Connect with us

DAKSHINA KANNADA

2021 ರ ಸಿಇಟಿ ಫಲಿತಾಂಶ ಪ್ರಕಟ  : ಮಂಗಳೂರಿನ ಎಕ್ಸ್ ಪರ್ಟ್ ಗೆ ರಾಂಕ್ ಗಳ ಸುರಿಮಳೆ

Published

on

ಮಂಗಳೂರು : ಬಹು ನಿರೀಕ್ಷಿತ 2021 ನೇ ಸಾಲಿನ ಸಿಇಟಿ ಫಲಿತಾಂಶ ಇಂದು ಪ್ರಕಟಗೊಂಡಿದೆ. ಮಂಗಳೂರಿನ ಖ್ಯಾತ ಕಾಲೇಜ್ ಎಕ್ಸ್‌ ಪರ್ಟ್ ಈ ಬಾರಿಯೂ ದಾಖಲೆಯ ಸಾಧನೆ ಮಾಡಿ ಇತಿಹಾಸ ಸೃಷ್ಟಿಸಿದೆ.

ಪರೀಕ್ಷೆಯ ಐದು ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ 6 ರ‍್ಯಾಂಕ್‌ಗಳನ್ನು ಎಕ್ಸ್‌ ಪರ್ಟ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಕಾಲೇಜಿನ ವಿದ್ಯಾರ್ಥಿ ರೀತಮ್ ಬಿ. ಅವರು ಕೃಷಿಯಲ್ಲಿ 2ನೇ ರ‍್ಯಾಂಕ್, ಪಶುವೈದ್ಯಕೀಯದಲ್ಲಿ 3ನೇ ರ‍್ಯಾಂಕ್, ಬಿಎನ್‌ವೈಎಸ್‌ನಲ್ಲಿ 3ನೇ ರ‍್ಯಾಂಕ್, ಬಿ ಫಾರ್ಮಾದಲ್ಲಿ 10 ಹಾಗೂ ಎಂಜಿನಿಯರಿಗ್‌ನಲ್ಲಿ 13ನೇ ರ‍್ಯಾಂಕ್ ಪಡೆದು ಅಭೂತಪೂರ್ವ ಸಾಧನೆ ಮಾಡಿದ್ದಾರೆ.

ತೇಜಸ್ ಕೃಷಿಯಲ್ಲಿ 4, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 24, ಎಂಜಿನಿಯರಿಂಗ್‌ ನಲ್ಲಿ 53, ಫಾರ್ಮಾದಲ್ಲಿ 59 ಹಾಗೂ ಸಂಜನಾ ಕಾಮತ್ ಪಂಚಮಹಲ್ ಕೃಷಿಯಲ್ಲಿ 7ನೇ ರ‍್ಯಾಂಕ್, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 25, ಫಾರ್ಮಾದಲ್ಲಿ 57, ಎಂಜಿನಿಯರಿಂಗ್‌ನಲ್ಲಿ 73ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಇನ್ನು ಸಿಇಟಿಯ 20 ವಿಭಾಗಗಳಲ್ಲಿ ಮೊದಲ 50 ರ‍್ಯಾಂಕ್‌ಗಳಲ್ಲಿ 47 ರ‍್ಯಾಂಕ್‌ಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡು ಇತಿಹಾಸ ನಿರ್ಮಿಸಿದ್ದಾರೆ .

ಮೊದಲ 100 ರ‍್ಯಾಂಕ್‌ಗಳಲ್ಲಿ 85 ರ‍್ಯಾಂಕ್‌ಗಳು, ಮೊದಲ 150 ರ‍್ಯಾಂಕ್‌ಗಳಲ್ಲಿ 121, ಮೊದಲ 200 ರ‍್ಯಾಂಕ್‌ಗಳಲ್ಲಿ 157 ರ‍್ಯಾಂಕ್‌ಗಳು, ಮೊದಲ 300 ರ‍್ಯಾಂಕ್‌ಗಳಲ್ಲಿ 213 ಹೀಗೆ ರ‍್ಯಾಂಕ್‌ಗಳ ಸುರಿಮಳೆಯನ್ನು ಎಕ್ಸ್ಪರ್ಟ್ ಸಂಸ್ಥೆಯ ವಿದ್ಯಾರ್ಥಿಗಳು ಪಡೆದುಕೊಂಡು ಒಂದು ಹೊಸ ದಾಖಲೆಯನ್ನು ಸೃಷ್ಟಿಸಿದ್ದಾರೆ.

