Connect with us

DAKSHINA KANNADA

ಆಹಾ…! ಕುದ್ರೋಳಿ ಶಾರದೆ ಲುಕ್‌ನಲ್ಲಿ ಕಂಗೊಳಿಸಿದ ಕಾಟೇರ ನಟಿ!

Published

on

ಕಿರುತೆರೆಯಲ್ಲಿ ತನ್ನ ಸೌಂದರ್ಯ ಹಾಗೂ ನಟನೆಯಿಂದ ಫೇಮಸ್ ಆಗಿರುವ ಶ್ವೇತಾ ಪ್ರಸಾದ್ ಇದೀಗ ಕುದ್ರೋಳಿ ಶಾರದಾಂಬೆಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಧಾರಾವಾಹಿ, ಸಿನೆಮಾಗಳಲ್ಲಿ ಸಕ್ರಿಯವಾಗಿರುವ ಇವರಿಗೆ ಫೊಟೋಶೂಟ್ ಕ್ರೇಜ್ ಅಂತೂ ಹೆಚ್ಚು. ಒಂದಿಲ್ಲೊಂದು   ಫೊಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿ ಪಡ್ಡೆ ಹೈಕಳ ಮನಸ್ಸು ಕದಿತಾರೆ. ಈಗ ಶಾರದೆಯಾಗಿ ಕಂಗೊಳಿಸಿದ್ದಾರೆ.

 

 

ಜೀ ಕನ್ನಡದಲ್ಲಿ ಪ್ರಸಾರವಾದ `ಶ್ರೀರಸ್ತು ಶುಭಮಸ್ತು’ ಧಾರಾವಾಹಿ ಮೂಲಕ ಕಿರುತೆರೆಗೆ ಎಂಟ್ರಿ ಆದ್ರು. ‘ಶ್ರೀರಸ್ತು ಶುಭಮಸ್ತು’ವಿನ ಜಾನ್ಹವಿಯಾಗಿ, ‘ರಾಧಾ ರಮಣ’ದ ರಾಧಾ ಟೀಚರ್ ಆಗಿ ಕನ್ನಡಿಗರ ಮನಸ್ಸು ಗೆದ್ದಿದ್ದರು.  ಕಲರ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ‘ರಾಧಾ-ರಮಣ’ ಧಾರಾವಾಹಿಯಿಂದ ಶ್ವೇತಾರವರು ಜನಪ್ರಿಯತೆ ಹೆಚ್ಚಾಗಿತ್ತು. 2017 ರಲ್ಲಿ ಬೆಂಗಳೂರು ಟೈಮ್ಸ್‌ನ ಮೋಸ್ಟ್ ಡಿಸೈರೇಬಲ್ ಮಹಿಳೆ ಪ್ರಶಸ್ತಿಯನ್ನೂ ಲಭಿಸಿದೆ.

ಟ್ರಾವೆಲ್ ಇಷ್ಟಪಡ್ತಾರಂತೆ ‘ಶ್ವೇತಾ’..!!

