Connect with us

LATEST NEWS

47 ಲಕ್ಷ ಕೋಟಿ ರೂ. ಗಳ ಬಜೆಟ್‌ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್

Published

on

ಹೊಸದಿಲ್ಲಿ: ಚುನಾವಣೆ ಪೂರ್ವವಾಗಿ ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ತಮ್ಮ ಮಧ್ಯಂತರ ಬಜೆಟ್ ಮಂಡನೆ ಮಾಡಿದ್ದಾರೆ.

47 ಲಕ್ಷ ಕೋಟಿ ರೂ.  ಬಜೆಟ್ ಮಂಡಿಸಿದ ನಿರ್ಮಲಾ ಸೀತಾರಾಮನ್ ಅವರು  ಮೂಲ ಸೌಕರ್ಯ ಕ್ಷೇತ್ರಕ್ಕೆ 11 ಲಕ್ಷ ಕೋಟಿಯ 111 ಸಾವಿರದ 11 ಕೋಟಿ ರೂ. ಮೀಸಲಿಟ್ಟಿದ್ದಾರೆ. ಆದರೆ ಸುಮಾರು 60 ನಿಮಿಷಗಳ ಕಾಲ ಬಜೆಟ್ ಮಂಡಿಸಿರುವ ನಿರ್ಮಲಾ ಸೀತಾರಾಮನ್ ಅವರು ಪ್ರಮುಖವಾಗಿ ನಿರೀಕ್ಷಿತ ಯಾವುದೇ ಹೊಸ ಘೋಷಣೆಗಳನ್ನು ಮಾಡಿಲ್ಲ. ಜನರು ಟ್ಯಾಕ್ಸ್‌ ಸ್ಲಾಬ್‌ನಲ್ಲಿ ದೊಡ್ಡ ಬದಲಾವಣೆಯನ್ನು ನಿರೀಕ್ಷೆ ಮಾಡಿದ್ದರೂ ಯಾವುದೇ ಬದಲಾವಣೆ ಮಾಡಿಲ್ಲ. ನೇರ ಹಾಗೂ ಪರೋಕ್ಷ ತೆರಿಗೆ ವಿಚಾರದಲ್ಲೂ ಯಾವುದೇ ಬದಲಾವಣೆಯನ್ನು ಮಾಡಿಲ್ಲ.  ದೇಶದಲ್ಲಿ ಆಗಿರುವ ಆರ್ಥಿಕ ಬದಲಾವಣೆಗಳನ್ನು ಬಜೆಟ್‌ ಭಾಷಣದಲ್ಲಿ ಹೇಳಲಾಗಿದೆ. ಹೊಸ ಘೋಷಣೆಗಳಲ್ಲಿ ಪ್ರಮುಖವಾಗಿ ಹೆಣ್ಣು ಮಕ್ಕಳಿಗೆ ಸರ್ವೈಕಲ್ ಕ್ಯಾನ್ಸರ್‌ಗೆ ಉಚಿತ ಲಸಿಕೆ ವಿಚಾರ ಗಮನ ಸೆಳೆದಿದೆ. ಇದು ಸರ್ವೈಕಲ್ ಕ್ಯಾನ್ಸರ್‌ನಿಂದ ಬಳಲುತ್ತಿರುವ  9 ರಿಂದ 14 ವರ್ಷ ವಯೋಮಿತಿಯ  ಬಡ ಬಾಲಕಿಯರಿಗೆ ಸಾಕಷ್ಟು ಅನುಕೂಲ ಆಗಲಿದೆ. ಮಹಿಳೆಯರಿಗೆ 2 ಕೋಟಿ ಮನೆಗಳನ್ನು ನಿರ್ಮಿಸಿಕೊಡುವ ವಿಚಾರ ಹಾಗೂ ಉಚಿತ ವಿದ್ಯುತ್‌ಗಾಗಿ 1 ಕೋಟಿ ಮನೆಗಳಿಗೆ ಸೋಲಾರ್ ಅಳವಡಿಕೆ ಮಾಡುವ ಬಗ್ಗೆ ಬಜೆಟ್‌ನಲ್ಲಿ ಹೇಳಲಾಗಿದೆ.ಆರೋಗ್ಯ ವಿಮೆ ಆಯುಷ್ಮಾನ್ ಯೋಜನೆಯನ್ನು ಅಂಗನವಾಡಿ ಹಾಗೂ ಆಶಾಕಾರ್ಯಕರ್ತೆಯರಿಗೆ ವಿಸ್ತರಿಸಿದ್ದಾರೆ. ಇನ್ನು  ಹಾಲು ಉತ್ಪಾದನೆ ಹಾಗೂ ಡೇರಿ ಉತ್ಪಾನಗಳಿಗೆ ಉತ್ತೇಜನ ನೀಡಲು ಗೋಕುಲ್ ಯೋಜನೆ ಜಾರಿ. ಉತ್ಪಾದನಾ ವಲಯಕ್ಕೆ ಅನುಕೂಲ ಮಾಡಲು ರೈಲ್ವೇ , ಬಂದರು , ಕಾರಿಡಾರ್ ನಿರ್ಮಾಣದ ಬಗ್ಗೆ ಬಜೆಟ್‌ನಲ್ಲಿ ಉಲ್ಲೇಖಿಸಲಾಗಿದೆ. ಪ್ರವಾಸೋದ್ಯಮ ಅಭಿವೃದ್ದಿಗಾಗಿ 75 ಸಾವಿರ ಕೋಟಿ ಮೀಸಲಿಟ್ಟಿದ್ದು,ರಾಜ್ಯ ಸರ್ಕಾರಗಳಿಗೆ ಧೀರ್ಘಾವದಿ ಸಾಲ ನೀಡುವ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಮೀನುಗಾರರಿಗೆ ಮತ್ಸ್ಯ ಸಂಪದ ಯೊಜನೆ,ಹಾಗೂ ರೈತರಿಗೆ ಒಂದಷ್ಟು ಸೌಲಭ್ಯ ಘೋಷಣೆ ಮಾಡಿದ್ದಾರೆ. ಒಟ್ಟಾರೆಯಾಗಿ ಚುನಾವಣಾ ಪೂರ್ವವಾಗಿ ಮಂಡಿಸಿದ ಬಜೆಟ್‌ನಲ್ಲಿ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಬಹುದಾದ ದೊಡ್ಡ ಘೋಷಣೆಗಳನ್ನು ಮಾಡಿಲ್ಲ ಎಂದು ಆರ್ಥಿಕ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

