Connect with us

ಅಮೂಲ್ಯಗೆ ಕ್ಷಮೆ ನೀಡೋ ಪ್ರಶ್ನೆಯೇ ಇಲ್ಲ ಸಿಟಿ ರವಿ ಕಿಡಿ..!!

Published

on

ಅಮೂಲ್ಯಗೆ ಕ್ಷಮೆ ನೀಡೋ ಪ್ರಶ್ನೆಯೇ ಇಲ್ಲ ಕಿಡಿ..!!

ಉಡುಪಿ:  ಭಾರತದಲ್ಲಿದ್ದುಕೊಂಡು ಪಾಕ್ ಪರ ಘೋಷಣೆ ಮಾಡೋದಾದ್ರೆ, ನಮ್ಮ ದೇಶದ ಸೈನಿಕರು ಯಾಕೆ ಗಡಿಯಲ್ಲಿ ಗುಂಡಿಗೆ ಬಲಿಯಾಗಬೇಕು? ಹಿಮಾಲಯದ ಮೈನಸ್ 20 ಚಳಿಯಲ್ಲಿಯಲ್ಲಿ ಯಾಕೆ ದೇಶಕಾಯಬೇಕು ಅಂತ ಸಚಿವ ಸಿಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಉಡುಪಿಯ ಕಾರ್ಕಳದಲ್ಲಿ ಮಾತನಾಡಿದ ಅವರು, ಪಾಕಿಸ್ತಾನದ ಜಿಂದಾಬಾದ್ ಅಂದೋರು ಯಾರಿಗೆ ಹುಟ್ಟಿದ್ದಾರೆ?

ಇಲ್ಲಿಯ ಅನ್ನ ತಿಂದು ಶತ್ರು ದೇಶದ ಗುಣಗಾನ ಮಾಡ್ತೀರಾ? ಬೇರೆ ಎಲ್ಲದಕ್ಕೂ ಶಿಕ್ಷೆ ಹಾಗೂ ಕ್ಷಮೆ ಇದೆ. ಆದರೆ ದೇಶದ್ರೋಹದ ಚಟುವಟಿಕೆಗೆ ಕ್ಷಮೆ ಇಲ್ಲ. ಕ್ಷಮಿಸಿ ಎಂದು ಯಾರು ಕೇಳಬಾರದು . ಇಂತಹ ಮಾನಸಿಕತೆ ಬಹಳ ಅಪಾಯಕಾರಿ ಎಂದರು. ಇನ್ನು ಪಾಕ್ ಪರ ಘೋಷಣೆ ಕೂಗಿದ ಅಮೂಲ್ಯಳ ಹಿಂದೆ ಒಂದು ತಂಡವೇ ಇದೆ. ಸ್ವತಃ ಅಮೂಲ್ಯಳೇ ಈ ವಿಷಯ ಬಹಿರಂಗಪಡಿಸಿದ್ದಾಳೆ. ಈ ಪ್ರಕರಣವನ್ನು ನಾವು ಬಹಳ ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ಸಿಟಿ ರವಿ ಪ್ರತಿಕ್ರಿಯೆ ನೀಡಿದ್ದಾರೆ.

 

Click to comment

Leave a Reply

Your email address will not be published. Required fields are marked *

LATEST NEWS

ಇದು ಪುರುಷರು ಮಾತ್ರ ಭಾಗವಹಿಸುವ ಜಾತ್ರೆ..! ಮಾಂಸದೂಟ ಇಲ್ಲಿನ ವಿಶೇಷ..!

