Connect with us

    LATEST NEWS

    ರಜೆಗೆ ಎಂದು ಊರಿಗೆ ಬಂದಿದ್ದ ಯೋಧ ಕೆರೆಗೆ ಹಾರಿ ಆತ್ಮಹತ್ಯೆ!

    Published

    on

    ಬೆಳಗಾವಿ : ರಜೆಗೆ ಎಂದು ಊರಿಗೆ ಆಗಮಿಸಿದ್ದ ಯೋಧನೊಬ್ಬ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ದೇವಗಾಂವ ಎಂಬ ಗ್ರಾಮದಲ್ಲಿ ಈ ಒಂದು ಘಟನೆ ನಡೆದಿದೆ.

    ದೇವಗಾಂವ ಗ್ರಾಮದಲ್ಲಿ ಕೆರೆಗೆ ಹಾರಿ ಯೋಧ ನರೇಶ್ ಅಗಸರ (28) ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಳೆದ 4 ವರ್ಷಗಳಿಂದ ಭಾರೀತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. 20 ದಿನಗಳ ಹಿಂದೆ ನರೇಶ್ ರಜೆಯ ಮೇಲೆ ಊರಿಗೆ ಬಂದಿದ್ದರು. ಇಂದು ಮತ್ತೆ ಕರ್ತವ್ಯಕ್ಕೆ ಯೋಧ ನರೇಶ್ ತರಳಬೇಕಾಗಿತ್ತು.

    ಆದರೆ ಕರ್ತವ್ಯಕ್ಕೆ ತರಳದೆ ಕೆರೆಯಲ್ಲಿ ಹರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಅಗ್ನಿಶಾಮಕ ಸಿಬ್ಬಂದಿಯಿಂದ ಇದೀಗ ಯೋಧ ನರೇಶ್ ಮೃತದೇಹಕ್ಕಾಗಿ ಶೋಧ ಕಾರ್ಯ ಮುಂದುವರಿಸಿದ್ದಾರೆ. ಆತ್ಮಹತ್ಯೆ ಕುರಿತು ಕಿತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Click to comment

    Leave a Reply

    Your email address will not be published. Required fields are marked *

    LATEST NEWS

    ಕುಕ್ಕೆ ಸುಬ್ರಮಣ್ಯಕ್ಕೆ ಭೇಟಿ ನೀಡಿದ ಡೊನಾಲ್ಡ್ ಟ್ರಂಪ್ ಬಿಸಿನೆಸ್ ಪಾರ್ಟ್ನರ್

    Published

    on

    ಮಂಗಳೂರು: ಚಂಪಾಷಷ್ಠಿ ಹಿನ್ನೆಲೆಯಲ್ಲಿ ಶನಿವಾರ (ಡಿಸೆಂಬರ್​ 07) ಕುಕ್ಕೆ ಸುಬ್ರಮಣ್ಯದಲ್ಲಿ ರಥೋತ್ಸವ ನಡೆಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನಲ್ಲಿರುವ ಕುಕ್ಕೆ ಸುಬ್ರಮಣ್ಯಕ್ಕೆ ಅಮೆರಿಕಾದ ನಿಯೋಜಿತ ಡೊನಾಲ್ಡ್ ಟ್ರಂಪ್​ ಅವರ ಬಿಸಿನೆಸ್ ಪಾರ್ಟ್ನರ್​​ ಶಶಿಭೂಷಣ್ ಭೇಟಿ ನೀಡಿ ಶ್ರೀ ಸುಬ್ರಹ್ಮಣ್ಯ ಸ್ವಾಮಿಯ ದರ್ಶನ ಪಡೆದರು. ಹೈದರಾಬಾದ್ ಮೂಲದ ಶಶಿಭೂಷಣ್ ಅವರು ಅಮೇರಿಕಾದಲ್ಲಿ ನೆಲೆಸಿದ್ದಾರೆ.

    ಶಶಿಭೂಷಣ್ ಅಮೆರಿಕಾದಲ್ಲಿ 500 ಎಕರೆ ಜಾಗದಲ್ಲಿ 3000 ಕೋಟಿ ವೆಚ್ಚದಲ್ಲಿ ಶಂಕರಾಚಾರ್ಯರ ಆಧ್ಯಾತ್ಮಿಕ ಕೇಂದ್ರ ಮತ್ತು ದೇವಸ್ಥಾನ ಕಟ್ಟಿಸುತ್ತಿದ್ದಾರೆ. ಶಶಿಭೂಷಣ್ ಅವರು ಅಮೆರಿಕನ್ ಪೊಲಿಟಿಕಲ್ ಆಕ್ಷನ್ ಕಮಿಟಿಯ ‘ಎ’ ಪ್ಯಾಕ್ ಮುನ್ನೆಡಿಸಿದ್ದಾರೆ. ಟ್ರಂಪ್ ಗೆಲುವಿನಲ್ಲಿ ಎ ಪ್ಯಾಕ್ ಸಾಕಷ್ಟು ಶ್ರಮ ವಹಿಸಿದೆ.

