Connect with us

LATEST NEWS

ಬರಗೂರು ರಾಮಚಂದ್ರಪ್ಪ, ರಹಮತ್‌ ತರೀಕೆರೆ ಸೇರಿ 14 ಮಂದಿಗೆ ಸಂದೇಶ ಪ್ರಶಸ್ತಿ ಪ್ರಕಟ

Published

on

ಮಂಗಳೂರು: 2020-21 ಹಾಗೂ 2021-22ನೇ ಸಾಲಿನ ಸಂದೇಶ ಸಂಸ್ಕೃತಿ ಮತ್ತು ಪ್ರತಿಷ್ಠಾನದ ಪ್ರಶಸ್ತಿ ಫೆ.22ರಂದು ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಪ್ರತಿಷ್ಠಾನದ ವಿಶ್ವಸ್ಥರಾದ ರೋಯ್ ಕ್ಯಾಸ್ಟಲಿನೊ ಅವರು ತಿಳಿಸಿದ್ದಾರೆ.

ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೊರೊನಾ ಕಾರಣದಿಂದ 2021 ನೇ ಸಾಲಿನ ಪ್ರಶಸ್ತಿ ಘೋಷಿಸಲಾಗಿರಲಿಲ್ಲ.

ಈ ಬಾರಿ 2021 ಮತ್ತು 2022ರ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಫೆಬ್ರವರಿ 22 ರಂದು ಸಂಜೆ 5.30ಕ್ಕೆ ಮಂಗಳೂರಿನ ಸಂದೇಶ ಪ್ರತಿಷ್ಠಾನದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು.

2020-21 ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ) – ಬರಗೂರು ರಾಮಚಂದ್ರಪ್ಪ, ಸಂದೇಶ ಸಾಹಿತ್ಯ ಪ್ರಶಸ್ತಿ ( ಕೊಂಕಣಿ)- ಅಮರ್ ಕೊಂಕಣಿ, ಸಂದೇಶ ಸಾಹಿತ್ಯ ಪ್ರಶಸ್ತಿ (ತುಳು)- ಡಾ.ಸುನಿತಾ ಎಂ ಶೆಟ್ಟಿ, ಸಂದೇಶ ಮಾಧ್ಯಮ ಪ್ರಶಸ್ತಿ ( ಪತ್ರಿಕೋದ್ಯಮ)

– ನಾಗೇಶ್ ಹೆಗಡೆ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ- ಮೀನ ರೆಬಿಂಬಸ್‌, ಸಂದೇಶ ಕಲಾ ಪ್ರಶಸ್ತಿ- ಎಡೊಲ್ಫಸ್ ಕುಟಿನ್ಹಾ, ಸಂದೇಶ ಶಿಕ್ಷಣ ಪ್ರಶಸ್ತಿ- ಡಾ.ಲಕ್ಷ್ಮಣ್ ಸಾಬ್ ಚೌರಿ, ಸಂದೇಶ ವಿಶೇಷ ಪ್ರಶಸ್ತಿ- ಸಮರ್ಥನಂ ಟ್ರಸ್ಟ್

2021-22ನೇ ಸಾಲಿನ ಪ್ರಶಸ್ತಿ ಪುರಸ್ಕೃತರ ಪಟ್ಟಿ
ಸಂದೇಶ ಸಾಹಿತ್ಯ ಪ್ರಶಸ್ತಿ (ಕನ್ನಡ) – ರಹಮತ್ ತರೀಕೆರೆ, ಸಂದೇಶ ಸಾಹಿತ್ಯ ಪ್ರಶಸ್ತಿ (ಕೊಂಕಣಿ)- ಮೆಲ್ವಿನ್ ರೊಡ್ರೀಗಸ್‌, ದೇಶ ಸಾಹಿತ್ಯ ಪ್ರಶಸ್ತಿ (ತುಳು) – ಬಿ ಕೆ ಗಂಗಾಧರ್ ಕಿರೋಡಿಯನ್‌, ಸಂದೇಶ ಮಾಧ್ಯಮ ಪ್ರಶಸ್ತಿ ( ಪತ್ರಿಕೋದ್ಯಮ)-

