NATIONAL
ಗೂಗಲ್ ಮ್ಯಾಪ್ ನಂಬಿ ಎಡವಟ್ಟು; 50 ಅಡಿ ಆಳಕ್ಕೆ ಕಾರು ಬಿದ್ದು ಮೂವರ ದುರ್ಮ*ರಣ
Published
2 weeks agoon
ಮಂಗಳೂರು/ಉತ್ತರ ಪ್ರದೇಶ: ಜಿಪಿಎಸ್ ಸಿಸ್ಟಮ್ ಅಂದರೆ ಗೂಗಲ್ ಮ್ಯಾಪ್ ಸಹಾಯದಿಂದ ಬರುತ್ತಿದ್ದ ವಾಹನ ಸೇತುವೆಯಿಂದ ಕೆಳಗೆ ಬಿದ್ದ ಘಟನೆ ಉತ್ತರ ಪ್ರದೇಶದ ಬರೇಲಿ ಜಿಲ್ಲೆಯಲ್ಲಿ ಸಂಭವಿಸಿದೆ. ಅ*ಪಘಾತದಲ್ಲಿ ಮೂವರು ಸಾ*ವನ್ನಪ್ಪಿದ್ದಾರೆ. ಗ್ರಾಮಸ್ಥರು ರಾಮಗಂಗಾ ನದಿಗೆ ಹೋದಾಗ ಹಾನಿಗೊಳಗಾದ ವಾಹನವನ್ನು ನೋಡಿದರು. ಕಾರಿನಲ್ಲಿದ್ದ ಮೂವರೂ ಸಾ*ವನ್ನಪ್ಪಿದ್ದಾರೆ.
ಮಾರ್ಗಮಧ್ಯೆ ಸೇತುವೆ ಮುರಿದು ಬಿದ್ದ ಪರಿಣಾಮ ದು*ರ್ಘಟನೆ ಸಂಭವಿಸಿದೆ. ಇದರಲ್ಲಿ ಆಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಜಿಪಿಎಸ್ ವ್ಯವಸ್ಥೆ ನೆಚ್ಚಿಕೊಂಡು ಮುರಿದ ಐವತ್ತು ಅಡಿ ಎತ್ತರ ಸೇತುವೆಯತ್ತ ತೆರಳಿದ ಕಾರು, ಕೆಳಗೆ ಬಿದ್ದು ಕಾರಿನೊಳಗೆ ಸಿಲುಕಿ ಮೂವರು ಸಾ*ವನ್ನಪ್ಪಿದ್ದಾರೆ.
ಕಾರಿನಲ್ಲಿ ಇದ್ದ ಮೂವರು, ಫರೂಕಾಬಾದ್‌ನ ವಿವೇಕ್ ಕುಮಾರ್, ಅಮಿತ್ ಮತ್ತು ಕೌಶಲ್. ಗೂಗಲ್ ಮ್ಯಾಪ್ ಸಹಾಯದಿಂದ ವಾಹನ ದತ್ತಗಂಜ್ ನಿಂದ ಬರುತ್ತಿತ್ತು. ಬೆಳಗ್ಗೆ ಗ್ರಾಮಸ್ಥರು ಸ್ಥಳಕ್ಕೆ ಹೋಗಿ ನೋಡಿದಾಗ ಅಲ್ಲಲ್ಲಿ ರ*ಕ್ತ ಬಿದ್ದಿತ್ತು. ಕಾರಿನೊಳಗೆ ಹೋಗಿ ನೋಡಿದಾಗ ಮೂವರೂ ಮೃ*ತಪಟ್ಟಿದ್ದರು. ಗುರುತು ಪತ್ತೆಯಾದ ಬಳಿಕ. ಎಲ್ಲರೂ ಮದುವೆ ಸಮಾರಂಭದಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಬರುತ್ತಿದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ಬಗ್ಗೆ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಅ*ವಘಡ ಸಂಭವಿಸಿದಾಗ ಎಲ್ಲರೂ ಜಿಪಿಎಸ್ (ಗೂಗಲ್ ಮ್ಯಾಪ್) ಸಹಾಯದಿಂದ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಮ*ರಣೋತ್ತರ ಪರೀಕ್ಷೆ ಮನೆಗೆ ತಲುಪಿದ ಕುಟುಂಬಸ್ಥರು ತಿಳಿಸಿದ್ದಾರೆ. ಇದೀಗ ಇಲಾಖೆ ಅಧಿಕಾರಿಗಳ ವಿರುದ್ಧ ಕುಟುಂಬಸ್ಥರು ಆರೋಪ ಮಾಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೇತುವೆ ಅಪೂರ್ಣಗೊಂಡಿದ್ದು, ಬ್ಯಾರಿಕೇಡ್ ಹಾಕಿಲ್ಲ ಎಂದು ಕುಟುಂಬದವರು ಆರೋಪ ಮಾಡುತ್ತಿದ್ದಾರೆ.
