Sunday, December 4, 2022

ಏರ್‌ ಇಂಡಿಯಾದ 4 ಅಂಗಸಂಸ್ಥೆಗಳ ಮಾರಾಟಕ್ಕೆ ಸಿದ್ಧತೆ

ನವದೆಹಲಿ: ಈಗಾಗಲೇ ಏರ್ ಇಂಡಿಯಾ ಅನ್ನು ಟಾಟಾ ಕಂಪನಿಗೆ ಮಾರಾಟ ಮಾಡಿರುವ ಸರ್ಕಾರ ಈಗ ಏರ್ ಇಂಡಿಯಾದ 4 ಅಂಗಸಂಸ್ಥೆಗಳ ಮಾರಾಟಕ್ಕೂ ತಯಾರಿ ಆರಂಭಿಸಿದೆ.


ಈ ವರ್ಷಾಂತ್ಯಕ್ಕೆ ಇವುಗಳ ಮಾರಾಟ ಮುಗಿಯುವ ಸಾಧ್ಯತೆ ಇದೆ. ಈ ನಾಲ್ಕು ಅಂಗಸಂಸ್ಥೆಗಳಲ್ಲಿ ಅಲಯನ್ ಏರ್ ಕೂಡ ಇದೆ. ಜೊತೆಗೆ ದೇಶದ ವಿವಿಧ ಭಾಗಗಳಲ್ಲಿ ಏರ್ ಇಂಡಿಯಾಕ್ಕೆ ಸೇರಿದ 14,700 ಕೋಟಿ ರು. ಮೌಲ್ಯದ ಭೂಮಿ, ಕಟ್ಟಡಗಳಿವೆ. ಇವುಗಳನ್ನೂ ಮಾರಾಟ ಮಾಡಲು ಸರ್ಕಾರ ಉದ್ದೇಶಿಸಿದೆ.

ಅಲಯನ್ಸ್ ಏರ್ ಸೇರಿದಂತೆ 4 ಕಂಪನಿಗಳು ಸಾಕಷ್ಟು ‘ನಾನ್ -ಕೋರ್’ ಆಸ್ತಿ ಹೊಂದಿವೆ. ಇವುಗಳೆಲ್ಲ ಒಂದಕ್ಕೊಂದು ಸಂಬಂಧಿಸಿದ ಕಂಪನಿಗಳು. ಹೀಗಾಗಿ ಇವುಗಳನ್ನು ಒಟ್ಟಿಗೇ ಮಾರಾಟ ಮಾಡುವ ಉದ್ದೇಶ ಹೊಂದಿದ್ದೇವೆ ಎಂದು ಸರ್ಕಾರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಏರ್ ಇಂಡಿಯಾ ಟ್ರಾನ್ಸ್‌ಪೋರ್ಟ್ ಸರ್ವೀಸ್, ಏರ್ ಲೈನ್ ಅಲೈಡ್ ಸರ್ವೀಸ್, ಏರ್ ಇಂಡಿಯಾ ಎಂಜಿನಿಯರಿಂಗ್ ಸರ್ವೀಸ್, ಹೋಟೆಲ್ ಕಾರ್ಪೋ ರೆಷನ್ – ಈ ನಾಲ್ಕು ಅಂಗಸಂಸ್ಥೆಗಳ ಆಸ್ತಿಪಾಸ್ತಿಗಳು ಮಾರಾಟಕ್ಕೆ ಒಳಪಡಲಿವೆ ಎಂದು ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics