Connect with us

    BANTWAL

    ವಿಟ್ಲದಲ್ಲಿ ವಿಷ ಸೇವಿಸಿ ಜೀವಾಂತ್ಯಗೊಳಿಸಿದ ಸವಿತ-ಕಾರಣ ನಿಗೂಢ

    Published

    on

    ವಿಟ್ಲ: ಮಹಿಳೆಯೋರ್ವರು ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲ ಸಮೀಪದ ಕಸಬ ಗ್ರಾಮದ ಕೈಂತಿಲ ಎಂಬಲ್ಲಿ ನಡೆದಿದೆ.

    ಇಲ್ಲಿನ ಕಸಬ ಗ್ರಾಮದ ಕೈಂತಿಲ ನಿವಾಸಿ ಗಿರಿಯಪ್ಪ ಗೌಡರ ಪತ್ನಿ ಸವಿತ ಯಾನೆ ಸೇಸಮ್ಮ (50) ಎಂಬವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟ ದುರ್ದೈವಿಯಾಗಿದ್ದಾರೆ.


    ಮೃತ ಸೇಸಮ್ಮ ರವರು ಕೂಲಿ ಕೆಲಸ ಮಾಡಿಕೊಂಡಿದ್ದು, ಮನೆ ಸಮೀಪದ ತೋಟದಲ್ಲಿ ವಿಷ ಸೇವಿಸಿದ ಸ್ಥಿತಿಯಲ್ಲಿ ಕಂಡುಬಂದಿದ್ದರು.

    ಕೂಡಲೇ ಅವರನ್ನು ವಿಟ್ಲ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಯಿತಾದರೂ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದಾಗಿ ವೈದ್ಯರು ದೃಡಪಡಿಸಿದ್ದಾರೆ ಎಂದು ಸೇಸಮ್ಮ ಸಂಬಂಧಿಕರು ತಿಳಿಸಿದ್ದಾರೆ.

    ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಮೃತರ ಸಹೋದರ ಕೇಪು ಗ್ರಾಮದ ವಳಕಟ್ಟೆ ನಿವಾಸಿ ಚಂದ್ರಶೇಖರ ವಿಟ್ಲ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

     

    BANTWAL

    ವಿಟ್ಲದಲ್ಲಿ ಕುಸಿದು ಬಿದ್ದ ಕೋಳಿ ಶೆಡ್; 1500ಕ್ಕೂ ಅಧಿಕ ಕೋಳಿ ಸಾ*ವು

    Published

    on

    ವಿಟ್ಲ: ಕೋಳಿ ಸಾಕಾಣೆ ಮಾಡುವ ಶೆಡ್ ನೆಲಕ್ಕುರುಳಿ ಸುಮಾರು ಒಂದೂವರೆ ಸಾವಿರ ಕೋಳಿಗಳು ಮೃ*ತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಕುಳ ಗ್ರಾಮದ ಸೇಕೆಹಿತ್ಲು ಎಂಬಲ್ಲಿ ನಡೆದಿದೆ.

    ಬಂಟ್ವಾಳ ತಾಲೂಕು ಕುಳ ಗ್ರಾಮದ ಸೇಕೆಹಿತ್ಲು ನಿವಾಸಿ ರಾಘವರವರ ಮಾಲಕತ್ವದ ಶೆಡ್ ಇದಾಗಿದ್ದು, ಸುಮಾರು 2200 ಕೋಳಿಗಳನ್ನು ಅವರು ಸಾಕಾಣೆ ಮಾಡುತ್ತಿದ್ದರು.

    ಶೆಡ್ಡಿನ ಮೇಲ್ಚಾವಣಿ ಒಮ್ಮೆಲೆ ಕುಸಿದು ಬಿದ್ದ ಹಿನ್ನೆಲೆಯಲ್ಲಿ ಸುಮಾರು 1500 ಕೋಳಿಗಳು ಅದರಡಿಗೆ ಬಿದ್ದು ಸತ್ತುಹೋಗಿವೆ. ಘಟನೆಯಿಂದಾಗಿ ಶೆಡ್ ಸಂಪೂರ್ಣ ನಾ*ಶವಾಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ.

