Connect with us

    DAKSHINA KANNADA

    ಉಳ್ಳಾಲ ಕೊಣಾಜೆಯಲ್ಲಿ ನೇಣಿಗೆ ಕೊರಳೊಡ್ಡಿದ ಯುವಕ..!

    Published

    on

    ಉಳ್ಳಾಲ: ಕೊಣಾಜೆ ಠಾಣಾ ವ್ಯಾಪ್ತಿಯ ಅಸೈಗೋಳಿ ಸೈಟ್ ಬಳಿ ಯುವಕನೋರ್ವ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ನಡೆದಿದೆ.

    ಅಸೈಗೋಳಿ ಸೈಟ್ ನಿವಾಸಿ ಅಭಿಲಾಷ್ ( 36) ಎಂಬಾತನೇ ಮೃತಪಟ್ಟ ಯುವಕನಾಗಿದ್ದಾನೆ.


    ಮೆಡಿಕಲ್ ರೆಪ್ ಆಗಿ ಕೆಲಸ ಮಾಡುತ್ತಿದ್ದ ಈತ ಇತ್ತೀಚಿನ ಕೆಲ ಸಮಯದಿಂದ ಉದ್ಯೋಗಕ್ಕೂ ತೆರಳದೆ ಮನೆಯಲ್ಲೇ ಉಳಿದುಕೊಂಡಿದ್ದ ಎನ್ನಲಾಗಿದೆ.

    ಎಂದಿನಂತೆ ಬೆಳಿಗ್ಗೆ ಜಾಗಿಂಗ್‌ಗೆ ತೆರಳಿದ್ದ ಈತ ಬುಧವಾರ ಕೂಡಾ‌ ಮನೆಗೆ ಮರಳಿದ್ದು, ಮನೆ ಮಂದಿ ಸಂಬಂಧಿಕರ ಮದುವೆ ಸಮಾರಂಭಕ್ಕೆ ತೆರಳಿದ್ದರು.

    ಇದೇ ಸಂದರ್ಭದಲ್ಲಿ ಮನೆಯೊಳಗೆ ಸೀರೆಯಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.

    ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ‌ ದಾಖಲಾಗಿದೆ.

    DAKSHINA KANNADA

    ಸದನದಲ್ಲಿ ವಿಪಕ್ಷದ ಗದ್ದಲ..! ಜಿಲ್ಲೆಯ ಅತಿವೃಷ್ಠಿ ಬಗ್ಗೆ ಮಾತನಾಡಿದ ಅಶೋಕ್‌ ರೈ..!

    Published

    on

    ಮಂಗಳೂರು ( ವಿಧಾನಸೌಧ)  : ವಿಧಾನ ಸಭಾ ಮುಂಗಾರು ಅಧಿವೇಶದಲ್ಲಿ ವಿರೋಧ ಪಕ್ಷಗಳ ಗದ್ಧಲದ ನಡುವೆ ಮಳೆಗಾಲದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗಿದೆ. ಬಿಜೆಪಿ ಪ್ರಾಬಲ್ಯ ಇರುವ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ವಾಲ್ಮೀಕಿ ಹಗರಣದ ವಿಚಾರದಲ್ಲಿ ಸದನದ ಬಾವಿಗೆ ಇಳಿದು ಕಲಾಪಕ್ಕೆ ಅಡ್ಡಿ ಪಡಿಸಿದ್ದಾರೆ. ಆದ್ರೆ, ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಕ್ಷೇತ್ರಗಳ ಸಮಸ್ಯೆಯ ಬಗ್ಗೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಸದನದ ಗಮನ ಸೆಳೆಯುವ ಮೂಲಕ ಜವಾಬ್ದಾರಿ ತೋರಿಸಿದ್ದಾರೆ.

