Connect with us

ಮಂಗಳೂರು ಏರ್ಪೋಟ್‌ಗೆ ಬಾಂಬ್ ಪ್ರಕರಣ: ಆರೋಪಿ ಆದಿತ್ಯನೊಂದಿಗೆ ಸ್ಥಳ ಮಹಜರು ನಡೆಸಿದ ತನಿಖಾ ತಂಡ

Published

on

ಮಂಗಳೂರು ಏರ್ಪೋಟ್‌ಗೆ ಬಾಂಬ್ ಪ್ರಕರಣ ಆರೋಪಿ ಆದಿತ್ಯನೊಂದಿಗೆ ಸ್ಥಳ ಮಹಜರು ನಡೆಸಿದ ತನಿಖಾ ತಂಡ

ಮಂಗಳೂರು : ಮಂಗಳೂರು ಏರ್ಪೋರ್ಟ್ ಗೆ ಬಾಂಬ್ ಇಟ್ಟ ಪ್ರಕರಣ ಆರೋಪಿ ಆದಿತ್ಯ ರಾವ್‌ ನನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರ ವಿಶೇಷ ತಂಡ ಬಾಂಬ್ ಇರಿಸಿದ್ದ ಸ್ಥಳಕ್ಕೆ ಕರೆ ತಂದು ಮಹಜರು ನಡೆಸಿದ್ದಾರೆ.

 

ನ್ಯಾಯಾಲಯದ ಅನುಮತಿ ಪಡೆದು 10 ದಿನಗಳ ಪೋಲಿಸ್‌ ಕಸ್ಟಡಿಗೆ ಪಡೆದುಕೊಂಡ ವಿಶೇಷ ತನಿಖಾ ತಂಡದ ಅಧಿಕಾರಿಗಳು ಬಿಗಿ ಪೊಲೀಸ್ ಭದ್ರತೆಯಲ್ಲಿ ಮಂಗಳೂರು ವಿಮಾನ ನಿಲ್ದಾಣದ ಅವರಣಕ್ಕೆ ಕರೆತಂದು ಆರೋಪಿಯಿಂದ ಸಮಗ್ರ ಮಾಹಿತಿ ಕಲೆ ಹಾಕಿ ಆರೋಪಿಯ ಹೇಳಿಕೆಗಳನ್ನು ದಾಖಲಿಸಿದ್ದಾರೆ.

ಆರೋಪಿ ಆದಿತ್ಯ ಅಟೋದಿಂದ ಇಳಿದ ಸ್ಥಳದಿಂದ ಬಾಂಬ್ ಇಟ್ಟ ಸ್ಥಳದ ವರೆಗೂ ಪ್ರತಿಯೊಂದು ವಿದ್ಯಮಾನಗಳಣ್ನು ಎಳೆಎಳೆಯಾಗಿ ಪೊಲಿಸ್ ಅಧಿಕಾರಿಗಳಿ ವಿವರಿಸಿದ್ದಾನೆ.

ಏರ್ಪೋರ್ಟ್ ನ ಹೊರಭಾಗದಲ್ಲಿನ 2 ನೇ ಸಾಲಿನ ಕುರ್ಚಿಯಲ್ಲಿ ಬಾಂಬ್ ಬ್ಯಾಗ್ ಇಟ್ಟಿರೋದನ್ನು ಅಧಿಕಾರಿಗಳಿಗೆ ತೋರಿಸಿದ್ದಾನೆ.

ಎಸ್ಕಲೇಟರ್ ಮೂಲಕ ಕೆಳಕ್ಕೆ ಇಳಿದದ್ದು ಮತ್ತು ಒಡೋಡಿ ಅಟೋ ಹತ್ತಿ ಓಡಿಹೋಗಿದ್ದನ್ನು ಎಳೆಎಳೆಯಾಗಿ ವಿವರಿಸಿದ್ದಾನೆ.