ಅದಲ್ಲದೆ ಕಾಲೇಜಿನ ವಿದ್ಯಾರ್ಥಿಗಳಾದ ಚಿನ್ಮಯ್ ಎನ್. ಕೃಷಿಯಲ್ಲಿ ೧೨, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 16, ಫಾರ್ಮಾದಲ್ಲಿ 27, ಹೃಷಿಕೇಶ್ ಎನ್.ಎಚ್. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 13, ಕೃಷಿಯಲ್ಲಿ 32, ಫಾರ್ಮಾದಲ್ಲಿ 30, ಪ್ರಮುಖ್ ಆರ್.ಎಂ. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 17, ಕೃಷಿಯಲ್ಲಿ 24, ಫಾರ್ಮಾದಲ್ಲಿ 37, ಎಚ್.ಎನ್. ಜಾಗೃತಿ ಕೃಷಿಯಲ್ಲಿ 19, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 56, ಧನ್ವಿನ್ ಎಲ್. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 20, ಫಾರ್ಮಾದಲ್ಲಿ 38, ಕೃಷಿಯಲ್ಲಿ 92, ಆರ್. ಸೃಷ್ಟಿ ಕೃಷಿಯಲ್ಲಿ 23, ವೆಟರ್ನರಿ ಸೈನ್ಸ್ ಮತ್ತು ಬಿಎನ್ ವೈಎಸ್‌ನಲ್ಲಿ 80, ಎಚ್.ಡಿ. ನಿನಾದ್ ಕೃಷಿಯಲ್ಲಿ 25, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 85, ಭರತ್ ಆರ್ . ಶೆಟ್ಟಿ ಕೃಷಿಯಲ್ಲಿ 26, ಗಗನ್ ಅಶೋಕ್ ಭಂಡಾರಿ ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 27, ಫಾರ್ಮಾದಲ್ಲಿ 47, ಕೃಷಿಯಲ್ಲಿ 55, ರಾಜ್ ಅನಿಕೇತ್ ರೆಡ್ಡಿ ಎಂಜಿನಿಯರಿಂಗ್‌ನಲ್ಲಿ 67, ಕೃಷಿಯಲ್ಲಿ 31, ವಿಭಾ ಪರಮೇಶ್ವರ ಹೆಗ್ಡೆ ಕೃಷಿಯಲ್ಲಿ 35, ಮೇಘನಾ ಭಟ್ ಕೃಷಿಯಲ್ಲಿ 39, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 75, ತನುಷ್ ಗೌಡ ವಿ ವೆಟರ್ನರಿ ಸೈನ್ಸ್ ಮತ್ತು ಬಿಎನ್ ವೈಎಸ್‌ನಲ್ಲಿ 45, ಕೃಷಿಯಲ್ಲಿ 49, ಫಾರ್ಮಾದಲ್ಲಿ 68, ಅಮೋಘ ಎ. ಹಾಲಹಳ್ಳಿ ಎಂಜಿನಿಯರಿಂಗ್‌ನಲ್ಲಿ 49, ಈಶಾ ಹನುಮರೆಡ್ಡಿ ಕೋಟಿ ಕೃಷಿಯಲ್ಲಿ 50, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 57, ಸುಹಾನ್ ಸಮರ್ಥ ಬಿ.ಎಸ್. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 53, ಫಾರ್ಮಾದಲ್ಲಿ 82, ಕಿರಣ್ ಎಂ.ಪಿ. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 61, ಅಖಿಲ್ ಎಸ್. ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 67, ರೋಹನ್ ನಿಖಿಲ್ ದುಬೀರ್ ಕೃಷಿಯಲ್ಲಿ 65, ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 69, ಫಾರ್ಮಾದಲ್ಲಿ 97, ಮಸೋನಿಯಾ ಎಚ್. ವಿಜಯ ಕುಮಾರ್ ವೆಟರ್ನರಿ ಸೈನ್ಸ್ ಮತ್ತು ಬಿಎನ್‌ವೈಎಸ್‌ನಲ್ಲಿ 66, ವರುಣ್ ದಿನೇಶ್ ಶೆಟ್ಟಿ 68, ಚಿರಂಥ್ ಕೆ.ವಿ., ಕೃಷಿಯಲ್ಲಿ 87, ರಜಿತಾ ಹರಿಶಂಕರ್ ಕೃಷಿಯಲ್ಲಿ 96ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

