Connect with us

BANTWAL

ವಿಟ್ಲ: ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

Published

on

ಬಂಟ್ವಾಳ: ಇಲ್ಲಿನ ವಿಟ್ಲ – ಪೆರಾಜೆ, ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಸೆ. 5 ರಂದು ಶಿಕ್ಷಕರ ದಿನವನ್ನು ಆಚರಿಸಲಾಯಿತು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಸ್ಕಾಲರ್ ಶಿಪ್ ಮಾಸ್ಟರ್ ಎಂದೇ  ಖ್ಯಾತರಾದ ನಿವೃತ್ತ ಸರಕಾರಿ ಶಿಕ್ಷಕ ನಾರಾಯಣ ನಾಯ್ಕ್ ಅವರು ಮಾತನಾಡಿ, ” ಎರಡು ರೀತಿಯ ದೇವರು ಕಾಣಸಿಗುವ ಪವಿತ್ರ ಸ್ಥಳವೆಂದರೆ ಅದು ಶಾಲೆ.

ಶಿಕ್ಷಕ ವೃತ್ತಿ ಎನ್ನುವುದು ಬಿಳಿ ಬಟ್ಟೆ ಇದ್ದಂತೆ. ಅಂತಹ ಶುಭ್ರ ಬಟ್ಟೆಯಲ್ಲಿ ಒಂದು ಕಲೆಯೂ ಆಗದ ರೀತಿಯಲ್ಲಿ ಶಿಕ್ಷಕರು ತಮ್ಮ ವೃತ್ತಿಯ ಪಾವಿತ್ರ್ಯತೆಯನ್ನು  ಕಾಪಾಡಿಕೊಳ್ಳಬೇಕು ಹಾಗೂ ವಿದ್ಯಾರ್ಥಿಗಳಿಗೆ ಹೇಳುವ ಮೊದಲು ಶಿಕ್ಷಕರು ಅದನ್ನು ಪಾಲಿಸುವಂತಿರಬೇಕು.

ಬಾಲವಿಕಾಸದ ಶಿಕ್ಷಕರು ಇಂತಹ ಗುಣಗಳಿಗೆ ಉತ್ತಮ ನಿದರ್ಶನವಾಗಿ ಕಾಣುತ್ತಾರೆ. ಇಲ್ಲಿನ  ಶಿಕ್ಷಕರ ಸಂಸ್ಕಾರ ವಿದ್ಯಾರ್ಥಿಗಳ ಶಿಸ್ತಿನಲ್ಲಿ ಪ್ರತಿಬಿಂಬಿತವಾಗುತ್ತಿದೆ. ವಿದ್ಯಾರ್ಥಿಗಳು ಇಂತಹ ಶಿಕ್ಷಕರ ಮಾರ್ಗದರ್ಶನದಲ್ಲಿ ಶ್ರಮಪಟ್ಟು ಓದಿದರೆ ವಿದ್ಯಾಸರಸ್ವತಿಯನ್ನು ಒಲಿಸಿಕೊಳ್ಳಲು ಸಾಧ್ಯವಾಗುತ್ತದೆ ” ಎಂದರು.

ಅಧ್ಯಕ್ಷತೆ ವಹಿಸಿಕೊಂಡಿದ್ದ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ್ ಜೆ ಶೆಟ್ಟಿ ಅವರು ಸಂಸ್ಥೆಯ ಎಲ್ಲಾ ಸಿಬ್ಬಂದಿಗೆ ಉಡುಗೊರೆ ನೀಡಿ ಶುಭ ಹಾರೈಸಿದರು. ಇದೇ ವೇಳೆ ಮುಖ್ಯ ಅತಿಥಿ ನಾರಾಯಣ ನಾಯ್ಕ್ ಅವರ ನಿಸ್ವಾರ್ಥ ಸಮಾಜ ಸೇವೆಯನ್ನು ಗುರುತಿಸಿ, ವಿದ್ಯಾಸಂಸ್ಥೆಯ ಪರವಾಗಿ ಸನ್ಮಾನಿಸಿದರು.

ಶಾಲೆಯ ಆಡಳಿತಾಧಿಕಾರಿ ರವೀಂದ್ರ ದರ್ಬೆ, ಮುಖ್ಯೋಪಾಧ್ಯಾಯಿನಿ ವಿಜಯಲಕ್ಷ್ಮಿ ವಿ ಶೆಟ್ಟಿ ಹಾಗೂ ಶಿಕ್ಷಕ – ರಕ್ಷಕ ಸಂಘದ ಅಧ್ಯಕ್ಷೆ ಕಸ್ತೂರಿ ಪಿ ಶೆಟ್ಟಿ ಅವರು ಶಿಕ್ಷಕ ದಿನದ ಮಹತ್ವದ ಬಗ್ಗೆ ಅನಿಸಿಕೆ ವ್ಯಕ್ತಪಡಿಸಿದರು. ಈ ಸಂದರ್ಭ  ಸರ್ವಪಲ್ಲಿ  ಡಾ. ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.