ಕಿರುತೆರೆಯಿಂದ ಸ್ವಲ್ಪ ಗ್ಯಾಪ್ ತಗೊಂಡ ಇವರು ಒಂದಲ್ಲ ಒಂದು ಕಾರ್ಯ ಚಟುವಟಿಕೆಗಳಲ್ಲಿ ತನ್ನನ್ನು ತೊಡಗಿಸಿಕೊಳ್ತಾರೆ. ಕೆಲವೇ ಸಮಯ ಕಿರುತೆರೆಯಲ್ಲಿ ಬಣ್ಣ ಹಚ್ಚಿದ್ದರೂ ಇವರ ಫ್ಯಾನ್ ಫಾಲೋಯಿಂಗ್ ಮಾತ್ರ ಕಮ್ಮಿ ಆಗಿಲ್ಲ. ಇನ್ಸ್ಟಾಗ್ರಾಮ್‌ನಲ್ಲಿ ಸದಾ ಆ್ಯಕ್ಟೀವ್ ಆಗಿರುವ ಇವರು ಬೇರೆ ಬೇರೆ ವಿಷಯದ ಕುರಿತು ಜನರಿಗೆ ಮಾಹಿತಿ ನೀಡ್ತಿದ್ದಾರೆ.  ಟ್ರಾವೆಲ್ ಅನ್ನು ಇಷ್ಟಪಡುವ ಶ್ವೇತಾ ಇಡೀ ಭಾರತವನ್ನು ಟೂರ್ ಮಾಡುತ್ತಾ ಹೊಸ ಹೊಸ ವಿಷಾರಗಳನ್ನು ಅಭಿಮಾನಿಗಳೊಂದಿಗೆ ಶೇರ್ ಮಾಡ್ತಾರೆ.  ಸಿಕ್ಕಾಪಟ್ಟೆ ಟ್ರಾವೆಲ್ ಇಷ್ಟಪಡುವ ಇವರು ಆಗಾಗ ತಮ್ಮ ಪ್ರವಾಸದ ಫೋಟೋಗಳನ್ನು ಇನ್ಸ್ಟಾಗ್ರಾಂ ಪೇಜ್ ನಲ್ಲಿ ಅಪ್ ಲೋಡ್ ಮಾಡುತ್ತಿರುತ್ತಾರೆ.

ಹಾಟ್ ಲುಕ್‌ಗೂ ಸೈ, ಟ್ರೆಡಿಷನಲ್‌ ಲುಕ್‌ಗೂ ಸೈ..!!

ಬಹಳ ದಿನಗಳ ಬಳಿಕ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಅಂತರಪಟ ಸೀರಿಯಲ್ ನಲ್ಲಿ ಕಾಣಿಸಿಕೊಂಡಿದ್ದರು. ಇನ್ಸ್ಟಾಗ್ರಾಂ ನಲ್ಲಿ ಟ್ರೇಡಿಷನಲ್, ವೆಸ್ಟರ್ನ್ ಲುಕ್‌ ನಲ್ಲಿ ಫೋಟೋ ಪೋಸ್ಟ್ ಮಾಡಿ ಅಭಿಮಾನಿಗಳಿಂದ ಲೈಕ್ಸ್ ಗಿಟ್ಟಿಸಿಕೊಳ್ತಿದ್ರು. ಇದೀಗ ಮಂಗಳೂರಿನ ಪ್ರಸಿದ್ಧ ಕುದ್ರೋಳಿ ಶಾರದಾಂಬೆಯ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಕೆಂಪು ಬಣ್ಣದ ಸೀರೆ, ಕೈಯಲ್ಲೊಂದು ವೀಣೆ ಜೊತೆಗೆ ತಾವರೆ ಹೂವನ್ನು ಹಿಡಿದುಕೊಂಡು,  ಮುಡಿ ತುಂಬಾ ಮಂಗಳೂರು ಮಲ್ಲಿಗೆಯನ್ನ ಮುಡಿದು, ಮೈ ತುಂಬಾ ಆಭರಣಗಳನ್ನು ತೊಟ್ಟು ಪೋಸ್ ನೀಡಿರುವ ಫೊಟೋವನ್ನ ಪೋಸ್ಟ್ ಮಾಡಿದ್ದಾರೆ. ಇದಕ್ಕೆ ಫಿದಾ ಆಗಿರೋ ಫ್ಯಾನ್ಸ್ ಬಹಳ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ಪ್ರವಾಸ ಪ್ರಿಯೆ :