Published

on

ಮಂಗಳೂರು / ಮಧುರೈ : ಅದು ಹತ್ತೂರಿನ ಜನರು ಭಾಗವಹಿಸುವ ಊರ ಜಾತ್ರೆಯಾಗಿದ್ದು ಕನಿಷ್ಟ ಅಂದ್ರೂ ಹತ್ತರಿಂದ ಹದಿನೈದು ಸಾವಿರ ಜನರು ಭಾಗವಹಿಸ್ತಾರೆ. ಆದ್ರೆ, ವಿಶೇಷ ಅಂದ್ರೆ ಈ ಜಾತ್ರೆಯಲ್ಲಿ ಎಲ್ಲೂ ಒಂದೇ ಒಂದು ಹೆಣ್ಣು ಮಕ್ಕಳು ಕಾಣೋದಿಕ್ಕೆ ಸಿಗೋದಿಲ್ಲ. ಹೆಣ್ಣು ಮಕ್ಕಳು ಈ ಜಾತ್ರೆ ಗದ್ದೆಗೆ ಇಳಿಬೇಕು ಅಂದ್ರೆ ಇಲ್ಲಿ ಪುರುಷರು ಊಟ ಮಾಡಿ ಬಿಟ್ಟು ಹೋದ ಬಾಳೆ ಎಲೆಗಳು ಒಣಗಿ ಹೋಗಬೇಕು. ಅಂದ್ರೆ ಕನಿಷ್ಟ ಅಂದ್ರೂ ಒಂದು ವಾರದ ಬಳಿಕವಷ್ಟೇ ಹೆಣ್ಣು ಮಕ್ಕಳು ಈ ಜಾತ್ರೆಗೆ ಬರಬಹುದು.


ಇದು ತಮಿಳುನಾಡಿನ ಮಧುರೈ ಜಿಲ್ಲೆಯ ತಿರುಮಂಗಲಂ ಬಳಿಯ ಸೂರಿಕಂಬಟ್ಟಿ ಪಂಚಾಯತ್‌ನಲ್ಲಿ ನಡೆಯುವ ವಿಶೇಷ ಜಾತ್ರೆ. ಪೆರುಮಾಳ್ಕೋವಿಲ್ಪಟ್ಟಿ ಗ್ರಾಮ ದೇವರಾದ ಕರುಂಪರೈ ಮುತ್ತಯ್ಯ ದೇವಸ್ಥಾನದಲ್ಲಿ ಈ ಜಾತ್ರೆ ನಡೆಯುತ್ತದೆ. ಇದು ಮಾಂಸಾಹಾರಿ ಊಟದ ಜಾತ್ರೆಯಾಗಿದ್ದು, ಉತ್ಸವದ ಸಂಪ್ರದಾಯದಂತೆ ಪುರುಷರು ಮಾತ್ರ ಭಾಗವಹಿಸುತ್ತಾರೆ.

ದೇವರಿಗೆ ಮೇಕೆ ಬ*ಲಿ :

ಗ್ರಾಮ ದೇವರಿಗೆ ಭಕ್ತರು ತಮ್ಮ ಕೃಷಿ ಸಮೃದ್ಧಿಯಾಗಲು, ರೋಗ ರುಜಿನಗಳು ಬಾರದೇ ಇರಲು ಇಲ್ಲಿಗೆ ಕಪ್ಪು ಆಡುಗಳನ್ನು ಹರಕೆ ಹೇಳಿರುತ್ತಾರೆ. ಹರಕೆ ಹೇಳಿದ ಆಡುಗಳನ್ನು ಈ ಪರಿಸರದಲ್ಲಿ ತಂದು ಬಿಟ್ಟ ಬಳಿಕ ಆ ಆಡುಗಳಿಗೆ ಯಾರೂ ತೊಂದರೆ ಕೊಡುವಂತಿಲ್ಲ. ಯಾವ ತೋಟಕ್ಕೆ ಹೋಗಿ ಮೇವು ತಿಂದ್ರೂ ಅದು ಸಾಕ್ಷಾತ್ ಮುತ್ತಯ್ಯ ಕರುಪ್ಪು ಸ್ವಾಮಿಯೇ ಮೇವು ತಿನ್ನುತ್ತಿದ್ದಾರೆ ಅಂತ ಭಕ್ತರು ನಂಬಿಕೆ ಇಟ್ಟಿದ್ದಾರೆ. ಮುತ್ತಯ್ಯ ಸ್ವಾಮಿಗೆ ನಡೆಯುವ ವಾರ್ಷಿಕ ಜಾತ್ರೆಯಲ್ಲಿ ಇದೇ ಮೇಕೆಗಳನ್ನು ಬ*ಲಿ ಕೊಡಲಾಗುತ್ತದೆ. ಹಬ್ಬಕ್ಕೆ ಒಂದು ವಾರ ಮೊದಲು ಗ್ರಾಮಾಂತರ ಪ್ರದೇಶದಲ್ಲಿ ತಿರುಗಾಡುವ ಎಲ್ಲ ಮೇಕೆಗಳನ್ನು ಸಂಗ್ರಹಿಸಿ ಸ್ವಾಮಿಗೆ ಬ*ಲಿ ಕೊಡುತ್ತಾರೆ.