ಸಭಾ ಕಾರ್ಯಕ್ರಮದ ನಂತರ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಾಗೂ ಶಿಕ್ಷಕರಿಗೆ ಕೆಲವು ಮನೋರಂಜನಾ ಆಟಗಳನ್ನು ಆಯೋಜಿಸಿದರು.

ವಿದ್ಯಾರ್ಥಿನಿಯರಾದ ಅನಿಶಾ ಆರ್ ಮತ್ತು ಪ್ರಕೃತಿ ಶೆಟ್ಟಿ ನಿರೂಪಿಸಿದರು. ಮೊಹಮ್ಮದ್ ಅಮೀರ್ ಸ್ವಾಗತಿಸಿ, ವೃದ್ಧಿ ಎ. ಕೊಂಡೆ ವಂದಿಸಿದರು. ಬಾಲವಿಕಾಸ ಟ್ರಸ್ಟ್ ನ  ಉಪಾಧ್ಯಕ್ಷ ಯತಿರಾಜ್ ಕೆ ಎನ್  ಹಾಗೂ ಕಾರ್ಯದರ್ಶಿ ಮಹೇಶ್ ಜೆ ಶೆಟ್ಟಿ ಉಪಸ್ಥಿತರಿದ್ದರು.

BANTWAL

Bantwala: ಹೃದಯ ಸಂಬಂಧಿ ಖಾಯಿಲೆಯಿಂದ 4 ವರ್ಷದ ಬಾಲಕಿ ನಿಧನ..!

Published

on

ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ಬಂಟ್ವಾಳದ ಮಿತ್ತೂರಿನಲ್ಲಿ ನಡೆದಿದೆ.

ಬಂಟ್ವಾಳ: ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದ 4 ವರ್ಷದ ಪುಟ್ಟ ಬಾಲಕಿಯೋರ್ವಳು ಮೃತಪಟ್ಟ ಘಟನೆ ಸೆ.24ರಂದು ನಡೆದಿದೆ.

ಮೃತ ಬಾಲಕಿಯನ್ನು ಬಂಟ್ವಾಳ ಮಿತ್ತೂರು ಸಮೀಪದ ಪಾಟ್ರಕೋಡಿ ನಿವಾಸಿ ಇಬ್ರಾಹಿಂ ಬಾತಿಷಾ ರವರ ಪುತ್ರಿ ಜಮೀಲಾ ಸನಿಕ (4) ಎಂದು ತಿಳಿದು ಬಂದಿದೆ.

ಜಮೀಲಾ  ಬಾಲಕಿ ಪುತ್ತೂರಿನ ಮುರದಲ್ಲಿರುವ ಅಲ್ ಬಿರ್ರ್ ಸ್ಕೂಲ್ ನ ಎಲ್.ಕೆ.ಜಿ. ಯಲ್ಲಿ ಕಲಿಯುತ್ತಿದ್ದಳು.

ಈಕೆ ಅನಾರೋಗ್ಯದಿಂದ ಇದ್ದು, ಬೆಂಗಳೂರಿನ ಹೃದಯಾಲಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾಳೆ.

Continue Reading

BANTWAL

Bantwala: ಓವರ್ ಟೇಕ್ ಮಾಡಲು ಹೋದ ಟೆಂಪೋ ರಿಕ್ಷಾ – ಕರೆಂಟ್ ಕಂಬಕ್ಕೆ ಗುದ್ದಿದ ಬಸ್..!

Published

on

ಬಂಟ್ವಾಳ: ಸರಕಾರಿ ಬಸ್ ಒಂದು ಓವರ್ ಟೇಕ್ ಮಾಡುತ್ತಿದ್ದ ಟೆಂಪೋ ರಿಕ್ಷಾವನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಗುದ್ದಿದ ಘಟನೆ ಬಂಟ್ವಾಳದ ಸಜಿಪಮೂಡ ಗ್ರಾಮದ ಕಂದೂರು ಎಂಬಲ್ಲಿ ನಡೆದಿದೆ.

ಮೆಲ್ಕಾರಿನಿಂದ ಬರುತ್ತಿದ್ದ ಇಲ್ಯಾಸ್ ಟೆಂಪೋ ರಿಕ್ಷಾ ಚಾಲಕನು ಕಂದೂರಿನ ಬಜಾರ್ ಅಡಿಟೋರಿಯಮ್ ಬಳಿ ಬರುತ್ತಿದ್ದ ಆಕ್ಟಿವಾ ಗಾಡಿಯೊಂದನ್ನು ಓವರ್ ಟೇಕ್ ಮಾಡುತ್ತಿದ್ದ.

ಈ ವೇಳೆ ಮುಡಿಪು ಮಾರ್ಗವಾಗಿ ಬರುತ್ತಿದ್ದ ಕಾಸರಗೋಡು ಬಿ.ಸಿ.ರೋಡ್ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕರೆಂಟ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.

ಬಸ್ ಗುದ್ದಿದ್ದ ರಭಸಕ್ಕೆ ಕರೆಂಟ್ ಕಂಬ ತುಂಡಾಗಿದೆ.

