Connect with us

    DAKSHINA KANNADA

    ಫೆ.6ಕ್ಕೆ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ – 2023-24ರ ರಾಜ್ಯಮಟ್ಟದ ಕಾರ್ಯಕ್ರಮ

    Published

    on

    ಮೂಡಬಿದಿರೆ: ಆಳ್ವಾಸ್ ವಿದ್ಯಾಗಿರಿ ಮೂಡುಬಿದಿರೆಯಲ್ಲಿ ಜ.28ರಂದು ನಡೆಯಲಿದ್ದ ಮಂಗಳೂರು ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಇದರ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯ ಯಕ್ಷಧ್ರುವ ವಿದ್ಯಾರ್ಥಿ ಸಮ್ಮಿಲನ – 2023-24 ರಾಜ್ಯಮಟ್ಟದ ಕಾರ್ಯಕ್ರಮವು ಪರೀಕ್ಷಾ ಕಾರಣದಿಂದಾಗಿ ಫೆ.6ರ ಮಂಗಳವಾರಕ್ಕೆ ಮುಂದೂಡಲ್ಪಟ್ಟಿದೆ.

    ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ (ರಿ.) ಮೂಡುಬಿದಿರೆ ಸಹಯೋಗದೊಂದಿಗೆ ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್, ಮೂಡುಬಿದಿರೆ ಇಲ್ಲಿ ನಡೆಯಲಿರುವ ಈ ಕಾರ್ಯಕ್ರಮವು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಯಕ್ಷಗಾನ ಕಲೆಯಾಧಾರಿತ ರಾಜ್ಯಮಟ್ಟದ ಸ್ಪರ್ಧೆಯನ್ನು ಆಯೋಜಿಸಿದೆ. ಪ್ರಸಕ್ತ ಸ್ಪರ್ಧೆಗಳಲ್ಲಿ ರಾಜ್ಯದ ಯಾವುದೇ ಸರಕಾರಿ, ಅನುದಾನಿತ, ಖಾಸಗಿ ಶಾಲಾ ವಿದ್ಯಾರ್ಥಿಗಳಿಗೆ ಭಾಗವಹಿಸಲು ಮುಕ್ತ ಅವಕಾಶವಿದೆ. ಕಾಸರಗೋಡು ಸಹಿತ ಇತರ ಹೊರ ರಾಜ್ಯಗಳ ಶಾಲಾ ವಿದ್ಯಾರ್ಥಿಗಳಿಗೂ ಈ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದ್ದು ಸ್ಪರ್ಧೆಯಲ್ಲಿ 6 ರಿಂದ 10 ನೇ ತರಗತಿಯೊಳಗಿನ ವಿದ್ಯಾರ್ಥಿಗಳು ಮಾತ್ರ ಭಾಗವಹಿಸಬಹುದಾಗಿದೆ. ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ (ರಿ.) ಮಂಗಳೂರು ಪ್ರಸಕ್ತ ವರ್ಷದಿಂದ ದ.ಕ ಜಿಲ್ಲೆಯ ಒಟ್ಟು 38 ಶಾಲೆಗಳಲ್ಲಿ ಉಚಿತವಾಗಿ ಯಕ್ಷಶಿಕ್ಷಣವನ್ನು ನೀಡುತ್ತಿದ್ದು ಸುಮಾರು 3,000 ವಿದ್ಯಾರ್ಥಿಗಳು ಯಕ್ಷಗಾನ ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಆ ವಿದ್ಯಾರ್ಥಿಗಳಿಗೆ ಮತ್ತು ರಾಜ್ಯದ ಯಕ್ಷಗಾನಾಸಕ್ತ ವಿದ್ಯಾರ್ಥಿಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶ ಸಹಿತ ಯಕ್ಷಗಾನ ಕಲೆಯಾಧಾರಿತ ಸ್ಪರ್ಧೆ ಇದಾಗಿದ್ದು, ಎಲ್ಲ ಸ್ಪರ್ಧೆಗಳು ಕನ್ನಡ ಭಾಷಾ ಮಾಧ್ಯಮದಲ್ಲಿ ನಡೆಯಲಿದೆ.