Click to comment

Leave a Reply

Your email address will not be published. Required fields are marked *

LATEST NEWS

KARKALA: ಕಲ್ಲು ಸಾಗಾಟದ ಲಾರಿ ಪಲ್ಟಿ; ಇಬ್ಬರು ಕಾರ್ಮಿಕರು ಸಾ*ವು

Published

on

ಕಾರ್ಕಳ :  ಕಲ್ಲು ಲೋಡು ಮಾಡಿಕೊಂಡು ಸಾಗುತ್ತಿದ್ದ ಲಾರಿ ಪಲ್ಟಿಯಾಗಿ ಇಬ್ಬರು ಕಾರ್ಮಿಕರು ಮೃ*ತಪಟ್ಟ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಸಮೀಪದ ಕಲ್ಲು ಕೊರೆಯ ಬಳಿ ನಡೆದಿದೆ. ಕೊಪ್ಪಳ ಜಿಲ್ಲೆಯ ಯಲಬುರ್ಗಿ ದೇವಲಾಪುರ ನಿವಾಸಿ ಕರಿಯಪ್ಪ(26) ಮತ್ತು ನರಿಯಪ್ಪ(27) ಮೃ*ತಪಟ್ಟವರು.

ಇದನ್ನೂ ಓದಿ : ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 24ರ ವರೆಗೂ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

ಕಾರ್ಕಳ ನಿಟ್ಟೆ ಭ್ರಾಮರಿ ಕ್ರಾಸ್ ಸಮೀಪ ಲಾರಿಯಲ್ಲಿ ಕಲ್ಲು ಲೋಡ್ ಮಾಡಿಕೊಂಡು ಹೋಗುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಕಲ್ಲು ತುಂಬಿಕೊಂಡು ಹೋಗುತ್ತಿದ್ದ ಲಾರಿ ಕೋರೆಯ ಪಕ್ಕದ ಇಳಿಜಾರು ರಸ್ತೆಯಲ್ಲಿ ಚಲಿಸುತ್ತಿದ್ದ ಸಂದರ್ಭ ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿಯಾಗಿದೆ. ಪರಿಣಾಮ ಕಾರ್ಮಿಕರು ಲಾರಿಯ ಚಕ್ರದ ಅಡಿಯಲ್ಲಿ ಸಿಲುಕಿ ಮೃ*ತಪಟ್ಟಿದ್ದಾರೆ.

ಘಟನಾ ಸ್ಥಳಕ್ಕೆ ಕಾರ್ಕಳ ಡಿವೈಎಸ್ಪಿ ಅರವಿಂದ ಕಲಗುಜ್ಜಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

FILM

ದಾಂಪತ್ಯಕ್ಕೆ ಕಾಲಿಡಲಿದ್ದಾರಾ ‘ಪ್ರಭಾಸ್‌’..! ಈ ಪೋಸ್ಟ್‌ ಹಿಂದಿನ ಅಸಲಿಯತ್ತೇನು!?

Published

on

ಟಾಲಿವುಡ್‌ ನ ಮೋಸ್ಟ್ ಬ್ಯಾಚುಲರ್‌ ಎಂದೇ ಹೆಸರಾಗಿರುವ ಪ್ರಭಾಸ್ ಸದಾ ತಮ್ಮ ಮದುವೆಯ ವಿಚಾರವಾಗಿಯೇ ಸುದ್ದಿಯಲ್ಲಿರುತ್ತಾರೆ. ಸೂಪರ್ ಸ್ಟಾರ್ ಪ್ರಭಾಸ್‌ರವರ ಹೆಸರಿನ ಜೊತೆ ಹಲವು ಸ್ಟಾರ್ ನಟಿಯರ ಹೆಸರುಗಳು ತುಣುಕು ಹಾಕುತ್ತಿತ್ತು. ಅದರಲ್ಲೂ ಪುತ್ತೂರಿನ ಬೆಡಗಿ ಅನುಷ್ಕಾ ಶೆಟ್ಟಿ ಯವರ ಹೆಸರು ಆಗಾಗ ಕೇಳಿಬರುತ್ತಿತ್ತು. ಇನ್ನು ಬಾಹುಬಲಿ ಸಿನೆಮಾದ ಬಳಿಕ ಇವರಿಬ್ಬರು ಪ್ರೀತಿಯಲ್ಲಿದ್ದಾರೆ, ಇನ್ನೇನು ದಾಂಪತ್ಯ ಜೀವನಕ್ಕೂ ಕಾಲಿಡಲಿದ್ದಾರೆ ಎಂದು ಹೇಳಲಾಗಿತ್ತು. ಈ ಮಧ್ಯೆ ಪ್ರಭಾಸ್ ಹಾಗೂ ಅನುಷ್ಕಾ ಅದೆಲ್ಲವನ್ನು ಅಲ್ಲಗಳೆದಿದ್ದಾರೆ.

