Connect with us

LATEST NEWS

ಕ್ಷಮಿಸು ಅಕ್ಕ…! ಎಂದು ಮೆಸೇಜ್ ಮಾಡಿ ಕಾಲೇಜು ಕಟ್ಟಡದಿಂದ ಹಾರಿ ಆತ್ಮಹ*ತ್ಯೆ ಮಾಡಿಕೊಂಡ ಬಾಲಕಿ!

Published

on

ಆಂಧ್ರಪ್ರದೇಶ : ವಿಶಾಖಪಟ್ಟಣಂನಲ್ಲಿ 17 ವರ್ಷದ ಪಾಲಿಟೆಕ್ನಿಕ್ ವಿದ್ಯಾರ್ಥಿನಿಯೊಬ್ಬಳು ತಾನು ಓದುತ್ತಿದ್ದ ಕಾಲೇಜು ಕಟ್ಟಡದಿಂದ ಜಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ. ತನಗೆ ಸಹ ವಿದ್ಯಾರ್ಥಿಗಳಿಂದ ಲೈಂ*ಗಿಕ ಕಿರು*ಕುಳ ಉಂಟಾಗುತ್ತಿದೆ ಎಂದು ತನ್ನ ಮನೆಯವರಿಗೆ ತಿಳಿಸಿದ ಕೆಲವೇ ನಿಮಿಷಗಳಲ್ಲಿ ಈ ಕೃ*ತ್ಯ ಎಸಗಿದ್ದಾಳೆ.

ಮೆಸೇಜ್ ನಲ್ಲಿ ಏನಿತ್ತು?
ಮೃ*ತ ಬಾಲಕಿ ತನ್ನ ಅಕ್ಕನಿಗೆ ತನ್ನನ್ನು ಕ್ಷಮಿಸುವಂತೆ ಮೆಸೇಜ್ ಮಾಡಿ, ತನಗೆ ಸಹಪಾಠಿಗಳಿಗಳು ಲೈಂ*ಗಿಕ ಕಿರು*ಕುಳ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ತನಗೆ ಕಿರು*ಕುಳ ನೀಡಿದವರು ತನ್ನ ಫೋಟೋಗಳನ್ನು ತೆಗೆದುಕೊಂಡು ಅವುಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡುವುದಾಗಿ ಬೆ*ದರಿಕೆ ಹಾಕಿದ್ದಾರೆ. ಘಟನೆ ಬಗ್ಗೆ ದೂರು ನೀಡದಂತೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿಸಿದ್ದಾಳೆ ಎಂದು ವರದಿಯಾಗಿದೆ.

ಏನಿದು ಘಟನೆ?
ಆಂಧ್ರಪ್ರದೇಶದ ನೆರೆಯ ಅನಕಪಲ್ಲಿ ಜಿಲ್ಲೆಯ ಬಾಲಕಿಯ ಕುಟುಂಬಕ್ಕೆ ಗುರುವಾರ ರಾತ್ರಿ 10 ಗಂಟೆ ಸುಮಾರಿಗೆ ಕಾಲೇಜು ಅಧಿಕಾರಿಗಳು ಪೋನ್ ಮಾಡಿದ್ದಾರೆ. ಆಕೆ ಕಾಣೆಯಾಗಿರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಮನೆಯವರು ಆಕೆಗೆ ಕರೆ ಮಾಡಿದ್ದಾರೆ. ಆದರೆ, ಆಕೆ ಸ್ಪಂದಿಸಿಲ್ಲ. ಬಳಿಕ ಶುಕ್ರವಾರ ಮಧ್ಯರಾತ್ರಿ 12:50 ರ ಸುಮಾರಿಗೆ, ತಮ್ಮ ಮನೆಯವರ ಮೆಸೇಜ್‌ಗಳಿಗೆ ರಿಫ್ಲೈ ಮಾಡಿದ್ದು, ಚಿಂತಿಸಬೇಡಿ ಎಂದು ಹೇಳಿದ್ದಾಳೆ ಎನ್ನಲಾಗಿದೆ.