    ಮುಂಗಾರು ಅಧಿವೇಶನ ಆರಂಭವಾದಲೇ ವಾಲ್ಮೀಕಿ ಹಗರಣದ ಚರ್ಚೆಗೆ ಪಟ್ಟು ಹಿಡಿದಿದ್ದ ವಿರೋಧ ಪಕ್ಷದ ಬೇಡಿಕೆಯಂತೆ, ನಿಯಮ 69 ರ ಅಡಿಯಲ್ಲಿ ಸ್ಪೀಕರ್ ಖಾದರ್ ಅವರು ಚರ್ಚೆಗೆ ಅನುಮತಿ ನೀಡಿದ್ದರು. ಮೂರು ದಿನಗಳ ಕಾಲ ನಿರಂತರ ಚರ್ಚೆ ನಡೆದಿದ್ದು, ನಾಲ್ಕನೇ ದಿನವಾದ ಜುಲೈ 19 ರಂದು ಮುಖ್ಯಮಂತ್ರಿ, ಹಗರಣದ ಕುರಿತಾಗಿ 12 ಪುಟಗಳ ಲಿಖಿತ ಉತ್ತರ ನೀಡಿದ್ದಾರೆ. ಆದ್ರೆ, ಈ ನಡುವೆ ಮಳೆಯಿಂದ ಆಗಿರುವ ಅನಾಹುತದ ಬಗ್ಗೆ ಸರ್ಕಾರದ ಗಮನ ಸೆಳೆಯಲು ಶಾಸಕರಿಗೆ ಅವಕಾಶ ಕಲ್ಪಿಸಲಾಗಿತ್ತು. ಆದ್ರೆ, ಇದಕ್ಕೆ ಅಸ್ಪದ ನೀಡದ ವಿರೋಧ ಪಕ್ಷದ ಸದಸ್ಯರು ಸದನದ ಬಾವಿಗೆ ಇಳಿದು ಕಲಾಪಕ್ಕೆ ಅಡ್ಡಿ ಪಡಿಸಿದ್ರು.

    ಈ ವೇಳೆ ಗದ್ದಲದ ನಡುವೆಯೇ ಶಾಸಕರು ತಮ್ಮ ಕ್ಷೇತ್ರದಲ್ಲಿ ಮಳೆಗಾಲದಿಂದ ಆಗಿರುವ ಹಾನಿಯ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದಾರೆ. ಆದ್ರೆ ಈ ವೇಳೆ ಮಾತನಾಡಿದ ಪುತ್ತೂರು ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ, ಇಡೀ ಜಿಲ್ಲೆಯಲ್ಲಿ ಆಗಿರುವ ಹಾನಿ ಹಾಗೂ ಅದಕ್ಕೆ ಸರ್ಕಾರ ನೀಡುವ ಪರಿಹಾರ ಮೊತ್ತದಲ್ಲಿ ಆಗುತ್ತಿರುವ ತಾರತಮ್ಯದ ಬಗ್ಗೆ ಸದನದ ಗಮನ ಸೆಳೆಯುವ ಮೂಲಕ ಜವಾಬ್ದಾರಿ ಪ್ರದರ್ಶಿಸಿದ್ದಾರೆ. ಸ್ಪೀಕರ್ ಖಾದರ್ ಅವರ ಕ್ಷೇತ್ರವನ್ನೂ ಸೇರಿಸಿ ಕಡಲ್ಕೊರೆತ ಹಾಗೂ ಮಳೆಯಿಂದ ಮನೆಗಳಿಗೆ ಆಗಿರುವ ಹಾನಿಗೆ ಕನಿಷ್ಟ 5 ಲಕ್ಷ ಪರಿಹಾರ ನೀಡುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

    ಇದೇ ವೇಳೆ ಸದನದ ಬಾವಿಗೆ ಇಳಿದು ಪ್ರತಿಭಟನೆ ನಡೆಸಿದ್ದ ವಿರೋಧ ಪಕ್ಷದ ಸದಸ್ಯರು ಸ್ಪೀಕರ್ ವೇದಿಕೆಯಲ್ಲಿ ಇರಿಸಿದ್ದ ಹೂವಿನ ಕುಂಡದ ಹೂವುಗಳನ್ನು ಕಿತ್ತು ಕಿವಿಗಿಟ್ಟು ಸರ್ಕಾರವನ್ನು ಅಣಕಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿದ ಸ್ಪೀಕರ್ ಕಿವಿಯಲ್ಲಿ ಇಟ್ಟಿರುವ ಹೂವನ್ನು ಇಟ್ಟುಕೊಂಡು ಕ್ಷೇತ್ರದ ಜನರ ಮುಂದೆ ಹೋಗಿ ಎಂದು ತೀಕ್ಷ್ಣವಾಗಿ ಹೇಳಿದ್ದು, ಕರಾವಳಿಯ ಶಾಸಕರಿಗೆ ಮುಜುಗರ ಉಂಟು ಮಾಡಿದೆ.