    Continue Reading

    BANTWAL

    ಪುಂಜಾಲಕಟ್ಟೆ: ಲಾರಿ ಪಲ್ಟಿಯಾಗಿ ಓರ್ವ ಮೃ*ತ್ಯು, ಇಬ್ಬರಿಗೆ ಗಂ*ಭೀರ ಗಾ*ಯ

    Published

    on

    ಬಂಟ್ವಾಳ: ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಉರುಳಿಬಿದ್ದ ಪರಿಣಾಮ ಓರ್ವ ಸ್ಥಳದಲ್ಲೇ ಮೃ*ತಪಟ್ಟು, ಇನ್ನಿಬ್ಬರು ಗಂಭೀರವಾಗಿ ಗಾ*ಯಗೊಂಡ ಘಟನೆ ಪುಂಜಾಲಕಟ್ಟೆಯಲ್ಲಿ ಇಂದು ಬೆಳಗ್ಗೆ ನಡೆದಿದೆ.

    ಮೃ*ತರನ್ನು ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂದು ಗುರುತಿಸಲಾಗಿದೆ. ಗಾ*ಯಾಳುಗಳನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಹೆಸರು, ಮಾಹಿತಿ ಲಭ್ಯವಾಗಿಲ್ಲ.

    ಕಾವಳಪಡೂರು ಗ್ರಾಮದ ಮಧ್ವ ಎಂಬಲ್ಲಿನ ಶಾಮಿಯಾನ ಅಂಗಡಿಗೆ ಸೇರಿದ ಲಾರಿ ಇದಾಗಿದ್ದು, ಶಾಮಿಯಾನದ ಸಾಮಗ್ರಿಗಳನ್ನು ಹೇರಿಕೊಂಡು ಬೆಳ್ತಂಗಡಿ ಕಡೆಗೆ ಹೋಗುತ್ತಿದ್ದ ವೇಳೆ ಪುಂಜಾಲಕಟ್ಟೆ ಶ್ರೀ ರಾಮಾಂಜನೇಯ ಭಜನಾ ಮಂದಿರದ ಬಳಿಯ ತಿರುವಿನಲ್ಲಿ ಈ ಅಪ*ಘಾತ ಸಂಭವಿಸಿದೆ.

    ಪುಂಜಾಲಕಟ್ಟೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.

    Continue Reading

    BANTWAL

    ಬಂಟ್ವಾಳ: ಪ್ರವಾಹ ಭೀತಿ ಹಿನ್ನಲೆ, ಆಲಡ್ಕದ 6 ಕುಟುಂಬಗಳು ಸ್ಥಳಾಂತರ

    Published

    on

    ಬಂಟ್ವಾಳ: ನಿರಂತರ ಮಳೆಯ ಪರಿಣಾಮ ತುಂಬಿ ಹರಿಯುತ್ತಿರುವ ನೇತ್ರಾವತಿ ನದಿಯಲ್ಲಿ ರಾತ್ರಿ ವೇಳೆಗೆ 7.3 ಮೀ. ಗೆ ಏರಿಕೆಯಾಗಿತ್ತು. ಇದು ಈ ವರ್ಷ ಮಳೆಗಾಲದ ಗರಿಷ್ಠ ಮಟ್ಟವಾಗಿದೆ.

    ಪ್ರವಾಹ ಭೀತಿ ಹಿನ್ನಲೆಯಲ್ಲಿ ಆಲಡ್ಕ ಪರಿಸರದ 6 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಆದರೆ ದೊಡ್ಡ ಮಟ್ಟದ ಯಾವೂದೇ ಹಾನಿ ಇದುವರೆಗೆ ಕಂಡುಬಂದಿಲ್ಲ.

    Continue Reading

    LATEST NEWS

    Trending