ಈ ಹಿನ್ನೆಲೆಯಲ್ಲಿ ಇಂದು ( ಮೆ 18 ) ಬೆಳಗ್ಗೆ ಉತ್ಸವ ಆರಂಭವಾಗಿದ್ದು, ದೇವಸ್ಥಾನದಲ್ಲಿ ಮುತ್ತಯ್ಯ ಸ್ವಾಮಿಗೆ ಪೊಂಗಲ್ ಹಾಕಿ ಪೂಜೆಗೆ ಚಾಲನೆ ನೀಡಲಾಯಿತು. ನಂತರ 125 ಮೇಕೆಗಳನ್ನು ಬ*ಲಿ ನೀಡಿ 2500 ಕೆಜಿ ಅಕ್ಕಿಯನ್ನು ಬೇಯಿಸಲಾಯಿತು. ನಂತರ ಬೇಯಿಸಿದ ಅನ್ನ ಮತ್ತು ಮಾಂಸವನ್ನು ಸ್ವಾಮಿಗೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಬಳಿಕ ಭಕ್ತರಿಗೆ ಅನ್ನದಾನ ಮಾಡಲಾಯಿತು.

ಮಹಿಳೆಯರಿಗಿಲ್ಲ ಪ್ರವೇಶ :


ಈ ಜಾತ್ರೆಯಲ್ಲಿ ಈ ಬಾರಿ ಸುಮಾರು ಹತ್ತು ಸಾವಿರಕ್ಕೂ ಅಧಿಕ ಪುರುಷರು ಭಾಗವಹಿಸಿ ಅನ್ನ ಪ್ರಸಾದ ಸ್ವೀಕರಿಸಿದ್ದಾರೆ. ಇವರು ಆಹಾರ ಸೇವಿಸಿದ ಎಲೆಗಳನ್ನು ಹಾಗೆ ಬಿಟ್ಟು ಬಿಡುವುದು ಕೂಡಾ ಇಲ್ಲಿನ ಪ್ರಮುಖ ಸಂಪ್ರದಾಯದಲ್ಲಿ ಒಂದು. ಹೀಗೇ ಬಿಟ್ಟು ಹೋದ ಎಲೆಗಳು ಒಣಗುವ ತನಕ ಈ ಪ್ರದೇಶಕ್ಕೆ ಮಹಿಳೆಯರು ಎಂಟ್ರಿ ಕೊಡುವಂತಿಲ್ಲ. ಎಲೆಗಳು ಒಣಗಿದೆ ಎಂದು ದೇವಸ್ಥಾನದ ಪೂಜಾರರು ಹೇಳಿದ ಬಳಿಕ ಮಹಿಳೆಯರು ಜಾತ್ರೆಯಲ್ಲಿ ಭಾಗವಹಿಸಲು ಅವಕಾಶ ಸಿಗುತ್ತದೆ.

ಇದನ್ನೂ ಓದಿ : ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!

ಮಾಂಸದೂಟದ ಹಬ್ಬದಲ್ಲಿ ತಿರುಮಂಗಲಂ, ಸೊರಿಕಂ ಪಟ್ಟಿ, ಪೆರುಮಾಳ್ ಕೋವಿಲ್ಪಟ್ಟಿ, ಕರಡಿಕ್ಕಲ್. ಮಾವಿಲಿಪಟ್ಟಿ, ಚೇಕನುರಾಣಿ, ಚೋಳವಂತನ್, ಕರುಮತ್ತೂರು, ಚೆಲ್ಲಂಪಟ್ಟಿ ಸೇರಿದಂತೆ ವಿವಿಧ ಪ್ರದೇಶಗಳ ಪುರುಷ ಭಕ್ತರು ಮಾತ್ರ ಭಾಗವಹಿಸಿದ್ದರು.