“ನಾನು ಅಧ್ಯಾಪಕರಿಗೆ ಏಕೆ ದೂರು ನೀಡುತ್ತಿಲ್ಲ ಎಂದು ನೀವು ಕೇಳಬಹುದು, ಆದರೆ ಅದರಿಂದ ಯಾವುದೇ ಸಹಾಯ ಆಗುವುದಿಲ್ಲ. ನನಗೆ ಕಿರುಕುಳ ನೀಡುವವರು ನನ್ನ ಫೋಟೋಗಳನ್ನು ತೆಗೆದುಕೊಂಡಿದ್ದಾರೆ. ನನಗೆ ಬೆದರಿಕೆ ಹಾಕುತ್ತಿದ್ದಾರೆ. ಹೀಗೆ ಇತರ ಹುಡುಗಿಯರಿಗೂ ಕಿರು*ಕುಳ ನೀಡಿದ್ದಾರೆ. ನಾವು ಯಾರಿಗೂ ಇದನ್ನು ಹೇಳಲು ಸಾಧ್ಯವಾಗುತ್ತಿಲ್ಲ. ಕಾಲೇಜು ಬಿಡಲು ನಮಗೆ ಸಾಧ್ಯವಾಗುತ್ತಿಲ್ಲ. ನಾವು ಸಿಕ್ಕಿಬಿದ್ದಿದ್ದೇವೆ. ನಾನು ಪೊಲೀಸರಿಗೆ ದೂರು ನೀಡಿದರೆ ಅಥವಾ ಅಧಿಕಾರಿಗಳನ್ನು ಸಂಪರ್ಕಿಸಿದರೆ, ಅವರು ನನ್ನ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಾಕಿಬಿಡುತ್ತಾರೆ ಎಂದು ಬರೆದಿದ್ದಾಳೆಂದು ವರದಿ ತಿಳಿಸಿದೆ.

ಅಪ್ಪನಿಗೆ, ‘ನಾನೀಗ ಸ*ತ್ತು ಹೋದರೆ ಕೆಲ ವರ್ಷ ನಿಮಗೆ ದುಃಖವಾಗಬಹುದು. ನಂತರ ಮರೆತುಹೋಗುತ್ತೀರಿ. ನಾನು ನಿಮ್ಮೊಂದಿಗೆ ಇದ್ದರೆ ನನ್ನನ್ನು ನೋಡಿದಾಗೆಲ್ಲಾ ನಿಮಗೆ ದುಃಖವಾಗುತ್ತಿರುತ್ತದೆ,’ ಎಂದಿದ್ದಾಳೆ. ತನ್ನ ಅಕ್ಕನಿಗೆ, ‘ಸಾರಿ ದೀದಿ, ನಿನಗೆ ತುಂಬಾ ಬೇಜಾರು ಮಾಡಿದೆ. ನಾನು ಹೋಗಬೇಕು,’ ಎಂದು ಬರೆದಿದ್ದಾಳೆ.

ತಮ್ಮ ಹಾಸ್ಟೆಲ್​ನಲ್ಲಿ ಬಾಲಕರಿಗೆ ಪ್ರವೇಶವೇ ಇಲ್ಲ. ಅಲ್ಲಿ ಲೈಂ*ಗಿಕ ಕಿರು*ಕುಳ ಆಗಲು ಸಾಧ್ಯವೇ ಇಲ್ಲ ಎಂದು ಪಾಲಿಟೆಕ್ನಿಕ್ ಕಾಲೇಜಿನ ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ ಎಂದು ತಿಳಿದು ಬಂದಿದೆ.

 

LATEST NEWS

ಮುಂದಿನ 5 ದಿನ ರಾಜ್ಯದ 25 ಜಿಲ್ಲೆಗಳಲ್ಲಿ ಬಿಸಿ ಗಾಳಿ ಸಾಧ್ಯತೆ; ಎಲ್ಲೆಲ್ಲಿ?

Published

on

ಮಂಗಳೂರು : ರಾಜ್ಯದಲ್ಲಿ ತಾಪಮಾನವು ದಿನದಿಂದ ದಿನಕ್ಕೆ ಹೆಚ್ಚುತ್ತಲಿದ್ದು, ಬಿಸಿಲಾಘಾತದಿಂದ ಜನ, ಜಾನುವಾರು ಮತ್ತು ಪಕ್ಷಿ ಸಂಕುಲ ತತ್ತರಿಸಿದೆ. ನೀರಿಗೆ ತತ್ವಾರ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿಯೇ ಇದೀಗ ಹವಾಮಾನ ಇಲಾಖೆಯು ರಾಜ್ಯದ 25 ಜಿಲ್ಲೆಗಳಿಗೆ ಶಾಖಾಘಾತದ ಮುನ್ಸೂಚನೆ ನೀಡಿದೆ. ಇಂದಿನಿಂದ 5 ದಿನಗಳ ಕಾಲ ಬಿಸಿ ಗಾಳಿ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಎಚ್ಚರಿಕೆ ನೀಡಿದೆ.

