Connect with us

LATEST NEWS

ಪ್ರತಾಪ್ ಸಿಂಹ ಬದಲು ಒಡೆಯರ್ ಯಾಕೆ..!? ರಾಜ್ಯಾಧ್ಯಕ್ಷರು ಹೇಳಿದ್ದೇನು?

Published

on

ಮೈಸೂರು: ಲೋಕಸಭಾ ಚುನಾವಣೆಗೆ ಮೈಸೂರಿನಿಂದ ಯದುವೀರ್ ಕೃಷ್ಣದತ್ತ ಒಡೆಯರ್‌ಗೆ ಟಿಕಿಟ್ ನೀಡಿ, ಪ್ರತಾಪ್ ಸಿಂಹರಿಗೆ ಕೋಕ್ ನೀಡಲಾಗಿದೆ. ಈ ಕುರಿತು ಸಾರ್ವಜನಿಕ ವಲಯದಲ್ಲಿ ಮಿಶ್ರ ಪ್ರತಿಕ್ರಿಯೆ ಉಂಟಾಗಿದ್ದು, ಬಿಜೆಪಿ ಕಾರ್ಯಕರ್ತರಲ್ಲಿ ಗೊಂದಲವನ್ನು ಸೃಷ್ಠಿಮಾಡಿತ್ತು ಎಂದರೆ ತಪ್ಪಾಗಲ್ಲ.

ಈ ಕುರಿತು ನಗರದಲ್ಲಿ ಆಯೋಜಿಸಲಾಗಿದ್ದ ಜೆಡಿಎಸ್-ಬಿಜೆಪಿ ಕಾರ್ಯಕರ್ತರ ಸಮ್ಮಿಲನ ಸಮಾವೇಶದಲ್ಲಿ ಮಾತಾಡಿದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಮೈಸೂರು-ಕೊಡಗು  ಮತ್ತು ಚಾಮರಾಜನಗರ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ದಾಖಲೆಯ ಅಂತರದಿಂದ ಗೆಲುವು ಸಾಧಿಸುವ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದರು.

 

 

wodeyar

ಹಿಂದಿನ ಒಡೆಯರ್ ಅರಸೊತ್ತಿಗೆಯ ಪ್ರತಿನಿಧಿಯಾಗಿರುವ ಯದುವೀರ್ ಒಬ್ಬ ಸಾಮಾನ್ಯ ವ್ಯಕ್ತಿಯ ಹಾಗೆ ಜನರಿಗಾಗಿ ಕೆಲಸ ಮಾಡುತ್ತಾ ಹಿಂದಿನ ಹತ್ತು ವರ್ಷಗಳ ಕಾಲ ಈ ಭಾಗದ ಕ್ರಿಯಾಶೀಲ ಸಂಸದರಾಗಿ ಪ್ರತಾಪ್ ಸಿಂಹ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮುಂದುವರಿಸಿಕೊಂಡು ಹೋಗಲು ಸಿದ್ಧರಾಗಿದ್ದಾರೆ ಎಂದು ಹೇಳಿದರು.

prathap simha

ಪ್ರತಾಪ್ ಸಿಂಹರಿಗೆ ಟಿಕೆಟ್ ಸಿಗದೆ ಯದುವೀರ್ ಅವರಿಗೆ ಟಿಕೆಟ್ ನೀಡಿರುವ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮತ್ತು ರಾಷ್ಟ್ರೀಯ ನಾಯಕರು ಪ್ರತಾಪ್ ಸಿಂಹ ಅವರ ಬಗ್ಗೆ ಬೇರೆ ಏನಾದರೂ ಯೋಚನೆ ಮಾಡಿರುತ್ತಾರೆ. ಪ್ರತಾಪ್ ಸಿಂಹ ಅವರಿಗೆ ರಾಜಕೀಯದಲ್ಲಿ ಉಜ್ವಲ ಭವಿಷ್ಯವಿದೆ ಎಂದು ವಿಜಯೇಂದ್ರ ಹೇಳಿದರು.