    “ಯಕ್ಷರೂಪಕ‌” ಸ್ಪರ್ಧೆಯಲ್ಲಿ ಯಕ್ಷಧ್ರುವ- ಯಕ್ಷಶಿಕ್ಷಣ ಯೋಜನೆಯಡಿ ಬರುವ ಶಾಲೆಯ ತಂಡಗಳಿಗೆ ಮಾತ್ರ ಭಾಗವಹಿಸಲು ಅವಕಾಶವಿದ್ದು, ಉಳಿದ ಸ್ಪರ್ಧೆಗಳಲ್ಲಿ ಬೇರೆಲ್ಲಾ ಶಾಲೆಗಳ ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ಪ್ರಸಕ್ತ ಯಕ್ಷಗಾನ ಸ್ಪರ್ಧೆಗಳಲ್ಲಿ ಯಕ್ಷರೂಪಕ ಸ್ಪರ್ಧೆ (ಯಕ್ಷಗಾನದ ವೇಷಭೂಷಣ ಧರಿಸಿ ಯಕ್ಷಗಾನೀಯ ನಾಟ್ಯದೊಂದಿಗೆ ಯಾವುದೇ ಆಖ್ಯಾನಗಳನ್ನು ಪ್ರಸ್ತುತಪಡಿಸಬಹುದಾದ ಸ್ಪರ್ಧೆ), ಯಕ್ಷ ರಸಪ್ರಶ್ನೆ (ಯಕ್ಷಗಾನ ಕಲೆಗೆ ಸಂಬಂಧಿಸಿದ ರಸಪ್ರಶ್ನೆ ಸ್ಪರ್ಧೆ), ಯಕ್ಷಜ್ಞಾನ ಪರೀಕ್ಷಾ ಪಂಥ (ಸ್ಪರ್ಧಾ ಸ್ಥಳದಲ್ಲಿ ತೋರಿಸುವ ಯಕ್ಷಗಾನ ಕಲೆಗೆ ಸಂಬಂಧಿಸಿದ ಪರಿಕರಗಳನ್ನು ಗಮನಿಸಿ ಆ ಬಳಿಕ ನೆನಪಿಸಿ ಗುರುತಿಸುವ ಸ್ಪರ್ಧೆ), ಯಕ್ಷ ಸ್ವಗತ ಮಾತುಗಾರಿಕೆ ಸ್ಪರ್ಧೆ (ಯಕ್ಷಗಾನದಲ್ಲಿ ಬರುವ ಯಾವುದೇ ಪಾತ್ರಗಳ ಪೀಠಿಕೆ ಅಥವಾ ಸ್ವಗತ ಮಾತನಾಡುವ ಸ್ಪರ್ಧೆ) ಯಕ್ಷಲೇಖನ ಸ್ಪರ್ಧೆ (ಯಕ್ಷಗಾನ ಕಲೆಗೆ ಸಂಬಂಧಿಸಿದ ಪ್ರಬಂಧ ಸ್ಪರ್ಧೆ), ಶ್ಲೋಕ ಕಂಠಪಾಠ ಸ್ಪರ್ಧೆ (ಸ್ಪರ್ಧಾ ಸ್ಥಳದಲ್ಲಿ ನೀಡುವ ಶ್ಲೋಕವನ್ನು ಕಂಠಪಾಠ ಮಾಡಿ ಹೇಳುವ ಸ್ಪರ್ಧೆ), ಯಕ್ಷರಂಗು ಮುಖವರ್ಣಿಕೆ ಸ್ಪರ್ಧೆ (ಯಕ್ಷಗಾನ ಬಣ್ಣಗಾರಿಕೆ- ಮುಖವರ್ಣಿಕೆಗೆ ಸಂಬಂಧಿಸಿದ ಸ್ಪರ್ಧೆ) ನಡೆಯಲಿದೆ.