DAKSHINA KANNADA
1700 ವರ್ಷಗಳ ಬಳಿಕ ಸಾಂಟಾ ಕ್ಲಾಸ್ ನಿಜ ಮುಖ ಅನಾವರಣ..!
Published
8 hours agoon
05/12/2024By
NEWS DESKಮಂಗಳೂರು : ಇನ್ನೇನು ಕೆಲವೇ ದಿನಗಳಲ್ಲಿ ಕ್ರಿಸ್ಮಸ್ ಹಬ್ಬ ಬರಲಿದ್ದು, ಹಬ್ಬಕ್ಕೆ ಕಳೆ ತರಲು ಉಡುಗೊರೆ ಸಹಿತವಾಗಿ ಸಾಂಟಾ ಕ್ಲಾಸ್ ಕೂಡ ಬರಲಿದ್ದಾನೆ. ಮಕ್ಕಳಿಗೆ ತುಂಬಾ ಅಚ್ಚುಮೆಚ್ಚಿನ ಕ್ರಿಸ್ಮಸ್ ಅಜ್ಜನಾಗಿ ಕಾಣಿಸಿಕೊಳ್ಳುವ ಈ ಸಾಂಟಾ ಕ್ಲಾಸ್ ನಿಜಕ್ಕೂ ಇದ್ರಾ? ಅಥವಾ ಇದೊಂದು ಕಾಲ್ಪನಿಕ ವ್ಯಕ್ತಿಯಾ ಎಂಬ ಗೊಂದಲ ಹಲವರಲ್ಲಿ ಇರಬಹುದು. ಆದ್ರೆ ಈ ಗೊಂದಲಕ್ಕೆ ತೆರೆ ಎಳೆಯುವ ಕೆಲಸವನ್ನು ವಿಜ್ಞಾನಿಗಳು ಮಾಡಿದ್ದು, ನಿಜವಾದ ಸಾಂಟಾಕ್ಲಾಸ್ ಹೇಗಿದ್ದ ಎಂಬ ಚಿತ್ರವನ್ನು ರಚಿಸಿದ್ದಾರೆ.