ಡಾ.ಟಿ.ಸಿ ಪೂರ್ಣಿಮ, ಸಂದೇಶ ಕೊಂಕಣಿ ಸಂಗೀತ ಪ್ರಶಸ್ತಿ- ಆಲ್ವಿನ್ ನೊರೊನ್ಹ, ಸಂದೇಶ ಕಲಾ ಪ್ರಶಸ್ತಿ- ಕಾಸರಗೋಡ್ ಚಿನ್ನ, ಸಂದೇಶ ಶಿಕ್ಷಣ ಪ್ರಶಸ್ತಿ- ಡಾ.ಪಿ.ಕೆ. ರಾಜಶೇಖರ, ಸಂದೇಶ ವಿಶೇಷ ಪ್ರಶಸ್ತಿ- ಸ. ರಘುನಾಥ್ ಅವರನ್ನು ಆರಿಸಲಾಗಿದೆ.

ಈ ವರ್ಷದ ಪ್ರಶಸ್ತಿ ಕಾರ್ಯಕ್ರಮವು 2022ರ ಫೆಬ್ರವರಿ 22 ಮಂಗಳವಾರ ಸಂಜೆ 5.30ಕ್ಕೆ ಸಂದೇಶ ಸಂಸ್ಥೆ ಮೈದಾನದಲ್ಲಿ ನಡೆಯಲಿದೆ. ಬಳ್ಳಾರಿಯ ಬಿಷಪ್ ಹಾಗೂ ಸಂಸ್ಥೆಯ ಅಧ್ಯಕ್ಷ ಡಾ.ಹೆನ್ರಿ ಡಿಸೋಜ ಅಧ್ಯಕ್ಷತೆ ವಹಿಸುವರು.

ಮುಖ್ಯ ಅತಿಥಿಗಳಾಗಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಪಿ.ಸುಬ್ರಹ್ಮಣ್ಯ ಯಡಪಡಿತ್ತಾಯ ಭಾಗವಹಿಸುವರು. ಮಂಗಳೂರು ನಗರ ಪೊಲೀಸ್ ಆಯುಕ್ತ, ಶಶಿಕುಮಾರ್ ಇವರು ಗೌರವ ಅತಿಥಿಯಾಗಿ ಭಾಗವಹಿಸುವರು.


ಅತಿಥಿಗಳಾಗಿ ಮಂಗಳೂರಿನ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ಡಾನ್ಹಾ, ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೋ, ಸಂದೇಶದ ಸಂಚಾಲಕ ಫಾ.ಫ್ರಾನ್ಸಿಸ್ ಅಸ್ಸಿಸಿ ಅಲ್ಮೇಡಾ, ಸಂಸ್ಥೆಯ ಟ್ರಸ್ಟಿಗಳಾದ ಫಾ.ಐವಾನ್ ಪಿಂಟೋ ಮತ್ತು ರಾಯ್ ಕ್ಯಾಸ್ತಲಿನೋ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

FILM

ದಾಂಪತ್ಯಕ್ಕೆ ಕಾಲಿಡಲಿದ್ದಾರಾ ‘ಪ್ರಭಾಸ್‌’..! ಈ ಪೋಸ್ಟ್‌ ಹಿಂದಿನ ಅಸಲಿಯತ್ತೇನು!?