    ಯಕ್ಷ ಶಿಕ್ಷಣ ಯೋಜನೆಯ ಒಟ್ಟು 38 ಶಾಲೆಗಳ ಸುಮಾರು 42 ತಂಡಗಳ ನಡುವೆ ಎರಡು ವೇದಿಕೆಗಳಲ್ಲಿ ಯಕ್ಷರೂಪಕ ಸ್ಪರ್ಧೆಯು ನಡೆಯಲಿದ್ದು ಎರಡು ಪ್ರತ್ಯೇಕ ವೇದಿಕೆಗಳ ವಿಜೇತ ತಂಡಕ್ಕೆ ತಲಾ ಪ್ರಥಮ ತಂಡ ಪ್ರಶಸ್ತಿ (30,000/-) ದ್ವಿತೀಯ ತಂಡ ಪ್ರಶಸ್ತಿ (20,000/-) ತೃತೀಯ ತಂಡ ಪ್ರಶಸ್ತಿ (15,000/-) ಯನ್ನು ನೀಡಿ ಗೌರವಿಸಲಿದೆ. ಯಕ್ಷ ರೂಪಕದ ಶಿಸ್ತಿನ ತಂಡಕ್ಕೆ ಶಿಸ್ತಿನ ತಂಡ ಪ್ರಶಸ್ತಿ (10,000/-)ಯನ್ನು ನೀಡಲಿದೆ. ಇತರ ವೈಯಕ್ತಿಕ ಮತ್ತು ತಂಡ ಸ್ಪರ್ಧೆಯಲ್ಲಿನ ವಿಜೇತ ವಿದ್ಯಾರ್ಥಿಗಳಿಗೆ, ಪ್ರಥಮ- 5,000/-, ದ್ವಿತೀಯ- 3,000/-ತೃತೀಯ- 2,000/- ರೂ ಸಹಿತ ಪ್ರಮಾಣ ಪತ್ರ ನೀಡಿ ಗೌರವಿಸಲಿದೆ. ಭಾಗವಹಿಸುವ ಸ್ಪರ್ಧಾಳುಗಳು ಸಂಬಂಧಪಟ್ಟ ಶಾಲಾ ಮುಖ್ಯೋಪಾಧ್ಯಾಯರಿಂದ ಪ್ರವೇಶ ಪತ್ರ ಹಾಗೂ ದೃಢೀಕರಣ ಪತ್ರ ಸಲ್ಲಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸ್ಪರ್ಧೆಗೆ ಹೆಸರು ನೋಂದಾಯಿಸಲು 25-01-2024 ಕೊನೆಯ ದಿನಾಂಕವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಕದ್ರಿ ನವನೀತ ಶೆಟ್ಟಿ (9448123061) ದೀವಿತ್ ಎಸ್ ಕೆ ಪೆರಾಡಿ (9845109989) ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

    Click to comment

    Leave a Reply

    Your email address will not be published. Required fields are marked *

    DAKSHINA KANNADA

    ಸೊಸೈಟಿಯಿಂದ ಹಣ ಡ್ರಾ ಮಾಡಿ ನಾಪತ್ತೆಯಾಗಿದ್ದ ವ್ಯಕ್ತಿಯ ಶ*ವ ಪತ್ತೆ!

    Published

    on

    ಪುತ್ತೂರು  : ನಿನ್ನೆ(ಡಿ.5) ಸೊಸೈಟಿಯೊಂದರಿಂದ ಹಣ ಡ್ರಾ ಮಾಡಿ ತೆರಳಿದ್ದ ವ್ಯಕ್ತಿಯೊಬ್ಬರು ಶ*ವವಾಗಿ ಪತ್ತೆಯಾಗಿದ್ದಾರೆ. ಪುತ್ತೂರಿನ ಪಡ್ಡಾಯೂರು ಎಂಬಲ್ಲಿನ ನಿವಾಸಿಯಾಗಿರುವ ನಂದಕುಮಾರ್(61) ಎಂಬವರು ಅನುಮಾನಸ್ಪದವಾಗಿ ಸಾ*ವನ್ನಪ್ಪಿದ್ದಾರೆ.

