Connect with us

ಕೃಷ್ಣಾ ಶೆಟ್ಟಿ ಮಾಲಿಕತ್ವದ ಗೋಲಿಸೋಡಾಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

Published

on

ಕೃಷ್ಣಾ ಶೆಟ್ಟಿ ಮಾಲಿಕತ್ವದ ಗೋಲಿಸೋಡಾಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್

ಮಂಗಳೂರು:   ಬಿಸಿಲಿನ ಧಗೆಗೆ ಚಿಲ್ಡ್ ಆಗಿರೋ ಗೋಲಿಸೋಡ ಕುಡಿಯೋದೆ ಒಂದು ಮಜಾ. ಒಂದ್ಕಾಲದಲ್ಲಿ ಪಾನೀಯಗಳ ರಾಜನಾಗಿದ್ದ ಗೋಲಿಸೋಡ, ಬರಬರುತ್ತಾ ಕಲರ್ ಫುಲ್ ಪಾನೀಯಗಳ ಅಬ್ಬರದ ನಡುವೆ ಸೈಡ್‍ಲೈನ್ ಆಗಿತ್ತು. ಆದ್ರೆ ಇದೀಗ ಗೋಲಿಸೋಡವು ಭಿನ್ನ-ವಿಭಿನ್ನವಾಗಿ ಅಪ್ಡೇಟ್ ಆಗಿದೆ ಅನ್ನೋದು ಹಳೇ ವಿಷ್ಯ. ಆದ್ರೆ ಇದೆಲ್ಲದ್ರ ಮಧ್ಯೆ ಒಂದಾನೊಂದು ಕಾಲದಿಂದಲ್ಲೂ ಕುಡ್ಲದ ಜನರಿಗೆ ನ್ಯಾಚುರಲ್ ಫ್ಲೇವರ್ ಬೆರೆಸಿ ಗೋಲಿಸೋಡ ನೀಡ್ತಾ, ಗ್ರಾಹಕರ ಹಾಟ್ ಫೇವರೇಟ್ ಎನಿಸಿಕೊಂಡಿರೋ ಇವರ ಬಗ್ಗೆ ಕೇಳಿದ್ದೀರಾ.? ಹೌದು ಓಲ್ಡ್ ಈಸ್ ಗೋಲ್ಡ್ ಅನ್ನೋ ಗೋಲಿಸೋಡ ಮಾರೋ ಹಿರಿ ಜೀವದ ಕಥೆ.

ಗೋಲಿಸೋಡ.. ಇಂದಿಗೂ ಅದೆಷ್ಟ್ಟೋ ಜನರ ಫೇವರೆಟ್ ಪಾನೀಯ. ಶ್ರೀಮಂತರು ಬಡವರು ಅನ್ನೋ ಹಂಗಿಲ್ಲದೆ ಆರೋಗ್ಯ ದೃಷ್ಟಿಯಲ್ಲಿ ಎಲ್ಲರೂ ಈ ಪಾನೀಯಾಕ್ಕೆ ಫಿದಾ ಅಂದ್ರೂ ತಪ್ಪಾಗಲ್ಲ. ಒಂದ್ಕಾಲದಲ್ಲಿ ಬಹು ಬೇಡಿಕೆಯಾಗಿದ್ದ ಗೋಲಿಸೋಡ..ಇಂದು ಅಪರೂಪಕ್ಕೆ ಸಿಗೋ ಪಾನೀಯವಾದ್ರೂ ಡಿಮ್ಯಾಂಡ್ ಮಾತ್ರ ಕಮ್ಮಿಯಾಗಿಲ್ಲ ಅನ್ನೋದು ನಿಜ.

