Connect with us

ಉಡುಪಿಯಲ್ಲಿ ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..! ಕಾರಣ ನಿಗೂಢ..!

Published

on

ಉಡುಪಿಯಲ್ಲಿ ನೇಣು ಬಿಗಿದು ವಿದ್ಯಾರ್ಥಿನಿ ಆತ್ಮಹತ್ಯೆ..! ಕಾರಣ ನಿಗೂಢ..!

ಉಡುಪಿ, ಜನವರಿ 18: ಉಡುಪಿಯ ಕಾಲೇಜು ವಿದ್ಯಾರ್ಥಿನಿಯೊರ್ವಳು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೆ ಕಾರಣ ತಿಳಿದು ಬಂದಿಲ್ಲ, ಮೃತ ಯುವತಿ ನಗರದ ಕಾಲೇಜೊಂದರಲ್ಲಿ ಅಂತಿಮ ಪದವಿ ಕಲಿಯುತ್ತಿರುವ ವಿಕ್ಷೀತಾ ಕೆ.ವಿ ಎನ್ನಲಾಗಿದೆ.

ವಿದ್ಯಾರ್ಥಿನಿ ತಾನು ವಾಸವಿದ್ದ ಬೀಡಿನಗುಡ್ಡೆಯ ಪಿ.ಜಿ ಸೆಂಟರಿನ ಕೊಠಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಮೃತ ಯುವತಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ನಿವಾಸಿಯೆಂದು ತಿಳಿದುಬಂದಿದೆ. ಕಾನೂನು ಪ್ರಕ್ರಿಯೆ ನಡೆಸಲು ಶವವನ್ನು ಅಜ್ಜರಕಾಡು ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ರಕ್ಷಿಸಿಡಲಾಗಿದೆ. ಉಡುಪಿಯ ನಗರ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ.

ಈಕೆಯ ಶವವನ್ನು ಶವಾಗಾರಕ್ಕೆ ಸಾಗಿಸಲು ಸಮಾಜಸೇವಕ ನಿತ್ಯಾನಂದ ಒಳಕಾಡು ಇವರು ಇಲಾಖೆಗೆ ಉಚಿತ ಅಂಬುಲೇನ್ಸ್ ಸೇವೆ ಒದಗಿಸಿ ಸಹಕರಿಸಿದ್ದಾರೆ.

ವಿಡಿಯೋಗಾಗಿ..

https://www.youtube.com/watch?v=BtJDofqSazg

Click to comment

Leave a Reply

Your email address will not be published. Required fields are marked *

DAKSHINA KANNADA

ಪುತ್ತೂರಿನಲ್ಲಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಯುವಕ!

Published

on

ಪುತ್ತೂರು : ಪುತ್ತೂರಿನ ಬೆಟ್ಟಂಪ್ಪಾಡಿಯಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಸಾ*ವನ್ನಪ್ಪಿದ್ದು, ಈ ಬಗ್ಗೆ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿ ಮೃ*ತ ಯುವಕನ ತಾಯಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

 ಪಕ್ಕದ ಮನೆ ಕದ ತಟ್ಟಿದ ಮಗ; ಸಂಕೋಲೆ ಹಾಕಿ ಎಳೆತಂದ ತಾಯಿ :  