ಯಾವ ಜಿಲ್ಲೆಗಳಿಗೆ ಬಿಸಿಲಾಘಾತ?

ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಬಾಗಲಕೋಟೆ, ಬೆಳಗಾವಿ, ಗದಗ, ಧಾರವಾಡ, ಹಾವೇರಿ, ಕೊಪ್ಪಳ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಕೋಲಾರ, ಮಂಡ್ಯ, ಬಳ್ಳಾರಿ, ಹಾಸನ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶಾಖದ ಅಲೆಗಳು ಹೆಚ್ಚಾಗುವ ಸಾಧ್ಯತೆ ಇದೆ. ಮೇ 5 ರವರೆಗೂ ಇದೇ ಪರಿಸ್ಥಿತಿ ಇರಲಿದೆ ಎಂದು ಇಲಾಖೆ ತಿಳಿಸಿದೆ.

ಮೇ 4 ರ ವರೆಗೆ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಬಿಸಿ ವಾತಾವರಣವಿರುವ ಸಂಭವವಿದೆ.

ಮಳೆಯಾಗುವ ಸಾಧ್ಯತೆ :

ಚಿಕ್ಕಮಗಳೂರು, ಕೊಡಗು, ಮೈಸೂರು, ಮಂಡ್ಯ, ರಾಮನಗರ ಹಾಗೂ ತುಮಕೂರು ಜಿಲ್ಲೆಯ ಕೆಲವೆಡೆ ಬುಧವಾರ ಹಗುರ ಮಳೆಯಾಗುವ ಸಾಧ್ಯತೆಯಿದೆ. ಮುಂದಿನ ನಾಲ್ಕುದಿನ ಒಣಹವೆ ಇರಲಿದೆ.
ಮೇ 6 ರಿಂದ ಕೊಡಗು, ಮೈಸೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳ ಕೆಲವೆಡೆ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಬಳ್ಳಾರಿ, ಚಿಕ್ಕಮಗಳೂರು, ಚಿತ್ರದುರ್ಗ, ಹಾಸನ, ಶಿವಮೊಗ್ಗ, ತುಮಕೂರು, ವಿಜಯನಗರ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಯ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.

ಇದನ್ನೂ ಓದಿ : ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!

ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ :

ಇಂದಿನಿಂದ(ಮೇ 1 ರಿಂದ) ಮುಂದಿನ ಐದು ದಿನಗಳು ಬಾಗಲಕೋಟೆ, ಕಲಬುರಗಿ ಹಾಗೂ ಕೊಪ್ಪಳದಲ್ಲಿ ರಾತ್ರಿಯ ಅವಧಿಯೂ ಬಿಸಿ ವಾತಾವರಣದಿಂದ ಕೂಡಿರುವ ಸಾಧ್ಯತೆಯಿದೆ. ಮಂಗಳವಾರ ಬೆಳಿಗ್ಗೆ 8.30 ರಿಂದ ಬುಧವಾರ ಬೆಳಗ್ಗಿನ ತನಕದ 24 ಗಂಟೆಗಳ ಅವಧಿಯಲ್ಲಿ ರಾಜ್ಯದ ಕಲಬುರಗಿಯಲ್ಲಿ ಗರಿಷ್ಠ ಉಷ್ಣಾಂಶ 42.8 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ.

ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 38.2 ಡಿಗ್ರಿ ಸೆಲ್ಸಿಯಸ್ ವರದಿಯಾಗಿದೆ. ಕಳೆದ ನಾಲ್ಕು ದಿನಗಳಲ್ಲಿ ಮೂರು ದಿನ 38 ಡಿಗ್ರಿ ಸೆಲ್ಸಿಯಸ್ ದಾಟಿದೆ.