ಗೊಂಬೆಯಂತಿರುವ ಮುದ್ದು ನಟಿ ಸದಾ ಬೇರೆಯವರಿಗೆ ಸಹಾಯ ಮಾಡುವ ಶ್ವೇತಾ ಪ್ರಸಾದ್ ಅವರು ತಂದೆಯ ಹೆಸರಿನಲ್ಲಿ ಹೊಸ ಎನ್ .ಜಿ.ಓ ಕೂಡ ಪ್ರಾರಂಭಿಸಿದ್ದರು. ಈ ಬಗ್ಗೆಯೂ ವೀಡಿಯೋ ಮಾಡಿದ್ದರು. ಅವರ ತಂದೆ ಪ್ರಸಾದ್ ಫೌಂಡೇಷನ್ ಮೂಲಕ ಎನ್ ಜಿಒ ಪ್ರಾರಂಭಿಸಿದ್ದಾರೆ. ಇಷ್ಟೆಲ್ಲಾ ಬ್ಯುಸಿ ಇದ್ದರೂ ಕೂಡ ಸೋಶಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿ ಇರುವ ಮೂಲಕ ಅಭಿಮಾನಿಗಳ ಜೊತೆಗೆ ಸಂಪರ್ಕದಲ್ಲಿರುತ್ತಾರೆ. ಆಗಾಗ ಫೋಟೋಶೂಟ್ ಮಾಡಿಸುತ್ತಿರುತ್ತಾರೆ.

ಮಲೆನಾಡಿನ ಬೆಡಗಿ ಶ್ವೇತಾ ಪ್ರಸಾದ್ ಅವರು ಎಲ್ಲಾ ಬಗೆಯ ಉಡುಗೆಯಲ್ಲೂ ಗೊಂಬೆಯಂತೆ ಕಂಗೊಳಿಸುತ್ತಿರುತ್ತಾರೆ.  ಶ್ವೇತಾ ಭಾರತದ ಪ್ರವಾಸ ಮಾಡಿದ್ದು, ಕೇರಳ, ಮಂಗಳೂರು, ಉತ್ತರ ಕರ್ನಾಟಕ, ಉತ್ತರ ಭಾರತ, ಆಂಧ್ರ, ಅಸ್ಸಾಂ, ಕಾಶ್ಮೀರ ಹೀಗೆ ಎಲ್ಲೆಡೆ ಪ್ರವಾಸ ಮಾಡಿದ್ದಾರೆ.

ಅಷ್ಟೇ ಅಲ್ಲದೇ, ಸೌದಿ ಅರೇಬಿಯಾ ಸೇರಿದಂತೆ ಹೊರ ದೇಶಗಳಲ್ಲೂ ಸುತ್ತಾಡಿದ್ದಾರೆ. ಶ್ವೇತಾ ಅವರಿಗೆ ಟ್ರಾವೆಲಿಂಗ್ ಅಂದರೆ ಖುಷಿಯಂತೆ. ಹಾಗಾಗಿ ಹೊಸ ಹೊಸ ಜಾಗಗಳಿಗೆ ತೆರಳುತ್ತಿರುತ್ತಾರಂತೆ. ಇನ್ನು ಆಗಾಗ ಫೋಟೋಶೂಟ್ ಗಳ ಮೂಲಕ ಹೊಸ ಲುಕ್ ನಲ್ಲೂ ಕಾಣಿಸಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗಷ್ಟೇ ಅಂತರಪಟ ಧಾರಾವಾಹಿಯಲ್ಲಿ ಸಪೋರ್ಟಿಂಗ್ ಕ್ಯಾರೆಕ್ಟರ್ ನಲ್ಲಿ ಕೆಲ ಸಮಯ ಕಿರುತೆರೆಯಲ್ಲಿ ಕಾಣಿಸಿಕೊಂಡರು. ಇದನ್ನು ನೋಡಿದ ಅಭಿಮಾನಿಗಳು ಶ್ವೇತಾ ಅವರನ್ನು ಹೊಸ ಧಾರಾವಾಹಿಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಬಹುದು ಎಂದು ನಿರೀಕ್ಷಿಸಿದ್ದಾರೆ.

