ಬೆಂಗಳೂರು: ಬೈಕ್ ವೀಲಿಂಗ್ ಮಾಡುತ್ತಿದ್ದುದನ್ನು ಪ್ರಶ್ನೆ ಮಾಡಿದ್ದಕ್ಕೆ ಯುವಕನನ್ನು ಬರ್ಬರವಾಗಿ ಕೊಲೆಗೈದಿದ್ದ ಆರೋಪಿಗಳನ್ನು ಕೆ.ಪಿ ಅಗ್ರಹಾರ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಸೂರ್ಯ ಅಲಿಯಾಸ್ ಸೂರಿ, ಚಂದನ್, ಪ್ರಮೋದ್, ಯಶವಂತ್, ಚೇತನ್ ಸೇರಿ ಒಟ್ಟು ಆರು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಮೃತ ಯುವಕ
ಕಳೆದ ವಾರ ಥಾಮಸ್ ಯುವಕನನ್ನು ಆರೋಪಿಗಳು ಬರ್ಬರವಾಗಿ ಹತ್ಯೆ ಮಾಡಿ ಎಸ್ಕೇಪ್ ಆಗಿದ್ದರು. ಮೃತ ಥಾಮಸ್ ಮನೆ ಮುಂದೆ ವೀಲಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ
ಆರೋಪಿ ಸೂರಿ ಗ್ಯಾಂಗ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ. ಈ ಘಟನೆ ಬಳಿಕ ಆರೋಪಿಗಳು ಎರಡು ಬಾರಿ ಥಾಮಸ್ಗೆ ವಾರ್ನ್ ಮಾಡಿದ್ದರು.
ಆ ಬಳಿಕವೂ ಗ್ಯಾಂಗ್ ವೀಲಿಂಗ್ ಮುಂದುವರಿಸಿದ್ದ ಕಾರಣ ಥಾಮಸ್ ಮತ್ತೆ ಹಾವಳಿ ಬಗ್ಗೆ ಪ್ರಶ್ನಿಸಿದ್ದ. ಇದೇ ಕಾರಣಕ್ಕೆ ಆರೋಪಿಗಳ ಥಾಮಸ್ನನ್ನು ಕೊಲೆಗೈದಿದ್ದರು.
ಸದ್ಯ ಪ್ರಕರಣದ ಸಂಬಂಧ ಆರು ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಉಳಿದ ಮೂವರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.