Published

on

ಟಾಲಿವುಡ್‌ ನ ಮೋಸ್ಟ್ ಬ್ಯಾಚುಲರ್‌ ಎಂದೇ ಹೆಸರಾಗಿರುವ ಪ್ರಭಾಸ್ ಸದಾ ತಮ್ಮ ಮದುವೆಯ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಸೂಪರ್ ಸ್ಟಾರ್ ಪ್ರಭಾಸ್‌ರವರ ಹೆಸರಿನ ಜೊತೆ ಹಲವು ಸ್ಟಾರ್ ನಟಿಯರ ಹೆಸರುಗಳು ತುಣುಕು ಹಾಕುತ್ತಿತ್ತು. ಅದರಲ್ಲೂ ಪುತ್ತೂರಿನ ಬೆಡಗಿ ಅನುಷ್ಕಾ ಶೆಟ್ಟಿ ಯವರ ಹೆಸರು ಆಗಾಗ ಕೇಳಿಬರುತ್ತಿತ್ತು. ಇನ್ನು ಬಾಹುಬಲಿ ಸಿನೆಮಾದ ಬಳಿಕ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಇನ್ನೇನು ದಾಂಪತ್ಯ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ ಪ್ರಭಾಸ್ ಹಾಗೂ ಅನುಷ್ಕಾ ಅದೆಲ್ಲವನ್ನು ಅಲ್ಲಗಳೆದಿದ್ದಾರೆ.

ಇದೀಗ ಪ್ರಭಾಸ್ ಅವರ ಒಂದು ಪೋಸ್ಟ್‌ ಅಭಿಮಾನಿಗಳಲ್ಲಿ ಖುಷಿ ನೀಡಿದೆ. ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ‘ಡಾರ್ಲಿಂಗ್ಸ್‌!!.. ಕೊನೆಗೂ ನನ್ನ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರಲಿದ್ದಾರೆ.. ಸ್ವಲ್ಪ ಕಾಯಿರಿ” ಎಂದು ಬರೆದುಕೊಂಡು ಪೋಸ್ಟ್‌ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಜೊತೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪೋಸ್ಟ್‌ ನೋಡಿದ ಬಳಿಕ ಪ್ರಭಾಸ್ ಮದುವೆಗೆ ಸಜ್ಜಾಗಿದ್ದಾರಾ..!? ಎಂಬುದಾಗಿಯೂ ಕುತೂಹಲ ಮೂಡಿದೆ. ಇನ್ನೂ ಕೆಲವರು ಸಿನೆಮಾ ಪ್ರಚಾರಕ್ಕಾಗಿ ಈ ತಂತ್ರವನ್ನು ಬಳಸಿದ್ದಾರಾ ಎನ್ನುವುದು ಅನುಮಾನ ಮೂಡಿದೆ.

ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

ಸಿನೆಮಾ ಪ್ರಚಾರಕ್ಕಾಗಿ ಪೋಸ್ಟ್‌ ಹಾಕಿದ್ರಾ ಪ್ರಬಾಸ್..?

kalki

ಸಲಾರ್ ಸಿನೆಮಾ ಹಿಟ್ ಬಳಿಕ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ ‘ ಸಿನೆಮಾ ತೆರೆಗೆ ಬರಲು ಸಿದ್ಧವಾಗಿದೆ. ಇನ್ನೂ ಈ ಸಿನೆಮಾದಲ್ಲಿ ಘಟಾನುಘಟಿಗಳು ಬಣ್ಣ ಹಚ್ಚಿದ್ದಾರೆ. ಅಮಿತಾಬಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಮುಂತಾದವರು ನಟಿಸಿದ್ದಾರೆ. ಇದೇ ಸಿನೆಮಾದ ಪ್ರಚಾರಕ್ಕಾಗಿ ಮಾಡಿರುವ ತಂತ್ರ ಎಂದು ಹೇಳಲಾಗಿದೆ. ಇನ್ನು ಈ ಸಿನೆಮಾ ಪ್ರಚಾರಕ್ಕಾಗಿಯೇ ಹೊಸ ವಿನ್ಯಾಸದ ಕಾರೊಂದನ್ನು ತಯಾರು ಮಾಡಲಾಗಿದೆಯಂತೆ. ಹೀಗಾಗಿ ಪ್ರಭಾಸ್ ‘ ನನ್ನ ಜೀವನದಲ್ಲಿ ಹೊಸ ವ್ಯಕ್ತಿ ಆಗಮನ’ ಎಂದು ಬರೆದುಕೊಂಡಿರಬಹುದು ಎಂದು ಊಹಿಸಲಾಗಿದೆ.

