Saturday, May 21, 2022

ಜೀವಭಯದೊಂದಿಗೆ ದೇಶತೊರೆಯುವಾಗ 7 ತಿಂಗಳ ಹಸುಗೂಸು ಬಿಟ್ಟೋದ ಅಫ್ಘಾನ್ನಿಯರು…..!

ಕಾಬೂಲ್: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸದಿಂದ ಅಫ್ಘಾನ್​ನಲ್ಲಿ ನೆಲೆಸಿರುವವರು ದೇಶ ಬಿಟ್ಟು ಹೋಗುವ ತರಾರುರಿಯಲ್ಲಿ ಕಾಬೂಲ್ ವಿಮಾನ ನಿಲ್ದಾಣದಲ್ಲಿ 7 ತಿಂಗಳ ಮಗುವೊಂದು ನಾಪತ್ತೆಯಾಗಿದೆ.


ಕಾಬೂಲ್​ನಲ್ಲಿ ವಾಸವಾಗಿರುವ ಆ ಹೆಣ್ಣು ಮಗುವಿನ ಅಪ್ಪ-ಅಮ್ಮ ದೇಶ ಬಿಟ್ಟು ತೆರಳುವ ಗಡಿಬಿಡಿಯಲ್ಲಿ ತಮ್ಮ 7 ತಿಂಗಳ ಹೆಣ್ಣು ಮಗುವನ್ನು ಕಳೆದುಕೊಂಡಿದ್ದಾರೆ. ವಿಮಾನ ನಿಲ್ದಾಣದ ಸುತ್ತಲೂ ಬಂದೂಕು ಹಿಡಿದು ನಿಂತಿರುವ ಸೈನಿಕರ ನಡುವೆ ಆ ಮಗುವನ್ನು ಹುಡುಕುವುದೇ ಕಷ್ಟಕರವಾಗಿದೆ.

ಬಾಕ್ಸ್​ನಲ್ಲಿ ಮಲಗಿದ್ದ 7 ತಿಂಗಳ ಮಗುವಿನ ಫೋಟೋವನ್ನು ಪೊಲೀಸರು ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದು, ಕಾಬೂಲ್ ವಿಮಾನ ನಿಲ್ದಾಣದಲ್ಲಿ ಯಾರಾದರೂ ಈ ಮಗುವನ್ನು ನೋಡಿದರೆ ಮಾಹಿತಿ ನೀಡಿ ಎಂದು ಪೋಸ್ಟ್ ಮಾಡಿರುವುದು ಅಲ್ಲಿನ ಭಯಾನಕ ಸ್ಥಿತಿಗೆ ಸಾಕ್ಷಿ ಹೇಳುವಂತಿದೆ.
ಈ ಮಧ್ಯೆ 7 ತಿಂಗಳ ಮಗುವೊಂದು ಅಪ್ಪ-ಅಮ್ಮನಿಂದ ಬೇರೆಯಾಗಿ ಅಳುತ್ತಾ ಕುಳಿತಿರುವ ಫೋಟೋಗಳು ಭಾರೀ ವೈರಲ್ ಆಗಿವೆ.

ಆ ಮಗುವಿನ ತಂದೆ-ತಾಯಿ ಪೊಲೀಸರಿಗೆ ದೂರು ನೀಡಿದ್ದು, ಆ ಮಗುವಿನ ಬಗ್ಗೆ ಇನ್ನೂ ಯಾವ ಮಾಹಿತಿಯೂ ವಿಮಾನ ನಿಲ್ದಾಣದ ಸಿಬ್ಬಂದಿಗೆ ಸಿಕ್ಕಿಲ್ಲ.
ಕಾಬೂಲ್​ನಿಂದ ವಿಮಾನಗಳು ಹೊರಡುತ್ತಿದ್ದಂತೆ ಅಫ್ಘಾನ್ ಬಿಟ್ಟು ಪ್ರಾಣ ಉಳಿಸಿಕೊಳ್ಳಲು ಹಾತೊರೆಯುತ್ತಿದ್ದ ಜನರು ಸಿಕ್ಕ ಸಿಕ್ಕ ವಿಮಾನಗಳನ್ನು ಹತ್ತಿಕೊಂಡಿದ್ದಾರೆ.