ಹೌದು ಇದು ಎಷ್ಟರ ಮಟ್ಟಿಗೆ ಸತ್ಯ ಅನ್ನೋದಕ್ಕೆ ಈ ಗೋಲಿಸೋಡ ಶಾಪ್ ಮುಂದೆ ನಿಂತಿರೋ ವಾಹನಗಳನ್ನ ಹಾಗೇ ಬರೋ ಗ್ರಾಹಕರನ್ನ ನೋಡಿ… ಇದು ಮಂಗಳೂರಿನ ಮಣ್ಣಗುಡ್ಡೆ ಬಳಿ ಇರೋ 85 ವರ್ಷ ಪ್ರಾಯದ ಹಿರಿ ಜೀವ ಎಂ.ಕ್ರಷ್ಣ ಶೆಟ್ಟಿಯವರ ಗೋಲಿಸೋಡ ಅಂಗಡಿ. ಅಂದ್ಹಾಗೆ ಈ ಎಂ.ಕ್ರಷ್ಣ ಶೆಟ್ಟಿ ಮಾಲಿಕತ್ವದ ಗೋಲಿಸೋಡ ಅಂಗಡಿಗೆ ಭರ್ತಿ 50 ವರುಷಕ್ಕೂ ಹೆಚ್ಚಿನ ಇತಿಹಾಸವಿದೆ. 1957 ರಲ್ಲಿ ಎಂ.ಕ್ರಷ್ಣ ಶೆಟ್ಟಿಯವರ ಅಣ್ಣ ಈಶ್ವರ್ ಶೆಟ್ಟಿ ಗೋಲಿಸೋಡ ತಯಾರಿಸಿ ಅಂಗಡಿ ಅಂಗಡಿಗಳಿಗೆ ಕೊಡುವ ಕಾಯಕ ನಡೆಸುತ್ತಿದ್ದರು. ಅವರ ಜೊತೆ ಸಹೋದರ ಎಂ.ಕ್ರಷ್ಣ ಶೆಟ್ಟಿ ಸಹಾಯಕರಾಗಿದ್ರು… ಅಣ್ಣನ ನಿಧನಾನಂತರ ಅಂದರೆ 1988 ರಿಂದ ಸ್ವತಃ ತಾನೇ ಈ ಸೋಡ ತಯಾರಿಕೆ ಮಾಡಲು ನಿಶ್ಚಯಿಸಿ ಇಂದಿಗೂ ಅದೇ ವ್ರತ್ತಿಯನ್ನು ಮುಂದುವರಿಸುತ್ತ ಬಂದಿದ್ದಾರೆ.

ಇನ್ನು ಇವರು ತಯಾರಿಸೋ ಗೋಲಿಸೋಡದ ಸ್ಪೆಷಾಲಿಟಿ ಏನಪ್ಪ ಅಂದ್ರೆ ತರೇಹವಾರಿ ನ್ಯಾಚುರಲ್ ಫ್ಲೇವರ್ ನ ತಂಪಾದ ಪಾನಿಯ ಇಲ್ಲಿ ಸಿಗುತ್ತದೆ.. ಪುನರ್ ಪುಳಿ, ಲೆಮೆನ್, ಆರೆಂಜ್ ಹೀಗೆ ಇನ್ನಿತರ ಫ್ಲೇವರ್ ಗಳ ರುಚಿ ಸವಿಯಬಹುದು.. ಅಷ್ಟೇಅಲ್ಲ ಹಿಂದಿನ ಕಾಲದಲ್ಲಿ ಇಂಗ್ಲೆಂಡ್, ಜರ್ಮನಿಯ ಬಾಟಲಿಯಲ್ಲಿ ಸೋಡ ತಯಾರಿಸಿ ಮಾರಾಟಮಾಡುತ್ತಿದ್ದು, ಈಗಲೂ ಅದರಲ್ಲೇ ಸೋಡ ತಯಾರಿಸ್ತಾರೆ. ಜೊತೆಗೆ ಇವರು ಬಳಸುವ ಮೆಷಿನ್ ಕೂಡ ಜರ್ಮನಿಯದ್ದಾಗಿದೆ. ಇತ್ತಿಚಿನ ದಿನದಲ್ಲಿ ಇಂತಹ ಬಾಟಲಿಗಳು ಮನೆಯ ಶೋಕೆಸ್ ನಲ್ಲಿ ರಾರಾಜಿಸೋ ಕಾರಣ ದುಬಾರಿ ಬೆಲೆ ಕೊಟ್ಟು ಆಸಕ್ತಿ ಉಳ್ಳವರು ಇವರಿಂದ ಖರೀದಿಸ್ತಾರಂತೆ.