ಅದೇನೆ ಇರಲಿ ಪ್ರಭಾಸ್ ಮದುವೆ ಆಗಲು ನಿರ್ಧಿರಿಸಿದ್ದಾರಾ..? ಅಥವಾ ಸಿನೆಮಾ ಪ್ರಚಾರಕ್ಕಾಗಿ ಹೀಗೆ ಬರೆದುಕೊಂಡಿದ್ದಾರಾ..? ಅನ್ನೋದರ  ಅಸಲಿಯತ್ತು  ಇನ್ನೆರೆಡು ದಿನಗಳಲ್ಲಿ ಕಾದು ನೋಡಬೇಕಿದೆ.

 

 

Continue Reading

LATEST NEWS

ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 24ರ ವರೆಗೂ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು : ಬಿಸಿಲ ಬೇಗೆಗೆ ಬೆಂದಿರುವ ಜನರ ಮೊಗದಲ್ಲಿ ನಗುವನ್ನು ಮಳೆರಾಯ ತಂದಿದ್ದಾನೆ. ಈಗಾಗಲೇ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆರಾಯನ ಆಗಮನವಾಗಿದೆ. ಮೇ 24ರವರೆಗೂ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಎಲ್ಲಿಲ್ಲಿ ಮಳೆ?

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನದ, ಕೊಪ್ಪಳ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಇದು ಪುರುಷರು ಮಾತ್ರ ಭಾಗವಹಿಸುವ ಜಾತ್ರೆ..! ಮಾಂಸದೂಟ ಇಲ್ಲಿನ ವಿಶೇಷ..!

ಇನ್ನು ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಸ್ವಲ್ಪ ಮಟ್ಟಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Continue Reading

FILM

ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

Published

on

ಬೆಂಗಳೂರು : ಚಾಲೆಂಜಿಂಗ್ ದರ್ಶನ್ ಸಿನಿಮಾಗಾಗಿ ಅಭಿಮಾನಿಗಳು ಕಾತುರದಿಂದ ಕಾಯುತ್ತಾರೆ. ಚಿತ್ರ ಬಿಡುಗಡೆಗೂ ಮುನ್ನ ಚಿತ್ರದ ಪ್ರತೀ ಅಪ್ಡೇಟ್ ಗಾಗಿ ತುದಿಗಾಲಲ್ಲಿ ನಿಂತಿರುತ್ತಾರೆ. ಹೊಸ ಚಿತ್ರ ಅನೌನ್ಸ್ ಆದಾಗಿನಿಂದ ಪ್ರತಿ ಸುದ್ದಿಗಾಗಿಯೂ ಅಭಿಮಾನಿಗಳು ಕುತೂಹಲದಿಂದ ನಿರೀಕ್ಷೆಯಲ್ಲಿರುತ್ತಾರೆ.
‘ಕಾಟೇರ’ ಚಿತ್ರದ ಯಶಸ್ಸಿನ ನಂತರ ದರ್ಶನ್ ‘ಡೆವಿಲ್’ ಚಿತ್ರವನ್ನು ಅನೌನ್ಸ್ ಮಾಡಿದ್ದರು. ಈಗಾಗಲೇ ಪೋಸ್ಟರ್, ಮೇಕಿಂಗ್ ವೀಡಿಯೋಗಳು ಸದ್ದು ಮಾಡುತ್ತಿವೆ. ಡಿ ಬಾಸ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

ಕರಾವಳಿ ಬೆಡಗಿ ನಾಯಕಿ :

ದರ್ಶನ್ ಜೊತೆ ನಾಯಕಿಯಾಗಿ ಯಾರು ನಟಿಸಲಿದ್ದಾರೆ ಎಂಬ ಕುತೂಹಲಕ್ಕೂ ಈಗ ತೆರೆ ಬಿದ್ದಿದೆ, ಕರಾವಳಿಯ ಬೆಡಗಿ ದರ್ಶನ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ. ಹೌದು, ಕರಾವಳಿ ಮೂಲದ ರಜನಾ ರೈ ‘ಡೆವಿಲ್’ ಚಿತ್ರದ ನಾಯಕಿ. ಈ ಹಿಂದೆಯೂ ರಚನಾ ಡೆವಿಲ್ ಗೆ ನಾಯಕಿ ಆಗಲಿದ್ದಾರೆ ಎಂಬ ಗಾಳಿ ಸುದ್ದಿಯೊಂದು ಹರಿದಾಡುತ್ತಿತ್ತು. ಇದೀಗ ಅದು ದೃಢವಾಗಿದೆ. ಪೋಸ್ಟರ್ ಕೂಡ ಬಿಡುಗಡೆಯಾಗಿದೆ.