DAKSHINA KANNADA

ನಿರ್ಮಾಣ ಹಂತದ ಸೇತುವೆ ಕುಸಿದು 7 ಮಂದಿಗೆ ಗಾಯ

Published

on

ವಿಟ್ಲ: ನಿರ್ಮಾಣ ಹಂತದಲ್ಲಿದ್ದ ಸೇತುವೆ ಕುಸಿದ ಪರಿಣಾಮ 7 ಮಂದಿ ಕಾರ್ಮಿಕರು ಗಾಯಗೊಂಡ ಘಟನೆ ಪುಣಚ ಗ್ರಾಮದ ಬರೆಂಜ-ಕುರುಡಕಟ್ಟೆ ಸಂಪರ್ಕ ರಸ್ತೆಯ ಮಲ್ಪಿಪ್ಪಾಡಿ ಎಂಬಲ್ಲಿ ನಡೆದಿದೆ.

ಈ ಸೇತುವೆಯ ಕೊನೆಯ ಕ್ಷಣದ ಸ್ಲ್ಯಾಬ್ ನಿರ್ಮಾಣಕ್ಕಾಗಿ ಕಾಂಕ್ರಿಟ್ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಅವಘಡ ನಡೆದಿದೆ. ಕಾಂಕ್ರಿಟ್ ಕಾಮಗಾರಿ ಸೇತುವೆ ತಳಭಾಗದಿಂದ ತಾತ್ಕಾಲಿಕವಾಗಿ ಅಳವಡಿಸಿದ್ದ ಕಬ್ಬಿಣದ ರಾಡ್ ಆಕಸ್ಮಿಕವಾಗಿ ಜಾರಿದ್ದರಿಂದ ಕಬ್ಬಿಣದ ರಾಡ್, ಕಾಂಕ್ರಿಟ್ ಮಿಕ್ಸ್ ಎಲ್ಲವೂ ಕುಸಿದು ಬಿದ್ದಿದೆ.

ಸೇತುವೆ ಸಾಮಾಗ್ರಿಯ ನಡುವಿನಲ್ಲಿ ಓರ್ವ ವ್ಯಕ್ತಿ ಸಿಕ್ಕಿ ಹಾಕಿಕೊಂಡಿದ್ದು, ಆರು ಮಂದಿ ಗಾಯಗೊಂಡವರನ್ನು ಕೂಡಲೇ ಪುತ್ತೂರು ಆಸ್ಪತ್ರೆಗೆ ವರ್ಗಾಯಿಸಲಾಗಿದೆ. ಸ್ಥಳದಲ್ಲಿ ಸಿಕ್ಕಿ ಹಾಕಿಕೊಂಡಿದ್ದ ಒರ್ವ ವ್ಯಕ್ತಿಯನ್ನು ಕಾರ್ಯಾಚರಣೆಯ ಮೂಲಕ ರಕ್ಷಣೆ ಮಾಡಲಾಗಿದೆ.

Continue Reading

DAKSHINA KANNADA

ಮಂಗಳೂರಿನ ಮೊದಲ ಬಸ್ ಇದೇ ನೋಡಿ…!

Published

on

ಹಿಂದಿನ ಕಾಲದಲ್ಲಿ ಮಂಗಳೂರಿನಲ್ಲಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಸಂಚಾರ ಮಾಡಬೇಕಿದ್ದರೆ ಒಂದಾ ಎತ್ತಿನಗಾಡಿ ಇಲ್ಲದಿದ್ದರೆ ಕುದುರೆಗಾಡಿಯಲ್ಲಿ ಹೋಗಬೇಕಿತ್ತು. ಇದೂ ಎರಡೂ ಇಲ್ಲದಿದ್ದರೆ ನಡೆದುಕೊಂಡೇ ಹೋಗಬೇಕಿತ್ತು. ಆ ಸಮಯದಲ್ಲಿ ಮಂಗಳೂರಿಗೆ ಮೊದಲ ಬಸ್ಸಿನ ಪರಿಚಯ ಆಗ್ತದೆ. ಅದು ಯಾವಾ ಬಸ್. ಎಲ್ಲೆಲ್ಲ ತಿರ್ಗಾಡುತ್ತಾ ಇತ್ತು. ನೋಡೋಣ ಬನ್ನಿ.