 

ಪಾನೀಯಗಳ ರಾಜ ಗೋಲಿಸೋಡಗೆ ಈಗಲೂ ತುಂಬಾನೇ ಬೇಡಿಕೆ ಇದ್ದು, ಊರ ಪರವೂರ ಜನರು ಬಾಯಾರಿಕೆ ತೀರಿಸಿಕೊಳ್ಳಲು ಇಲ್ಲಿಗೆ ಬರುತ್ತಾರೆ. ಒಟ್ನಲ್ಲಿ ಇಂದಿನ ಕಲರ್ ಕಲರ್.. ಕೂಲ್ ಡ್ರಿಂಕ್‍ನ ಸ್ಪರ್ದೆಯ ಕಾಲ ಘಟ್ಟದಲ್ಲಿ 85 ರ ಹರೆಯದ ಎಂ.ಕೃಷ್ಣ ಶೆಟ್ಟಿ ತಾವೇ ಸ್ವತಃ ತಯಾರಿಸಿ ಮಾರಾಟ ಮಾಡ್ತಾ ಇರೋದು ನಿಜವಾಗಲೂ ಮೆಚ್ಚವಂತದ್ದೆ..

 

ವಿಡಿಯೋ

Click to comment

Leave a Reply

Your email address will not be published. Required fields are marked *

FILM

ಮತ್ತೆ ಡೀಪ್ ಫೇಕ್ ಗೆ ಬಲಿಯಾದ ಆಲಿಯಾ ಭಟ್; ನಟಿಯ ವೀಡಿಯೋ ನೋಡಿ ಫ್ಯಾನ್ಸ್ ಶಾಕ್!

Published

on

ಮಂಗಳೂರು/ ಮುಂಬೈ : ಸದ್ಯ ಡೀಪ್ ಫೇಕ್ ಹಾವಳಿ ಮುಗಿಯುವಂತೆ ಕಾಣುತ್ತಿಲ್ಲ. ಅನೇಕ ನಟ – ನಟಿಯರು ಡೀಪ್ ಫೇಕ್ ನಿಂದ ತೊಂದರೆ ಅನುಭವಿಸಿದ್ದಾರೆ. ಕತ್ರೀನಾ ಕೈಫ್, ರಶ್ಮಿಕಾ ಮಂದಣ್ಣ, ಕಾಜಲ್, ಅಲಿಯಾ ಭಟ್ ರ ಡೀಪ್ ಫೆಕ್ ವೀಡಿಯೋ ವೈರಲ್ ಆಗಿತ್ತು. ಕೇವಲ ನಟಿಯರದ್ದು ಮಾತ್ರವಲ್ಲ, ನಟರಾದ ಅಮೀರ್ ಖಾನ್, ಅಲ್ಲು ಅರ್ಜುನ್ ಚುನಾವಣಾ ಪ್ರಚಾರದ ಫೇಕ್ ವೀಡಿಯೋಗಳು ಸೃಷ್ಟಿಯಾಗಿದ್ದವು. ಈ ಬಗ್ಗೆ ಚಿತ್ರರಂಗದ ಅನೇಕರು ಧ್ವನಿ ಎತ್ತಿದ್ದರೂ ಕೂಡ. ಆದ್ರೆ, ಇಲ್ಲಿಗೆ ಮುಕ್ತಾಯವಾಗಿಲ್ಲ. ಇದೀಗ ಮತ್ತೆ ಡೀಪ್ ಫೇಕ್ ಹಾವಳಿ ಮುಂದುವರೆದಿದೆ.

 

ಮತ್ತೆ ಅಲಿಯಾ ಭಟ್ ಡೀಪ್ ಫೇಕ್ :

ಡೀಪ್ ಫೆಕ್ ಗೆ ಮತ್ತೆ ಅಲಿಯಾ ಭಟ್ ಬಲಿಯಾಗಿದ್ದಾರೆ. ಅಲಿಯಾ ಭಟ್ ಹೊಸ ಲುಕ್ ಕಂಡು ಅಭಿಮಾನಿಗಳು ಬೆರಗಾಗಿದ್ದಾರೆ. ಇದುವರೆಗೆ ಬೇರೆ ಯಾರು ಯಾರದೋ ವೀಡಿಯೋ ಗಳಿಗೆ ನಟಿಯರ ಮುಖವನ್ನು ಕೂರಿಸಿ ವೀಡಿಯೋ ಮಾಡಲಾಗುತ್ತಿತ್ತು. ಇದೀಗ ನಟಿಯೊಬ್ಬಳ ವೀಡಿಯೋಗೆ ನಟಿ ಮುಖವನ್ನು ಬಳಸಲಾಗಿದೆ. ಹೌದು, ನಟಿಯೊಬ್ಬಳ ಮುಖ ಎಡಿಟ್ ಮಾಡಿ ಅಲ್ಲಿ ಅಲಿಯಾ ಭಟ್ ಮುಖವನ್ನು ಬಳಸಲಾಗಿದೆ.

