗೆ ತೆರಳಿ ಮೋದಿ ನಮನ ಸಲ್ಲಿಸಿದರು.
#WATCH | Prime Minister Narendra Modi hoists the National Flag at the Red Fort in Delhi, on #IndependenceDay pic.twitter.com/lO3SRCM7kZ
— ANI (@ANI) August 15, 2023
ಕೆಂಪು ಕೋಟೆಯಲ್ಲಿ ಪ್ರಧಾನಿ ಮೋದಿ ಧ್ವಜಾರೋಹಣ ಮಾಡಿದ ನಂತರ ಐಎಎಫ್ ಹೆಲಿಕಾಪ್ಟರ್ ಪುಷ್ಪವೃಷ್ಟಿ ಮಾಡಿತು.
#WATCH | IAF helicopter showers flower petals after flag hoisting by PM Modi at Red Fort on the 77th Independence Day pic.twitter.com/XzDWx1CqPZ
— ANI (@ANI) August 15, 2023
ಬಳಿಕ ಭಾಷಣ ಮಾಡಿದ ಪ್ರಧಾನಿ ಮೋದಿ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ಈಗ ಜನಸಂಖ್ಯೆಯ ದೃಷ್ಟಿಯಿಂದ ಮುಂಚೂಣಿಯಲ್ಲಿರುವ ದೇಶ ಭಾರತ.
ಇಷ್ಟು ದೊಡ್ಡ ದೇಶ, ನನ್ನ ಕುಟುಂಬದ 140 ಕೋಟಿ ಸದಸ್ಯರು ಇಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿದ್ದಾರೆ ಎಂದರು.
#WATCH | IAF helicopter showers flower petals after flag hoisting by PM Modi at Red Fort on the 77th Independence Day pic.twitter.com/XzDWx1CqPZ
— ANI (@ANI) August 15, 2023
ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡುಗೆ ನೀಡಿದ ಎಲ್ಲಾ ಕೆಚ್ಚೆದೆಯ ಹೃದಯಗಳಿಗೆ ನಾನು ಗೌರವವನ್ನು ಸಲ್ಲಿಸುತ್ತೇನೆ ಎಂದ ಅವರು, ಮಣಿಪುರದಲ್ಲಿ ಶಾಂತಿ ನೆಲೆಸಬೇಕು ಎಂದು ಕೆಂಪು ಕೋಟೆಯಿಂದ ಮಾಡಿದ ಸ್ವಾತಂತ್ರ್ಯೋತ್ಸವದ ಭಾಷಣದಲ್ಲಿ ಮನವಿ ಮಾಡಿದರು.
ಇಂದು 140 ಕೋಟಿ ಭಾರತೀಯರ ಶ್ರಮದಿಂದ ಐದನೇ ಸ್ಥಾನಕ್ಕೆ ತಲುಪಿದ್ದೇವೆ.
ಇದು ಏಕಾಏಕಿ ಸಾಧ್ಯವಾಗಲಿಲ್ಲ. ದೇಶವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿದಿದ್ದ ಭ್ರಷ್ಟಾಚಾರದ ರಾಕ್ಷಸನನ್ನು ಹೊಡೆದೋಡಿಸಿದ್ದೇವೆ.
ನಾವು ಸೋರಿಕೆಯನ್ನು ನಿಲ್ಲಿಸಿದ್ದೇವೆ ಮತ್ತು ಬಲವಾದ ಆರ್ಥಿಕತೆಯನ್ನು ರೂಪಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
DAKSHINA KANNADA
ದ.ಕ.ಜಿಲ್ಲೆಯ 9 ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ
ಮಂಗಳೂರು: ದ.ಕ.ಜಿಲ್ಲೆಯ 9 ತಾಲೂಕಿನ 9 ಗ್ರಾಮಗಳು 2022-23ನೆ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಯಾಗಿದೆ.
ಅಕ್ಟೋಬರ್ 2ರ ಗಾಂಧಿಜಯಂತಿ ದಿನದಂದು ರಾಜ್ಯ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಯನ್ನು ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟನೆ ತಿಳಿಸಿದೆ.