 

Click to comment

Leave a Reply

Your email address will not be published. Required fields are marked *

LATEST NEWS

ಮೂರು ವರ್ಷದ ಮಗುವಿನ ಎದೆಗೆ ಕಾಲಿಟ್ಟು ಕೊಂ*ದ ಪಾಪಿ..! ಬೆಳಗಾವಿಯಲ್ಲೊಂದು ಅಮಾನುಷ ಘಟನೆ

Published

on

ಬೆಳಗಾವಿ: ಮೂರು ವರ್ಷದ ಮಗುವಿನ ಎದೆ ಮೇಲೆ ಕಾಲಿಟ್ಟು, ತುಳಿದು ಹ*ತ್ಯೆ ಮಾಡಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಬುರ್ಲಟ್ಟಿಯಲ್ಲಿ ನಡೆದಿದೆ.

ಬುರ್ಲಟ್ಟಿ ಗ್ರಾಮದ ಶ್ರೀನಿಧಿ ಕಾಡಪ್ಪ ಕಾಳಾಪಾಟೀಲ್ ಮೂರು ವರ್ಷದ ಮೃತಪಟ್ಟಿರುವ ಮಗು.  ಜೋತಿಭಾ ತುಕಾರಾಮ ಬಾಬಾಬರ ಎಂಬವನು ಮಗುವನ್ನು ಕೊಂ*ದವರು ಎಂದು ತಿಳಿದು ಬಂದಿದೆ. ಮಗುವಿನ ತಂದೆ ಕಾಡಪ್ಪ ಕಾಳಪಾಟೀಲಗೆ ಕಳೆದ ವರ್ಷ ಜೋತಿಭಾ ಬಾಬಾಬರ ಐವತ್ತು ಸಾವಿರ ಸಾಲ ನೀಡಿದ್ದ ಎನ್ನಲಾಗಿದೆ. ಈ ಹಣವನ್ನು ವಾಪಸ್‌ ನೀಡುವಂತೆ ಕಾಳಪ್ಪನಿಗೆ ಕೇಳಿದಾಗ ಶನಿವಾರ ಬೆಳಗ್ಗೆ ಜೋತಿಭಾ ಕಾಳಪ್ಪನ ಮನೆ ಮುಂದೆ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಇದರಿಂದಾಗಿ ಇಬ್ಬರ ನಡುವೆ ಜಗಳ ತಾರಕಕ್ಕೇರಿ ಜೋತಿಭಾ ತುಕಾರಾಮ ಬಾಬಾಬರ ಮಗುವಿನ ಎದೆ ಮೇಲೆ ಕಾಲಿಟ್ಟು ಕೊಂದಿದ್ದಾನೆ ಎಂದು ಮೃತಪಟ್ಟ ಮಗುವಿನ ಕುಟುಂಬಸ್ಥರು ಆರೋಪಿಸಿದ್ದಾರೆ.