ಬೆಟ್ಟಂಪ್ಪಾಡಿಯ ನಿವಾಸಿ ಚೇತನ್ (33) ಮೃ*ತ ಪಟ್ಟಿರುವ ಯುವಕ. ನಿನ್ನೆ ರಾತ್ರಿ ಕುಡಿದು ಮನೆಗೆ ಬಂದಿದ್ದ ಚೇತನ್ ತಾಯಿ ಜತೆ ಜಗಳವಾಡಿದ್ದ.  ಬಳಿಕ ಪಕ್ಕದ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದ. ಈ ಬಗ್ಗೆ ಯೂಸುಫ್ ಅವರು ಚೇತನ್ ತಾಯಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಕೂಡಲೇ ಯೂಸುಫ್ ಮನೆಗೆ ಬಂದ ಚೇತನ್ ತಾಯಿ ನಾಯಿಯನ್ನು ಕಟ್ಟುವ ಸಂಕೊಲೆಯನ್ನು ಚೇತನ್ ಸೊಂಟಕ್ಕೆ ಕಟ್ಟಿ ಮನೆಗೆ ಎಳೆದೊಯ್ದಿದ್ದರು. ಇದಕ್ಕೆ ಯೂಸುಫ್ ಸೇರಿದಂತೆ ಸ್ಥಳೀಯ ನಿವಾಸಿಗಳು ಸಾಥ್‌ ನೀಡಿದ್ದರು. ಎಳೆದೊಯ್ಯುವ ಸಂದರ್ಭದಲ್ಲಿ ಚೇತನ್‌ನ ಕುತ್ತಿಗೆಗೆ ಸಂಕೋಲೆ ಸುತ್ತಿಕೊಂಡಿದೆ ಎನ್ನಲಾಗಿದೆ.  ಇದರಿಂದಾಗಿ ಚೇತನ್‌ ಸಾ*ವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಆದರೆ ಚೇತನ್ ನೇಣು ಬಿಗಿದು ಸಾ*ವನ್ನಪ್ಪಿದ್ದಾನೆ ಎಂದು ತಾಯಿ ಪೊಲೀಸರಿಗೆ ದೂರು ನೀಡಿದ್ದರು.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್

ಮೃ*ತ ದೇಹ ನೋಡಿ ಅನುಮಾನಗೊಂಡ ಪೊಲೀಸರು ಸ್ವಯಂಪ್ರೇರಿತ ಪ್ರಕರಣ ದಾಖಲಿಸಿ ಕೊಂಡಿದ್ದರು. ಘಟನೆಗೆ ಸಂಬಂಧಿಸಿ ತಾಯಿ ಉಮಾವತಿ ಸೇರಿದಂತೆ ಮೂವರನ್ನು ವಶಕ್ಕೆ ಪಡೆದಿರುವ ಪೋಲೀಸರು ಮೃ*ತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಮಂಗಳೂರಿಗೆ ರವಾನಿಸಿದ್ದಾರೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭಿಸಬೇಕಾಗಿದೆ.

Continue Reading

DAKSHINA KANNADA

ಹೊಸ ಮನೆಗೆ ಸ್ಥಳಾಂತರಿಸುವಾಗ ಈ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಿ

Published

on

ಮಂಗಳೂರು: ಪ್ರತಿಯೊಬ್ಬರಿಗೂ ತಮ್ಮದೇ ಆದ ಸ್ವಂತ ಮನೆಯನ್ನು ಹೊಂದಿರಬೇಕು ಎನ್ನುವ ಕನಸು, ಆಸೆ ಇದ್ದೇ ಇರುತ್ತದೆ. ಮನೆ ಕಟ್ಟುವುದು ಆಗಲಿ ಅಥವಾ ಕೊಂಡುಕೊಳ್ಳುವುದಾಗಲಿ ಅದೇನು ಸುಲಭದ ಮಾತಲ್ಲ. ಬ್ಯಾಂಕ್‌ನಲ್ಲಿ, ಸ್ನೇಹಿತರಲ್ಲಿ, ಕುಟುಂಬದವರಲ್ಲಿ ಸಾಲ ಮಾಡಿ ಹೇಗೊ ಮನೆ ಖರೀದಿಸುತ್ತೇವೆ. ಆದರೆ ಕನಸಿನ ಮನೆ ವಾಸ್ತವಕ್ಕೆ ಬಂದಾಗ ಅದರಲ್ಲಿ ಆಗುವ ಖುಷಿಯೇ ಬೇರೆ.