Continue Reading

DAKSHINA KANNADA

ಭರತನಾಟ್ಯದಂತೆ ಯಕ್ಷಗಾನಕ್ಕೂ ಪರೀಕ್ಷೆ..! ಪಟ್ಲ ಸತೀಶ್ ಶೆಟ್ಟಿ

Published

on

ಮಂಗಳೂರು: ಸಂಗೀತ, ಭರತನಾಟ್ಯದ ಮಾದರಿಯಲ್ಲಿ ಯಕ್ಷಗಾನಕ್ಕೂ ನಿರ್ದಿಷ್ಟ ಚೌಕಟ್ಟಿನಲ್ಲಿ ಪಠ್ಯ ರಚಿಸಿ ಪರೀಕ್ಷೆಗಳನ್ನು ನಡೆಸುವ ಪ್ರಯತ್ನಗಳು ನಡೆಯುತ್ತಿದೆ ಎಂದು ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಪಟ್ಲ ಸತೀಶ್ ಶೆಟ್ಟಿ ಹೇಳಿದರು.

ಮಂಗಳೂರಿನ ಪ್ರೆಸ್ ಕ್ಲಬ್‌ ವತಿಯಿಂದ ನಡೆದ ಪ್ರೆಸ್‌ಕ್ಲಬ್ ಗೌರವ ಅತಿಥಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಯಕ್ಷಗಾನದಲ್ಲಿ ಪ್ರತಿಯೊಬ್ಬ ಗುರು ತಮ್ಮದೇ ಆದ ಶೈಲಿಯಲ್ಲಿ ನಾಟ್ಯವನ್ನು ಕಲಿಸುತ್ತಾರೆ. ಯಕ್ಷಗಾನ ಕಲಿಕೆಗೆ ಒಂದು ಚೌಕಟ್ಟು ರೂಪಿಸುವ ಮೂಲಕ ಏಕರೂಪತೆ ತರಬೇಕಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್‌ನ ಯಕ್ಷ ಶಿಕ್ಷಣ ಯೋಜನೆಯು ಪಠ್ಯ ರೂಪಿಸಿದ್ದು, ಫೌಂಡೇಶನ್‌ನ ಶಿಕ್ಷಕರು ಇದರ ಪ್ರಕಾರವೇ ನಾಟ್ಯ ಕಲಿಸುತ್ತಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ಯಕ್ಷಗಾನಕ್ಕೆಂದೇ ಒಂದು ಸೀಲೆಬಸ್ ಮಾಡಿ  ಅದರ ಮುಖೇನ ಯಕ್ಷಗಾನ ನಾಟ್ಯ ಕಲಿಯುವ ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದರು.

 

Continue Reading

LATEST NEWS

ಬೆಳಗ್ಗೆ ಏಳುವಾಗ ಬಲಗಡೆಯಿಂದ ಯಾಕೆ ಏಳಬೇಕು ಗೊತ್ತೇ..?

Published

on

ಮಂಗಳೂರು: ರಾತ್ರಿ ಮಲಗೋದು ಎಷ್ಟು ಮುಖ್ಯವೋ ಬೆಳಗ್ಗಿನ ಜಾವ ಏಳೋದು ಕೂಡ ಅಷ್ಟೇ ಮುಖ್ಯವಾಗುತ್ತದೆ. ಸನಾತನ ಹಿಂದೂ ಧರ್ಮದಲ್ಲಿ ಒಂದು ವಿಶೇಷ ಸಂಪ್ರದಾಯ ಇದೆ. ಬೆಳಿಗ್ಗೆ ಬಲಗಡೆಯಿಂದ ಎದ್ದು ಅಂಗೈ ಉಜ್ಜಿ ಕಣ್ಣು ಮುಚ್ಚಿ ಕರಾಗ್ರೆ ವಸತೆ ಲಕ್ಷ್ಮಿ ಎನ್ನುವ ಶ್ಲೋಕ ಹೇಳುವುದು. ಬಾಲ್ಯದಲ್ಲಿ ನಮ್ಮ ಹಿರಿಯರು ಹಾಗೂ ನಮ್ಮ ಅಮ್ಮಂದಿರು ಬಲಗಡೆಗೆ ಏಳು ಅಂತ ಹೇಳಿರುವುದನ್ನು ಕೇಳಿರುತ್ತೇವೆ. ಅಥವಾ ನಾವು ಎಡ ಬದಿಯಿಂದ ಎಳುವುದ್ದನ್ನು ನೋಡಿದಾಗ ನಮ್ಮನ್ನು ಬಲಗಡೆಯಿಂದ ಎಬ್ಬಿಸಲು ಟ್ರೈ ಮಾಡಿರಬಹುದು.