ಈ ಬಗ್ಗೆ ಪ್ರಕ್ರೀಯಿಸಿರುವ ಎಕ್ಸ್ಪರ್ಟ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್. ನಾಯಕ್ ಮತ್ತು ಉಪಾಧ್ಯಕ್ಷೆ ಡಾ. ಉಷಾ ಪ್ರಭಾ ಎನ್. ನಾಯಕ್ ಕೋವಿಡ್ 19ರ ನಡುವೆಯೂ ವಿದ್ಯಾರ್ಥಿಗಳು ಅಭೂತಪೂರ್ವ ಸಾಧನೆ ಮಾಡಿದ್ದಾರೆ. ಐದು ವಿಭಾಗದ ಮೊದಲ 10 ರ‍್ಯಾಂಕ್‌ಗಳಲ್ಲಿ ಆರು ರ‍್ಯಾಂಕ್ ಪಡೆದುಕೊಳ್ಳುವ ಮೂಲಕ ಸಂಸ್ಥೆಯು ಹೊಸ ಇತಿಹಾಸ ನಿರ್ಮಾಣ ಮಾಡಿದೆ. ಕೋವಿಡ್ 19ರಿಂದಾಗಿ ವಿದ್ಯಾಭ್ಯಾಸಕ್ಕೆ ಎಲ್ಲಿ ಹಿನ್ನಡೆಯಾಗುತ್ತದೆಯೋ ಎಂಬ ಅಂಜಿಕೆ ಇತ್ತು. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ಮತ್ತು ಶಿಕ್ಷಕರು, ಶಿಕ್ಷಕೆತರ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳು ವಿಶೇಷ ಕಾಳಜಿ ವಹಿಸಿದ್ದರು. ಇದಕ್ಕೆ ಪೂರಕವಾಗಿ ವಿದ್ಯಾರ್ಥಿಗಳು ಪೋಷಕರು ಸ್ಪಂದಿಸಿದ್ದರು. ಸಾಂಘಿಕ ಪ್ರಯತ್ನದಿಂದಾಗಿ ಉತ್ತಮ ಫಲಿತಾಂಶ ಬಂದಿದೆ. `ಶ್ರಮ ಏವ ಜಯತೆ’ ಎಂಬ ಸಂಸ್ಥೆಯ ಧ್ಯೇಯ ವಾಕ್ಯವನ್ನು ವಿದ್ಯಾರ್ಥಿಗಳು ಸಾಕಾರಗೊಳಿಸಿರುವ ಬಗ್ಗೆ ಹೆಮ್ಮೆಯಾಗುತ್ತಿದೆ. ಈ ಎಲ್ಲ ವಿದ್ಯಾರ್ಥಿಗಳು ಅಭಿನಂದನಾರ್ಹರು ಎಂದು ಪ್ರತಿಕ್ರೀಯಿಸಿದ್ದಾರೆ.

DAKSHINA KANNADA

ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

Published

on

ಮಂಗಳೂರು: ಸಂಗೀತ, ಭರತನಾಟ್ಯದ ಮಾದರಿಯಲ್ಲಿ ಯಕ್ಷಗಾನಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ಪಠ್ಯ ರಚಿಸಿ ಪರೀಕ್ಷೆಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಮಂಗಳೂರಿನ ಪ್ರೆಸ್ ಕ್ಲಬ್‌ ವತಿಯಿಂದ ನಡೆದ ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಪ್ರತಿಯೊಬ್ಬ ಗುರು ತಮ್ಮದೇ ಆದ ಶೈಲಿಯಲ್ಲಿ ನಾಟ್ಯವನ್ನು ಕಲಿಸುತ್ತಾರೆ. ಯಕ್ಷಗಾನ ಕಲಿಕೆಗೆ ಒಂದು ಚೌಕಟ್ಟು ರೂಪಿಸುವ ಮೂಲಕ ಏಕರೂಪತೆ ತರಬೇಕಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯು ಪಠ್ಯ ರೂಪಿಸಿದ್ದು, ಫೌಂಡೇಶನ್‌ನ ಶಿಕ್ಷಕರು ಇದರ ಪ್ರಕಾರವೇ ನಾಟ್ಯ ಕಲಿಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆಂದೇ ಒಂದು ಸೀಲೆಬಸ್ ಮಾಡಿ  ಅದರ ಮುಖೇನ ಯಕ್ಷಗಾನ ನಾಟ್ಯ ಕಲಿಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