    Continue Reading

    DAKSHINA KANNADA

    ಬಜಪೆ: ಅದ್ಯಪಾಡಿ ಗ್ರಾಮದ 30ಕ್ಕೂ ಹೆಚ್ಚು ಮನೆಗಳು ಜಲಾವೃತ

    Published

    on

    ಬಜಪೆ ಸಮೀಪದ ಅದ್ಯಪಾಡಿ ಗ್ರಾಮದ ಸುಮಾರು 30ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿದ್ದು, 80 ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪಲ್ಗುಣಿ ನದಿಗೆ ಮರವೂರಿನಲ್ಲಿ ನಿರ್ಮಸಿದ ಕಿಂಡಿ ಅಣೆಕಟ್ಟು ಈ ನೆರೆಗೆ ಕಾರಣವಾಗಿದೆ ಎಂದು ಜನರು ಆರೋಪಿಸಿದ್ದಾರೆ.

    ಕಳೆದ ಹತ್ತು ವರ್ಷದಿಂದ ಈ ಗ್ರಾಮದ ಜನರು ಮಳೆಗಾಲದಲ್ಲಿ ಸಂಕಷ್ಟಕ್ಕೆ ಗುರಿಯಾಗುತ್ತಿದ್ದು, ಸಮಸ್ಯೆಗೆ ಇನ್ನೂ ಪರಿಹಾರ ಸಿಕ್ಕಿಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿದ ಕಿಂಡಿ ಅಣೆಕಟ್ಟಿನಿಂದ ಇಲ್ಲಿನ ರೈತರು ಈಗಾಗಲೇ ತಮ್ಮ ಕೃಷಿ ಕಳೆದುಕೊಂಡಿದ್ದಾರೆ. ಪ್ರತಿ ವರ್ಷ ಉಂಟಾಗುವ ನೆರೆಯಿಂದ ಮನೆಗಳೂ ಕುಸಿಯುವ ಭೀತಿ ಎದುರಾಗಿದೆ.

    ಈ ಗ್ರಾಮಕ್ಕೆ ಇಂದು ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿ ಜನರ ಸಂಕಷ್ಟ ಕೇಳಿದ್ದಾರೆ. ದೋಣಿಯ ಮೂಲಕ ಇಲ್ಲಿನ ಮನೆಗಳಿಗೆ ತೆರಳಿದ ಜಿಲ್ಲಾದಿಕಾರಿ ಮನೆಯಲ್ಲಿದ್ದ ವೃದ್ಧರಿಗೆ ಸಾಂತ್ವಾನ ಹೇಳಿದ್ದಾರೆ. ಸುಮಾರು 80 ಜನರು ಇಲ್ಲಿ ವಾಸವಾಗಿದ್ದು, ಜನರನ್ನು ಸ್ಥಳಾಂತರ ಮಾಡಿ ಸುರಕ್ಷಿತ ಜಾಗಕ್ಕೆ ಕಳುಹಿಸಲು ಜಿಲ್ಲಾಧಿಕಾರಿ ಸೂಚಿಸಿದ್ದಾರೆ.

    ಇದೇ ವೇಳೆ ಮಾತನಾಡಿದ ಜಿಲ್ಲಾಧಿಕಾರಿ ಸ್ಥಳೀಯ ಜನರ ಬಳಿ ಮಾತನಾಡಿದ್ದು, ಅವರು ಪ್ರಮುಖ ಸಮಸ್ಯೆಯ ಬಗ್ಗೆ ಗಮನಕ್ಕೆ ತಂದಿದ್ದಾರೆ. ಆ ಬಗ್ಗೆ ಗಮನ ಹರಿಸಲಾಗುವುದು ಆದ್ರೆ ಅದಕ್ಕೂ ಮೊದಲು ಈಗ ಇವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗುವುದು ಎಂದು ಹೇಳಿದ್ದಾರೆ.

    Continue Reading

    BANTWAL

    ವಿಟ್ಲದಲ್ಲಿ ಕುಸಿದು ಬಿದ್ದ ಕೋಳಿ ಶೆಡ್; 1500ಕ್ಕೂ ಅಧಿಕ ಕೋಳಿ ಸಾ*ವು

    Published

    on

    ವಿಟ್ಲ: ಕೋಳಿ ಸಾಕಾಣೆ ಮಾಡುವ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು.

    ಶೆಡ್ಡಿನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾ*ಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

    Continue Reading

    LATEST NEWS

    Trending