ಆ ನಟಿಯರು ಯಾರು?


ಇಷ್ಟರ ವರೆಗೆ ಡೀಪ್ ಫೇಕ್ ತಂತ್ರಜ್ಞಾನದಲ್ಲಿ ಬೇರೆಯವರ ದೇಹಕ್ಕೆ ಸೆಲೆಬ್ರಿಟಿಗಳ ಮುಖ ಜೋಡಿಸುವ ಕೆಲಸವನ್ನು ಮಾಡಲಾಗುತ್ತಿತ್ತು. ಈಗ ಬೇರೊಬ್ಬ ನಟಿಯ ವೀಡಿಯೋ ಬಳಸಿಕೊಂಡಿದ್ದಾರೆ. ಈ ಡೀಪ್ ಫೇಕ್ ವೀಡಿಯೋದ ಅಸಲಿ ವೀಡಿಯೋ ನಟಿ ವಾಮಿಕಾ ಅವರದ್ದು. ವಾಮಿಕ ಬಾಲಿವುಡ್ ನಟಿ. 2007 ರಿಂದ ಅವರು ಬಾಲಿವುಡ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಹಲವಾರು ಚಿತ್ರಗಳಲ್ಲಿ ನಟಿಸಿದ್ದರೂ, ಯಾವುದೂ ಆಕೆಗೆ ಹೆಸರು ಕೊಟ್ಟಿಲ್ಲ. ಈಗ ಡೀಪ್ ಫೇಕ್ ಪ್ರಕರಣದಿಂದ ಅವರು ಮುನ್ನೆಲೆಗೆ ಬಂದಿದ್ದಾರೆ.

ಇದನ್ನೂ ಓದಿ : ಮಲಯಾಳಂ ನಟಿ ‘ಕನಕಲತಾ’ ಇನ್ನಿಲ್ಲ

ನಟಿ ವಾಮಿಕಾ ವೀಡಿಯೋಗೆ ಅಲಿಯಾ ಭಟ್ ಫೇಸ್ :

ನಟಿ ವಾಮಿಕ ಕೆಲವು ದಿನಗಳ ಹಿಂದೆಯಷ್ಟೇ ವೀಡಿಯೋವೊಂದನ್ನು ಹಂಚಿಕೊಂಡಿದ್ದರು. ಈ ವೀಡಿಯೋದಲ್ಲಿ ಅವರು, ಕೆಂಪು ಸೀರೆಯುಟ್ಟು ಮಿಂಚಿದ್ದರು. ನೆಟ್ ಫ್ಲಿಕ್ಸ್ ಸರಣಿ ‘ಹೀರಾಮಂಡಿ’ ಸ್ಕ್ರೀನಿಂಗ್ ಗಾಗಿ ವಾಮಿಕಾ ಕೆಂಪು ಸೀರೆಯುಟ್ಟಿದ್ದರು.
ಇದೀಗ ಈ ವೀಡಿಯೋಗೆ ಅಲಿಯಾ ಭಟ್ ಮುಖ ಬಳಸಿ ವೈರಲ್ ಮಾಡಲಾಗಿದೆ.

ಆಲಿಯಾ ಅಭಿಮಾನಿಗಳು ಕಿಡಿ ಕಾರಿದ್ದಾರೆ. ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದು ಹೇಗೆ ಸಾಧ್ಯ? ಆಲಿಯಾ ಮುಖ ನೀವು ಬಳಸಿರುವುದು ಕಾನೂನುಬದ್ಧವೇ? ಎಂದು ಪ್ರಶ್ನಿಸಿದ್ದಾರೆ. ಕೆಲವರು ಕಮೆಂಟ್ಸ್ ಬಾಕ್ಸ್ ನಲ್ಲಿ ಆಲಿಯಾ ಭಟ್ ಅವರನ್ನು ಟ್ಯಾಗ್ ಮಾಡಿದ್ದಾರೆ.

 

Continue Reading

DAKSHINA KANNADA

ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯ ಮೃತದೇಹ ಪತ್ತೆ..! ರಕ್ತಸಿಕ್ತ ಸ್ಥಿತಿಯಲ್ಲಿದ್ದ ಶವ.!!