ಮನೆ ಬದಲು ಮಾಡುವಾಗ ಈ ವಿಷಯ ನೆನಪಿಡಿ

ತಮ್ಮ ಹೊಸ ಮನೆಗೆ ಹೋಗುವ ಖುಷಿಯಲ್ಲಿ ಜನರು ಸಾಮಾನ್ಯವಾಗಿ ಕೆಲವು ವಿಷಯಗಳನ್ನು ಮರೆತು ಬಿಡುತ್ತಾರೆ. ಇದರಿಂದಾಗಿ ಅವರಿಗೆ ನಂತರದ ದಿನಗಳಲ್ಲಿ ಸಮಸ್ಯೆ ಆಗಬಹುದು. ನೀವು ಮನೆ ಬದಲು ಮಾಡುವಾಗ ಕೆಲವು ಪ್ರಮುಖ ವಿಷಯಗಳನ್ನು ತಿಳಿದುಕೊಳ್ಳಿ.

ಮನೆಯ ಪ್ರತಿಯೊಂದು ಮೂಲೆಯನ್ನು ಪರಿಶೀಲಿಸಿ

ನೀವು ಹೊಸ ಮನೆಗೆ ಸ್ಥಳಾಂತರಗೊಳ್ಳುತ್ತಿದ್ದರೆ ಮೊದಲು ನೀವು ದಿನ ಬಳಕೆಯ ವಿಷಯಗಳತ್ತ ಗಮನ ಕೊಡಬೇಕು. ಆದುದರಿಂದ ನಿಮ್ಮ ಮನೆಯ ಪ್ರತಿಯೊಂದು ನಳ್ಳಿಯಲ್ಲಿ ನೀರು ಬರುತ್ತಿದ್ದೇಯೋ, ವಾಶ್ ರೂಂ ಅನ್ನು ಚೆನ್ನಾಗಿ ಪರಿಶೀಲಿಸಿ, ಮನೆಯ ಫ್ಯಾನ್, ಲೈಟ್ ಸರಿಯಾಗಿ ಇದೆಯೋ ಎಂದು ಗಮನಿಸಿ. ಇದರಿಂದ ಹೊಸ ಮನೆಗೆ ಬಂದ ತಕ್ಷಣ ಯಾವೂದೇ ಸಮಸ್ಯೆ ಎದುರಾಗುವುದಿಲ್ಲ.

ಶುಚಿಗೊಳಿಸುವಿಕೆಯನ್ನು ಮುಂಚಿತವಾಗಿ ಮಾಡಿ

ಹೊಸ ಮನೆಗೆ ಸ್ಥಳಾಂತರಗೊಳ್ಳುವ ಮೊದಲು ಒಮ್ಮೆ ಸ್ವಚ್ಛಗೊಳಿಸಬೇಕು. ಏಕೆಂದರೆ ವಸ್ತುಗಳನ್ನು ಸ್ಥಳಾಂತರಿಸಿದ ನಂತರ ನಿಮಗೆ ಸ್ವಚ್ಛಗೊಳಿಸಲು ಕಷ್ಟವಾಗಬಹುದು. ಮನೆಯನ್ನು ಬದಲಾಯಿಸಿದ ನಂತರವೂ ಕೊಳಕು ಕಾಣುತ್ತದೆ. ಹೀಗಾಗಿ ಹೊಸ ಮನೆಗೆ ಬಂದ ನಂತರ ಮೊದಲ ದಿನದಿಂದಲೇ ಮನೆಯನ್ನು ಶುಚಿಯಾಗಿಡಿ.

ಪ್ಯಾಕಿಂಗ್ ವಿಧಾನ

ಹೊಸ ಮನೆಗೆ ಬದಲಾಯಿಸುವ ಮೊದಲು ಹಳೆಯ ವಸ್ತುಗಳನ್ನು ಪ್ಯಾಕಿಂಗ್ ಮಾಡುವುದು ದೊಡ್ಡ ಸಮಸ್ಯೆಯಾಗಿದೆ. ಆದ್ಧರಿಂದ ಸರಕುಗಳನ್ನು ಪ್ಯಾಕ್ ಮಾಡುವಾಗ ಪೆಟ್ಟಿಗೆಯಲ್ಲಿ ಹೆಸರನ್ನು ಬರೆಯಿರಿ. ಇದರಿಂದಾಗಿ ಬಾಕ್ಸ್ ತೆರೆಯುವಾಗ ಯಾವೂದೇ ಗೊಂದಲ ಉಂಟಾಗುವುದಿಲ್ಲ.