Click to comment

Leave a Reply

Your email address will not be published. Required fields are marked *

DAKSHINA KANNADA

ದೆಹಲಿಯ ರಾಣಾ ಪ್ರತಾಪ್ ನಗರದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣ; ಮೂಡುಬಿದಿರೆ ಸ್ವಾಮೀಜಿ ಭಾಗಿ

Published

on

ನವದೆಹಲಿ : ದೆಹಲಿಯ ರಾಣಾ ಪ್ರತಾಪ್ ನಗರ ದ ಜಿನ ಬಸದಿ 24ತೀರ್ಥಂಕರ ಪಂಚ ಕಲ್ಯಾಣವು ರಾಷ್ಟ್ರ ಸಂತ 108 ಉಪಾಧ್ಯಾಯ ಗುಪ್ತಿ ಸಾಗರ ಮುನಿ ರಾಜ್ ಮಾರ್ಗದರ್ಶನ ಪಾವನ ಸಾನ್ನಿಧ್ಯ ಸ್ವಸ್ತಿಶ್ರೀ ಡಾ. ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ಪಟ್ಟಾಚಾರ್ಯ ವರ್ಯ ಮಹಾ ಸ್ವಾಮೀಜಿ ಗೌರವ ಉಪಸ್ಥಿತಿಯಲ್ಲಿ ಧಾರ್ಮಿಕ ವಿಧಿವಿಧಾನಗಳು ಜರುಗಿತು.

3 ಅಡಿ ಎತ್ತರ ದ ಪಂಚಲೋಹದ ಇಪ್ಪತ್ತನಾಲ್ಕು ತೀರ್ಥಂಕರ ಹಾಗೂ ವಿವಿಧ ಜಿನ ಬಿಂಬಗಳ ಸ್ಥಾಪನೆ ಬೆಳಿಗ್ಗೆ 7.30 ರಿಂದ 9.00ರ ವರೆಗೆ ಮೋಕ್ಷ ಕಲ್ಯಾಣ ಪೂಜೆ, ದೆಹಲಿ ವಿಶ್ವವಿದ್ಯಾಲಯ ಸ್ಪೋರ್ಟ್ಸ್ ಕ್ಲಬ್ ಸಭಾಂಗಣ ಹಾಗೂ ಮೆರವಣಿಗೆ ಮೂಲಕ ಮೂರ್ತಿ 3 ಕಿ.ಮೀ ದೂರದ ಬಸದಿಗೆ ತೆರಳಿ ಬೆಳಿಗ್ಗೆ 11.00ರಿಂದ ಮಧ್ಯಾಹ್ನ 1 ಗಂಟೆ ವರೆಗೂ ಮೂರ್ತಿ ಸ್ಥಾಪನೆ ದೆಹಲಿ ರಾಣಾ ಪತ್ ನಗರ ಬಸದಿಯಲ್ಲಿ ಜರುಗಿತು.


ಬಳಿಕ ಧಾರ್ಮಿಕ ಸಭೆಯಲ್ಲಿ ಧರ್ಮೋಪದೇಶ ನೀಡಿದ ಮೂಡುಬಿದಿರೆ ಸ್ವಾಮೀಜಿ, ಜಿನ ಬಿಂಬ ಸ್ಥಾಪನೆಯಿಂದ ಆತ್ಮ ಕಲ್ಯಾಣ ಹಾಗೂ ಪರ ಕಲ್ಯಾಣವಾಗುವುದು ಜನ ಸಂಸ್ಕೃತಿ ಸಂಸ್ಕಾರ ಧರ್ಮದಿಂದ ಸಾಧ್ಯ ಎಂದು ನುಡಿದರು. ಈ ಸಂದರ್ಭ ಸುಂದರ ಜಿನಾಲಯ ಸ್ಥಾಪನೆಗೆ ಕಾರಣರಾದ ದಾನಿಗಳನ್ನು ಗೌರವಿಸಲಾಯಿತು.