    ನಂದಕುಮಾರ್ ಪುತ್ತೂರು ವಿವೇಕನಾಂದ ಕಾಲೇಜಿನ ನಿವೃತ್ತ ಸಿಬ್ಬಂದಿಯಾಗಿದ್ದು, ಡಿಸೆಂಬರ್ 5 ರಂದು ಮನೆಯಿಂದ ಪುತ್ತೂರು ಪೇಟೆಗೆ ಹೋಗಿ ಬರುವುದಾಗಿ ಹೊರಟಿದ್ದರು. ಈ ವೇಳೆ ಸಂಬಂಧಿಯೊಬ್ಬರಿಗೆ ಹಣ ನೀಡುವ ಸಲುವಾಗಿ ಸೊಸೈಟಿಯಿಂದ 1.40 ಲಕ್ಷ ರೂ. ಹಣ ಡ್ರಾ ಮಾಡಿದ್ದರು ಎಂಬುದಾಗಿ ಮಾಹಿತಿ ಲಭ್ಯವಾಗಿದೆ.

    ಇಂದು(ಡಿ.6)  ಪುತ್ತೂರು ಸಾಲ್ಮರ ಸಮೀಪದ ರೋಟರಿಪುರ ಎಂಬಲ್ಲಿಯ ನೀರು ಹರಿಯುವ ತೋಡಿನಲ್ಲಿ ಇವರ ಮೃ*ತದೇಹ ಪತ್ತೆಯಾಗಿದೆ. ನಿನ್ನೆಯಿಂದ ನಾಪತ್ತೆಯಾಗಿದ್ದ ನಂದಕುಮಾರ್ ಎಲ್ಲಿ ಹೋಗಿದ್ದರು ಎಂಬ ಸುಳಿವು ಇರಲಿಲ್ಲ. ಆದ್ರೆ ಅವರು ಹಣ ಡ್ರಾ ಮಾಡಿಕೊಂಡಿರುವ ಮಾಹಿತಿ ಇತ್ತಾದ್ರೂ ಮೃ*ತದೇಹದ ಬಳಿ ಸಿಕ್ಕ ಚೀಲದಲ್ಲಿ ಯಾವುದೇ ಹಣ ಕಂಡು ಬಂದಿಲ್ಲ. ಹೀಗಾಗಿ ಹಣಕ್ಕಾಗಿ ನಂದಕುಮಾರ್ ಅವರನ್ನು ಕೊ*ಲೆ ಮಾಡಿ ಇಲ್ಲಿ ಎಸೆದಿರುವ ಶಂಕೆ ವ್ಯಕ್ತವಾಗಿದೆ.

    ಇದನ್ನೂ ಓದಿ : Viral Video: ಜಾಯಿಂಟ್​ ವೀಲ್​ನಿಂದ ಹೊರಬಿದ್ದ ಬಾಲಕಿ; ರಕ್ಷಣಾ ಕಾರ್ಯಚರಣೆಯೇ ರೋಚಕ

    ಸ್ಥಳಕ್ಕೆ ಆಗಮಿಸಿದ ಪುತ್ತೂರು ನಗರ ಪೊಲೀಸರು ಸ್ಥಳ ಪರಿಶೀಲನೆ ನಡೆಸಿದ್ದು, ಕೇಸು ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

    Continue Reading

    DAKSHINA KANNADA

    ಕೊಣಾಜೆ : ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಮಣ್ಣು ದಿನಾಚರಣೆ

    Published

    on

    ಮಂಗಳೂರು : ವಿಶ್ವವಿದ್ಯಾನಿಲಯದ ಜೈವಿಕ ವಿಜ್ಞಾನ ವಿಭಾಗ‌ ಮತ್ತು ಮಂಗಳೂರಿನ ಯು.ಆರ್ ಫೌಂಡೇಶನ್ ಸಹಯೋಗದೊಂದಿಗೆ ವಿಶ್ವ ಮಣ್ಣು ದಿನಾಚರಣೆ ಕಾರ್ಯಕ್ರಮ ಮಂಗಳಗಂಗೋತ್ರಿಯ ಪ್ರೊ.ಯು.ಆರ್.ರಾವ್ ಸಭಾಂಗಣದಲ್ಲಿ ನಡೆಯಿತು‌.

