ಕೇರಳ: ವಿವಾಹಿತ ಗೆಳೆಯನೊಂದಿಗೆ ತಂಪನೂರಿನಲ್ಲಿರುವ ಹೋಟೆಲ್‌ನಲ್ಲಿ ತಂಗಿದ್ದ ಯುವತಿಯೊಬ್ಬರು ಶನಿವಾರ ತಡರಾತ್ರಿ ಹೋಟೆಲ್‌ನ ರೂಮ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.
ಮೃತಪಟ್ಟ ಯುವತಿ ಕಟ್ಟಕ್ಕಡ ಸಮೀಪದ ವೀರನಕಾವು ನಿವಾಸಿ ಗಾಯತ್ರಿ (23) ಎಂದು ಗುರುತಿಸಲಾಗಿದೆ. ಆಕೆಯ ಜೊತೆಗಿದ್ದ ಪರವೂರು ಮೂಲದ ಪ್ರವೀಣ್ ಪರಾರಿಯಾಗಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಶನಿವಾರ ಮಧ್ಯಾಹ್ನ ವಿಶಾಖಪಟ್ಟಣದಲ್ಲಿ ಇಬ್ಬರೂ ಒಂದು ಹೋಟೆಲ್‌ನಲ್ಲಿ ರೂಮ್ ಮಾಡಿಕೊಂಡಿದ್ದರು. ಹೋಟೆಲ್ ಸಿಬ್ಬಂದಿಗೆ ಪ್ರವೀಣ್ ಕಾಲ್ ಮಾಡಿ , ಮಧ್ಯರಾತ್ರಿಯ ವೇಳೆಗೆ ತನ್ನ ಸ್ನೇಹಿತೆ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದು, ಹೋಟೆಲ್ ಸಿಬ್ಬಂದಿ ತಕ್ಷಣ ಕೊಠಡಿಯನ್ನು ಪರಿಶೀಲಿಸಿದಾಗ ಬಾಯಿಂದ ನೊರೆ ಬಂದು ಮಹಿಳೆ ಸಾವನ್ನಪ್ಪಿರುವುದು ಕಂಡು ಬಂದಿದೆ.
ಅಷ್ಟರಲ್ಲಿ ಆ ವ್ಯಕ್ತಿ ಹೋಟೆಲ್‌ನಿಂದ ಪರಾರಿಯಾಗಿದ್ದಾರೆ. ಇವರಿಬ್ಬರು ನಗರದ ಆಭರಣ ಮಳಿಗೆಯೊಂದರಲ್ಲಿ ಉದ್ಯೋಗಿಗಳಾಗಿದ್ದರು.
ಮದುವೆಯಾಗಿರುವ ಪ್ರವೀಣ್ ಗಾಯತ್ರಿ ಜೊತೆ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ಈ ವಿಚಾರವಾಗಿ ಪ್ರವೀಣ್ ಕುಟುಂಬದಲ್ಲಿ ಜಗಳವಾಗಿತ್ತು.
ಫೋರೆನ್ಸಿಕ್ ತಜ್ಞರು ಹೋಟೆಲ್ ಕೊಠಡಿಗೆ ಭೇಟಿ ನೀಡಿ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಗಾಯತ್ರಿ ವಿಷ ಸೇವಿಸಿ ಸಾವನ್ನಪ್ಪಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.