ಮಂಗಳೂರು ತಾಲೂಕಿನ ಉಳಾಯಿಬೆಟ್ಟು, ಉಳ್ಳಾಲ ತಾಲೂಕಿನ ಬೆಳ್ಮ, ಮುಲ್ಕಿ ತಾಲೂಕಿನ ಕೆಮ್ರಾಲ್, ಮೂಡುಬಿದಿರೆ ತಾಲೂಕಿನ ಪುತ್ತಿಗೆ, ಬಂಟ್ವಾಳ ತಾಲೂಕಿನ ಅಮ್ಮುಂಜೆ, ಪುತ್ತೂರು ತಾಲೂಕಿನ ಉಪ್ಪಿನಂಗಡಿ, ಕಡಬ ತಾಲೂಕಿನ ಸವಣೂರು, ಬೆಳ್ತಂಗಡಿ ತಾಲೂಕಿನ ಬಳಂಜ, ಸುಳ್ಯ ತಾಲೂಕಿನ ಮರ್ಕಂಜ ಗ್ರಾಮಗಳು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿವೆ.
LATEST NEWS
Baindoor: ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿದ್ದ ವ್ಯಕ್ತಿಯ ರಕ್ಷಣೆ..!
ಬೈಂದೂರು: ಬೈಂದೂರು- ಶಿರೂರು ನೆರೆಗುದ್ದೆ ರೈಲ್ವೆ ಸುರಂಗ ಮಾರ್ಗದಲ್ಲಿ ಕೋಮಾ ಸ್ಥಿತಿಯಲ್ಲಿ ಬಿದ್ದುಕೊಂಡಿದ್ದ ಯುವಕನೊಬ್ಬನನ್ನು ಆರೋಗ್ಯ ಕವಚ 108 ಆ್ಯಂಬುಲೆನ್ಸ್ ಸಿಬಂದಿ ರಕ್ಷಿಸಿ ಪ್ರಾಣ ಉಳಿಸಿರುವ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ಗಾಯಾಳು ವ್ಯಕ್ತಿಯನ್ನು ರಾಜೇಶ್ (25)ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ 10 ಗಂಟೆಗೆ ರೈಲ್ವೆ ಇಲಾಖೆ ನೀಡಿದ ಮಾಹಿತಿಯ ಮೇರೆಗೆ ಆರೋಗ್ಯ ಕವಚ 108 ಸಿಬಂದಿ ಕಾರ್ಯಚರಣೆ ನಡೆಸಿದರು.
ರೈಲ್ವೇ ಸುರಂಗ ಮಾರ್ಗದೊಳಗೆ ಸುಮಾರು 3 ಕಿ.ಮೀ ನಡೆದು ಕೊಂಡು ಹೋಗಿ ಹಳಿಯ ಪಕ್ಕದಲ್ಲಿ ಮುಗುಚಿ ಬಿದ್ದಿದ್ದ ವ್ಯಕ್ತಿಯನ್ನು ಸ್ಟ್ರೆಚರ್ ನಲ್ಲಿ ಹಾಕಿ ಹೊತ್ತು ಹೊರತಂದು ಬೈಂದೂರು ಆಸ್ಪತ್ರೆಗೆ ದಾಖಲಿಸಿದರು.
ಅಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಅಲ್ಲಿಂದ ಕುಂದಾಪುರ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆ್ಯಂಬುಲೆನ್ಸ್‌ನ ಪೈಲೆಟ್ ಶರಣ ಬಸವ ಮತ್ತು ಇ ಎಂ ಟಿ ಪ್ರತಿಭಾ ಅವರು ಅಸ್ವಸ್ಥ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿ ಕರ್ತವ್ಯ ನಿಷ್ಠೆ ಮೆರೆದಿದ್ದಾರೆ.
LATEST NEWS
ಕೊರಗಜ್ಜನ ಪವಾಡ- ವಾರವಿಡೀ ಕಾಡಿನಲ್ಲಿ ಸಿಲುಕಿದ ಯುವಕನ ರಕ್ಷಣೆ ಮಾಡಿದ ನಾಯಿಯ ಅದ್ದೂರಿ ಮೆರವಣಿಗೆ
ಕುಂದಾಪುರ: ತುಳುನಾಡಿನಲ್ಲಿ ಕೊರಗಜ್ಜನ ದೈವದ ಕಾರ್ಣಿಕದ ಶಕ್ತಿ ಅಪಾರವಾದದ್ದು. ಹಾಗಾಗಿ ನಂಬುವ ಜನರಿಗೆ ಕೊರಗಜ್ಜ ಯಾವತ್ತೂ ಕೈ ಬಿಡುದಿಲ್ಲ ಎಂಬ ನಂಬಿಕೆ ಇದೆ.