 

Continue Reading

DAKSHINA KANNADA

ಅಡ್ಯಾರ್ ಬೊಂಡ ಪ್ಯಾಕ್ಟರಿ ಎಳನೀರು ಪ್ರಕರಣ- ಆರೋಗ್ಯ ಇಲಾಖೆಯ ಕೈ ಸೇರಿದ ಪ್ರಯೋಗಾಲಯ ಪರೀಕ್ಷಾ ವರದಿ ಬಹಿರಂಗ..!

Published

on

ಮಂಗಳೂರು : ಇತ್ತೀಚೆಗೆ ಅಡ್ಯಾರ್ ನಲ್ಲಿರುವ ಬೊಂಡಾ ಪ್ಯಾಕ್ಟರಿಯಲ್ಲಿ ಎಳ ನೀರು ಸೇವಿಸಿ ಅಸ್ವಸ್ಥಗೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಪ್ರಯೋಗಾಲಯ ಪರೀಕ್ಷಾ ವರದಿ ಆರೋಗ್ಯ ಇಲಾಖೆಯ ಕೈ ಸೇರಿದ್ದು, ಸಹಜವಾಗಿತ್ತು ಎಳನೀರು ಎಂದು ವರದಿಯಲ್ಲಿ ತಿಳಿಸಲಾಗಿದೆ.

ನಗರದ ಹೊರವಲಯದ ಅಡ್ಯಾರಿನ ಬೊಂಡ ಫ್ಯಾಕ್ಟರಿಯಲ್ಲಿ ಎಪ್ರಿಲ್ 9ರಂದು ಖರೀದಿಸಿದ ಎಳನೀರು ಕುಡಿದವರಲ್ಲಿ 138 ಜನರು ವಾಂತಿ, ಬೇಧಿಯಿಂದ ಅಸ್ವಸ್ಥಗೊಂಡಿದ್ದರು. ಈ ಪ್ರಕರಣ ಗಮನಕ್ಕೆ ಬಂದ ಬೆನ್ನಲ್ಲೇ ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ಹಾಗೂ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಫ್ಯಾಕ್ಟರಿಯನ್ನು ಬಂದ್ ಮಾಡಿಸಿ ಎಳನೀರು ಮಾದರಿ ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದರು.ಘಟನೆ ನಡೆದ ಎರಡು ದಿನಗಳ ನಂತರ ಇದು ಗಮನಕ್ಕೆ ಬಂದಿದ್ದು, ಆ ದಿನ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿದ್ದ ಎಳನೀರನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಪ್ರಯೋಗಾಲಯ ಪರೀಕ್ಷೆಯ ವರದಿ ಎಪ್ರಿಲ್ 22ರಂದು ಆರೋಗ್ಯ ಇಲಾಖೆಯ ಕೈ ಸೇರಿದೆ.

ಅಸ್ವಸ್ಥಗೊಂಡವರ ಮಲ ಮತ್ತು ರಕ್ತದ ಮಾದರಿ ಸಂಗ್ರಹಿಸಿ, ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿ ಪ್ರಕಾರ ಕೆಲವರ ದೇಹದಲ್ಲಿ ಇಕೊಲೈ ಬ್ಯಾಕ್ಟಿರಿಯಾ ಇರುವುದು ಪತ್ತೆಯಾಗಿದೆ. ಮನುಷ್ಯನ ಕರುಳಿನಲ್ಲಿ ಈ ಬ್ಯಾಕ್ಟಿರಿಯಾ ಇರುತ್ತದೆ. ಆದರೆ ಅವುಗಳ ಪ್ರಮಾಣ ಹೆಚ್ಚಾದರೆ, ಕೆಲವೊಮ್ಮೆ ಆರೋಗ್ಯ ಸಮಸ್ಯೆ ಬರುತ್ತದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.ಅಡ್ಯಾರಿನಲ್ಲಿರುವ ಎಳನೀರು ಗಂಜಿಯಿಂದ ಐಸ್‌ಕ್ರೀಮ್ ತಯಾರಿಸುವ ಘಟಕ, ಕಾರ್‌ಸ್ಪೀಟ್ ಮತ್ತು ಕದ್ರಿಯಲ್ಲಿರುವ ಎಳನೀರು ಮಳಿಗೆಗಳನ್ನು ಬಂದ್ ಮಾಡಿಸಲಾಗಿದೆ. ಈಗಲೂ ಅವು ಬಂದ್ ಆಗಿಯೇ ಇವೆ.

