ಮುಂಬೈ: ಸಾಕಿನಾಕಾ ಏರಿಯಾದಲ್ಲಿ ಟೆಂಪೋ ಮೇಲೆ ಅತ್ಯಾಚಾರಕ್ಕೆ ಒಳಗಾಗಿದ್ದ ಮಹಿಳೆ ಮೃತಪಟ್ಟಿದ್ದಾರೆ. ಸುಮಾರು 33 ಗಂಟೆಗಳ ಕಾಲ ಜೀವನ್ಮರಣ ಹೋರಾಟ ನಡೆಸಿ,
ಈಗ ಉಸಿರು ಚೆಲ್ಲಿದ್ದಾರೆ. ಆರೋಪಿ ಈಕೆಯ ಮೇಲೆ ಅತ್ಯಾಚಾರ ಮಾಡಿದ್ದಲ್ಲದೆ, ಗುಪ್ತಾಂಗಕ್ಕೆ ಕಬ್ಬಿಣದ ರಾಡ್ ಹಾಕಿ ಚಿತ್ರಹಿಂಸೆ ನೀಡಿದ್ದ.
ಒಂದು ಸರ್ಜರಿ ಆಗಿದ್ದರೂ ಮಹಿಳೆ ಚೇರಿಸಿಕೊಂಡಿರಲಿಲ್ಲ. ಎಚ್ಚರವೂ ಆಗಿರಲಿಲ್ಲ. ಇದೀಗ ಆಕೆ ಮೃತಪಟ್ಟಿದ್ದಾಗಿ ಮುಂಬೈ ಪೊಲೀಸರು ತಿಳಿಸಿದ್ದಾರೆ.
ಟೆಂಪೋದಲ್ಲಿ ಕೂಡಿಹಾಕಿ ಅತ್ಯಾಚಾರ: ರಾಡ್ನಿಂದ ಚಿತ್ರ ಹಿಂಸೆ- ಮಹಿಳೆ ಗಂಭೀರ