ರಾಷ್ಟ್ರ ಸಂತ 108 ಗುಪ್ತಿ ಸಾಗರ ಮುನಿ ರಾಜ್ ಮೂಡು ಬಿದಿರೆ ಶ್ರೀಗಳವರಿಗೆ ಶಾಸ್ತ್ರ ಸ್ಮರಣಿಕೆ ನೀಡಿದರು. ಬಳಿಕ ದೆಹಲಿ ಗ್ರೀನ್ ಪಾರ್ಕ್ ಬಸದಿಯಲ್ಲಿ ಉಪಸ್ಥಿತರಿದ್ದ 108 ರಾಷ್ಟ್ರ ಸಂತ ಆಚಾರ್ಯ ಪ್ರಾಗ್ಯ ಸಾಗರ ಮುನಿಮಹಾರಾಜ್, ಮೂಡುಬಿದಿರೆ ಶ್ರೀಗಳಿಗೆ ಗೌರವಾನ್ವಿತ ಪ್ರಧಾನಮಂತ್ರಿಗಳಿಂದ ಭಗವಾನ್ ಮಹಾವೀರ ಜನ್ಮ ಕಲ್ಯಾಣದಂದು ನಿರ್ವಾಣ ವರ್ಷ 2550ರ ಅಂಗವಾಗಿ ಬಿಡುಗಡೆಗೊಳಿಸಿದ ರೂ. 100 ರ ನಾಣ್ಯ ಹಾಗೂ ಅಂಚೆ ಇಲಾಖೆ ಬಿಡುಗಡೆಗೊಳಿಸಿದ ಪಾವಪುರಿ ಸಿದ್ದ ಕ್ಷೇತ್ರ ಫಸ್ಟ್ ಡೇ ಕವರ್ ನೀಡಿ ಹರಸಿ ಆಶೀರ್ವಾದ ಮಾಡಿದರು.

ಇದನ್ನೂ ಓದಿ : ಖ್ಯಾತ ಕಿರುತೆರೆ ನಟ ಗುರುಚರಣ್ ಸಿಂಗ್ ನಾಪತ್ತೆ!

ಈ ಸಂದರ್ಭ ಮೂಡುಬಿದಿರೆ ಸ್ವಾಮೀಜಿ ಈ ವರ್ಷ ಪೂರ್ತಿ ಆಚಾರ್ಯ ಶಾಂತಿ ಸಾಗರ ಆಚಾರ್ಯ ಶತಾಬ್ದಿ ವರ್ಷ ಹಾಗೂ ಭಗವಾನ್ ಮಹಾವೀರ ಸ್ವಾಮಿ ನಿರ್ವಾಣ ಕಲ್ಯಾಣ ವಿವಿಧೆಡೆ ಆಚರಿಸಲು ಸಂಕಲ್ಪ ಮಾಡಿದರು.

Continue Reading

LATEST NEWS

ತಾಯಿಯ ಕೊಂ*ದ ತಂದೆ; ತಂದೆಯ ಕೊಂ*ದ ಮಗ….ಇದೊಂದು ದುರಂ*ತ ಕಥೆ!

Published

on

ದಾವಣಗೆರೆ : ತಾಯಿಯನ್ನು ಕೊ*ಲೆಗೈದ ತಂದೆಯನ್ನು ಮಗನೊಬ್ಬ ಹ*ತ್ಯೆಗೈದಿದ್ದಾನೆ. ಈ ಘಟನೆ ನಡೆದಿರುವುದು ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ಲಕ್ಕಂಪುರ ಗ್ರಾಮದಲ್ಲಿ. ಮಗನ ಮದುವೆ ಯೋಚನೆಯಲ್ಲಿದ್ದ ತಾಯಿ ಇಹಲೋಕ ತ್ಯಜಿಸಿದ್ರೆ, ಅತ್ತ ಮಾಡಬಾರದ ತಪ್ಪು ಮಾಡಿದ ತಂದೆ ಮಗನಿಂದ ಹ*ತನಾಗಿದ್ದಾನೆ.

ಉಲ್ಟಾ ಹೊಡೆದ ಪ್ಲಾನ್…ಮಗನಿಂದ ಸಾ*ವು!