ಬಲ ಭಾಗದಿಂದ ಎದ್ದರೆ ಅದೃಷ್ಟ

ಬಲ ಭಾಗದಿಂದ ಎದ್ದರೆ ಒಳ್ಳೆಯದು ಅನ್ನೋದು ಹೇಳಿದ್ದನ್ನ ನಾವು ಕೇಳಿರಬಹುದು. ಬಲ ಭಾಗದಿಂದ ಎಚ್ಚರಗೊಂಡರೆ ದಿನವಿಡೀ ಅದೃಷ್ಟ ಇತ್ಯಾದಿ ಕಲ್ಪನೆಗಳು ನಮ್ಮಲ್ಲಿ ಇರುತ್ತದೆ. ಇನ್ನೊಂದು ವಿಚಾರ ಏನು ಅಂದ್ರೆ ನಮ್ಮ ದೇಹ ನಿದ್ದೆಗೆ ಜಾರಿದಾಗ ನಮ್ಮ ದೇಹದಲ್ಲಿ ಸ್ನಾಯುಗಳು ರೆಸ್ಟ್ ಅಲ್ಲಿ ಇರುತ್ತವೆ.

ವೈಜ್ಞಾನಿಕ ಕಾರಣ

ವೈಜ್ಞಾನಿಕವಾಗಿ ಹೇಳುವುದಾದರೆ ನಮ್ಮ ಹೃದಯ ದೇಹದ ಎಡ ಭಾಗದಲ್ಲಿ ಇದೆ. ಅದರ ಸುತ್ತಲೂ ಹಲವಾರು ಸ್ನಾಯುಗಳು ಇವೆ. ನಾವು ಎಡ ಭಾಗದಿಂದ ಧಿಡೀರ್ ಅಂತ ಇದ್ರೆ ನಮ್ಮ ಇಡೀ ದೇಹದ ಒತ್ತಡ ಆ ಸ್ನಾಯುಗಳ ಮೇಲೆ ಬೀಳುತ್ತೆ. ಆ ಸ್ನಾಯುಗಳಿಗೆ ಸ್ವಲ್ಪ ಪೆಟ್ಟು ಬಿದ್ರೆ ಕೂಡ ಅದು ನಮ್ಮ ಹೃದಯಕ್ಕೆ ತುಂಬಾ ಅಪಾಯಕಾರಿ. ಆದ್ದರಿಂದ ನಮ್ಮ ಹಿರಿಯರು ಬಲ ಭಾಗದಿಂದ ಏಳಬೇಕು ಅಂತ ಹೇಳುತ್ತಿದ್ದರು.

ಇನ್ನು ಎಡಭಾಗದಿಂದ ಎದ್ದರೆ ದಿನ ಒಳ್ಳೆಯದಿರುವುದಿಲ್ಲ, ಏನಾದರೂ ಕೆಟ್ಟದ್ದು ಆಗುವ ಸಾಧ್ಯತೆಗಳು ಇರುತ್ತದೆ ಎಂಬುದು ಜನರ ನಂಬಿಕೆಯಾಗಿರುತ್ತದೆ. ಹಾಗಾಗಿ ಈಗಲೂ ಹೆಚ್ಚಿನ ಜನರು ಬೆಳ್ಳಗ್ಗಿನ ಜಾವ ಎಡಭಾಗದಿಂದ ಏಳದೇ ಬಲಭಾಗದಿಂದ ಏಳುತ್ತಾರೆ. ಬೆಳಗ್ಗೆ ಬಲ ಬದಿಯಿಂದ ಏಳುವುದರಿಂದ ನಿಮ್ಮ ಅಂದಿನ ದಿನ ಶಾಂತಿಯುತವಾಗಿಯೂ ಹಾಗೂ ಒತ್ತಡವಿಲ್ಲದೇ ಕಳೆಯಬಹುದು.

Continue Reading

LATEST NEWS

Trending