ಮೈರಾದ ಸೇಂಟ್ ನಿಕೋಲ್ಸನ್ ಎಂಬ ವ್ಯಕ್ತಿಯೇ ಈ ಸಾಂಟಾ ಕ್ಲಾಸ್ ಎಂಬುದನ್ನು ವಿಜ್ಞಾನಿಗಳು ಅನಾವರಣ ಮಾಡಿದ್ದಾರೆ. 1700 ವರ್ಷಗಳ ಬಳಿಕ ಇದೇ ಮೊದಲ ಬಾರಿ ಸಾಂಟಾ ಕ್ಲಾಸ್ ಯಾರು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಈ ಮೂಲಕ ಕ್ರೈಸ್ತ ಸಮುದಾಯದವರಾದ ನಿಕೋಲ್ಸನ್ , ಮಕ್ಕಳಿಗೆ ಉಡುಗೊರೆಗಳನ್ನು ನೀಡುತ್ತಿದ್ದು, ಬಳಿಕ ಇದು ಕ್ರಿಸ್‌ಮಸ್ ಜೊತೆಗೆ ಸಂಬಂಧ ಹೊಂದಿತು ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಕಾರಣದಿಂದ ಮಕ್ಕಳು ಅವರನ್ನು ತುಂಬಾ ಇಷ್ಟ ಪಡುತ್ತಿದ್ದರು ಎಂದು ಅಭಿಪ್ರಾಯಪಟ್ಟಿದ್ದಾರೆ. ಮಿರರ್ ವರದಿಯ ಸೇಂಟ್ ನಿಕೋಲ್ಸನ್ ಅವರ ತಲೆ ಬುರುಡೆಯನ್ನು ವಿಧಿ ವಿಜ್ಞಾನದ ಮೂಲಕ ಅಂದಾಜಿಸಿ ಅವರ ಮುಖವನ್ನು ಚಿತ್ರಿಸಲಾಗಿದೆ. ಪ್ರಪಂಚದಾದ್ಯಂತ ಅಪಾರ ಜನಪ್ರಿಯತೆ ಹೊಂದಿರುವ ಸೇಂಟ್ ನಿಕೋಲ್ಸನ್ ಅವರ ಬಗ್ಗೆ ಯಾವುದೇ ನಿರ್ದಿಷ್ಟ ವಿವರಣೆ ಇಲ್ಲದೇ ಇದ್ರೂ ಜನರು ಅವರ ಅಸಲಿ ಮುಖವನ್ನು ನೋಡುವಂತೆ ವಿಜ್ಞಾನಿಗಳು ಮಾಡಿದ್ದಾರೆ ಎನ್ನಲಾಗಿದೆ.
ಈ ವರದಿಯ ಪ್ರಕಾರ, ಅಧ್ಯಯನದ ಮುಖ್ಯಸ್ಥ ಸಿಸೆರೋ ಮೊರೆಸ್ ಅವರು ನಿಕೋಲ್ಸನ್ ಅವರ ತಲೆ ತುಂಬಾ ಬಲವಾಗಿತ್ತು ಎಂದು ತೋರಿಸುತ್ತದೆ ಎಂದಿದ್ದಾರೆ. ಈ ಮುಖವು 1823 ರಲ್ಲಿ ‘ಎ ವಿಸಿಟ್ ಫ್ರಮ್ ಸೇಂಟ್ ನಿಕೋಲ್ಸನ್’ ಎಂಬ ಕವಿತೆಯಲ್ಲಿ ಮುದ್ರಿತವಾದ ಮುಖಕ್ಕೆ ಹೊಂದಿಕೆಯಾಗುತ್ತದೆ ಎಂದಿದ್ದಾರೆ. ಈ ಕವಿತೆಯಲ್ಲಿ ದಪ್ಪ ಗಡ್ಡದ ಮುಖವು ಸಾಂಟಾ ಕ್ಲಾಸ್ ಅವರನ್ನು ನೆನಪಿಸುತ್ತದೆ.