    ಸುಬ್ರಮಣ್ಯ ಸ್ವಾಮಿ ದರ್ಶನ ಬಳಿಕ ಮಾತನಾಡಿದ ಶಶಿಭೂಷಣ್, ಕುಕ್ಕೆ ಸುಬ್ರಹ್ಮಣ್ಯ ಅತ್ಯಂತ ಇತಿಹಾಸ ಪ್ರಸಿದ್ಧ ಕ್ಷೇತ್ರವಾಗಿದೆ. ಈ ಕ್ಷೇತ್ರಕ್ಕೆ ಬಂದು ಪುಳಕಿತನಾಗಿದ್ದೇನೆ. ಸನಾತನ ಧರ್ಮ ಉಳಿಸಲು ಅಮೇರಿಕಾದಲ್ಲಿ 500 ಎಕರೆ ಜಾಗದಲ್ಲಿ ಸನಾತನ ಧಾರ್ಮಿಕ ಕೇಂದ್ರ ಕಟ್ಟಿಸುತ್ತಿದ್ದೇವೆ. ಪ್ರಧಾನಿ ಮೋದಿ ಅವರಿಂದ ಸನಾತನ ಧರ್ಮಕ್ಕೆ ಒಳ್ಳೆಯದಾಗಲಿದೆ‌.

    ಚಂಪಾಷಷ್ಠಿ ಹಿನ್ನೆಲೆಯಲ್ಲಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಬೆಳಗ್ಗೆ 6.57ಕ್ಕೆ ಸಲ್ಲುವ ವೃಶ್ಚಿಕ ಲಗ್ನದಲ್ಲಿ ಉಮಾಮಹೇಶ್ವರ ಸ್ವಾಮೀಯ ಬ್ರಹ್ಮರಥೋತ್ಸವ ನಡೆಯಿತು. ಶುಕ್ರವಾರ (ಡಿ.06) ರಾತ್ರಿ ಚಂಪಾಷಷ್ಠಿ ಹಿನ್ನಲೆ ಪಟಾಕಿ ಸಿಡಿಸಿ ಸಂಭ್ರಮಿಸಲಾಯಿತು. ಈ ವೇಳೆ ಪಲ್ಲಕ್ಕಿಯಲ್ಲಿ ಉತ್ಸವ ಮೂರ್ತಿ ತಂದು ಮೆರವಣಿಗೆ ಮಾಡಲಾಯಿತು. ಪಟಾಕಿ ಸಿಡಿಸುವುದನ್ನು ನೋಡಲು ಮದ್ಯರಾತ್ರಿ 2 ಗಂಟೆವರೆಗೂ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರಿದ್ದರು.

    Continue Reading

    LATEST NEWS

    90 ವರ್ಷಗಳ ಲಿವ್​ಇನ್​ ರಿಲೇಷನ್​ಶಿಪ್​ ; 102ರ ಅಜ್ಜಿಯೊಡನೆ 100ರ ಅಜ್ಜನ ಮದುವೆ

    Published

    on

    ಜೊತೆಯಾಗಿ ವ್ಯಾಸಂಗ ಮುಗಿಸಿ ಪರಸ್ಪರ ಪ್ರೀತಿಸಿ 90 ವರ್ಷಗಳ ಕಾಲ ಲಿವ್​ಇನ್​ ರಿಲೇಷನ್​ಶಿಪ್​ ​ನಲ್ಲಿದ್ದ ಜೋಡಿಯೊಂದು ಇದೀಗ ವಿವಾಹವಾಗುವ ಮೂಲಕ ಗಿನ್ನೆಸ್ ವಿಶ್ವ​​ ದಾಖಲೆಯನ್ನು ಸೃಷ್ಟಿಸಿದ್ದಾರೆ. 100 ವರ್ಷದ ಅಜ್ಜನೊಂದಿಗೆ 102 ವಯಸ್ಸಿನ ಅಜ್ಜಿ ಸಪ್ತಪದಿ ತುಳಿಯುವ ಮುಖಾಂತರ ವಿಶ್ವದ ಅತ್ಯಂತ ಹಳೆಯ ನವವಿವಾಹಿತ  ಜೋಡಿ ಎಂಬ ಬಿರುದನ್ನು ಪಡೆದುಕೊಂಡಿದ್ದಾರೆ.

