Sunday, December 4, 2022

ಮುಂಬೈನಲ್ಲಿ ಸೆಂಚುರಿ ಬಾರಿಸಿದ ಡೀಸೆಲ್‌ ದರ: ಸತತ 7ನೇ ದಿನ ಬೆಲೆ ಹೆಚ್ಚಳ

ನವದೆಹಲಿ: ದೇಶದಲ್ಲಿ ಸತತ ಏಳನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಪ್ರತಿ ಲೀಟರ್ ಪೆಟ್ರೋಲ್​​ ಮೇಲೆ 30 ಪೈಸೆ ಹಾಗೂ ಡೀಸೆಲ್​ ಮೇಲೆ 35 ಪೈಸೆಯಷ್ಟು ತೈಲ ಕಂಪನಿಗಳು ದರ ಹೆಚ್ಚಿಸಿವೆ.


ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 30 ಪೈಸೆ ಏರಿಕೆಯೊಂದಿಗೆ ಲೀಟರ್ ಪೆಟ್ರೋಲ್ ದರ 104.44 ರೂಪಾಯಿ ಹಾಗೂ 35 ಪೈಸೆ ಹೆಚ್ಚಳದೊಂದಿಗೆ ಡೀಸೆಲ್​ ದರ 93.17 ರೂಪಾಯಿ ಇದೆ. ಮುಂಬೈನಲ್ಲಿ ಲೀಟರ್ ಪೆಟ್ರೋಲ್​ಗೆ 110.41 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 101.03 ರೂಪಾಯಿಗೆ ಏರಿಕೆಯಾಗಿದೆ.

ಡೀಸೆಲ್ ಬೆಲೆ ಸಹ ನೂರರ ಗಡಿ ದಾಟಿದ್ದು, ಗ್ರಾಹಕರಿಗೆ ತೈಲ ದರ ಏರಿಕೆ ಶಾಕ್​ ನೀಡಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 108.08 ರೂಪಾಯಿ ಇದ್ದು ಡೀಸೆಲ್‌ 98.89 ರೂಪಾಯಿ ನಿಗದಿಯಾಗಿದೆ.

ಕೋಲ್ಕತ್ತಾದಲ್ಲಿ ಲೀಟರ್ ಪೆಟ್ರೋಲ್ ದರ 105.09 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 96.28 ರೂಪಾಯಿಗೆ ಏರಿಕೆ ಆಗಿದೆ.
ಚೆನ್ನೈನಲ್ಲಿ ಲೀಟರ್ ಪೆಟ್ರೋಲ್ ದರ 101.81 ರೂಪಾಯಿ ಹಾಗೂ ಲೀಟರ್ ಡೀಸೆಲ್ ದರ 97.61 ರೂಪಾಯಿಗೆ ಏರಿಕೆಯಾಗಿದೆ.

ಭಾರತ್ ಪೆಟ್ರೋಲಿಯಂ, ಇಂಡಿಯನ್ ಆಯಿಲ್ ಮತ್ತು ಹಿಂದುಸ್ತಾನ್ ಪೆಟ್ರೋಲಿಯಂ ಸೇರಿದಂತೆ ತೈಲ ಕಂಪನಿಗಳು ಅಬಕಾರಿ ಸುಂಕಗಳ ಆಧಾರದ ಮೇಲೆ ಇಂಧನ ದರವನ್ನು ಹೆಚ್ಚಿಸುತ್ತಿರುತ್ತವೆ. ಎಲ್ಲಾ ರಾಜ್ಯಗಳಲ್ಲೂ ಈಗಾಗಲೇ ಪೆಟ್ರೋಲ್​ ಬೆಲೆ ಶತಕದ ಗಡಿ ದಾಟಿದ್ದು, ಮುಂಬೈನಲ್ಲಿ ಡೀಸೆಲ್​ ಬೆಲೆ ಸಹ ನೂರರ ಗಡಿ ದಾಟಿದೆ

LEAVE A REPLY

Please enter your comment!
Please enter your name here

Hot Topics