Continue Reading

LATEST NEWS

ಬಾಲಕನ ಹ*ತ್ಯೆ ಪ್ರಕರಣಕ್ಕೆ ಟ್ವಿಸ್ಟ್: ತಮ್ಮನನ್ನೇ ಕೊಂದ ಅಣ್ಣ; ಮೊಬೈಲ್ ನಿಂದ ಹೋಯ್ತು ಪ್ರಾಣ!

Published

on

ಬೆಂಗಳೂರು : ಆ ಬಾಲಕ ಅಜ್ಜಿ ಮನೆಯಲ್ಲಿದ್ದುಕೊಂಡು ಓದುತ್ತಿದ್ದ. ಬೇಸಿಗೆ ರಜೆಯ ಹಿನ್ನೆಲೆ ತಂದೆ – ತಾಯಿ, ಅಣ್ಣನೊಂದಿಗೆ ಸಮಯ ಕಳೆಯಲು ಬಂದಿದ್ದ. ಆದರೆ ವಿಧಿಯಾಟ ಬೇರೆಯಾಗಿತ್ತು. ರಜೆಯ ಸಂಭ್ರಮದಲ್ಲಿ ಬಂದಿದ್ದವನಿಗೆ ಅಣ್ಣನೇ ಪರಲೋಕದ ದಾರಿ ತೋರಿಸಿದ್ದ.

ಪ್ರಕರಣಕ್ಕೆ ಟ್ವಿಸ್ಟ್ , ಅಣ್ಣನೇ ಹಂ*ತಕ:


ಆನೇಕಲ್ ತಾಲೂಕಿನ ನೆರಿಗಾ ಗ್ರಾಮ ಅಂದು ಬೆಚ್ಚಿ ಬಿದ್ದಿತ್ತು. ಬಹಿರ್ದೆಸೆಗೆ ತೆರಳಿದ್ದ ಬಾಲಕ ಪ್ರಾಣೇಶ್(15) ಶ*ವವಾಗಿ ಪತ್ತೆಯಾಗಿದ್ದ. ಯಾರು ಈ ದುಷ್ಕೃತ್ಯ ಮೆರೆದವರು ಎಂದು ಪ್ರಕರಣ ಬೆಂಬತ್ತಿದ ಪೊಲೀಸರಿಗೆ ಸಾಕ್ಷಿಗಳು ಬಾಲಕನ ಅಣ್ಣನತ್ತ ಬೆಟ್ಟು ಮಾಡಿ ತೋರಿಸಿದ್ದವು.
ತಮ್ಮನನ್ನೇ ಕೊ*ಲೆಗೈದಿದ್ದ ಅಣ್ಣ 18 ವರ್ಷದ ಅಣ್ಣ ಶಿವಕುಮಾರ್ ಪೊಲೀಸ್ ಬಲೆಗೆ ಬಿದ್ದಿದ್ದ. ಮೊಬೈಲ್ ಚಟವೇ ಈ ಕೊ*ಲೆಗೆ ಕಾರಣ ಎಂಬ ಸತ್ಯ ತನಿಖೆಯಿಂದ ಬಯಲಾಗಿದೆ.

ಮೊಬೈಲ್ ನಿಂದಾಗಿ ಹೋಯ್ತು ಜೀವ:

