Connect with us

    Ancient Mangaluru

    ಉಡುಪಿ ಪರಿಹಾರ ಕಾಣದ ನೀರಿನ ಸಮಸ್ಯೆ: ಖಾಲಿ ಕೊಡಗಳೊಂದಿಗೆ ಅಂಬಲಪಾಡಿ ಗ್ರಾಪಂ ಕಚೇರಿಗೆ ಗ್ರಾಮಸ್ಥರ ಮುತ್ತಿಗೆ..!

    Published

    on

    ಸಕಾಲದಲ್ಲಿ ಮುಂಗಾರು ಮಳೆ ಬಾರದ ಕಾರಣ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೋರಾಗಿದೆ.
    ಉಡುಪಿ: ಸಕಾಲದಲ್ಲಿ ಮುಂಗಾರು ಮಳೆ ಬಾರದ ಕಾರಣ ಉಡುಪಿ ಜಿಲ್ಲೆಯಾದ್ಯಂತ ಕುಡಿಯುವ ನೀರಿನ ಸಮಸ್ಯೆ ಜೋರಾಗಿದೆ.

    ಕಳೆದೆರಡು ತಿಂಗಳುಗಳಿಂದ ಸಮರ್ಪಕವಾಗಿ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಅಂಬಲಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಶನಿವಾರ ಖಾಲಿ ಕೊಡದೊಂದಿಗೆ ನುಗ್ಗಿದ ಗ್ರಾಮಸ್ಥರು, ಕಚೇರಿಯೊಳಗೆ ಧರಣಿ ಕುಳಿತು ಪ್ರತಿಭಟನೆ ನಡೆಸಿದರು.

    ಅಂಬಲಪಾಡಿ ಗ್ರಾಪಂ ವ್ಯಾಪ್ತಿಯ ಕಿದಿಯೂರು ಗ್ರಾಮದ ದಿಡ್ಡಿ ಮನೆಗಳಿಗೆ ಕಳೆದ ಎರಡು ತಿಂಗಳುಗಳಿಂದ ಸಮರ್ಪಕವಾಗಿ ಗ್ರಾಪಂ ನೀರು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸಿ ಮಹಿಳೆಯರು ಸೇರಿದಂತೆ ಗ್ರಾಮಸ್ಥರು ಖಾಲಿ ಕೊಡಗಳೊಂದಿಗೆ ಕಚೇರಿ ಆವರಣಕ್ಕೆ ಆಗಮಿಸಿದರು.

    ಗ್ರಾಪಂ ವಿರುದ್ಧ ತೀವ್ರ ಆಕ್ರೋಶಗೊಂಡಿದ್ದ ಮಹಿಳೆಯರು ನೇರವಾಗಿ ಕೊಡಗಳೊಂದಿಗೆ ನೇರ ಕಚೇರಿಯೊಳಗೆ ನುಗ್ಗಿದರು.

    ಕಚೇರಿಯೊಳಗೆ ಕೊಡಗಳನ್ನಿಟ್ಟು ಧರಣಿ ಕುಳಿತು ಸ್ಥಳಕ್ಕೆ ಅಧ್ಯಕ್ಷರು ಹಾಗೂ ಪಿಡಿಓ ಆಗಮಿಸಿ ನೀರಿನ ಸಮಸ್ಯೆ ಪರಿಹರಿಸಿಕೊಡುವಂತೆ ಪಟ್ಟು ಹಿಡಿದರು.

    ಕಚೇರಿಯಲ್ಲಿದ್ದ ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ನೀರು ಕೊಡಲು ಸಾಧ್ಯವಾಗದ ಪಂಚಾಯತ್‌ಗೆ ಬೀಗ ಹಾಕಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ‘ಕಳೆದ ಎರಡು ತಿಂಗಳಿನಲ್ಲಿ ಮೂರು ಬಾರಿ ಮಾತ್ರ ನೀರು ಕೊಟ್ಟಿದ್ದಾರೆ. ಅದರ ನಂತರ ನೀರು ಕೊಡಲಿಲ್ಲ. ಸ್ಥಳೀಯರೊಬ್ಬರು ನಮಗೆ ನೀರು ಪೂರೈಕೆ ಮಾಡುತ್ತಿದ್ದಾರೆ.

    ಅವರು ನೀರು ಪೂರೈಸದಿದ್ದರೆ ನಮಗೆ ನೀರೇ ಇಲ್ಲ. ನಾವು ಇನ್ನು ಎಲ್ಲಿಗೆ ಹೋಗುವುದು. ಕೆಲವು ಪ್ರದೇಶಗಳಿಗೆ ಗ್ರಾಪಂನವರು ನೀರು ಕೊಡುತ್ತಾರೆ.