ಈ ವೇಳೆ ವಿಮಾನದ ಚಕ್ರಕ್ಕೂ ಸಿಲುಕಿ ಹಲವರು ಗಾಯಗೊಂಡಿದ್ದರು. ಇನ್ನು ಕೆಲವರು ಸಾವನ್ನಪ್ಪಿದ್ದರು. ಕಾಬೂಲ್​ನಿಂದ ಅಮೆರಿಕಕ್ಕೆ ಬಂದ ಸಿ-17 ಗ್ಲೋಬ್​ಮಾಸ್ಟರ್ ವಿಮಾನದ ಚಕ್ರದ ಸುತ್ತ ಮನುಷ್ಯರ ರಕ್ತ, ಮಾಂಸದ ತುಂಡುಗಳು ಅಂಟಿಕೊಂಡಿದ್ದವು.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳ: ಅಪ್ರಾಪ್ತೆಯ ಮೇಲೆ ಅತ್ಯಾಚಾರ-ಫೊಕ್ಸೋ ಪ್ರಕರಣ ದಾಖಲು

ಬಂಟ್ವಾಳ: ಅಪ್ರಾಪ್ತ ಬಾಲಕಿಯನ್ನು ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಆಕೆ ಗಂಡು ಮಗುವಿನ ಜನ್ಮ ನೀಡಲು ಕಾರಣನಾದ ಆರೋಪಿಯ ವಿರುದ್ಧ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಪ್ರಕರಣ ದಾಖಲಾಗಿದೆ.ಕಿನ್ನಿಗೋಳಿ...

ಕರಾವಳಿ ಜಿಲ್ಲೆಯಲ್ಲಿ ‘ಧರ್ಮ ದಂಗಲ್‌’ಗೆ ಬಲಿಯಾಯಿತೇ ‘SSLC’ ಫಲಿತಾಂಶ..!?

ಮಂಗಳೂರು:ಬಹುನಿರೀಕ್ಷಿತ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟವಾಗಿದೆ. ಪ್ರತೀ ಬಾರಿಯೂ ಜಿಲ್ಲಾವಾರು ಫಲಿತಾಂಶದಲ್ಲಿ ಮೊದಲ ಸ್ಥಾನಕ್ಕಾಗಿ ನೇರಾ-ನೇರಾ ಪೈಪೋಟಿ ನಡೆಸುತ್ತಿದ್ದ ದಕ್ಷಿಣ ಕನ್ನಡ 20ನೇ ಸ್ಥಾನಕ್ಕೆ ಕುಸಿದರೆ ಉಡುಪಿ ಜಿಲ್ಲೆ 13ನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ಗುಣಾತ್ಮಕ...

ಪಠ್ಯದಲ್ಲಿ ನಾರಾಯಣಗುರು ಹೆಸರು ಕೈ ಬಿಟ್ಟಿರುವುದು ಮಾನವ ಕುಲಕ್ಕೆ ನೋವಾಗಿದೆ-ಮಾಜಿ ಸಚಿವ ರೈ

ಮಂಗಳೂರು: ಪಠ್ಯಪುಸ್ತಕ ಮರು ಪರಿಷ್ಕರಣೆ ವೇಳೆ ಬ್ರಹ್ಮಶ್ರೀ ನಾರಾಯಣಗುರುಗಳ ಹೆಸರು ಕೈ ಬಿಟ್ಟಿರುವುದು ಕೇವಲ ಹಿಂದುಳಿದ ವರ್ಗಕ್ಕೆ ಮಾತ್ರ ನೋವಾಗಿಲ್ಲ. ಸಮಸ್ತ ಮಾನವ ಸಮಾಜಕ್ಕೆ ನೋವು ತರುವಂತಹ ವಿಚಾರ ಎಂದು ಮಾಜಿ ಸಚಿವ...