ಬಸ್ಸಿನಲ್ಲಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಸ್ಥಳಕ್ಕೆ ಬಂಟ್ವಾಳ ಸಂಚಾರಿ ಠಾಣಾ ಪೋಲಿಸರು ಆಗಮಿಸಿ, ಪರಿಶೀಲನೆ ನಡೆಸಿದರು.

Continue Reading

BANTWAL

Bantwala: ಕಾರುಗಳ ನಡುವೆ ಸರಣಿ ಅಪಘಾತ..!

Published

on

ಪಾಣೆಮಂಗಳೂರು ಸೇತುವೆಯಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸುಮಾರು ಒಂದು ತಾಸಿಗಿಂತಲೂ ಅಧಿಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.

ಬಂಟ್ವಾಳ: ಪಾಣೆಮಂಗಳೂರು ಸೇತುವೆಯಲ್ಲಿ 2 ಕಾರುಗಳ ನಡುವೆ ಮುಖಾಮುಖಿ ಢಿಕ್ಕಿಯಾಗಿ ಸುಮಾರು ಒಂದು ತಾಸಿಗಿಂತಲೂ ಅಧಿಕವಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ತೊಂದರೆಯಾದ ಘಟನೆ ನಡೆದಿದೆ.

ಪಾಣೆಮಂಗಳೂರು ಸೇತುವೆಯಲ್ಲಿ ಎರಡು ಕಾರುಗಳು ಡಿಕ್ಕಿಯಾಗಿದ್ದು, ಇದರ ಹಿಂಬದಿಯಿಂದ ಬಂದ ಮತ್ತೆ ಎರಡು ವಾಹನಗಳು ಢಿಕ್ಕಿ ಯಾಗಿದೆ.

ಡಿಕ್ಕಿಯ ರಭಸಕ್ಕೆ ಎರಡು ಕಾರುಗಳು ಜಖಂಗೊಂಡಿದೆ.

ಆದರೆ ಅದೃಷ್ಟವಶಾತ್ ಕಾರಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಗಾಯವಾಗದೆ ಪಾರಾಗಿದ್ದಾರೆ.

ಇದರ ಜೊತೆಗೆ ಸೇತುವೆ ಸಮೀಪ ನೆಹರು ನಗರ ಎಂಬಲ್ಲಿ ಲಾರಿಯೊಂದರ ಟಯರ್ ಕೆಟ್ಟು ಹೋಗಿ ನಿಂತಿತ್ತು.

ಹೀಗಾಗಿ ತಾಸುಗಟ್ಟಲೆ ವಾಹನಗಳು ಸಾಲಾಗಿ ನಿಂತಿದ್ದವು.

ಸೇತುವೆಯಲ್ಲಿ ಅಪಘಾತ ಸಂಭವಿಸಿದ ಪರಿಣಾಮ ವಾಹನಗಳ ಸಂಚಾರಕ್ಕೆ ಅಡ್ಡಿಯಾಯಿತು.

ವಾಹನಗಳನ್ನು ಕ್ಲಿಯರ್ ಮಾಡಲು ಟ್ರಾಫಿಕ್ ಪೋಲೀಸರು ಹರಸಹಾಸ ಪಟ್ಟರು.

ಅಪಘಾತ ನಡೆದು ಕೆಲವೇ ಹೊತ್ತಿನಲ್ಲಿ ವಾಹನಗಳ ಸಾಲು ಸುಮಾರು ಉದ್ದಕ್ಕೆ ತಲುಪಿತ್ತು.

ರಾಷ್ಟ್ರೀಯ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್ ಉಂಟಾದ ಹಿನ್ನೆಲೆಯಲ್ಲಿ ವಾಹನ ಸವಾರರು ಪಾಣೆಮಂಗಳೂರು ‌ಪೇಟೆ ಮೂಲಕ ಹಳೆ ಸೇತುವೆ ಮೂಲಕ ಸಂಚಾರಕ್ಕೆ ಪ್ರಯತ್ನ ಮಾಡಿದರಾದರೂ ಅಲ್ಲಿಯೂ ಟ್ರಾಫಿಕ್ ಸಮಸ್ಯೆ ಉಂಟಾಯಿತು.

ಪಾಣೆಮಂಗಳೂರು ಹಳೆಯ ಸೇತುವೆ ಮೇಲೆ ವಾಹನಗಳು ಹೋಗಿ ಸಾಲು ಸಾಲಾಗಿ ನಿಂತಿರುವ ಪೋಟೋ ವೈರಲ್ ಆಗಿದೆ.

ರಾತ್ರಿ ಹೊತ್ತು ವಾಹನಗಳ ಲೈಟ್ ಮತ್ತು ನೇತ್ರಾವತಿ ನದಿಯ ನೀರು ಕಂಗೊಳಿಸುವ ಚಿತ್ರವನ್ನು ಪಾಣೆಮಂಗಳೂರು ಮಂಗಳೂರು ಹೊಸ ಸೇತುವೆಯಿಂದ ಕ್ಲಿಕ್ ಮಾಡಿದ್ದಾರೆ.

ಪೊಲೀಸ್ ಸಿಬ್ಬಂದಿ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ಮಾಡಿದರು.

Continue Reading

LATEST NEWS

Trending