    ಕಾರ್ಯಕ್ರಮವನ್ನು ಯು.ಆರ್ ಫೌಂಡೇಶನ್‌ ನ ಅಧ್ಯಕ್ಷ ಎ.ಎಂ ಉಸ್ಮಾನ್ ಚಾಲನೆ ನೀಡಿದರು. ಬಳಿಕ  ಮಾತನಾಡಿದ ಅವರು, ಭಾರತವು ಕೃಷಿ ಆಧಾರಿತ ದೇಶವಾಗಿದೆ. ಮಣ್ಣಿನ ಫಲವತ್ತತೆ ಕಾಪಾಡುವ ಹೊಣೆಗಾರಿಕೆ ರೈತರ ಮೇಲೆ ಮಾತ್ರ ಹೊರಿಸುವಂತಿಲ್ಲ. ಬದಲಾಗಿ, ಪರಿಸರ ಮಾಲಿನ್ಯವನ್ನು ಕಡಿಮೆ ಮಾಡುವ ಮೂಲಕ, ಮನೆ ತೋಟಗಾರಿಕೆಯನ್ನು ಅಭ್ಯಾಸ ಮಾಡುವ ಮೂಲಕ ಮತ್ತು ಸಾವಯವ ತ್ಯಾಜ್ಯವನ್ನು ಗೊಬ್ಬರವಾಗಿ ಪರಿವರ್ತಿಸುವ ಮೂಲಕ ಪ್ರತಿಯೊಬ್ಬರೂ ಕೊಡುಗೆ ನೀಡಬೇಕು ಎಂದು ಹೇಳಿದರು.

    ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ  ಡಾ. ಹರೀಶ್ ಶೆಣೈ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ್ದರು. ಜೈವಿಕ ವಿಜ್ಞಾನ ವಿಭಾಗದ ಅಧ್ಯಕ್ಷೆ ಪ್ರೊ.ತಾರಾವತಿ ಎನ್.ಸಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಣ್ಣಿನ ದಿನಾಚರಣೆಯ ಅಂಗವಾಗಿ ಮಣ್ಣು ಸಂರಕ್ಷಣೆ ಕುರಿತು ಚಿತ್ರಕಲಾ ಸ್ಪರ್ಧೆ ಮತ್ತು ಇದೇ ವಿಷಯದ ಕುರಿತು ಸ್ಲೋಗನ್ ಬರವಣಿಗೆ ಸ್ಪರ್ಧೆಯನ್ನು ಅಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.

    Continue Reading

    DAKSHINA KANNADA

    ಇಂಟ್ರಸ್ಟಿಂಗ್ ಸ್ಟೋರಿ : ಥೈಲ್ಯಾಂಡ್ ಯುವತಿಯ ಕೈ ಹಿಡಿದ ಮಂಗಳೂರು ಹುಡುಗ !!

    Published

    on

    ಮಂಗಳೂರು : ಥೈಲ್ಯಾಂಡ್ ಹಾಗೂ ಮಂಗಳೂರಿಗೆ ವೈವಾಹಿಕ ನಂಟು ಬೆಸೆದಿದೆ. ಥೈಲ್ಯಾಂಡ್ ನಲ್ಲಿ ಅರಳಿದ ಪ್ರೇಮಕಥೆ ಮಂಗಳೂರಿನಲ್ಲಿ ಸಪ್ತಪದಿ ತುಳಿಯೋ ಮೂಲಕ ಸುಂದರ ತಿರುವು ಪಡೆದಿದೆ. ಮಂಗಳೂರಿನ ಯುವಕ ಥೈಲ್ಯಾಂಡ್ ಯುವತಿಯ ಮುದ್ದಾದ ಪ್ರೇಮ ವಿವಾಹದ ಆಸಕ್ತದಾಯಕ ಕಥೆ ಇಲ್ಲಿದೆ.

