Wednesday, June 29, 2022

ಟೆಂಪೋದಲ್ಲಿ ಕೂಡಿಹಾಕಿ ಅತ್ಯಾಚಾರ: ರಾಡ್​​ನಿಂದ ಚಿತ್ರ ಹಿಂಸೆ- ಮಹಿಳೆ ಗಂಭೀರ

ಮುಂಬೈ: ಟೆಂಪೋದಲ್ಲಿ ಕೂಡಿಹಾಕಿ 34 ವರ್ಷದ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸಿ, ಆಕೆಯ ಗುಪ್ತಾಂಗಕ್ಕೆ ಕಬ್ಬಿಣದ ರಾಡ್​​ನಿಂದ ಚಿತ್ರ ಹಿಂಸೆ ನೀಡಿದ ಘಟನೆ ಮುಂಬೈನ ಸಾಕಿನಾಕಾ ಪ್ರದೇಶದ ಖೈರಾನಿ ರಸ್ತೆಯಲ್ಲಿ ನಡೆದಿದೆ. ಸಂತ್ರಸ್ತೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.


ಘಟನೆ ನಡೆದ ಕೆಲವೇ ಹೊತ್ತಿನಲ್ಲಿ ಆರೋಪಿ ಮೋಹನ್​ ಚೌಹಾಣ್​​ (45)ನನ್ನು ಪೊಲೀಸರು ಬಂಧಿಸಿದ್ದಾರೆ. ಸಂತ್ರಸ್ತೆಯನ್ನು ನಿನ್ನೆಯೇ ಆಸ್ಪತ್ರೆಗೆ ದಾಖಲಿಸಲಾಗಿದ್ದು,

ಇನ್ನೂ ಪ್ರಜ್ಞೆ ಬಂದಿಲ್ಲ. ಆರೋಗ್ಯ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಖೈರಾನಿ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಮಹಿಳೆಯನ್ನು ಥಳಿಸುತ್ತಿದ್ದಾನೆ ಎಂಬ ಮಾಹಿತಿ ಬಂದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದರು.

ಅವರು ಹೋಗುವಷ್ಟರಲ್ಲಿ ಆ ಮಹಿಳೆ ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಗಲೇ ಎಚ್ಚರ ತಪ್ಪಿದ್ದರು. ಕೂಡಲೇ ಮಹಿಳೆಯನ್ನು ರಾಜ್ವಾಡಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಆ ಮಹಿಳೆ ಮೇಲೆ ಅತ್ಯಾಚಾರ ಆಗಿದ್ದು ಪ್ರಾಥಮಿಕ ತನಿಖೆಯಲ್ಲೇ ಗೊತ್ತಾಗಿದೆ.

ಅಲ್ಲಿಯೇ ನಿಂತಿದ್ದ ಟೆಂಪೋ ಮೇಲೆ ಕೂಡ ರಕ್ತದ ಕಲೆ ಇದೆ ಎಂದು ಪೊಲೀಸರು ವರದಿ ನೀಡಿದ್ದಾರೆ. ಈ ಮಹಿಳೆಗೆ ಮದುವೆಯಾಗಿ ಇಬ್ಬರು ಮಕ್ಕಳಿರುವುದು ಗೊತ್ತಾಗಿದೆ.

ಸದ್ಯ ಬಂಧಿತನಾಗಿರುವ ಆಗಿರುವ ಆರೋಪಿಯೊಬ್ಬನೇ ಆತ್ಯಾಚಾರ ಮಾಡಿದ್ದಾನೋ, ಗ್ಯಾಂಗ್​ ರೇಪ್​ ಆಗಿದೆಯೋ ಎಂಬುದಿನ್ನೂ ಸ್ಪಷ್ಟವಾಗಿಲ್ಲ.

ತನಿಖೆ ನಡೆಸಲಾಗುವುದು ಎಂದೂ ಹೇಳಿದ್ದಾರೆ.
ಶಿವಸೇನೆ ಎಂಎಲ್​ಸಿ ಮನಿಶಾ ಕಯಂದೆ ಸಂತ್ರಸ್ತೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಈಗಾಗಲೇ ಒಂದು ಶಸ್ತ್ರಚಿಕಿತ್ಸೆ ಆಗಿದೆ.