ಸಾಂಟಾ ಕ್ಲಾಸ್ ಬಗ್ಗೆ ಅಧ್ಯಯನ ನಡೆಸ್ತಾ ಇರುವುದು ಹೊಸದೇನು ಅಲ್ಲ. 1950 ರಲ್ಲಿ ಲುಯಿಗಿ ಮಾರ್ಟಿನೋ ಎಂಬವರು ಸೇಂಟ್ ನಿಕೋಲ್ಸನ್ ಅವರನ್ನು ಅಧ್ಯಯನ ಮಾಡಲು ಆರಂಭಿಸಿದ್ದರು. ಈಗ ಸಿಸೆರೋ ಮೋರಸ್ ಅವರು ಲುಯಿಗಿ ಮಾರ್ಟಿನೋ ಅವರು ಸಂಗ್ರಹಿಸಿದ ಡೇಟಾವನ್ನು ಬಳಿಸಿಕೊಂಡು 3ಡಿ ಯಲ್ಲಿ ಅವರ ತಲೆಯನ್ನು ಮರು ನಿರ್ಮಿಸಿದ್ದಾರೆ. ನಂತರ ಎಸ್ಪಾಟಿಕ್ಸ್ ಎಕ್ಸ್‌ಟೆನ್ಶನ್ ಸಹಾಯದಿಂದ ಮುಖದ ಬಾಹ್ಯ ರೇಖೆಯನ್ನು ರಚಿಸಿ ರೂಪ ನೀಡಿದ್ದಾರೆ.
LATEST NEWS
2025 ರ ಕ್ಯಾಲೆಂಡರ್ ನೋಡಿ ಭಯ ಪಟ್ಟ ಜನ…! ಏನು ಈ WTF..?
Published
8 hours agoon
05/12/2024By
NEWS DESKಮಂಗಳೂರು : 2024 ರ ಕ್ಯಾಲೆಂಡರ್ ಬದಲಾಯಿಸಿ 2025 ರ ಕ್ಯಾಲೆಂಡರ್ ಗೋಡೆಯಲ್ಲಿ ನೇತು ಹಾಕುವ ಸಮಯ ಬಂದೇ ಬಿಟ್ಟಿದೆ. ಹೊಸ ವರ್ಷದಲ್ಲಿ ಹೊಸದಾಗಿ ಏನು ಮಾಡುವುದು ? ಎಲ್ಲಿ ಹೋಗುವುದು ? ಹೇಗೆ ಹೊಸ ವರ್ಷವನ್ನು ಹೇಗೆ ಎಂಜಾಯ್ ಮಾಡುವುದು ? ಹೀಗೆ ಹಲವು ಪ್ಲ್ಯಾನ್‌ಗಳು ಕೂಡ ಆರಂಭವಾಗಿದೆ. ಆದ್ರೆ, ಸಾಮಾಜಿಕ ಜಾಲತಾಣದಲ್ಲಿ ಹೊಸ ವರ್ಷದ ಆರಂಭದ ಬಗ್ಗೆ ಆತಂಕಕಾರಿ ವಿಚಾರಗಳು ಚರ್ಚೆ ಆಗುತ್ತಿವೆ. ಹೊಸ ವರ್ಷದ ಆರಂಭ ಬುಧವಾರ ಆಗುತ್ತಿರುವುದೇ ಇದಕ್ಕೆ ಕಾರಣ ಅಂತ ಚರ್ಚೆಗಳು ನಡಿತಾ ಇದೆ.
ಹೊಸ ವರ್ಷದ ಆರಂಭ ಅಂದ ಮೇಲೆ ಎಲ್ಲರಿಗೂ ಹೊಸತೊಂದು ಖುಷಿ ಕೊಡುವ ದಿನದ ಆರಂಭ ಮಾತ್ರವಲ್ಲ, ಪೂರ್ತಿ ವರ್ಷ ಚೆನ್ನಾಗಿ ಸಾಗಲಿ ಎಂದು ಒಬ್ಬರಿಗೊಬ್ಬರು ಹಾರೈಸುವ ದಿನ ಕೂಡ ಹೌದು. ಆದ್ರೆ, 2025 ರ ಆರಂಭದ ಕುರಿತಾಗಿ ದೊಡ್ಡ ಚರ್ಚೆ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿದೆ. ಮೊಬೈಲ್ ಕ್ಯಾಲೆಂಡರ್ ಪ್ರಕಾರವಾಗಿ ಮೊದಲ ಮೂರು ದಿನಗಳನ್ನು WTF ಎಂದು ಕರೆಯಲಾಗುತ್ತದೆ. ಬುಧವಾರ ಗುರುವಾರ ಶುಕ್ರವಾರ ಈ ಮೊದಲ ಮೂರು ದಿನಗಳಲ್ಲಿ ಆರಂಭವಾಗುವ ವರ್ಷ ಸುಂದರವಾಗಿರುವುದಿಲ್ಲ ಎಂದು ಚರ್ಚೆ ನಡೆಯುತ್ತಿದೆ.