ಅಂಜನಪ್ಪ( 55) ತನ್ನ ಪತ್ನಿ ತಿಪ್ಪಮ್ಮ(49 ) ಎಂಬವರನ್ನು ನೇಣು ಬಿಗಿದು ಕೊ*ಲೆ ಮಾಡಿದ್ದಾನೆ. ಬಳಿಕ ಆಕೆಯ ಮೈಮೇಲಿದ್ದ ಚಿನ್ನದ ಆಭರಣವನ್ನು ತೆಗೆದುಕೊಳ್ಳೋ ಪ್ಲಾನ್ ಮಾಡಿದ್ದ. ಜೊತೆಗೆ ಪತ್ನಿಯೇ ನೇಣು ಹಾಕಿಕೊಂಡು ಆತ್ಮಹ*ತ್ಯೆ ಮಾಡಿಕೊಂಡಿದ್ದಾಳೆ ಎಂದು ಕಥೆ ಕೂಡ ಕಟ್ಟಿದ್ದಾನೆ. ಈ ವಿಷಯ ಮಗ ರಮೇಶ್​ಗೆ ಗೊತ್ತಾಗಿ ತಂದೆಯನ್ನು ಕಲ್ಲು ಎತ್ತಿ ಹಾಕಿ ಕೊ*ಲೆಗೈದಿದ್ದಾನೆ.

ಮಗನ ಮದುವೆ ತಯಾರಿಯಲ್ಲಿದ್ದಾಕೆ ಮಸಣ ಸೇರಿದಳು :

ಅಂಜನಪ್ಪ ಕುಡಿತದ ಚಟಕ್ಕೆ ದಾಸನಾಗಿದ್ದ, ತನ್ನ ಪತ್ನಿಗೆ ಅಂಗನವಾಡಿ ಶಿಕ್ಷಕಿ ಹುದ್ದೆ ಸಿಕ್ಕರೂ ಬೇಡ ಎಂದು ನೌಕರಿ ಬಿಡಿಸಿದ್ದ. ಕುಡುಕ‌ ಗಂಡನ ಕಟ್ಟಿಕೊಂಡ ಆಕೆ, ಗ್ರಾಮದ ಶಾಲೆಯಲ್ಲಿ ಬಿಸಿಯೂಟ ಮಾಡುತ್ತಾ ಮೂರು ಮಕ್ಕಳನ್ನು ಸಲಹಿದ್ದಳು. ಅದರಲ್ಲಿ ಇಬ್ಬರು ಹೆಣ್ಣು ಮಕ್ಕಳನ್ನು ಮದುವೆ ಮಾಡಿದ್ದಳು. ಮಗನ ಮದುವೆ ಯೋಜನೆಯಲ್ಲಿ ಇದ್ದ ಆಕೆಯ ಉಸಿರು ನಿಲ್ಲಿಸಿದ್ದಾನೆ.

ಮಗನಿಂದ ನಡೆಯಿತು ತಂದೆಯ ಹ*ತ್ಯೆ!

ಆರೋಪಿ ಮಗ ರಮೇಶ್ ಬೆಂಗಳೂರಿನಲ್ಲಿ ಕಾರು ಚಾಲಕನಾಗಿದ್ದ. ಏ.25 ರಂದು ಸಂಬಂಧಿಕರ ಮದುವೆಗೆ ಬಂದಿದ್ದ. ತಡರಾತ್ರಿ ತನ್ನ ತಾಯಿಯನ್ನ ತಂದೆಯೇ ಕೊ*ಲೆ ಮಾಡಿದ್ದಾನೆ ಎಂಬ ವಿಚಾರ ತಿಳಿದಿದೆ. ಕೂಡಲೇ ಗ್ರಾಮಕ್ಕೆ ಬಂದಿದ್ದ ಆತ. ಇದೇ ವೇಳೆ ತಂದೆ ಎದುರಿಗೆ ಬಂದಿದ್ದಾನೆ. ತಕ್ಷಣ ಅಲ್ಲಿಯೇ ಇದ್ದ ಕಲ್ಲನ್ನು ಎತ್ತಿ ಹಾಕಿ ತಂದೆಯನ್ನು ಕೊ*ಲೆಗೈದಿದ್ದಾನೆ.