    ಆದರೆ ನಮ್ಮಲ್ಲಿಗೆ ಬರುವುದಿಲ್ಲ. ಸುಮಾರು 80 ಮನೆಯವರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರಾದ ಬೇಬಿ ಆರೋಪಿಸಿದರು.

    ಬಳಿಕ ಕಚೇರಿಗೆ ಆಗಮಿಸಿದ ಗ್ರಾಪಂ ಅಧ್ಯಕ್ಷೆ ರೋಹಿಣಿಯವರೊಂದಿಗೆ ನೀರಿನ ಸಮಸ್ಯೆ ಕುರಿತು ಧರಣಿನಿರತರು ವಾಗ್ವಾದ ನಡೆಸಿದರು.

    ಎರಡು ತಿಂಗಳುಗಳಿಂದ ನೀರಿಲ್ಲದೆ ಜನ ಪರದಾಡುತ್ತಿದ್ದರೂ ಅಧ್ಯಕ್ಷರು ಒಮ್ಮೆಯೂ ಭೇಟಿ ನೀಡದ ಬಗ್ಗೆ ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ಈ ಸಂದರ್ಭ ಗ್ರಾಪಂ ಸದಸ್ಯರು ಹಾಗೂ ಗ್ರಾಮಸ್ಥರ ಮಧ್ಯೆ ಮಾತಿನ ಚಕಮಕಿ ನಡೆಯಿತು.ಬಳಿಕ ಮಾತುಕತೆ ನಡೆಸಿ, ಮೂರು ದಿನಗಳಿಗೊಮ್ಮೆ ನೀರು ಪೂರೈಕೆ ಮಾಡುವುದಾಗಿ ಅಧ್ಯಕ್ಷರು ಗ್ರಾಮಸ್ಥರಿಗೆ ಭರವಸೆ ನೀಡಿದರು. ಈ ಹಿನ್ನೆಲೆಯಲ್ಲಿ ಧರಣಿಯನ್ನು ವಾಪಾಸ್ ಪಡೆದರು.

    Click to comment

    Leave a Reply

    Your email address will not be published. Required fields are marked *

    Ancient Mangaluru

    ಕಾರ್ಕಳ: ಕಟ್ಟಡವೊಂದರಲ್ಲಿ ಭಾರೀ ಶಬ್ದದೊಂದಿಗೆ ಭೀಕರ ಸ್ಫೋಟ, ಬೆಚ್ಚಿಬಿದ್ದ ಕಾರ್ಕಳ ಜನತೆ.!

    Published

    on

    ಕಾರ್ಕಳ: ಕಾರ್ಕಳ ಬೈಪಾಸ್ ಸಮೀಪದ ಕಟ್ಟಡವೊಂದರಲ್ಲಿ ಭಾರೀ ಶಬ್ದದೊಂದಿಗೆ ಭೀಕರ ಸ್ಫೋಟವೊಂದು ಸಂಭವಿಸಿದ್ದು ರಾತ್ರಿ ಸುಮಾರು 11.25 ರ ವೇಳೆಗೆ ಕಾರ್ಕಳದ ಸುತ್ತಮುತ್ತ 3 ಕಿಲೋಮೀಟರ್ ದೂರದ ವರೆಗೂ ಸ್ಪೋಟದ ಶಬ್ದ ಕೇಳಿಸಿದೆ.

    ಮನೆಯ ಬಾಲ್ಕನಿಯಲ್ಲಿದ್ದ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡಿದ್ದು, ಸಿಲಿಂಡರ್ ಸ್ಪೋಟಕ್ಕೆ ನಿಖರ ಕಾರಣ ತಿಳಿದಿಲ್ಲ. ಅಕ್ಕ ಪಕ್ಕದ ನಾಲ್ಕೈದು ಮನೆಗೆ ಹಾನಿಯಾಗಿದ್ದು, ಮನೆಯವರಿಗೆ ಯಾವುದೇ ರೀತಿಯ ಜೀವ ಹಾನಿ ಸಂಭವಿಸಿಲ್ಲ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ತುರ್ತು ಸೇವೆಯ ಆಂಬುಲೆನ್ಸ್ ಆಗಮಿಸಿ ರಕ್ಷಣಾ ಕಾರ್ಯಾಚರಣೆ ಕೈಗೆತ್ತಿಕೊಂಡಿದ್ದು, ಸ್ಪೋಟದ ತೀವ್ರತೆಗೆ ಕಿಟಕಿ ಗಾಜುಗಳು ಪುಡಿ ಪುಡಿಯಾಗಿ ರಸ್ತೆ ಬದಿಯಲ್ಲಿ ಬಿದ್ದಿರುವುದು ದೃಶ್ಯದಲ್ಲಿ ಕಂಡುಬಂದಿದೆ.

    ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿಯಬೇಕಾಗಿದೆ.

    WATCH VIDEO

    Continue Reading

    Ancient Mangaluru

    ಮೇ.10 ರಂದು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನೆ

    Published

    on

    ಮಂಗಳೂರು : ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಹಾಗೂ ರಾಷ್ಟ್ರೀಯ ಪುರಸ್ಕಾರ ಪಡೆದ ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ನೂತನ ಪಕ್ಷಿಕೆರೆ ಶಾಖೆಯ ಉದ್ಘಾಟನಾ ಸಮಾರಂಭ ಮೇ 10 ರಂದು ಮಧ್ಯಾಹ್ನ 12 ಗಂಟೆಗೆ ಮುಲ್ಕಿಯ ಲಘುವಿ ಕಾಂಪ್ಲೆಕ್ಸ್ ಮುಖ್ಯರಸ್ತೆ ಪಕ್ಷಿಕೆರೆಯಲ್ಲಿ ನಡೆಯಲಿದೆ.

    ಮುಲ್ಕಿ ಮೂಡುಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ಶಾಖೆಯನ್ನು ಉದ್ಘಾಟಿಸಲಿದ್ದಾರೆ. ಮಂಗಳೂರು ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಸಹಕಾರ ರತ್ನ ಚಿತ್ತರಂಜನ್ ಬೋಳಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.

    ಪಕ್ಷಿಕೆರೆ ಸಂತ ಜುದರ ಪುಣ್ಯಕ್ಷೇತ್ರ ಧರ್ಮಗುರು ಅತಿ ವಂದನೀಯ ಗುರುಗಳು ಮೆಲ್ವಿನ್ ನೊರೊಹ್ನಾ ದ್ವೀಪ ಪ್ರಜ್ವಲಿಸಲಿದ್ದಾರೆ. ಪಕ್ಷಿಕೆರೆ ಸುರಗಿರಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ಶ್ರೀ ಕೆ.ಸೀತಾರಾಮ್ ಶೆಟ್ಟಿ, ಕೆಮ್ರಾಲ್ ಗ್ರಾಮ ಪಂಚಾಯತ್ ಅಧ್ಯಕ್ಷ ಮಯ್ಯದ್ದಿ ಗಣಕೀಕೃತ ಬ್ಯಾಂಕಿಂಗ್ ಗೆ ಚಾಲನೆ ನೀಡಲಿದ್ದಾರೆ. ಪಕ್ಷಿಕೆರೆ, ಎಸ್ ಕೋಡಿ, ಬಿಲ್ಲವ ಸಂಘದ ಅಧ್ಯಕ್ಷ ನವೀನ್ ಹರಿಪಾದೆ ನಿರಖು ಠೇವಣಿ ಪತ್ರ ಬಿಡುಗಡೆ ಮಾಡಲಿದ್ದಾರೆ.

    ಇದನ್ನೂ ಓದಿ : ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ: ಉಡುಪಿ ಪ್ರಥಮ, ದ.ಕ ಎರಡನೇ ಸ್ಥಾನ

    ಸಮಾಜಸೇವಕ ಧನಂಜಯ ಶೆಟ್ಟಿಗಾರ್ ಇ-ಮುದ್ರಾಂಕ ಸೇವೆಗೆ, ಹಳೆಯಂಗಡಿ ಪ್ರಿಯದರ್ಶಿನಿ ಸಹಕಾರ ಸಂಘದ ಅಧ್ಯಕ್ಷ ಎಚ್.ವಸಂತ್ ಬೆರ್ನಾಡ್ ಆವರ್ತನ ಠೇವಣಿಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ಕಸ್ತೂರಿ ಪಂಜ ಉಳಿತಾಯ ಖಾತೆಗೆ, ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ವಿನೋದ್ ಕುಮಾರ್ ಬೊಳ್ಳೂರು, ಕಟ್ಟಡದ ಮಾಲಕ ಶ್ರೀನಿವಾಸ ಕೋಟ್ಯಾನ್ ಮೈಕ್ರೋ ಸಾಲ ಯೋಜನೆಗೆ ಚಾಲನೆ ನೀಡಲಿದ್ದಾರೆ. ಸರ್ವರಿಗೂ ಆದರದ ಸ್ವಾಗತ ಕೋರಲಾಗಿದೆ.

    Continue Reading

    Ancient Mangaluru

    ಮಂಗಳೂರು ವಿಮಾನ ನಿಲ್ದಾಣವಿನ್ನು ನಿಶ್ಶಬ್ದ ವಲಯ!