1914ರಲ್ಲಿ ಕೆನರಾ ಪಬ್ಲಿಕ್ ಕನ್ವೆಯನ್ಸ್ ಕಂಪೆನಿ (ಸಿಪಿಸಿ) ಇವರು ಮೊದಲ ಖಾಸಗಿ ಬಸ್ ಸಂಚಾರವನ್ನು ಪ್ರಾರಂಭ ಮಾಡ್ತಾರೆ. 1914 ಮಾರ್ಚ್‌ 23 ತಾರೀಕಿನಂದು ಮಂಗಳೂರಿನಿಂದ ಬಂಟ್ವಾಳಕ್ಕೆ ಮೊದಲ ಸಿಪಿಸಿ ಬಸ್ ಹೊರಡ್ತದೆ. ಪ್ರತಿದಿನ ಕೂಡ 2 ಟ್ರಿಪ್ ಇರ್ತಾ ಇತ್ತು. ಒಂದು ಸಲಕ್ಕೆ 22 ಜನರನ್ನು ಮಾತ್ರ ಕರೆದುಕೊಂಡು ಹೋಗುವ ಸಾಮಾರ್ಥ್ಯ ಈ ಬಸ್ಸಿಗೆ ಇತ್ತಂತೆ.

ವಿಶೇಷವೆಂದರೆ ಈ ಬಸ್ ಅನ್ನು ಜರ್ಮನ್‌ನಿಂದ ಮಂಗಳೂರಿಗೆ ಶಿಪ್‌ನಲ್ಲಿ ತಂದದ್ದು. ಆ ಕಾಲದಲ್ಲಿ ಅದಕ್ಕೆ 2500 ರೂಪಾಯಿ ಮಾತ್ರ ಖರ್ಚಾಗಿತ್ತು. ತದನಂತರ 1916ರಲ್ಲಿ ಹಿಂದೂ ಟ್ರಾಸಿಸ್ಟ್ ಎನ್ನುವ ಹೊಸ ಸಾರಿಗೆ ಸಂಸ್ಥೆ ಆರಂಭವಾಯಿತು. 1917ರಲ್ಲಿ ಮಂಗಳೂರಿನಿಂದ ಪುತ್ತೂರಿಗೆ ಬಸ್ ಸಂಚಾರ ಪ್ರಾರಂಭವಾಯಿತು. ಇದಾದ ಮೇಲೆ ಒಂದೊಂದೆ ಬಸ್ಸಿನ ಸಂಖ್ಯೆ ಎಚ್ಚಾಗುತ್ತಾ ಬಂತು.

ದುರ್ಗಾಪರಮೇಶ್ವರಿ ಮೋಟಾರ್ ಸರ್ವೀಸ್, ಶಂಕರ್ ವಿಠಲ್, ಮಂಜುನಾಥ್ ಟ್ರಾನ್ಸ್‌ಪೋರ್ಟ್‌, ಶೆಟ್ಟಿ ಮೋಟಾರ್ಸ್, ಹನುಮಾನ್ ಟ್ರಾನ್ಸ್‌ಪೋರ್ಟ್‌, ಬಲ್ಲಾಳ್ ಮೋಟಾರ್ಸ್ ಹೀಗೆ ಹಲವು ಬಗೆಯ ಖಾಸಗಿ ಸಂಸ್ಥೆಗಳು ಶುರುವಾಯಿತು. ಆ ಸಮಯದಲ್ಲಿ ಮಂಗಳೂರಿನಿಂದ ಉಡುಪಿಗೆ ಬಸ್ಸ್‌ನಲ್ಲಿ ಹೋಗಬೇಕಿದ್ದರೆ ಸಾಧಾರಣ 5 ಗಂಟೆ ಬೇಕಿತ್ತು.