ಇದನ್ನೂ ಓದಿ : WATCH VIDEO : ಮತ್ತೆ ಎಡವಿದ ಸಿಎಂ… ಹೆಲಿಕ್ಯಾಪ್ಟರ್‌ನಲ್ಲಿ ಬಿದ್ದು ಗಾ*ಯ…!

ಇದೊಂದು ದುರಂ*ತವೇ ಸರಿ. ತಂದೆಯ ಕುಡಿತದ ಚಟಕ್ಕೆ ಇಡೀ ಕುಟುಂಬ ಬ*ಲಿಯಾಗಿದೆ. ತಾಯಿ – ತಂದೆ ಇಹಲೋಕದ ಯಾತ್ರೆ ಮುಗಿಸಿದ್ದರೆ, ಇತ್ತ ಮದುವೆಯ ಹೊಸ್ತಿಲಲ್ಲಿದ್ದ ಮಗ ಕಂಬಿ ಎಣಿಸುತ್ತಿದ್ದಾನೆ.

Continue Reading

LATEST NEWS

WATCH VIDEO : ಮತ್ತೆ ಎಡವಿದ ಸಿಎಂ… ಹೆಲಿಕಾಪ್ಟರ್ ನಲ್ಲಿ ಬಿದ್ದು ಗಾ*ಯ…!

Published

on

ಕೋಲ್ಕತ್ತಾ : ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತೊಮ್ಮೆ ಗಾ*ಯಗೊಂಡಿದ್ದಾರೆ. ದುರ್ಗಾಪುರದಲ್ಲಿ ಹೆಲಿಕಾಪ್ಟರ್ ಹತ್ತುವ ಸಂದರ್ಭ ಮಮತಾ ಬ್ಯಾನರ್ಜಿ ಅವರಿಗೆ ಗಾ*ಯವಾಗಿದೆ. ಅವರು ಹೆಲಿಕಾಪ್ಟರ್ ಒಳಗೆ ಎಡವಿ ಬಿದ್ದಿದ್ದಾರೆ. ಸದ್ಯ ಅವರು ಬಿದ್ದಿರುವ ವೀಡಿಯೋ ವೈರಲ್ ಆಗುತ್ತಿದೆ.


ಮಮತಾ ಬ್ಯಾನರ್ಜಿ ದುರ್ಗಾಪುರದಿಂದ ಅಸನ್ಸೋಲ್‌ಗೆ ತೆರಳುತ್ತಿದ್ದ ವೇಳೆ ಈ ಅವಘ*ಡ ಸಂಭವಿಸಿದೆ. ಅಸನ್ಸೋಲ್​ನಲ್ಲಿ ಅವರು ಟಿಎಂಸಿ ಅಭ್ಯರ್ಥಿ ಶತ್ರುಘ್ನ ಸಿನ್ಹಾ ಅವರನ್ನು ಬೆಂಬಲಿಸಿ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಮಮತಾ ಬ್ಯಾನರ್ಜಿ ಹೆಲಿಕಾಪ್ಟರ್ ಮೆಟ್ಟಿಲುಗಳನ್ನು ಸಲೀಸಾಗಿ ಏರಿದ್ದರು. ಆದರೆ, ಒಳಗೆ ಹೋಗುತ್ತಿದ್ದಾಗ ಬ್ಯಾಲೆನ್ಸ್ ಕಳೆದುಕೊಂಡು ಎಡವಿ ಬಿದ್ದಿದ್ದಾರೆ.

ಅವರ ಕಾಲಿಗೆ ಸ್ವಲ್ಪ ಗಾಯವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಅವರ ಭದ್ರತಾ ಸಿಬ್ಬಂದಿ ತಕ್ಷಣವೇ ಅವರಿಗೆ ಸಹಾಯ ಮಾಡಿದರು.