ಪೀಠೋಪಕರಣಗಳ ಬಗ್ಗೆಯೂ ಕಾಳಜಿ ವಹಿಸಿ​

ಸ್ಥಳಾಂತರಗೊಳ್ಳುವ ಮೊದಲು, ಮನೆಯ ಪೀಠೋಪಕರಣಗಳು ನಿಮ್ಮ ಅಗತ್ಯಗಳಿಗೆ ಸರಿಹೊಂದುತ್ತವೆಯೇ ಅಥವಾ ಇಲ್ಲವೇ ಎಂಬುದನ್ನು ಸಹ ನೀವು ಪರಿಶೀಲಿಸಬೇಕು. ನಿಮಗೆ ಸರಿಹೊಂದುವ ಸ್ಥಳದಲ್ಲಿ ಹಾಗೂ ಕೆಲವೊಂದು ವಸ್ತುಗಳನ್ನು ವಾಸ್ತು ಪ್ರಕಾರವೇ ಇಡಬೇಕಾಗುತ್ತದೆ. ಆದ್ದರಿಂದ ಅದರ ಬಗ್ಗೆ ಕಾಳಜಿ ವಹಿಸಿ.

Continue Reading

LATEST NEWS

ಪ್ರಜ್ವಲ್ ರೇವಣ್ಣ ಪ್ರಕರಣ; ವೀಡಿಯೋ, ಫೋಟೋ ಅಪ್ಲೋಡ್ ಮಾಡಿದ್ದಾತ ಅರೆಸ್ಟ್

Published

on

ಚಿಕ್ಕಮಗಳೂರು : ಸದ್ಯ ಪ್ರಜ್ವಲ್ ಹೆಸರು ದೇಶದಾದ್ಯಂತ ಚಾಲ್ತಿಯಂತಿದೆ. ಆತ ಮಾಡಿರುವ ಕುಕೃತ್ಯಕ್ಕೆ ಆಕ್ರೋಶ ಕೇಳಿ ಬರುತ್ತಿದೆ. ಇದೀಗ ಪ್ರಜ್ವಲ್ ರೇವಣ್ಣರದ್ದು ಎನ್ನಲಾದ ಅಶ್ಲೀಲ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟ ಆರೋಪಿಯನ್ನು ಬಂಧಿಸಲಾಗಿದೆ.

ಮೂಡುಗೆರೆ ತಾಲೂಕಿನ ಸಂಸೆ ಗ್ರಾಮದ ಪ್ರಜ್ವಲ್ ಬಂಧಿತ. ಆರೋಪಿ ಪ್ರಜ್ವಲ್, ಹಾಸನ ಸಂಸದ ಪ್ರಜ್ವಲ್​ ರೇವಣ್ಣ ಅವರ ಅಶ್ಲೀಲ ವಿಡಿಯೋಗಳು ಎಂದು ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಮ್​ನಲ್ಲಿ ಅಪ್ಲೋಡ್​ ಮಾಡಿದ್ದನು. ಪ್ರಜ್ವಲ್ ವಿರುದ್ಧ ಕುದುರೆಮುಖ ಠಾಣೆಯಲ್ಲಿ ಐಪಿಸಿ ಸೆಕ್ಷನ್​ 67,67 (ಎ) ಕಲಂ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಆರೋಪಿ ಪ್ರಜ್ವಲ್​ ಟ್ರೋಲ್ ಪೇಜ್ ಅಡ್ಮಿನ್ ಆಗಿದ್ದ. ಸದ್ಯ ಪ್ರಜ್ವಲ್ ರೇವಣ್ಣ ಲೈಂ*ಗಿಕ ದೌರ್ಜ*ನ್ಯ ಪ್ರಕರಣ ಭಾರೀ ಸದ್ದು ಮಾಡುತ್ತಿದೆ. ಪ್ರಜ್ವಲ್ ರೇವಣ್ಣ ಜರ್ಮನಿಗೆ ಎಸ್ಕೇಪ್ ಆಗಿದ್ದಾರೆ. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡಿರುವ ಎಸ್ ಐಟಿ ತನಿಖೆ ಚುರುಕುಗೊಳಿಸಿದೆ.