ಫ್ಯಾಕ್ಟರಿಯವರು ಸ್ವಯಂ ಪ್ರೇರಿತರಾಗಿ ಎಳನೀರು ನೀಡುವುದನ್ನು ನಿಲ್ಲಿಸಿದ್ದಾರೆ. ಅಡ್ಯಾರ್‌ನಲ್ಲಿ ಪಲ್ಟಿಂಗ್‌ ಘಟಕಗಳು ಮಾತ್ರ ಕಾರ್ಯಾಚರಿಸುತ್ತಿವೆ. ಗ್ರಾಹಕರಿಗೆ ಆಹಾರ ನೀಡುವಾಗ ನಿಯಮ ಪಾಲನೆ, ಶುಚಿತ್ವಕ್ಕೆ ಸಂಬಂಧಿಸಿ ಕೆಲವು ಅಂಶಗಳ ಕಟ್ಟುನಿಟ್ಟು ಪಾಲನೆಗೆ ಆಹಾರ ಸುರಕ್ಷಾ ಅಫಿದಾವಿತನ್ನು ಫ್ಯಾಕ್ಟರಿಯಿಂದ ಪಡೆಯಲು ಆಹಾರಸುರಕ್ಷಾ ಅಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ಅವರು ಪ್ರತಿಕ್ರಿಯಿಸಿದರು.

Continue Reading

DAKSHINA KANNADA

ವೈರಲ್ ವಿಡಿಯೋ: ಕಲ್ಲಂಗಡಿ ಚಿಕನ್ ಬಿರಿಯಾನಿ ತಿಂದಿದ್ದೀರಾ?

Published

on

ಮಂಗಳೂರು(ವೈರಲ್ ವಿಡಿಯೋ): ಬಿರಿಯಾನಿ ಅಂದ್ರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಬಹುಜನರ ಬೇಡಿಕೆಯ ಖಾದ್ಯವಾದ ಬಿರಿಯಾನಿ ಹಲವು ಮಾದರಿಗಳಲ್ಲಿ ಸಿಗುತ್ತದೆ. ಚಿಕನ್ ಬಿರಿಯಾನಿ, ಮಟನ್ ಬಿರಿಯಾನಿ ತಿನ್ನಲು ಜನರಂತೂ ದೂರ ಸರಿಯುದೇ ಇಲ್ಲ. ಆದರೆ ಈಗ ಬಿರಿಯಾನಿ ಹೊಸ ಹೊಸ ಮಾದರಿಯಲ್ಲಿ ತುಂಬಾ ವೈರಟಿ ಆಗಿ ಸಿಗುತ್ತಾ ಇದೆ. ಬಾರ್ಬಿ ಬಿರಿಯಾನಿ ವೈರಲ್ ಆದ ಬಳಿಕ ಇದೀಗ ಇನ್ನೊಂದು ಹೊಸ ಬಿರಿಯಾನಿ ವೈರಲ್ ಆಗ್ತಾ ಇದೆ.

ಕಲ್ಲಂಗಡಿ ಚಿಕನ್ ಬಿರಿಯಾನಿ

ಹೌದು, ಈ ಬಿರಿಯಾನಿಯ ಹೆಸರು ಕಲ್ಲಂಗಡಿ ಚಿಕನ್ ಬಿರಿಯಾನಿ. ಇದು ವಿಚಿತ್ರವಾದರೂ ಸತ್ಯ. ಕಲ್ಲಂಗಡಿ ಹಾಕಿ ಮಾಡಿರುವ ಈ ಚಿಕನ್ ಬಿರಿಯಾನಿ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗ್ತಾ ಇದೆ. ಇನ್ಸ್ಟಾಗ್ರಾಮ್‌ನ villagefoodchannel_official ಪೇಜ್‌ನಲ್ಲಿ ಹಂಚಿಕೊಂಡಿರುವ ವೀಡಿಯೊದಲ್ಲಿ, ಈ ವಿಚಿತ್ರ ಬಿರಿಯಾನಿ ವೈರಲ್ ಆಗಿದೆ.