ಮೂಲತಃ ಆಂಧ್ರ ಮೂಲದ ಸೂಳೆಕೆರಿ ಗ್ರಾಮದ ಚನ್ನಮ್ಮ ಮತ್ತು ಬಸವರಾಜ್ ಎಂಬ ಕೂಲಿಕಾರ್ಮಿಕ ದಂಪತಿ 3 ತಿಂಗಳ ಹಿಂದೆ ಗಾರೇ ಕೆಲಸಕ್ಕೆಂದು ಆಂಧ್ರದಿಂದ ನೆರಿಗಾ ಗ್ರಾಮಕ್ಕೆ ಬಂದು ನೆಲೆಸಿದ್ದರು. ದೊಡ್ಡ ಮಗನಿಗೆ ವಿದ್ಯೆ ತಲೆಗೆ ಹತ್ತಲಿಲ್ಲ ಎಂದು ತಮ್ಮೊಂದಿಗೆ ಕರೆದುಕೊಂಡು ಬಂದು ಗಾರೇ ಕೆಲಸಕ್ಕೆ ಹಾಕಿದ್ದರು. ಚಿಕ್ಕ ಮಗನಿಗೆ ಓದಿನಲ್ಲಿ ಆಸಕ್ತಿ ಇದ್ದ ಕಾರಣ ಅಜ್ಜಿ ಮನೆಯಲ್ಲೇ ಬಿಟ್ಟು ಓದಿಸುತ್ತಿದ್ದರು. ಆಂಧ್ರದ ಕರ್ನೂಲ್​ನಲ್ಲಿ ಅಜ್ಜಿ ಮನೆಯಲ್ಲೇ ಇದ್ದುಕೊಂಡು ಸರ್ಕಾರಿ ಶಾಲೆಯಲ್ಲಿ ಪ್ರಾಣೇಶ್ ಏಳನೇ ತರಗತಿ ಓದುತ್ತಿದ್ದ. ಶಾಲೆಗೆ ಬೇಸಿಗೆ ರಜೆ ಹಿನ್ನೆಲೆ ತಂದೆ ತಾಯಿ ಇದ್ದ ನೆರಿಗಾ ಗ್ರಾಮಕ್ಕೆ ಬಂದಿದ್ದ.

ಸಮಯ ಸಿಕ್ಕಾಗಲೆಲ್ಲ ಅಣ್ಣ ಶಿವಕುಮಾರ್​ನ ಮೊಬೈಲ್​ ತೆಗೆದುಕೊಂಡು ಆಟ ಆಡ್ತಿದ್ದ. ಇದು ಶಿವಕುಮಾರ್​ಗೆ ಕೋಪ ತರಿಸಿತ್ತು. ಹೀಗಾಗಿ ಮೇ 15 ರಂದು ತಮ್ಮ ಬಹಿರ್ದೆಸೆಗೆ ಹೋದಾಗ ಅವನನ್ನು ಹಿಂಬಾಲಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಪ್ರಾಣೇಶ್​ನ ತಲೆ, ಹೊಟ್ಟೆ ಭಾಗಕ್ಕೆ ಹೊಡೆದು ಹ*ತ್ಯೆ ಮಾಡಿದ್ದಾನೆ. ಬಳಿಕ ಮನೆಗೆ ಬಂದು ತನಗೆ ಏನು ಗೊತ್ತಿಲ್ಲ ಎಂಬಂತೆ ಓಡಾಡಿಕೊಂಡಿದ್ದ.

ನಾಟಕವಾಡಿದ್ದ ಶಿವಕುಮಾರ್ :

ತಂದೆ ತಾಯಿ ಕೆಲಸ ಮುಗಿಸಿ ಸಂಜೆ ಮನೆಗೆ ಬಂದಾಗ ಚಿಕ್ಕ ಮಗ ನಾಪತ್ತೆಯಾಗಿರುವುದು ಪತ್ತೆಯಾಗಿದೆ. ಎಲ್ಲೆಡೆ ಹುಡುಕಾಡಿದ್ದಾರೆ. ಈ ವೇಳೆ ತಮ್ಮನ ಶ*ವ ಬಿದ್ದಿದೆ ಎಂದು ಓಡೋಡಿ ಬಂದು ಶಿವಕುಮಾರ ಪೋಷಕರಿಗೆ ಕೊಲೆಯಾಗಿದೆ ಎಂದು ತಿಳಿಸಿದ್ದಾನೆ. ಪೋಷಕರು ಈ ಬಗ್ಗೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಇದನ್ನೂ ಓದಿ : ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!