ಎಚ್ಚರಿಕೆ ನೀಡಿದ್ದ ಬಿ.ಕೆ.ಸಿಂಗ್ :

ಈ ಬಗ್ಗೆ ಎಸ್ಐಟಿಯ ಮುಖ್ಯಸ್ಥ ಬಿ.ಕೆ. ಸಿಂಗ್ ಪ್ರಕಟಣೆ ನೀಡಿದ್ದರು. ಅಶ್ಲೀಲ ವಿಡಿಯೋಗಳನ್ನು ಸಾರ್ವಜನಿಕರು ತಮ್ಮ ಮೊಬೈಲ್‌ನಲ್ಲಿ‌ ಇಟ್ಟುಕೊಳ್ಳುವುದು ಸಹ ಅಪರಾಧ. ಯಾವುದೇ ವ್ಯಕ್ತಿ ಸಂದೇಶಗಳನ್ನು ರೂಪಿಸುವ, ಇಟ್ಟುಕೊಳ್ಳುವ ಹಾಗೂ ಪ್ರಸಾರ ಮಾಡುವ ಕೆಲಸವನ್ನು ಮಾಡಿದರೇ, ಅಂಥ ವ್ಯಕ್ತಿಗಳ‌ನ್ನು ಸಂದೇಶ ರಚನೆಕಾರರು ಎಂದು ಪರಿಗಣಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು.

ಇದನ್ನೂ ಓದಿ : ಶಾಲಾ ಬಾಲಕಿಗೆ ಆಟೋ ಚಾಲಕನಿಂದ ಲೈಂಗಿಕ ಕಿರುಕುಳ.! ಹೇಯ ಕೃತ್ಯ ಮೊಬೈಲ್‌ ನಲ್ಲಿ ಸೆರೆ

ಅಶ್ಲೀಲ ವಿಡಿಯೋ ಹಾಗೂ ಧ್ವನಿ ಮುದ್ರಣವನ್ನು ಇಟ್ಟುಕೊಂಡಿದ್ದರೆ ಅದು ಅಪರಾಧವಾಗುವುದರಿಂದ ಜನರು ತಮ್ಮ ಮೊಬೈಲ್‌ ಅಥವಾ ಯಾವುದೇ ಎಲೆಕ್ಟ್ರಾನಿಕ್ ಉಪಕರಣಗಳಲ್ಲಿ ಇಟ್ಟುಕೊಳ್ಳಬಾರದು. ಒಂದು ವೇಳೆ ಇಟ್ಟುಕೊಂಡಿದ್ದರೆ ಕೂಡಲೇ ಡಿಲೀಟ್‌ ಮಾಡಿಬಿಡಿ. ಹೀಗೆ ಡಿಲೀಟ್ ಮಾಡುವುದರಿಂದ ಕಾನೂನು ಕ್ರಮಗಳಿಂದ ಪಾರಾಗುವ ಸಾಧ್ಯತೆ ಇರುತ್ತದೆ ಎಂದು ಬಿ.ಕೆ. ಸಿಂಗ್ ಪ್ರಕಟಣೆಯಲ್ಲಿ ಸೂಚನೆ ನೀಡಿದ್ದರು.

 

Continue Reading

LATEST NEWS

Trending