Published

on

ಮಂಗಳೂರು: ಹೆಸರಾಂತ ಮದುವೆ ಸಭಾಂಗಣದ ಆವರಣದಲ್ಲಿ ವ್ಯಕ್ತಿಯೋರ್ವನ ಮೃತದೇಹ ಪತ್ತೆಯಾಗಿದೆ. ತಲಪಾಡಿಯಲ್ಲಿರುವ ಬಂಟವಾಳದ ಭಂಟರ ಭವನದ ಆವರಣದ ಕಂಪೌಂಡ್‌ ಒಳಗಡೆ ವ್ಯಕ್ತಿಯೋರ್ವನ ಮೃತದೇಹ ರಕ್ತಸಿಕ್ತವಾಗಿ ಇದ್ದ ರೀತಿಯಲ್ಲಿ ಮೃತ ದೇಹ ಪತ್ತೆಯಾಗಿದೆ. ಉಪ್ಪಿನಂಗಡಿ ವಳಾಲು ಮೂಲದ ನಿವಾಸಿ ಸಂತೋಷ್ ಅವರ ಮೃತದೇಹ ಎಂದು ಗುರುತಿಸಲಾಗಿದೆ.

bantwala death

ಬಂಟರ ಭವನದ ಹೊರಗಡೆ ಸಂತೋಷ್ ಗೆ ಸೇರಿದ್ದ ಬೈಕ್‌ ಪತ್ತೆಯಾಗಿದೆ. ಬೈಕ್ ನಿಲ್ಲಿಸಿ ಕಂಪೌಂಡ್ ಮೇಲೆ ಕುಳಿತು ಕೊಂಡಿದ್ದು ಈ ವೇಳೆ ಕುಸಿದು ಕೆಳಗೆ ಬಿದ್ದು ಈ ಘಟನೆ ನಡೆದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಮುಂದೆ ಓದಿ.. ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ

ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಪೋಲೀಸ್ ಇನ್ಸ್ ಪೆಕ್ಟರ್ ಶಿವಕುಮಾರ್, ಎಸ್.ಐ.ಹರೀಶ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮರಣೋತ್ತರ ಪರೀಕ್ಷೆ ಬಳಿಕ ಹೆಚ್ಚಿನ ಮಾಹಿತಿ ತಿಳಿದು ಬರಬೇಕಿದೆ.

Continue Reading

BELTHANGADY

ಧರ್ಮಸ್ಥಳ: ಸರಣಿ ಅಪ*ಘಾತ, 5 ವಾಹನಗಳಿಗೆ ಹಾನಿ

Published

on

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಸರಣಿ ಅಪ*ಘಾತ ಸಂಭವಿಸಿದ್ದು ಹಲವು ವಾಹನಗಳು ಜಖಂಗೊಂಡಿವೆ. ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.

ಸೋಮವಾರ 4ರ ಸುಮಾರಿಗೆ ನೇತ್ರಾವತಿಯಿಂದ ಧರ್ಮಸ್ಥಳಕ್ಕೆ ಬರುವ ರಸ್ತೆಯಲ್ಲಿ ರಿಕ್ಷಾವೊಂದು ಚಾಲಕನ ನಿಯಂತ್ರಣ ತಪ್ಪಿ ಮಗುಚಿ ಬಿದ್ದಿತು. ಅದರ ಹಿಂದೆ ಇದ್ದ ರಿಕ್ಷಾವೊಂದು ಅಪ*ಘಾತ ಸಂಭವಿಸಿದ ರಿಕ್ಷಾಕ್ಕೆ ತಾಗಿ ಜಖಂಗೊಂಡಿತು.

ವೇಗವಾಗಿ ಬರುತ್ತಿದ್ದ ಕಾರು ಮಗುಚಿ ಬಿದ್ದ ರಿಕ್ಷಾಕ್ಕೆ ಡಿಕ್ಕಿ ಹೊಡೆಯಿತು. ಅದರ ಹಿಂದಿನಿಂದ ಬರುತ್ತಿದ್ದ ಎರಡು ಕಾರುಗಳು ಒಂದರ ಹಿಂದೆ ಒಂದರಂತೆ ಡಿಕ್ಕಿ ಹೊಡೆದಿವೆ. ಹೀಗೆ ಒಟ್ಟು 2 ರಿಕ್ಷಾಗಳು ಹಾಗೂ 3 ಕಾರುಗಳು ಜಖಂಗೊಂಡಿವೆ. ರಿಕ್ಷಾ ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಎಲ್ಲ ಕಾರುಗಳು ಜಖಂಗೊಂಡಿವೆ.

Continue Reading

LATEST NEWS

Trending