ಈ ವೇಳೆ ತಮ್ಮನ ಶವವನ್ನ ನಾನೇ ಮೊದಲು ನೋಡಿದ್ದೆ ಎಂದು ಹೇಳುತ್ತಿದ್ದ ಶಿವಕುಮಾರನ ಮೇಲೆ ಪೊಲೀಸರಿಗೆ ಅನುಮಾನ ಬಂದಿದೆ. ಠಾಣೆಗೆ ಕರೆದು ಕೊಂಡು ಹೋಗಿ ಬಾಯಿ ಬಿಡಿಸಿದ್ದಾರೆ. ಈ ವೇಳೆ ಸತ್ಯಾಂಶ ಬಯಲಾಗಿದೆ. ಅಲ್ಲದೇ,  ಆರೋಪಿ ಶಿವಕುಮಾರ್, ನಿರ್ಮಾಣ ಹಂತದ ಕಟ್ಟಡದಿಂದ ಸುತ್ತಿಗೆ ತಂದಿದ್ದ. ಸುತ್ತಿಗೆಯನ್ನ ಜೇಬಿನಲ್ಲಿ ಇಟ್ಟುಕೊಳ್ಳುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಒಬ್ಬ ಮಗ ಇಹಲೋಕ ತ್ಯಜಿಸಿದ, ಇನ್ನೊಬ್ಬ ಮಗ ಜೈಲು ಪಾಲಾದ ನೋವಿನಿಂದ ಪೋಷಕರು ಕಣ್ಣೀರು ಹಾಕ್ತಿದ್ದಾರೆ.

Continue Reading

LATEST NEWS

ಕನ್ಹಯ್ಯಾ ಕುಮಾರ್‌ಗೆ ಕಪಾಳಮೋಕ್ಷ..! ಬಿಜೆಪಿ ಅಭ್ಯರ್ಥಿಯ ಕೈವಾಡ..!

Published

on

ನವದೆಹಲಿ : ದೇಶದಲ್ಲಿ ಲೋಕಸಭಾ ಚುನಾವಣೆಯ ಕಾವು ಜೋರಾಗಿದೆ. ಈ ನಡುವೆ ದೆಹಲಿಯಲ್ಲಿ ಚುನಾವಣಾ ಪ್ರಚಾರದ ವೇಳೆ ಗಲಭೆ ನಡೆದಿದೆ. ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಮಾಜಿ ವಿದ್ಯಾರ್ಥಿ ನಾಯಕ ಮತ್ತು ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಾ ಕುಮಾರ್‌ಗೆ ಯುವಕನೊಬ್ಬ ಕಪಾಳಮೋಕ್ಷ ಮಾಡಿದ್ದಾನೆ. ಕನ್ಹಯ್ಯಾ ಕುಮಾರ್ ಶುಕ್ರವಾರ ಆಮ್ ಆದ್ಮಿ ಪಕ್ಷದ ಕಚೇರಿಯಿಂದ ಹೊರ ಬರುತ್ತಿದ್ದಾಗ ಈ ಹಲ್ಲೆ ನಡೆಸಲಾಗಿದೆ. ಈ ವೇಳೆ ಆಮ್ ಆದ್ಮಿ ಪಕ್ಷದ ಮಹಿಳಾ ಕಾರ್ಪೋರೇಟರ್ ಛಾಯಾ ಶರ್ಮಾ ಜೊತೆಯೂ ಅನುಚಿತವಾಗಿ ವರ್ತಿಸಿದ್ದಾರೆ.
ಈಶಾನ್ಯ ದೆಹಲಿಯ ಉಸ್ಮಾನ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕರ್ತಾರ್ ನಗರದಲ್ಲಿ ಈ ಘಟನೆ ನಡೆದಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.


ಆರೋಪಿಗಳ ಬಂಧನ :

ಈ ಬಗ್ಗೆ ದೂರು ನೀಡಿರುವ ಛಾಯಾ ಶರ್ಮಾ “ಕೆಲವರು ಬಂದು ಕನ್ಹಯ್ಯಾ ಕುಮಾರ್‌ಗೆ ಹಾರ ಹಾಕಿದರು. ಅವರಿಗೆ ಮಾಲೆ ಹಾಕಿದ ನಂತರ, ಕನ್ಹಯ್ಯಾ ಕುಮಾರ್ ಮೇಲೆ ಶಾಯಿ ಎಸೆದು ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ ಅವರು ನನ್ನ ಜೊತೆ ಅನುಚಿತವಾಗಿ ವರ್ತಿಸಿದರು” ಎಂದು ಹೇಳಿದ್ದಾರೆ.

