Tuesday, October 19, 2021

ಭಾರತೀಯರಿದ್ದ ವಾಹನಗಳಿಗೆ ಟೈಟ್‌ ಸೆಕ್ಯೂರಿಟಿ ಕೊಟ್ಟು ತಾಯ್ನಾಡಿಗೆ ಕಳುಹಿಸಿದ ತಾಲಿಬಾನಿಗಳು

“ಭಾರತದ ರಾಯಭಾರಿ ಕಚೇರಿಯ ಕಬ್ಬಿಣದ ಗೇಟುಗಳ ಹೊರಗೆ ತಾಲಿಬಾನ್‌ ಉಗ್ರರು ಶಸ್ತ್ರಾಸ್ತ್ರಗಳೊಂದಿಗೆ ಕಾಯುತ್ತಿದ್ದರು. ಮಷಿನ್‌ ಗನ್‌ಗಳು ಮತ್ತು ಗ್ರೆನೇಡ್‌ಗಳು ಅವರ ಸೊಂಟದಲ್ಲಿತ್ತು. ಕಛೇರಿಯ ಆವರಣದ ಒಳಗೆ 150 ಜನ ಭಾರತದ ರಾಜತಾಂತ್ರಿಕರು ಮತ್ತು ನಾಗರಿಕರು ಇದ್ದರು.
ಅದಾಗಲೇ ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ಭಾರತದ ಮಿಲಿಟರಿ ವಿಮಾನವು ಕಾಯುತ್ತಿತ್ತು. ಎಲ್ಲರನ್ನೂ ಬೆಂಗಾವಲಿನಲ್ಲಿ ಕರೆದೊಯ್ಯಲು ಸಜ್ಜಾಗಿ ನಿಂತಿದ್ದರು. ತಡರಾತ್ರಿ ಸುಮಾರು 12 ವಾಹನಗಳು ರಾಯಭಾರಿ ಕಚೇರಿಯಿಂದ ವಿಮಾನ ನಿಲ್ದಾಣಕ್ಕೆ ತೆರಳಿದವು.

ಇದೇ ವೇಳೆ ತಾಲಿಬಾನಿಗಳು ಪ್ರಯಾಣಿಕರತ್ತ ನಗೆಬೀರಿ ಕೈಬೀಸಿದರು ಮತ್ತು ವಿಮಾನ ನಿಲ್ದಾಣಕ್ಕೆ ತೆರಳಲು ಮಾರ್ಗದರ್ಶನ ಮಾಡಿದರು. ಹಸಿರು ವಲಯದ (ಗ್ರೀನ್‌ ಚನಲ್‌) ಮೂಲಕ ತೆರಳಲು ನಮಗೆ ಅವಕಾಶ ನೀಡಲಿಲ್ಲ. ಆಗ ನಾವು ತಾಲಿಬಾನ್‌ ನಾಯಕರನ್ನು ಸಂಪರ್ಕಿಸಿ, ನಮಗೆ ಬೆಂಗಾವಲು ಒದಗಿಸುವಂತೆ ಕೋರಲಾಯಿತು’. ಕೊನೆಗೂ ಐದು ಕಿಲೋ ಮೀಟರ್‌ ದೂರದಲ್ಲಿರುವ ವಿಮಾನ ನಿಲ್ದಾಣಕ್ಕೆ ತೆರಳಲು ಅವಕಾಶ ದೊರೆಯಿತು. ಆದರೆ, ವಾಹನಗಳು ಅತಿ ನಿಧಾನವಾಗಿ ಚಲಿಸಿದವು. ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಲಾಗುತ್ತಿತ್ತು. ಹಲವೆಡೆ ತಪಾಸಣೆ ಠಾಣೆಗಳನ್ನು ಸ್ಥಾಪಿಸಲಾಗಿದೆ. ಪ್ರತಿಯೊಂದು ಕ್ಷಣ ದಾಳಿಯ ಆತಂಕ ಎದುರಾಗುತ್ತಿತ್ತು. ಕೊನೆಗೂ ಐದು ಗಂಟೆಯ ಪ್ರಯಾಣದ ಬಳಿಕ ವಿಮಾನ ನಿಲ್ದಾಣ ತಲುಪಲಾಯಿತು’. ‘ಭಾರತೀಯರಿದ್ದ ವಾಹನಗಳಿಗೆ ಬೆಂಗಾವಲು ಇದ್ದ ತಾಲಿಬಾನಿಗಳು ಜನದಟ್ಟಣೆ ಇರುವ ಸ್ಥಳಗಳಲ್ಲಿ ತಮ್ಮ ವಾಹನಗಳಿಂದ ಜಿಗಿದು ಬಂದೂಕು ತೋರಿಸಿ ಹಿಂದೆ ಸರಿಯುವಂತೆ ಜನರಿಗೆ ಬೆದರಿಕೆ ಹಾಕುತ್ತಿದ್ದರು. ಒಬ್ಬ ವ್ಯಕ್ತಿಯಂತೂ ಗಾಳಿಯಲ್ಲಿ ಗುಂಡು ಹಾರಿಸಿದ. ವಾಹನ ವಿಮಾನ ನಿಲ್ದಾಣ ತಲುಪಿದ ಬಳಿಕ ಬೆಂಗಾವಲಿಗೆ ಇದ್ದ ತಾಲಿಬಾನಿಗಳು ಹಿಂತಿರುಗಿದರು. ವಿಮಾನ ನಿಲ್ದಾಣದಲ್ಲಿ ಅಮೆರಿಕದ ಸೈನಿಕರು ಭದ್ರತಾ ವ್ಯವಸ್ಥೆ ಕೈಗೊಂಡು ವಿಮಾನಗಳ ಸಂಚಾರವನ್ನು ನಿಯಂತ್ರಿಸುತ್ತಿದ್ದರು”
ಇದು ಅಫಘಾನ್‌ನಿಂದ ವಾಯುಸೇನೆಯ ಮೂಲಕ ಭಾರತಕ್ಕೆ ಬಂದಿಳಿದವರ ಅನುಭವ

Hot Topics

ಸಾಲದ ಹೊರೆ ತಾಳಲಾರದೆ ವೀಡಿಯೋ ಮೂಲಕ ಗುಡ್​ಬೈ ಹೇಳಿ ಶಿಕ್ಷಕ ದಂಪತಿ ಆತ್ಮಹತ್ಯೆ

ವಿಜಯವಾಡ: ಶಾಲೆ ನಡೆಸುತ್ತಿದ್ದ ಶಿಕ್ಷಕ ದಂಪತಿ ಸಾಲದ ಹೊರೆ ತಡೆಯಲಾರದೇ ವಿಷಸೇವಿಸಿ ಆತ್ಮಹತ್ಯೆ ಹಾದಿ ಹಿಡಿರುವ ದಾರುಣ ಘಟನೆ ಆಂಧ್ರ ಪ್ರದೇಶದ ಕರ್ನೂಲ್​ ಜಿಲ್ಲೆಯಲ್ಲಿ ನಡೆದಿದೆ. ಸಾವಿಗೂ ಮುನ್ನ ಶಿಕ್ಷಕ ದಂಪತಿ ತಮ್ಮ...

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...