    ‘ಸಪ್ತಪದಿ ಇದು ಸಪ್ತಪದಿ .ಇದು ಏಳು ಜನುಮಗಳ ಅನುಬಂ’ಧ ಎಂಬಂತೆ ಮಂಗಳೂರಿನಲ್ಲೊಂದು ವಿಶೇಷ ವಿವಾಹ ನಡೆದಿದೆ. ನಮ್ಮ ಬದುಕಿಗೆ ಯಾರು ಬಾಳ ಸಂಗಾತಿಯಾಗುತ್ತಾರೆ? ಹೃದಯ ಸುಪ್ಪತ್ತಿಗೆಯನ್ನ ಅಲಂಕರಿಸುತ್ತಾರೆ ಅನ್ನೋ ದೈವ ನಿರ್ಣಯವೇ ಸರಿ. ಇದಕ್ಕೆ ಸಾಕ್ಷಿಯಾಗಿದೆ ಇಂಡಿಯಾ -ಥೈಲ್ಯಾಂಡ್ ಲವ್ ಸ್ಟೋರಿ. ದೂರದ ಥೈಲ್ಯಾಂಡ್ ದೇಶಕ್ಕೂ ಭಾರತಕ್ಕೂ ಸಂಬಂಧ ಕೂಡಿ ಬಂದಿದೆ. ಥೈಲ್ಯಾಂಡ್ ಸುಂದರಿ ಅಪ್ಪಟ ಕನ್ನಡಿಗನಿಗೆ ಜೋಡಿಯಾಗುವ ಮೂಲಕ ತನ್ನ ಪ್ರೇಮಕಥೆಗೆ ಸುಂದರ ತಿರುವು ನೀಡಿದ್ದಾಳೆ.

    ಅಪ್ಪಟ ಹಿಂದೂ ಸಂಪ್ರದಾಯದಂತೆ ಮದುವೆ :

    ಕಡಲ ನಗರಿ ಮಂಗಳೂರು ಈ ವಿಶೇಷ ಜೋಡಿ ಅಪೂರ್ವ ಸಂಗಮಕ್ಕೆ ಸಾಕ್ಷಿಯಾಗಿದೆ. ಕಾಲಲ್ಲಿ ಕಾಲುಂಗುರ ಮೈ ಮೇಲೆ ಧಾರೆ ಸೀರೆ ಹಣೆಯಲ್ಲಿ ಕುಂಕುಮ ಕೊರಳಲ್ಲಿ ತಾಳಿ ನೋಡೋಕೆ ಥೇಟ್ ಭಾರತೀಯ ನಾರಿಯಂತೆ ಕಾಣಿಸುತ್ತಿರುವ ಈಕೆ ಥೈಲ್ಯಾಂಡ್ ದೇಶದ ಯುವತಿ ಮೊಂತಕಾನ್ ಸಸೂಕ್. ಆದರೆ ಈಗ ಈಕೆ ಮಂಗಳೂರಿನ ಸೊಸೆ. ಮಂಗಳೂರಿನ ಗೋರಿಗುಡ್ಡೆ ನಿವಾಸಿ ಪೃಥ್ವಿ ರಾಜ್ ಅಮೀನ್ ನೊಂದಿಗೆ ಈಕೆಯ ವಿವಾಹವಾಗಿದೆ ಅದೂ ಅಪ್ಪಟ ಭಾರತೀಯ ಸಂಪ್ರದಾಯದಂತೆ ಮಂಗಳೂರಿನ ಮಂಗಳದೇವಿ ದೇವಸ್ಥಾನದಲ್ಲಿ ಶಾಸ್ತ್ರೋಕ್ತವಾಗಿ ಈ ವಿವಾಹ ಕಾರ್ಯಕ್ರಮ ಜರುಗಿದೆ. ಮಂಗಳಾದೇವಿಯ ಆಶೀರ್ವಾದ ಪಡೆದು ನವ ವಧು ವರರು ಹೊಸ ಬಾಳ ಪಯಣವನ್ನ ಆರಂಭಿಸಿದ್ದಾರೆ. ಇನ್ನು ಮುಂದೆ ಥೈಲ್ಯಾಂಡ್ ತ್ಯಜಿಸಿ ತನ್ನ ಪತಿಯೊಂದಿಗೆ ಭಾರತದಲ್ಲೇ ಮೊಂತಕಾನ್ ಸಸೂಕ್ ಸಂಸಾರ ನಡೆಸಲಿದ್ದಾರೆ .