ಅಸನ್ಸೋಲ್ ಗೆ ತೆರಳಿದ ಸಿಎಂ :

ಮಮತಾ ಬ್ಯಾನರ್ಜಿ ಸ್ವಲ್ಪ ಸಮಯದ ಬಳಿಕ ದುರ್ಗಾಪುರದಿಂದ ಅಸನ್ಸೋಲ್ ಗೆ ತೆರಳಿದರು. ಅವರ ಗಾಯ ಅಷ್ಟೊಂದು ಗಂಭೀರವಾಗಿಲ್ಲ. ಅವರು ಅಸನ್ಸೋಲ್‌ನಲ್ಲಿ ಪಕ್ಷದ ಚುನಾವಣಾ ರ್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಟಿಎಂಸಿ ಮೂಲಗಳು ತಿಳಿಸಿವೆ.

ಈ ಹಿಂದೆಯೂ ಬಿದ್ದಿದ್ದ ಮಮತಾ :


ಕೆಲವು ದಿನಗಳ ಹಿಂದೆ ಟಿಎಂಸಿ ಮುಖ್ಯಸ್ಥೆ ತನ್ನ ಮನೆಯ ಸ್ನಾನಗೃಹದಲ್ಲಿ ಬಿದ್ದಿದ್ದರಿಂದ ತಲೆಗೆ ಗಾಯವಾಗಿತ್ತು. ಫೋಟೋಗಳು ವೈರಲ್ ಆಗಿದ್ದವು. ಈ ಹಿಂದೆ 2021ರ ವಿಧಾನಸಭಾ ಚುನಾವಣೆ ವೇಳೆ ನಂದಿಗ್ರಾಮದಲ್ಲಿ ಪ್ರಚಾರಕ್ಕೆ ತೆರಳಿದ್ದರು. ಅಲ್ಲಿ ನೆರೆದಿದ್ದ ಜನಜಂಗುಳಿಯಲ್ಲಿ ನಡೆದ ಗಲಾಟೆಯಲ್ಲಿ ಮಮತಾ ಬ್ಯಾನರ್ಜಿ ಅವರ ಕಾಲು ಕಬ್ಬಿಣದ ಕಂಬಕ್ಕೆ ತಗುಲಿತ್ತು. ಪರಿಣಾಮ ಅವರು ಗಾಯಗೊಂಡಿದ್ದರು. ಈ ಘಟನೆಯನ್ನು ಬಿಜೆಪಿಯ ಪಿತೂರಿಯ ಭಾಗ ಎಂದು ಟಿಎಂಸಿ ಆರೋಪಿಸಿತ್ತು.

ಇದನ್ನೂ ಓದಿ  : ಮೇಕಪ್ ರೂಂನಲ್ಲಿ ಕೂಡಿ ಹಾಕಿದ್ರು…ಆಮೇಲೆ…ನಿರ್ಮಾಪಕನಿಂದಾದ ಕರಾಳ ಅನುಭವ ಬಿಚ್ಚಿಟ್ಟ ಖ್ಯಾತ ಕಿರುತೆರೆ ನಟಿ!

ಅದೇ ಸಮಯದಲ್ಲಿ, ಜನರ ಸಹಾನುಭೂತಿ ಗಳಿಸಲು ಮಮತಾ ಬ್ಯಾನರ್ಜಿ ಗಾಯಗೊಂಡಂತೆ ನಟಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿತ್ತು.

ಕಳೆದ ರಾಜ್ಯ  ವಿಧಾನಸಭಾ ಚುನಾವಣೆಯ ಸಮಯದಲ್ಲೂ ಕೂಡಾ ಮಮತಾ ಬ್ಯಾನರ್ಜಿ ಅವರಿಗೆ ಅಪಘಾತ ಸಂಭವಿಸಿತ್ತು. ಅಪಘಾತದಲ್ಲಿ ಕಾಲು ಫ್ರಾಕ್ಚರ್‌ ಆಗಿದ್ದರೂ ಅದೇ ಕಾಲುಗಳಲ್ಲಿ ರಾಜ್ಯಾಂದ್ಯಂತ ಸಂಚಾರ ಮಾಡಿ ಪ್ರಚಾರ ಮಾಡಿದ್ದರು.

Continue Reading

LATEST NEWS

Trending