ಆ ನಂಬಿಕೆಯಂತೆ ಉಡುಪಿ ಜಿಲ್ಲೆಯಲ್ಲೊಂದು ಅಚ್ಚರಿ ಘಟನೆ ನಡೆದಿದೆ.
ಕುಂದಾಪುರದ ಯುವಕನೋರ್ವ ಕಾಣೆಯಾಗಿದ್ದಾನೆ ಎಂದು ತಿಳಿದ ಮನೆಯವರು ದೈವದ ಮೊರೆ ಹೋದ ಬೆನ್ನಲೇ ಆತ ನಾಯಿಯೊಂದಿಗೆ ವಾಪಸು ಮನೆಗೆ ಮರಳಿದ್ದಾನೆ.
ಇದು ನಂಬಿದ ದೈವವೇ ಯುವಕನನ್ನು ಮರಳಿ ಮನೆಗೆ ಕರೆಸಿದೆ ಎಂದು ಗ್ರಾಮಸ್ಥರು ನಂಬಬಿದ್ದಾರೆ.
ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಮಚ್ಚೆಟ್ಟು ವ್ಯಾಪ್ತಿಯ ವಿವೇಕಾನಂದ ಎಂಬ ಯುವಕನು ಕಾಡಿಗೆ ಕಟ್ಟಿಗೆ ತರಲು ಎಂದು ಹೋದವನು 8 ದಿನವಾದರೂ ಮನೆಗೆ ವಾಪಸು ಬಂದಿರಲಿಲ್ಲ.
ಹಾಗಾಗಿ ಮನೆಯವರು ದೈವದ ಮೊರೆ ಹೋಗಿದ್ದಾರೆ.
ಈ ವೇಳೆ ಆತ ಜೀವಂತವಾಗಿರುವುದು ತಿಳಿದು ಬಂದ ಕೂಡಲೇ ದೈವದ ಭರವಸೆಯಂತೆ ಪೊಲೀಸರು, ಎಎನ್‌ಎಫ್ ಪಡೆಯೊಂದಿಗೆ ಗ್ರಾಮಸ್ಥರು ಹಗಲು ರಾತ್ರಿ ಇಡೀ ಆತನ ಪತ್ತೆಗೆ ಹುಡುಕಾಡಿದ್ದಾರೆ.
ಆದರೆ ಆತನ ಸುಳಿವು ಸಿಕ್ಕಿರದ ಕಾರಣ ಮನೆಯವರು ಮುಳ್ಳುಗುಡ್ಡೆ ಕೊರಗಜ್ಜ ಸನ್ನಿಧಾನಕ್ಕೆ ಬಂದು ಪ್ರಾರ್ಥನೆ ಸಲ್ಲಿಸಿದರು.
“ಆತ ಹಂದಿಯೊಂದನ್ನು ಓಡಿಸಿಕೊಂಡು ಹೋಗುವಾಗ ದಾರಿ ತಪ್ಪಿದ್ದಾನೆ. ಹಕ್ಕಿಯೊಂದು ದಾರಿ ತೋರಿಸಿದೆ.
ಹಳದಿ ಬಣ್ಣದ ಅಂಗಿ ಹಾಕಿ ಕಾಡಿನಲ್ಲಿ ಅಡಗಿ ಕುಳಿತ್ತಿದ್ದಾನೆ.
5 ಜನ ಸೇರಿ ಅಲ್ಲಿ ಹೋಗಿ ಹುಡುಕಿ. ಆಗಲಿಲ್ಲವಾದರೆ ಇನ್ನು ಎರಡು ದಿನದ ಒಳಗೆ ಆತ ಮನೆಗೆ ಬರುತ್ತಾನೆ” ಎಂದು ಕ್ಷೇತ್ರದ ಧಮ೯ದಶಿ೯ ಪುನೀತ್ ಅವರು ಹೇಳಿದ್ದರು.
ಅದರಂತೆ ಮಗನ ಬರುವಿಕೆಗೆ ಮನೆಯವರು ಕಾಯುತ್ತಿದ್ದರು.
ಇದೀಗ ಮನೆಯವರಿಗೆ ಹಾಗೂ ಗ್ರಾಮಸ್ಥರಿಗೆ ಕೊರಗಜ್ಜನ ದೈವದ ಶಕ್ತಿ ಅಚ್ಚರಿಯನ್ನುಂಟು ಮಾಡಿದೆ.