WTF ಅಂದರೆ ಏನು ಇದರ ಭಯ ಯಾಕೆ ?
ಎಕ್ಸ್ ಖಾತೆಯ ಬಳಕೆದಾರರೊಬ್ಬರು ಈ WTF ಮಾರ್ಕ್ ಮಾಡಿದ ಕ್ಯಾಲೆಂಡರ್ ಹಂಚಿಕೊಂಡು, “2025 WTF ನೊಂದಿಗೆ ಆರಂಭವಾಗುವುದಕ್ಕೆ ಚಿಂತಿಸಬೇಕೇ” ಎಂದು ಬರೆದಿದ್ದಾರೆ. ಈ ಪೋಸ್ಟ್ ವೈರಲ್ ಆಗಿದ್ದು, ಸುಮಾರು 11 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದಾರೆ ಮತ್ತು ಇದರ ಅರ್ಥ ಏನು ಎಂದು ಜನರು ಸರ್ಚ್ ಇಂಜಿನ್‌ನಲ್ಲಿ ಹುಡುಕಾಟ ನಡೆಸಿದ್ದಾರೆ. ಅಲ್ಲದೇ, ಮುಂದಿನ ವರ್ಷ ಆಶಾದಾಯಕವಾಗಿಲ್ಲ ಎಂದು ಬರೆದುಕೊಂಡಿದ್ದಾರೆ. ಕೆಲವರು ಕಳೆದ ವರ್ಷಕ್ಕಿಂತ ಕೆಟ್ಟದಾಗಿರಲಿದೆ ಎಂದರೆ, ಇನ್ನೂ ಕೆಲವರು ಚಿಂತಿಸಬೇಕಾಗಿದೆ ಎಂದು ಹೇಳಿದ್ದಾರೆ.
2020 ರ ಪುನಾರಾವರ್ತನೆಯ ಭಯ..!
ಇದು ಇಷ್ಟೊಂದು ವೈರಲ್ ಆಗಲು ಕಾರಣವಾಗಿದ್ದು 2020 ರ ಆರಂಭ ಬುಧವಾರದಿಂದಲೇ ಆಗಿತ್ತು ಎಂಬುದು . 2020ರ ಆರಂಭದಲ್ಲೇ ಕೋವಿಡ್ 19 ಜಗತ್ತಿಗೆ ಅಪ್ಪಳಿಸಿತ್ತು. ಆ ವರ್ಷ ಜಗತ್ತಿನ ಜನ ಏನೆಲ್ಲಾ ಸಂಕಷ್ಟ ಪಟ್ಟಿದ್ದರು ಎಂಬುದು ಮರೆಯುವಂತಿಲ್ಲ. ಹೀಗಾಗಿ ಈ ವರ್ಷದ ಆರಂಭ ಬುಧವಾರ ಆಗುವ ಕಾರಣ ಮತ್ತೊಂದು ಸಂಕಷ್ಟ ಜಗತ್ತನ್ನು ಕಾಡಲಿದೆಯಾ ಎಂಬ ಚಿಂತೆಯನ್ನು ಜನ ವ್ಯಕ್ತಪಡಿಸಿದ್ದಾರೆ.