ಇದೀಗ ಪ್ರಭಾಸ್ ಅವರ ಒಂದು ಪೋಸ್ಟ್‌ ಅಭಿಮಾನಿಗಳಲ್ಲಿ ಖುಷಿ ನೀಡಿದೆ. ತಮ್ಮ ಇನ್ಸ್ಟಾಗ್ರಾಮ್‌ ನಲ್ಲಿ ‘ಡಾರ್ಲಿಂಗ್ಸ್‌!!.. ಕೊನೆಗೂ ನನ್ನ ಜೀವನದಲ್ಲಿ ಒಬ್ಬ ವಿಶೇಷ ವ್ಯಕ್ತಿ ಬರಲಿದ್ದಾರೆ.. ಸ್ವಲ್ಪ ಕಾಯಿರಿ” ಎಂದು ಬರೆದುಕೊಂಡು ಪೋಸ್ಟ್‌ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಖುಷಿ ಜೊತೆ ಅನುಮಾನವನ್ನೂ ವ್ಯಕ್ತಪಡಿಸಿದ್ದಾರೆ. ಇನ್ನೂ ಈ ಪೋಸ್ಟ್‌ ನೋಡಿದ ಬಳಿಕ ಪ್ರಭಾಸ್ ಮದುವೆಗೆ ಸಜ್ಜಾಗಿದ್ದಾರಾ..!? ಎಂಬುದಾಗಿಯೂ ಕುತೂಹಲ ಮೂಡಿದೆ. ಇನ್ನೂ ಕೆಲವರು ಸಿನೆಮಾ ಪ್ರಚಾರಕ್ಕಾಗಿ ಈ ತಂತ್ರವನ್ನು ಬಳಸಿದ್ದಾರಾ ಎನ್ನುವುದು ಅನುಮಾನ ಮೂಡಿದೆ.

ದರ್ಶನ್ ‘ಡೆವಿಲ್’ಗೆ ಹೀರೋಯಿನ್ ಫಿಕ್ಸ್; ಡಿಬಾಸ್ ಗೆ ಜೊತೆಯಾದ್ರು ಕರಾವಳಿ ಬೆಡಗಿ!

ಸಿನೆಮಾ ಪ್ರಚಾರಕ್ಕಾಗಿ ಪೋಸ್ಟ್‌ ಹಾಕಿದ್ರಾ ಪ್ರಬಾಸ್..?

