ಮಂಗಳೂರು: ಕರ್ನಾಟಕ ಯಕ್ಷಗಾನ ಅಕಾಡಮಿಯ ಕೃತಿ ಬಿಡುಗಡೆ ಕಾರ್ಯಕ್ರಮ ಸುರತ್ಕಲ್ ಗೋವಿಂದದಾದ ಕಾಲೇಜಿನಲ್ಲಿ ಜರಗಿತು. ಅಕಾಡಮಿಯ ಅಧ್ಯಕ್ಷ ಡಾ. ಜಿ.ಎಲ್.ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಮಂಗಳೂರು ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಪಿ.ಎಸ್. ಯಡಪಡಿತ್ತಾಯ ,ಶಾಸಕ ಡಾ.ವೈ.ಭರತ್ ಶೆಟ್ಟಿ ,ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲ ಶ್ರೀ ಕೃಷ್ಣಮೂರ್ತಿ ಕೃತಿ ಬಿಡುಗಡೆ ಮಾಡಿದರು.
ಪ್ರೊ.ಎಂ.ಎ.ಹೆಗಡೆ ಹಾಗೂ ಯೋಗೀಶ್ ರಾವ್ ಚಿಗುರುಪಾದೆ ಸಂಪಾದಕತ್ವದ ” ಪಾರ್ತಿ ಸುಬ್ಬ – ಬದುಕು ಬರಹ ” ಕೃತಿಯನ್ನು ಉಪನ್ಯಾಸಕಿ ಡಾ.ಸುಧಾರಾಣಿ ಪರಿಚಯಿಸಿದರು.
ಡಾ.ರಮಾನಂದ ಬನಾರಿಯವರ ” ಯಕ್ಷಗಾನ ಸಂವಾದ ಭೂಮಿಕೆ” ಕೃತಿ ಪರಿಚಯವನ್ನು ಅರ್ಥದಾರಿ ಸದಾಶಿವ ಆಳ್ವ ತಲಪಾಡಿ ಹಾಗೂ ಕದ್ರಿ ನವನೀತ ಶೆಟ್ಟಿ ಸಂಪಾದಕತ್ವದ ” ತುಳು ಯಕ್ಷಗಾನ ಪ್ರಸಂಗ ಸಂಪುಟ- 7 ಪ್ರಸಂಗಗಳ ಜೊಂಕಿಲಿ ” ಯನ್ನು ಯಕ್ಷಗಾನ ವಿದ್ವಾಂಸ ಪೊಳಲಿ ನಿತ್ಯಾನಂದ ಕಾರಂತರು ಪರಿಚಯಿಸಿದರು.
ಅಕಾಡಮಿಯ ರಿಜಿಸ್ಟ್ರಾ ರ್ ಎಚ್.ಎಸ್.ಶಿವರುದ್ರಪ್ಪ ಪ್ರಸ್ತಾವಿಸಿದರು.
ಸದಸ್ಯ ಸಂಚಾಲಕ ಯೋಗೀಶ್ ರಾವ್ ಚಿಗುರುಪಾದೆ ಸ್ಚಾಗತಿಸಿ, ಸದಸ್ಯ ದಾಮೋದರ ಶೆಟ್ಟಿ ಧನ್ಯವಾದ ಸಮರ್ಪಿಸಿದರು.
ಸದಸ್ಯ ಸಂಚಾಲಕ ಕದ್ರಿ ನವನೀತ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಪ್ರಸಂಗ ಕರ್ತ ದಿ. ಬೊಟ್ಟಿಕೆರೆ ಪುರುಷೋತ್ತಮ ಪೂಂಜರ ಪತ್ನಿ ಶೋಭಾ ಪೂಂಜ ಹಾಗೂ ಪ್ರಸಂಗಕರ್ತ ಗುರುವಪ್ಪ ಬಾಯಾರು ಅವರನ್ನು ಗೌರವಿಸಲಾಯಿತು.