ಮುಂದೆ ಓದಿ..: ಸಾ*ವಿನಲ್ಲಿ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಕುರಿತು ಐಗಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

ಸಾ*ವಿನಲ್ಲೂ ಒಂದಾದ ತಂದೆ ಮಗ.. ತಂದೆಯ ಅಗಲಿಕೆ ನೋವಲ್ಲೇ ಅಸುನೀಗಿದ ಮಗ..!

Published

on

ಕೊಪ್ಪಳ: ಒಂದೇ ದಿನದಲ್ಲಿ ತಂದೆ ಮಗ ಇಬ್ಬರೂ ಸಾವನ್ನಪ್ಪಿದ ಘಟನೆ ಕೊಪ್ಪಳದ ಬಂಡಿಹರ್ಲಾಪುರಾದಲ್ಲಿ ನಡೆದಿದೆ. ತಂದೆಯ ಸಾವಿನ ನೋವಿನಲ್ಲಿ ಮಗ ಕೂಡಾ ಸಾವನ್ನಪ್ಪಿದ್ದಾರೆ. ಮೃ*ತರನ್ನು ರಾಮರೆಡ್ಡಿ (70) ಮತ್ತು ಆದಿನಾರಾಯಣ ರೆಡ್ಡಿ (42) ಎಂದು ಗುರುತಿಸಲಾಗಿದೆ.

death

ಮುಂದೆ ಓದಿ..; ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀರ

ರಾಮರೆಡ್ಡಿ ಅನಾರೋಗ್ಯದಿಂದ ಬಳಲುತ್ತಿದ್ದು, ನಿನ್ನೆ(ಎ.28) ಬೆಳಿಗ್ಗೆ ಮೃತಪಟ್ಟಿದ್ದರು. ಅದೇ ದಿನ ರಾತ್ರಿ 8.30ಕ್ಕೆ ಮಗ ಆದಿನಾರಾಯಣ ರೆಡ್ಡಿ ಕೂಡ ಪ್ರಾಣ ಬಿಟ್ಟಿದ್ದಾರೆ. ಆದಿನಾರಾಯಣ ತಂದೆಯನ್ನು ಬಹಳ ಪ್ರೀತಿಸುತ್ತಿದ್ದು, ತಂದೆಯ ಸಾವಿನ ದುಃಖದಲ್ಲಿ ಕುಳಿತಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ. ಆದಿನಾರಾಯಣ ರೆಡ್ಡಿ, ಪತ್ನಿ ಹಾಗೂ ತನ್ನೆರಡು ಮಕ್ಕಳನ್ನು ಅಗಲಿದ್ದಾರೆ.

Continue Reading

DAKSHINA KANNADA

ಎರಡು ಲಾರಿಗಳ ಮಧ್ಯೆ ಅಪಘಾತ; ಚಾಲಕ ಗಂಭೀ*ರ

Published

on

ಮಂಗಳೂರು: ಬೈಕಂಪಾಡಿ ಹೋಟೆಲ್ ಶ್ರೀ ದ್ವಾರದ ಬಳಿ ಲಾರಿಗಳೆರಡರ ನಡುವೆ ಅಪಘಾತ ಸಂಭವಿಸಿ ಲಾರಿ ಚಾಲಕ ಗಂಭಿರ ಗಾಯಗೊಂಡ ಘಟನೆ ನಡೆದಿದೆ. ಒಂದು ಲಾರಿಯೊಂದು ಗ್ರಾನೈಟ್ ಅಂಗಡಿಯೊಳಗೆ ನುಗ್ಗಿದ್ದು, ಅಪಾರ ಮೌಲ್ಯದ ಗ್ರಾನೈಟ್‌ ಹಾನಿಗೊಂಡಿದೆ.

ಮುಂದೆ ಓದಿ..; ಪುತ್ತೂರು : ಧರೆಗುರುಳಿದ ಬೃಹದಾಕಾರದ ಮರ; ಮಾವಿನಕಾಯಿಗಾಗಿ ಮುಗಿಬಿದ್ದ ಜನ!

accident

ಲಾರಿ ಸಾಗಾಟ ಮಾಡುತ್ತಿದ್ದ ಲಾರಿ ಅಪಘಾತದಿಂದ ನಜ್ಜುಗುಜ್ಜಾಗಿದೆ. ಇನ್ನು ಇದೇ ಭಾಗದಲ್ಲಿ ನಿತ್ಯವೂ ಮಹಿಳೆಯರು ಮೀನ ಮಾರಾಟ ಮಾಡುತ್ತಿದ್ದರು. ಅದೃಷ್ಟವಶಾತ್ ಇದೀಗ ಭಾರೀ ಅನಾಹುತ ತಪ್ಪಿದೆ.

 

Continue Reading

LATEST NEWS

Trending