    Published

    on

    ಮಂಗಳೂರು : ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಇನ್ನು ಮುಂದೆ ನಿಶ್ಶಬ್ದ ವಲಯವಾಗಿರಲಿದೆ. ಹೌದು, ಇನ್ನು ಮುಂದೆ ವಿಮಾನ ನಿಲ್ದಾಣದಲ್ಲಿ ಏರ್‌ಲೈನರ್‌ಗಳಿಂದ ಯಾವುದೇ ಪ್ರಯಾಣಿಕರ ಮಾಹಿತಿ ಕುರಿತ ಅನೌನ್ಸ್ ಮೆಂಟ್‌ ಇರುವುದಿಲ್ಲ. ಪ್ರಯಾಣಿಕರು ಫ್ಲೈಟ್‌ ಇನ್ಫಾರ್ಮೇಶನ್‌ ಡಿಸ್‌ಪ್ಲೇ ಸಿಸ್ಟಂ ಫಲಕಗಳನ್ನು ನೋಡಿ ಮಾಹಿತಿ ಪಡೆದುಕೊಳ್ಳ ಬೇಕಾಗಿದೆ ಎಂದು ವಿಮಾನ ನಿಲ್ದಾಣದ ವಕ್ತಾರರು ತಿಳಿಸಿದ್ದಾರೆ.

    ಸಹಾಯಕ್ಕಾಗಿ ಯಾರನ್ನು ಸಂಪರ್ಕಿಸಬೇಕು?

    ವಿಮಾನ ನಿಲ್ದಾಣದಲ್ಲಿರುವ ಪ್ರಯಾಣಿಕರಿಗೆ ಕಿರಿಕಿರಿಯಾಗುವುದನ್ನು ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಲಾಗಿದೆ. ಇನ್ನು ಮುಂದೆ ವಿಮಾನಗಳ ಹಾರಾಟದ ಮಾಹಿತಿಗಳು ಫ್ಲೈಟ್‌ ಇನ್ಫಾರ್ಮೇಶನ್‌ ಡಿಸ್‌ಪ್ಲೇ ಸಿಸ್ಟಂ ಫಲಕಗಳಲ್ಲಿ ಅನಾವರಣಗೊಳ್ಳಲಿದೆ. ವಿಮಾನ ನಿಲ್ದಾಣದ ಹಲವು ಕಡೆಗಳಲ್ಲಿ ಈ ಡಿಸ್‌ಪ್ಲೇಗಳನ್ನು ಇರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.


    ಇದಲ್ಲದೆ, ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿ ‘ಮೇ ಐ ಹೆಲ್ಪ್ ಯು’ ಡೆಸ್ಕ್ ನಿರ್ವಹಿಸುವ ಸಿಬಂದಿ, ಗ್ರಾಹಕ ಸೇವೆ ಮತ್ತು ಅತಿಥಿ ಸಂಬಂಧಗಳ ಕಾರ್ಯನಿರ್ವಾಹಕರು, ಪ್ರಣಾಮ್ ಸಿಬಂದಿ ಕೂಡಾ ಮಾಹಿತಿಯೊಂದಿಗೆ ಪ್ರಯಾಣಿಕರಿಗೆ ಸಹಾಯ ಮಾಡಲು ಸಿದ್ಧರಿರುತ್ತಾರೆ.

    ಇದನ್ನೂ ಓದಿ : ಕೋವಿಶೀಲ್ಡ್ ಲಸಿಕೆ ಅಡ್ಡ ಪರಿಣಾಮ ಬೀರಲಿದೆ; ಸತ್ಯ ಒಪ್ಪಿಕೊಂಡ ಆಸ್ಟ್ರಾಜೆನಿಕಾ! ಏನಿದರ ಪರಿಣಾಮ?

    ಎಸ್.ಎಂ.ಎಸ್ ಮೂಲಕ ಮಾಹಿತಿ :

    ಎಲ್ಲಾ ಏರ್‌ಲೈನ್ ಚೆಕ್-ಇನ್ ಕೌಂಟರ್‌ಗಳು, ಬೋರ್ಡಿಂಗ್ ಗೇಟ್‌ಗಳಲ್ಲಿ ವಿಮಾನದ ಮಾಹಿತಿಯನ್ನು ವೀಕ್ಷಿಸ ಬಹುದು. ಬೋರ್ಡಿಂಗ್ ಗೇಟ್ ಬದಲಾವಣೆಗಳು/ ವಿಮಾನ ಮರು ವೇಳಾಪಟ್ಟಿ ವಿವರಗಳನ್ನು ಎಸ್.ಎಂ.ಎಸ್. ಮೂಲಕ ಪ್ರಯಾಣಿಕರ ನೋಂದಾಯಿತ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯಲ್ಲೂ ಕೂಡಾ ಏರ್‌ಲೈನ್ ಹಂಚಿಕೊಳ್ಳಲಿದೆ ಎಂದು ವಿವರಿಸಿದ್ದಾರೆ.

    Continue Reading

    LATEST NEWS

    Trending