ಇವತ್ತಿನ ನಮ್ಮ ಮಂಗಳೂರಿನಲ್ಲಿ ಬಸ್ ವ್ಯವಸ್ಥೆ ಎನ್ನುವಂತದ್ದು ಭಾರೀ ದೊಡ್ಡ ಮಟ್ಟದಲ್ಲಿ ಬೆಳೆದಿದೆ. ಆದ್ರೆ ಅದರ ಹಿಂದೆ ಇಷ್ಟೆಲ್ಲಾ ಇಂಟ್ರೆಸ್ಟಿಂಗ್ ಸಂಗತಿಗಳು ಇವೆ.

Continue Reading

DAKSHINA KANNADA

ನೀರು ಕುಡಿಯುವ ನೆಪದಲ್ಲಿ ದರೋಡೆಗೆ ಯತ್ನ..!!

Published

on

ಪಡುಬಿದ್ರೆ: ಕುಡಿಯಲು ನೀರು ಕೇಳುವ ನೆಪದಲ್ಲಿ ಬಂದ ಕೂಲಿ ಕಾರ್ಮಿಕರೊಬ್ಬ ಮನೆಗೆ ಬಂದು ಮನೆಯೊಡತಿಯ ಮಾಂಗಲ್ಯ ದೋಚಲು ಮುಂದಾಗಿರುವ ಘಟನೆ ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಸದ್ಯ ಆರೋಪಿಯನ್ನು ಪೊಲೀಸರು ಬಂದಿಸಿದ್ದಾರೆ.

ಎಲ್ಲರೂ ಗ್ರಾಮದ ದಳಂತ್ರ ಕೆರೆ ಸಮೀಪದ ಕೃಷ್ಣರಾಜ ಹೆಗಡೆ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಕೃಷ್ಣ ರಾಜ್‌ ಅವರ ಪತ್ನಿ ಸುನೀತಿ ಹೆಗಡೆ ಅವರ ಮಾಂಗಲ್ಯ ಎಳೆಯಲು ಪ್ರಯತ್ನಿಸಿದ್ದಾನೆ. ಪಾಲಡ್ಕ ನಿವಾಸಿ ಶರತ್ ಎಂಬಾತ ಈ ಹಿಂದೆ ಈ ಮನೆಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ. ಅದೇ ಪರಿಚಯದಲ್ಲಿ ಮನೆಗೆ ಬಂದು ಮನೆಯ ಯಜಮಾನಿಯಲ್ಲಿ ನೀರು ಕೇಳಿದ್ದಾನೆ.

ನೀರು ತರಲು ಒಳ ಹೋದಾಗ ಸುನೀತಿ ಹೆಗಡೆಯವರನ್ನು ಹಿಂಬಾಲಿಸಿಕೊಂಡು ಹೋಗಿದ್ದಾನೆ. ಬಳಿಕ ಅಡುಗೆ ಮನೆಯಿಂದ ಸ್ನಾನದ ಮನೆಯವರೆಗೂ ಅವರನ್ನು ಎಳೆದೊಯ್ದು ಬಾತ್ ಟವಲ್‌ನಿಂದ ಉಸಿರುಗಟ್ಟಿಸಿದ್ದಾನೆ . ಇದೇ ವೇಳೆ ಅವರ ಕತ್ತಿನಲ್ಲಿದ್ದ ಬಂಗಾರದ ಕರಿಮಣಿ ಕಸಿಯಲು ಮುಂದಾಗಿದ್ದ. ಈ ವೇಳೆ ಪತ್ನಿಯ ಬೊಬ್ಬೆ ಕೇಳಿ ಹೊರಗಡೆ ಇದ್ದ ಕೃಷ್ಣರಾಜ ಹೆಗಡೆಯವರು ಓಡಿ ಬಂದಿದ್ದಾರೆ. ಈ ಸಮಯದಲ್ಲಿ ಆರೋಪಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ನಡೆದು 12 ಗಂಟೆಯಲ್ಲಿ ಪೊಲೀಸರು ಮುದರಂಗಡಿಯಲ್ಲಿ ಆರೋಪಿಯನ್ನು ಬಂಧಿಸಿದ್ದಾರೆ.

Continue Reading

LATEST NEWS

Trending