    ಈ ‘ಪ್ರೀತಿ’ ಎಂಬುದು ಬರೆಯಲು ಚಿಕ್ಕ ಪದವಾಗಿರಬಹುದು, ಆದರೆ ಆ ಪದವು ಎಲ್ಲರ ಜೀವನದಲ್ಲಿ ತುಂಬಾ ಮಹತ್ವವಾದ ಪಾತ್ರ ವಹಿಸುತ್ತದೆ ಎಂದು ಹೇಳಿದರೆ ಅತಿಶಯೋಕ್ತಿಯಲ್ಲ. ಯಾರಿಗೆ ಈ ‘ಪ್ರೀತಿ’ ಬೇಡ ಹೇಳಿ? ಈ ಪ್ರೀತಿಯು ಉಳಿದಿರುವುದೇ ನಂಬಿಕೆ, ತಿಳುವಳಿಕೆ ಮತ್ತು ಕಾಳಜಿಯ ಮೇಲೆ ಎಂದು ಹೇಳಬಹುದು. ಪ್ರೀತಿ/ಪ್ರೇಮಿಯ ಬಗ್ಗೆ ಸ್ಪಷ್ಟವಾದ ಅರಿವಿದ್ದಾಗ ಆ ಪ್ರೀತಿ ಕೊನೆವರೆಗೂ ಉಳಿಯುತ್ತದೆ. ಹಾಗೆಯೇ ಇಲ್ಲಿಯೂ ಹೆರಯದಲ್ಲೇ ಪ್ರೀತಿಗೆ ಬಿದ್ದ ಪ್ರೇಮಿಗಳು ವೃದ್ಧಾಪ್ಯದಲ್ಲಿ ಮದುವೆಯಾಗುವ ಮುಖಾಂತರ ಪ್ರೇಮಕ್ಕೆ ಹೊಸ ತಿರುವು ನೀಡಿದ್ದಾರೆ.

    ಬರ್ನಿ ಲಿಟ್‌ಮ್ಯಾನ್ ಮತ್ತು ಮಾರ್ಜೋರಿ ಫಿಟರ್‌ಮ್ಯಾನ್ ಜೊತೆ ಪೆನ್ಸಿಲ್ವೇನಿಯಾದ ಫಿಲಡೆಲ್ಫಿಯಾದಲ್ಲಿನ ತಮ್ಮ ನಿವಾಸದಲ್ಲಿ ವಿವಾಹವಾಗಿದ್ದಾರೆ. ಬರ್ನಿ, ಮಾಜಿ ಇಂಜಿನಿಯರ್ ಮತ್ತು ಮಾರ್ಜೋರಿ, ನಿವೃತ್ತ ಶಿಕ್ಷಕಿ. ಗಿನ್ನೆಸ್​​ ವಿಶ್ವ ದಾಖಲೆಯ ಅಧಿಕೃತ ಇನ್ಸ್ಟಾಗ್ರಾಮ್​ ಖಾತೆ(www.instagram.com/guinnessworldrecords)ಯಲ್ಲಿ ಇವರ ಮದುವೆಯ ಕುರಿತ ವಿಡಿಯೋ ಹಂಚಿಕೊಳ್ಳಲಾಗಿದ್ದು, ವ್ಯಾಪಕವಾಗಿ ಹರಿದಾಡುತ್ತಿದೆ. ವಿಡಿಯೋ ಹಂಚಿಕೊಂಡ ಕೇವಲ ಒಂದೇ ದಿನದಲ್ಲಿ 1.1 ಮಿಲಿಯನ್​ ಅಂದರೆ 10 ಲಕ್ಷಕ್ಕೂ ಅಧಿಕ ವೀಕ್ಷಣೆಯನ್ನು ಪಡೆದುಕೊಂಡಿದೆ. ಜೊತೆಗೆ 36,820 ನೆಟ್ಟಿಗರು ಲೈಕ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

     

    Continue Reading

    BIG BOSS

    BBK11: ಈ ವಾರ ಬಿಗ್​ಬಾಸ್​ ಮನೆಯಲ್ಲಿ ಕಾದಿದ್ಯಾ ಬಿಗ್​ ಟ್ವಿಸ್ಟ್; ಎಲಿಮಿನೇಷನ್ ಇರೋದು ಡೌಟ್

    Published

    on

    ಕನ್ನಡದ ಬಿಗ್​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್ 11 ಶುರುವಾಗಿ 10 ವಾರಗಳು ಕಳೆಯುತ್ತಿವೆ. ಇದೇ ಹೊತ್ತಲ್ಲಿ ಈ ವಾರ ಬಿಗ್​ಬಾಸ್ ಮನೆಯಿಂದ ಆಚೆ ಹೋಗಲು 8 ಮಂದಿ ನಾಮಿನೇಟ್ ಆಗಿದ್ದರು. ನಿನ್ನೆಯ ಸಂಚಿಕೆಯಲ್ಲಿ ಈ ವಾರ ಬಿಗ್​ಬಾಸ್​ ಮನೆಯಿಂದ ಆಚೆ ಹೋಗುವ ಸ್ಪರ್ಧಿಗಳು ಯಾರೆಲ್ಲಾ ಅಂತ ಹೇಳಿದ್ದರು.