ಸಿನಿಮಾದ ನಿರ್ಮಾಣ ಸಂಸ್ಥೆಯಾದ ಜೈ ಮಾತಾ ಕಂಬೈನ್ಸ್‌ ತನ್ನ ಸೋಶಿಯಲ್‌ ಮೀಡಿಯಾ ಪುಟದಲ್ಲಿ ಪೋಸ್ಟರ್ ಹಂಚಿಕೊಂಡಿದ್ದು, ‘ವೆಲ್‌ಕಮ್‌ ಆನ್‌ ಬೋರ್ಡ್‌, ಶುದ್ಧ ಕೌಶಲ್ಯಕ್ಕಾಗಿ ಗುರುತಿಸಲಾಗಿದೆ. ರಚನಾ ರೈ ಸ್ವಾಗತ’ ಎಂದುಬರೆದುಕೊಂಡಿದೆ. ಪೋಸ್ಟರ್ ನಲ್ಲಿ ನೆಲದ ಪ್ರತಿಭೆಗೆ ಮನ್ನಣೆ ಎಂದು ಬರೆಯಲಾಗಿದೆ.


ಪುತ್ತೂರು ಮೂಲದ ರಚನಾ ಈಗಾಗಲೇ ತುಳು, ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ರೂಪೇಶ್ ಶೆಟ್ಟಿ ಜೊತೆ ತುಳು ಚಿತ್ರ ‘ಸರ್ಕಸ್’ನಲ್ಲಿ ನಾಯಕಿಯಾಗಿ ಮಿಂಚಿದ್ದಾರೆ. ಕನ್ನಡದಲ್ಲಿ ಧನ್ವೀರ್ ಗೌಡ ಜೊತೆ ‘ವಾಮನ’ದಲ್ಲೂ ನಟಿಸಿದ್ದಾರೆ. ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ರಚನಾ ಮಾಡೆಲ್ ಕ್ಷೇತ್ರದಲ್ಲೂ ಮಿಂಚಿದ್ದಾರೆ. ಡ್ಯಾನ್ಸರ್ ಕೂಡಾ ಹೌದು. ‘ಓ ಮೈ ಡಾಗ್’ ಎಂಬ ಪುಸ್ತಕವನ್ನೂ ಅವರು ಬರೆದಿದ್ದಾರೆ.

ಇದನ್ನೂ ಓದಿ : ನಟಿ ಪವಿತ್ರಾ ಜಯರಾಂ ಸಾ*ವಿನ ಬೆನ್ನಲ್ಲೇ ಆತ್ಮಹ*ತ್ಯೆಗೆ ಶರಣಾದ ಸಹನಟ ಚಂದು!

‘ತಾರಕ್’ ಬಳಿಕ ‘ಡೆವಿಲ್’ ಚಿತ್ರದ ಮೂಲಕ ಮತ್ತೆ ಪ್ರಕಾಶ್ ವೀರ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದ್ದು, ದರ್ಶನ್ ಕೈಗೆ ಪೆಟ್ಟಾದ ಹಿನ್ನೆಲೆಯಲ್ಲಿ ಚಿತ್ರೀಕರಣ ಸ್ಥಗಿತವಾಗಿತ್ತು. ಸದ್ಯ ದರ್ಶನ್ ಗುಣಮುಖರಾಗಿದ್ದು, ಸದ್ಯದಲ್ಲೇ ಡೆವಿಲ್ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿದುಬಂದಿದೆ.

Continue Reading

LATEST NEWS

Trending