    ಮಂಗಳೂರಿನ ಪೃಥ್ವಿರಾಜ್ ಬೆಂಗಳೂರಿನಲ್ಲಿ ಐಟಿ ಉದ್ಯೋಗಿ ಕಳೆದ ಕೆಲ ತಿಂಗಳ ಹಿಂದೆ ಥೈಲ್ಯಾಂಡ್ ಗೆ ಭೇಟಿ ನೀಡಿದಾಗ ಐಟಿ ಉದ್ಯೋಗಿಯೇ ಆಗಿರುವ ಮೊಂತಕಾನ್ ಸಸೂಕ್ ಪರಿಚಯವಾಗಿದೆ .ಪ್ರೇಮಿಗಳ ದಿನದಂದು ಶುರುವಾದ ಈ ಪರಿಚಯ ಪ್ರೀತಿಗೆ ತಿರುಗಿದೆ.ಎರಡು ಮನಸ್ಸುಗಳು ಒಂದಾದ ಮೇಲೆ ಇಬ್ಬರು ಮದುವೆಯಾಗುವ ನಿರ್ಧಾರಕ್ಕೆ ಬಂದಿದ್ದಾರೆ .ಮನೆಯವರಿಗೆ ಈ ವಿಚಾರ ತಿಳಿಸಿದ್ದಾರೆ .ಮೊದಲಿಗೆ ಒಲ್ಲೆ ಎಂದ ಪೃಥ್ವಿರಾಜ್ ಕುಟುಂಬಸ್ಥರು ಥೈಲ್ಯಾಂಡ್ ಸುಂದರಿಯ ಗುಣ ನಡೆತೆಗೆ ಫಿದಾ ಆಗಿದ್ದಾರೆ.ಮಂಗಳೂರಿನಲ್ಲಿ ಹುಡುಕಿದರೂ ಇಂತಹ ಹುಡುಗಿ ಸಿಗೋದಿಲ್ಲ ಎಂದು ತಮ್ಮ ಏಕೈಕ ಪುತ್ರನಿಗೆ ತಾನು ಪ್ರೀತಿಸಿದ ಯುವತಿಯೊಂದಿಗೆ ಧಾರೆಯೆರೆದಿದ್ದಾರೆ .ಹಸೆಮಣೆ ಏರಿದ ಈ ಸುಂದರ ಜೋಡಿಯನ್ನ ಕಣ್ತುಂಬಿಕೊಳ್ಳೋಕೆ ಸಂಬಂಧಿಕರು ಆಗಮಿದ್ದರು. ಥೈಲ್ಯಾಂಡ್ ನಲ್ಲಿ ಅರಳಿದ ಪ್ರೇಮ ಕಥೆ ಭಾರತದಲ್ಲಿ ಸಾಂಸಾರಿಕ ಜೀವನಕ್ಕೆ ಕಾಲಿಡುವ ಮೂಲಕ ಸುಂದರ ತಿರುವು ಪಡೆದ ಸರಳ ಪ್ರೇಮಕಥೆ ಇದು.

    Continue Reading

    LATEST NEWS

    Trending