ಮಂಗಳೂರು/ಶ್ರೀಹರಿಕೋಟಾ : ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ‘ಪ್ರೋಬಾ – 3’ ಯನ್ನು ಹೊತ್ತ ಇಸ್ರೋದ ಪಿಎಸ್‌ಎಲ್‌ವಿ ರಾಕೆಟ್‌ನ್ನು ಶ್ರೀಹರಿಕೋಟಾ ಬಾಹ್ಯಾಕಾಶ ಕೇಂದ್ರದಿಂದ ಇಂದು ನಭಕ್ಕೆ ಹಾರಿಸಲಾಗಿದೆ.
ಇಸ್ರೋದ ವಾಣಿಜ್ಯ ಬಾಹ್ಯಾಕಾಶ ಮಿಷನ್ ಆಗಿರುವ ಪ್ರೋಬಾ – 3 ನೌಕೆಯನ್ನು ಸಂಜೆ 4 ಗಂಟೆ 4 ನಿಮಿಷಕ್ಕೆ ಉಡ್ಡಯನ ಮಾಡಲಾಗಿದೆ. 550 ಕೆಜಿ ತೂಕದ ಪ್ರೋಬಾ 3 ಮಿಷನ್ ಅನ್ನು ಪಿಎಸ್‌ಎಲ್‌ವಿ ಸಿ 59 ರಾಕೆಟ್ ಮೂಲಕ ಹಾರಿಸಲಾಗಿದೆ.
ಇದನ್ನು ಇಸ್ರೋದ ವಾಣಿಜ್ಯ ವಿಭಾಗವಾದ ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ ನಿರ್ವಹಣೆ ಮಾಡಲಿದೆ. ಡಿಸೆಂಬರ್ 4 ರಂದು ಸಂಜೆ 4.08ಕ್ಕೆ ಉಡಾವಣೆ ಆಗಬೇಕಿತ್ತು. ಆದರೆ, ಉಪಗ್ರಹ ಪ್ರೊಪಲ್ಷನ್ ಸಿಸ್ಟಮ್‌ನಲ್ಲಿ ಅಸಂಗತತೆ ಪತ್ತೆಯಾದ ಕಾರಣಕ್ಕೆ ಇಎಸ್‌ಎ ಮುಂದೂಡಿತ್ತು.
ಇದನ್ನೂ ಓದಿ : ಕ್ರಿಕೆಟ್ ದೇವರ ಮಗನಾದರೂ ಯಾರಿಗೂ ಬೇಡವಾದ ಅರ್ಜುನ್ ತೆಂಡೂಲ್ಕರ್ !
ಈ ಉಪಗ್ರಹಗಳ ಸಹಾಯದಿಂದ ಕೃತಕ ಸೂರ್ಯಗ್ರಹಣ ಸೃಷ್ಟಿಸಿ, ಸೂರ್ಯನ ಕರೋನಾ ಅಧ್ಯಯನ ಮಾಡಲು ಬಾಹ್ಯಾಕಾಶ ವಿಜ್ಞಾನಿಗಳಿಗೆ ಸಾಧ್ಯವಾಗಲಿದೆ. ಬಾಹ್ಯಾಕಾಶ ನೌಕೆಗಳ ನಿಖರ ಚಲನೆ ಮತ್ತು ಸೂರ್ಯನ ಹೊರಗಿನ ವಾತಾವರಣ ಅಧ್ಯಯನ ಮಾಡುವುದು ಈ ಕಾರ್ಯಾಚರಣೆಯ ಉದ್ದೇಶವಾಗಿದೆ.
Pingback: ಸ್ನೇಹಿತನಿಗೆ ಥಳಿಸಿ ಅ*ಪ್ರಾಪ್ತೆ ಮೇಲೆ ಅ*ತ್ಯಾಚಾ*ರ ಎಸಗಿದ ಟ್ರಕ್ ಚಾಲಕ - NAMMAKUDLA NEWS - ನಮ್ಮಕುಡ್ಲ ನ್ಯೂಸ್