ಕಲ್ಲಂಗಡಿ ಬಿಕನ್ ಬಿರಿಯಾನಿ ತಯಾರಿಸುವ ವಿಧಾನ

ಮೊದಲಿಗೆ ಇಬ್ಬರು ಕಲ್ಲಂಗಡಿ ಹಣ್ಣನ್ನು ತುಂಡು ಮಾಡುವ ಮೂಲಕ ವಿಡಿಯೋ ಆರಂಭವಾಗುತ್ತದೆ. ಬಳಿಕ ಹಣ್ಣಿನ ತುಂಡುಗಳನ್ನು ದೊಡ್ಡ ಪಾತ್ರೆಗೆ ಹಾಕಿ ಅದರಲ್ಲಿ ಗುದ್ದಿ ರಸವನ್ನು ತೆಗೆಯುತ್ತಾರೆ. ಬಳಿಕ ಮತ್ತೊಂದು ಪಾತ್ರೆಯಲ್ಲಿ ಚಿಕನ್ ಬಿರಿಯಾನಿ ತಯಾರಿಸಲು ಪ್ರಾರಂಭಿಸುತ್ತಾರೆ.

ದೊಡ್ಡ ಪಾತ್ರೆಯನ್ನು ಇಟ್ಟು ಅದಕ್ಕೆ ಎಣ್ಣೆ, ನೀರುಳ್ಳಿ, ಬೆಳ್ಳುಳ್ಳಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್, ಮಸಾಲೆಗಳು, ಗರಂ ಮಸಾಲೆ ಹಾಕಿ ಮಸಾಲೆ ತಯಾರಿಸುತ್ತಾರೆ. ಬಳಿಕ ಅದಕ್ಕೆ ಶುಚಿಗೊಳಿಸಿದ ಕೋಳಿ ತುಂಡುಗಳನ್ನು ಹಾಕಿ ಮಿಕ್ಸ್ ಮಾಡಿ ಬೇಯಿಸುತ್ತಾರೆ.

ಕೋಳಿ ಮಾಂಸ ಬೆಂದ ನಂತರ ಅದಕ್ಕೆ ಪ್ರಮುಖ ಅಂಶವಾದ ಕಲ್ಲಂಗಡಿ ಹಣ್ಣಿನ ರಸವನ್ನು ಸೇರಿಸುತ್ತಾರೆ. ನಂತರ ಅದಕ್ಕೆ ಬಾಸುಮತಿ ಅಕ್ಕಿ ಹಾಕಿ ಮತ್ತೆ ಬೇಯಿಸುತ್ತಾರೆ. ಸ್ವಲ್ಪ ಕೊತ್ತಂಬರಿ ಸೊಪ್ಪನ್ನು ಮೇಲಿಗೆ ಹಾಕಿ ಮುಚ್ಚಿಡುತ್ತಾರೆ. ಈ ರೀತಿ ಮಾಡಿದಾಗ ಕಲ್ಲಂಗಡಿ ಚಿಕನ್ ಬಿರಿಯಾನಿ ತಯಾರಾಗುತ್ತದೆ.

ಈ ವಿಡಿಯೋ ಬಾರಿ ವೈರಲ್ ಆಗಿದ್ದು, ಇದುವರೆಗೆ ಆರು ಲಕ್ಷಕ್ಕೂ ಹೆಚ್ಚು ಮಂದಿ ವಿಡಿಯೋ ಲೈಕ್ ಮಾಡಿದ್ದಾರೆ. ಹಾಗೆಯೇ 21 ಲಕ್ಷಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಕಲ್ಲಂಗಡಿ ಚಿಕನ್ ಬಿರಿಯಾನಿಯ ಈ ವಿಶಿಷ್ಟ ಸಂಯೋಜನೆಯನ್ನು ವೀಕ್ಷಿಸಿದ ಹಲವಾರು ಜನರು ತಮ್ಮ ಅಭಿಪ್ರಾಯಗಳನ್ನು ಕಮೆಂಟ್ ಮಾಡಿದ್ದಾರೆ.

Continue Reading

LATEST NEWS

Trending