kalki

ಸಲಾರ್ ಸಿನೆಮಾ ಹಿಟ್ ಬಳಿಕ ಪ್ರಭಾಸ್ ಅಭಿನಯದ ‘ಕಲ್ಕಿ 2898 ಎಡಿ ‘ ಸಿನೆಮಾ ತೆರೆಗೆ ಬರಲು ಸಿದ್ಧವಾಗಿದೆ. ಇನ್ನೂ ಈ ಸಿನೆಮಾದಲ್ಲಿ ಘಟಾನುಘಟಿಗಳು ಬಣ್ಣ ಹಚ್ಚಿದ್ದಾರೆ. ಅಮಿತಾಬಚನ್, ದೀಪಿಕಾ ಪಡುಕೋಣೆ, ಕಮಲ್ ಹಾಸನ್, ದಿಶಾ ಪಟಾನಿ ಮುಂತಾದವರು ನಟಿಸಿದ್ದಾರೆ. ಇದೇ ಸಿನೆಮಾದ ಪ್ರಚಾರಕ್ಕಾಗಿ ಮಾಡಿರುವ ತಂತ್ರ ಎಂದು ಹೇಳಲಾಗಿದೆ. ಇನ್ನು ಈ ಸಿನೆಮಾ ಪ್ರಚಾರಕ್ಕಾಗಿಯೇ ಹೊಸ ವಿನ್ಯಾಸದ ಕಾರೊಂದನ್ನು ತಯಾರು ಮಾಡಲಾಗಿದೆಯಂತೆ. ಹೀಗಾಗಿ ಪ್ರಭಾಸ್ ‘ ನನ್ನ ಜೀವನದಲ್ಲಿ ಹೊಸ ವ್ಯಕ್ತಿ ಆಗಮನ’ ಎಂದು ಬರೆದುಕೊಂಡಿರಬಹುದು ಎಂದು ಊಹಿಸಲಾಗಿದೆ.

ಅದೇನೆ ಇರಲಿ ಪ್ರಭಾಸ್ ಮದುವೆ ಆಗಲು ನಿರ್ಧಿರಿಸಿದ್ದಾರಾ..? ಅಥವಾ ಸಿನೆಮಾ ಪ್ರಚಾರಕ್ಕಾಗಿ ಹೀಗೆ ಬರೆದುಕೊಂಡಿದ್ದಾರಾ..? ಅನ್ನೋದರ  ಅಸಲಿಯತ್ತು  ಇನ್ನೆರೆಡು ದಿನಗಳಲ್ಲಿ ಕಾದು ನೋಡಬೇಕಿದೆ.

 

 

Continue Reading

LATEST NEWS

ರಾಜ್ಯದ ಈ ಜಿಲ್ಲೆಗಳಲ್ಲಿ ಮೇ 24ರ ವರೆಗೂ ಭಾರೀ ಮಳೆ : ಹವಾಮಾನ ಇಲಾಖೆ ಮುನ್ಸೂಚನೆ

Published

on

ಬೆಂಗಳೂರು : ಬಿಸಿಲ ಬೇಗೆಗೆ ಬೆಂದಿರುವ ಜನರ ಮೊಗದಲ್ಲಿ ನಗುವನ್ನು ಮಳೆರಾಯ ತಂದಿದ್ದಾನೆ. ಈಗಾಗಲೇ ರಾಜ್ಯದ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ಮಳೆರಾಯನ ಆಗಮನವಾಗಿದೆ. ಮೇ 24ರವರೆಗೂ ಭಾರೀ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.


ಎಲ್ಲಿಲ್ಲಿ ಮಳೆ?

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಚಾಮರಾಜನಗರ, ಕೊಡಗು, ಚಿಕ್ಕಮಗಳೂರು, ಹಾಸನ, ದಕ್ಷಿಣ ಕನ್ನಡ, ಉತ್ತರ ಕನ್ನದ, ಕೊಪ್ಪಳ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಭಾರೀ ಮಳೆ ಸುರಿಯುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಬಾಗಲಕೋಟೆ, ಬೆಳಗಾವಿ, ಬೀದರ್‌, ಧಾರವಾಡ, ಗದಗ, ಹಾವೇರಿ, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹಾವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ : ಇದು ಪುರುಷರು ಮಾತ್ರ ಭಾಗವಹಿಸುವ ಜಾತ್ರೆ..! ಮಾಂಸದೂಟ ಇಲ್ಲಿನ ವಿಶೇಷ..!

ಇನ್ನು ಬೆಳಗಾವಿ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಮಂಡ್ಯ, ರಾಮನಗರ, ತುಮಕೂರು, ವಿಜಯನಗರ ಜಿಲ್ಲೆಗಳ ಹಲವೆಡೆ ಸ್ವಲ್ಪ ಮಟ್ಟಿಗೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Continue Reading

LATEST NEWS

Trending