ಕೊರಗಜ್ಜ ಕ್ಷೇತ್ರದ ಧರ್ಮದರ್ಶಿ ಪುನೀತ್ ಅವರ ನುಡಿಯಂತೆ ಎಂಟು ದಿನಗಳ ಬಳಿಕ ಆತ ನಾಯಿಯೊಂದಿಗೆ ಮರಳಿ ಬರುತ್ತಾನೆ.
ಆದರೆ ಆತನಿಗೆ ತಾನೂ ಎಲ್ಲಿ ಹೋಗಿದ್ದೆ ಎಂದು ಗೊತ್ತಿಲ್ಲ. ಕಾಡಿನಲ್ಲಿ ಸಿಲುಕಿದ ಕಾರಣ ಆಹಾರವಿಲ್ಲದೆ ವಿವೇಕಾನಂದನು ನಿತ್ರಾಣಗೊಂಡಿದ್ದ.
ಆತನ ಜೊತೆಗಿದ್ದದ್ದು ಮಾತ್ರ ಮನೆಯ ಸಾಕು ನಾಯಿ, ಆತನ ಮರಳಿ ಬರುವಂತೆ ದಾರಿ ತೋರಿಸಿ ರಕ್ಷಿಸಿದೆ.
ಹಾಗಾಗಿ ಆತನ ಜೀವ ಉಳಿಸಿದ ನಾಯಿಯನ್ನು ಗ್ರಾಮಸ್ಥರು ಸೇರಿ ಅದ್ದೂರಿಯಾಗಿ ತೆರೆದ ಪಿಕಪ್ ವಾಹನದಲ್ಲಿ ಕುಳ್ಳಿರಿಸಿ ಮೆರವಣಿಗೆ ನಡೆಸಿದರು.
50ಕ್ಕಿಂತ ಹೆಚ್ಚು ಬೈಕ್ ಟೆಂಪೋ ಆಟೋರಿಕ್ಷಾಗಳ ಜೊತೆಗೆ ತೆರೆದ ವಾಹನದಲ್ಲಿ ಚಿಂಟು ಮತ್ತು ವಿವೇಕಾನಂದ ಕುಟುಂಬಸ್ಥರು ಆಪ್ತರನ್ನು ಗೆಳೆಯರ ಬಳಗ ಮೆರವಣಿಗೆ ಮಾಡಿದೆ.
ನಂತರ ಮನೆಯಲ್ಲಿ ಕೇಕ್ ಕತ್ತರಿಸಿ ಹುಟ್ಟು ಹಬ್ಬದ ರೀತಿಯಲ್ಲೇ ವಿವೇಕಾನಂದ ವಾಪಾಸ್ ಬಂದ ಖುಷಿಯನ್ನು ಆಚರಿಸಿದರು.
ಸುತ್ತಮುತ್ತಲ ಮನೆಯವರಿಗೆ ಗೆಳೆಯರ ಬಳಗಕ್ಕೆ ಹುಡುಕಾಡಲು ಸಹಾಯ ಮಾಡಿದ ಎಲ್ಲರಿಗೆ ಶೀನಾ ನಾಯ್ಕ ಕುಟುಂಬ ಸಿಹಿಯೂಟ ಹಾಕಿಸಿದೆ.
- DAKSHINA KANNADA7 days ago
Ullala: 25 ಕೋಟಿ ರೂ. ಲಾಟರಿ ಒಲಿದಿದೆ ಎಂಬ ಲಿಂಕ್ ಕಳುಹಿಸಿ ಮೋಜಿನಾಟ..!
- FILM6 days ago
ಕುರೂಪಿಯಾದ ಹಾಲಿವುಡ್ ನಟಿ ಆ್ಯಮಿ ಜಾಕ್ಸನ್..!
- DAKSHINA KANNADA6 days ago
ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ಮಟ್ಟದ ರಾಂಬೋ ಸರ್ಕಸ್- ಜನರನ್ನು ಬೆರಗುಗೊಳಿಸುವ ವಿಸ್ಮಯ ಪ್ರದರ್ಶನ..!
- FILM6 days ago
Film: ಹಂದಿ ಮಾಂಸ ಸೇವಿಸಿದ ಟಿಕ್ಟಾಕ್ ಸ್ಟಾರ್ಗೆ 2 ವರ್ಷ ಜೈಲು ಶಿಕ್ಷೆ..!