ಆದರೆ ಮಹಿಳೆ ಚೇತರಿಸಿಕೊಳ್ಳುತ್ತಿಲ್ಲ. ಅವರ ಸ್ಥಿತಿ ಗಂಭೀರವಾಗಿಯೇ ಇದೆ ಎಂದು ವೈದ್ಯರು ಹೇಳಿದ್ದಾರೆ ಎಂದು ಮನಿಶಾ ತಿಳಿಸಿದ್ದಾರೆ.

ಪ್ರಕರಣವನ್ನು ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ, ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಗಂಭೀರವಾಗಿ ಪರಿಗಣಿಸಿದ್ದಾರೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ಟಾಳ ಸಜೀಪದಲ್ಲಿ ರಾಡಿಯೆದ್ದ ಘನತ್ಯಾಜ್ಯ-ಘಟಕಕ್ಕೆ ಬೀಗ ಜಡಿದ ಶಾಸಕ ಖಾದರ್..!

ಬಂಟ್ಟಾಳ: ಬಂಟ್ವಾಳದ ಹೊರ ವಲಯದ ಸಜೀಪ ನಡು ಗ್ರಾಮದ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ವಿಲೇವಾರಿ ಸರಿಯಾಗಿ ನಿರ್ವಹಿಸದೆ ಅವೈಜ್ಞಾನಿಕ ಘನತ್ಯಾಜ್ಯ ಘಟಕದಲ್ಲಿ ಅವ್ಯವಸ್ಥೆ ಕಂಡುಬಂದಿತ್ತು. ಈ ಬಗ್ಗೆ ಸ್ಥಳೀಯರ ಅಹವಾಲಿನ ಮೇರೆಗೆ ಪರಿಶೀಲನೆ...

ಮುಲ್ಕಿಯಲ್ಲಿ ವಿದ್ಯುತ್ ಕಂಬಕ್ಕೆ ಗುದ್ದಿದ ಟೆಂಪೋ: ಚಾಲಕ ಜೀವಾಂತ್ಯ-ಇಬ್ಬರಿಗೆ ಗಂಭೀರ

ಮುಲ್ಕಿ: ಚಲಿಸುತ್ತಿದ್ದ ಟೆಂಪೋ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿ ಚಾಲಕ ಸಾವನ್ನಪ್ಪಿದ್ದು ಟೆಂಪೋದಲ್ಲಿದ್ದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮಂಗಳೂರು ಹೊರವಲಯದ ಮುಲ್ಕಿ ಕೊಲ್ನಾಡು ಕೈಗಾರಿಕಾ ಪ್ರದೇಶದ ಪ್ರಮುಖ ರಸ್ತೆಯಲ್ಲಿ ಸಂಭವಿಸಿದೆ.ಮೃತ ಚಾಲಕನನ್ನು...

ಕಾಸರಗೋಡು: ವಿದೇಶದಲ್ಲಿದ್ದ ಯುವಕನನ್ನು ಕರೆಸಿ ಅಪಹರಿಸಿ ಹತ್ಯೆ ಪ್ರಕರಣ-ಮೂವರ ಬಂಧನ

ಕಾಸರಗೋಡು: ವಿದೇಶದಲ್ಲಿದ್ದ ಯುವಕನನ್ನು ಕರೆಸಿ ತಂಡವೊಂದು ಅಪಹರಿಸಿ ಕಾಸರಗೋಡಿನಲ್ಲಿ  ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ.ಕುಂಬಳೆ ದಿ| ಅಬ್ದುಲ್‌ ರಹ್ಮಾನ್‌ ಎಂಬವರ ಪುತ್ರ ವಿದೇಶದಲ್ಲಿದ್ದ ಅಬೂಬಕ್ಕರ್‌ ಸಿದ್ಧಿಖ್‌ ನನ್ನು ಕರೆಯಿಸಿ ಕಿಡ್ನಾಪ್ ಮಾಡಿ...