    ಉಗ್ರಂ ಮಂಜು, ಗೌತಮಿ ಜಾಧವ್​, ಮೋಕ್ಷಿತಾ ಪೈ, ಚೈತ್ರಾ ಕುಂದಾಪುರ, ಭವ್ಯಾ ಗೌಡ, ಗೋಲ್ಡ್ ಸುರೇಶ್​, ಐಶ್ವರ್ಯಾ ಹಾಗೂ ರಜತ್ ನಾಮಿನೇಟ್​ ಆಗಿದ್ದಾರೆ. ಈಗಾಗಲೇ ಬಿಗ್​ಬಾಸ್​ ಮನೆಯಿಂದ ಯಮುನಾ ಶ್ರೀನಿಧಿ, ರಂಜಿತ್, ಜಗದೀಶ್, ಹಂಸ, ಮಾನಸಾ, ಅನುಷಾ ರೈ, ಧರ್ಮ ಕೀರ್ತಿರಾಜ್‌ ಔಟ್ ಆಗಿದ್ದಾರೆ. ಶೋಭಾ ಶೆಟ್ಟಿ ಕೂಡ ಕಳೆದ ವಾರ ಆಚೆ ಬಂದಿದ್ದರು ಆದರೆ ಈ ವಾರ ಯಾರು ಔಟ್ ಆಗಬಹುದು ಎಂಬ ಕುತೂಹಲ ಎಲ್ಲರಲ್ಲೂ ಇದೆ.

    ಆದರೆ ಇದರ ಮಧ್ಯೆ ವೀಕ್ಷಕರು ವೋಟ್ ಮಾಡಲು ವೋಟಿಂಗ್ ಲೈನ್ಸ್ ತೆರೆದಿಲ್ಲ. ಹೀಗಾಗಿ ವೀಕ್ಷಕರಲ್ಲಿ ಅನುಮಾನ ಮೂಡಿದೆ. ನಿನ್ನೆಯ ಸಂಚಿಕೆಯಲ್ಲಿ 10ನೇ ವಾರದ ನಾಮಿನೇಷನ್ ಪ್ರಕ್ರಿಯೆ ಸಂಪೂರ್ಣವಾಗಿ ಮುಗಿದಿತ್ತು. ಕಾರ್ಯಕ್ರಮದ ಕೊನೆಯಲ್ಲಿ ನಾಮಿನೇಟ್​ ಆದ ಸ್ಪರ್ಧಿಗಳ ಹೆಸರನ್ನು ಬಿಗ್​ಬಾಸ್​ ಘೋಷಣೆ ಮಾಡುತ್ತಿದ್ದರು. ಆದರೆ ಮಾಡಿಲ್ಲ. ಜೊತೆಗೆ ವೋಟಿಂಗ್ ಲೈನ್ಸ್ ಕೂಡ ಓಪನ್ ಆಗಿಲ್ಲ. ಹೀಗಾಗಿ ಒಂದು ಅರ್ಥದಲ್ಲಿ ಈ ವಾರ ಎಲಿಮಿನೇಷನ್ ಇರೋದಿಲ್ಲ ಎಂದು ಖಚಿತವಾಗಿದೆ.

    ಈ ವಿಚಾರ ಮನೆಯಲ್ಲಿರೋ ಸ್ಪರ್ಧಿಗಳಿಗೆ ಗೊತ್ತಿಲ್ಲ. ಹೀಗಾಗಿ 8 ಮಂದಿ ನಾಮಿನೇಷನ್‌ ಟೆನ್ಷನ್​ನಲ್ಲೇ ಇದ್ದಾರೆ. ಹಾಗಾದ್ರೇ ಭಾನುವಾರದ ಸಂಚಿಕೆಯಲ್ಲಿ ಬಿಗ್​ಬಾಸ್​ ಟ್ವಿಸ್ಟ್ ಕೊಡ್ತಾರಾ? ಅಥವಾ ಕಳೆದ ಕೆಲವು ಸೀಸನ್‌ಗಳ ಸ್ಪರ್ಧಿಗಳನ್ನು ಸೀಕ್ರೆಟ್‌ ರೂಮ್‌ನಲ್ಲಿ ಇರುತ್ತಾರಾ ಅಂತ ಕಾದು ನೋಡಬೇಕಿದೆ.

    Continue Reading

    LATEST NEWS

    Trending