ಕನ್ಹಯ್ಯಾ ಕುಮಾರ್ ಮೇಲೆ ಹಲ್ಲೆಯಾಗುತ್ತಿದ್ದಂತೆ ಅಭಿಮಾನಿಗಳು ಆರೋಪಿಗಳನ್ನು ಹಿಡಿದಿದ್ದಾರೆ. ಆರೋಪಿ ಯುವಕನನ್ನು ಹಿಗ್ಗಾಮುಗ್ಗ ಥಳಿಸಿ ಬಳಿಕ ಪೊಲೀಸರಿಗೆ ಒಪ್ಪಿಸಿದ್ದಾರೆ.

ಬಿಜೆಪಿಯ ಮನೋಜ್ ತಿವಾರಿ ವಿರುದ್ಧ ಆರೋಪ :

ಈ ಹಲ್ಲೆಯ ಹಿಂದೆ ಬಿಜೆಪಿ ಅಭ್ಯರ್ಥಿ ಮನೋಜ್ ತಿವಾರಿ ಇದ್ದಾರೆ ಎಂದು ಕನ್ಹಯ್ಯಾ ಕುಮಾರ್ ಬೆಂಬಲಿಗರು ಆರೋಪಿಸಿದ್ದಾರೆ. ಕನ್ಹಯ್ಯಾ ಅವರಿಗೆ ಸಿಗುತ್ತಿರುವ ಭಾರೀ ಜನ ಬೆಂಬಲ ಹಾಗೂ ಸೋಲಿನ ಭೀತಿಯಿಂದ ಮನೋಜ್ ತಿವಾರಿ ಗೂಂಡಾಗಳನ್ನು ಬಿಟ್ಟು ಹಲ್ಲೆ ನಡೆಸಲು ಯತ್ನಿಸಿದ್ದಾರೆ. ಆದ್ರೆ ಮೇ 25 ರಂದು ಇದಕ್ಕೆ ಜನರು ಮತದಾನ ಮಾಡುವ ಮೂಲಕ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ : ಐದು ಮಕ್ಕಳಿದ್ದಾರೆಂದು ಚಿಂತೆಗೊಳಗಾದ ತಂದೆ..! ಅಕ್ಕನಿಂದಲೇ ಇಬ್ಬರು ಸಹೋದರಿಯರ ಕೊ*ಲೆ..!

ದೆಹಲಿಯಲ್ಲಿ ಮೇ 25 ರಂದು ಏಳು ಲೋಕಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಜೂನ್ 4 ರಂದು ಫಲಿತಾಂಶ ಪ್ರಕಟವಾಗಲಿದೆ. 2019ರಲ್ಲಿ ಎಲ್ಲ ಏಳು ಸ್ಥಾನಗಳನ್ನು ಬಿಜೆಪಿ ಗೆದ್ದಿತ್ತು. 2024 ರ ಲೋಕಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು, ಬಿಜೆಪಿ ಈಶಾನ್ಯ ದೆಹಲಿ ಲೋಕಸಭಾ ಕ್ಷೇತ್ರದಿಂದ ಮನೋಜ್ ತಿವಾರಿ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಮಾಡಿದೆ. ಮತ್ತೊಂದೆಡೆ, ಕನ್ಹಯ್ಯಾ ಕುಮಾರ್ ಅವರನ್ನು ಐಎನ್‌ಡಿಐಎ ಬ್ಲಾಕ್ ಅಭ್ಯರ್ಥಿ ಎಂದು ಕಾಂಗ್ರೆಸ್ ಘೋಷಿಸಿದೆ. ಈ ಕ್ಷೇತ್ರದಲ್ಲಿ ಇಬ್ಬರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕನ್ಹಯ್ಯ ಜೆಎನ್‌ಯುನಿಂದ ರಾಜಕೀಯವನ್ನು ಪ್ರಾರಂಭಿಸಿದರು, ಮನೋಜ್ ತಿವಾರಿ ಪ್ರಸಿದ್ಧ ನಟ ಮತ್ತು ಗಾಯಕರಾಗಿದ್ದರು. ಬಳಿಕ ರಾಜಕೀಯಕ್ಕೆ ಪ್ರವೇಶಿಸಿದರು.

Continue Reading

LATEST NEWS

Trending