Connect with us

LATEST NEWS

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ(85) ಇನ್ನಿಲ್ಲ

Published

on

ವಿದ್ಯಾವಾಚಸ್ಪತಿ ಬನ್ನಂಜೆ ಗೋವಿಂದಾಚಾರ್ಯ(85) ಇನ್ನಿಲ್ಲ

ಉಡುಪಿ:  ಪದ್ಮಶ್ರೀ ಪುರಸ್ಕೃತ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯ  ಉಡುಪಿಯ ಅಂಬಲಪಾಡಿ ನಿವಾಸದಲ್ಲಿ ಕೊನೆಯುಸಿರೆಳೆ ದಿದ್ದಾರೆ.

ಗೋವಿಂದಾಚಾರ್ಯರು ಮಧ್ವ ಸಿದ್ಧಾಂತದ ಪ್ರತಿಪಾದಕ  ಪ್ರವಚನಕಾರ,ಪತ್ರಕರ್ತರಾಗಿ ಅನೇಕ ಅಂಕಗಳನ್ನು ಬರೆದಿದ್ದ ಬನ್ನಂಜೆಯವರು
ನಟ ಡಾ.ವಿಷ್ಣುವರ್ಧನ್ ರ ಆಧ್ಯಾತ್ಮಿಕ ಗುರು ಹಲವಾರು ಕೃತಿಗಳನ್ನು ಸಂಸ್ಕೃತದಿಂದ ಕನ್ನಡಕ್ಕೆ ತರ್ಜುಮೆಗೈದ ಪಂಡಿತ


ಮೂರು ಚಲನಚಿತ್ರಗಳಿಗೆ ಸಂಭಾಷಣೆ ಬರೆದಿದ್ದರು  ಬನ್ನಂಜೆ ಗೋವಿಂದಾಚಾರ್ಯ ಮಧ್ವಾಚಾರ್ಯ, ಶಂಕರಾಚಾರ್ಯ, ರಾಮಾನುಜಾಚಾರ್ಯ ಚಿತ್ರಗಳ ಸಂಭಾಷಣೆ ಬರೆದಿದ್ದ ಅವರು  ಹಲವು ಚಾರಿತ್ರಿಕ ಕಾದಂಬರಿಗಳನ್ನು ಕನ್ನಡಕ್ಕೆ ಅನುವಾದಿಸಿದ್ದ ಕವಿಯಾಗಿದ್ದರು.  ಉಪನಿಷತ್ತಿನ ಅಧ್ಯಾಯಗಳಿಗೆ ಟಿಪ್ಪಣಿ ಯನ್ನೂ ಬರೆದಿದ್ದರು ಗೋವಿಂದಾಚಾರ್ಯರು,

ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಪದ್ಮಶ್ರೀ ಬನ್ನಂಜೆ ಗೋವಿಂದಾಚಾರ್ಯರು ಉಡುಪಿಯ ಅಂಬಲಪಾಡಿ ನಿವಾಸದಲ್ಲಿ ದೇಹ ತ್ಯಜಿಸಿದ್ದಾರೆ.

ಮಂಗಳವಾರ ಸಾರ್ವಜನಿಕ ಶೃದ್ಧಾಂಜಲಿ ಮಂಗಳೂರಿನ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ನಡೆಯಲಿದೆ. ದ.ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಹೇಳಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷರು.ಸಂಸದರು, ನಳಿನ್ ಕುಮಾರ್ ಕಟೀಲ್ ಸಂತಾಪ..

ಮಂಗಳೂರು : ಪದ್ಮಶ್ರೀ ಪುರಸ್ಕೃತ ಡಾ. ಬನ್ನಂಜೆ ಗೋವಿಂದಾಚಾರ್ಯ ಅವರ ನಿಧನದಿಂದ ನಾಡು ಓರ್ವ ಶ್ರೇಷ್ಠ ವಿದ್ವಾಂಸನನ್ನು ಕಳಕೊಂಡಂತಾಗಿದೆ. ತಮ್ಮ‌‌ ಪ್ರವಚನಗಳ ಮೂಲಕ
ಭಾರತೀಯ ತತ್ವ ಶಾಸ್ತ್ರ ಮತ್ತು ಹಿಂದೂ ಧರ್ಮಗ್ರಂಥಗಳ‌ ಸಾರವನ್ನು ನಾಡಿನಾದ್ಯಂತ ಪಸರಿಸಿದ ಬನ್ನಂಜೆ ಅವರು ಆಧ್ಯಾತ್ಮಿಕ‌ ಲೋಕಕ್ಕೆ ಅನನ್ಯ ಕೊಡುಗೆ ನೀಡಿದವರು. ಭಾರತೀಯ ಸಂಸ್ಕೃತಿಯ ಮೌಲ್ಯಗಳ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸಲು ಶ್ರಮಿಸಿದ ಬನ್ನಂಜೆ ಅವರ ನೆನಪು ಸಾರಸ್ವತ ಲೋಕದಲ್ಲಿ ಅಜರಾಮರವಾಗಿ ಉಳಿಯಲಿದೆ.

 

ಪದ್ಮಶ್ರೀ ಪುರಸ್ಕೃತ ಪ್ರವಚನಕಾರ ಬನ್ನಂಜೆ ಗೋವಿಂದಾಚಾರ್ಯರಿಗೆ ಸಂತಾಪ ಸೂಚಿಸಿ ಟ್ವೀಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ

Click to comment

Leave a Reply

Your email address will not be published. Required fields are marked *

DAKSHINA KANNADA

ಆಸ್ಪತ್ರೆ ಸೆಲ್ ನಲ್ಲಿ ಕುಣಿಕೆಗೆ ಕೊರೊಳೊಡ್ಡಿದ ಖೈದಿ..!

Published

on

ಮಂಗಳೂರು: ಮಂಗಳೂರು ಸಬ್ ಜೈಲಿನಲ್ಲಿದ್ದ ಕೇರಳ ಮೂಲದ ಖೈದಿಯೊಬ್ಬ ಆಸ್ಪತ್ರೆಯಲ್ಲೇ ಕುಣಿಕೆಗೆ ಕೊರಳೊಡ್ಡಿ ಜೀವಾಂತ್ಯಗೊಳಿಸಿದ್ದಾನೆ. ಕೊಣಾಜೆಯ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 2022 ರಲ್ಲಿ ಈತ ಬಂಧಿತನಾಗಿದ್ದ . ಕೇರಳ ಮೂಲದವನಾಗಿದ್ದ ಮಹಮ್ಮದ್ ನೌಫಲ್ ಜೀವಾಂತ್ಯಗೊಳಿಸಿದ ಖೈದಿಯಾಗಿದ್ದಾನೆ. ಕೆಲ ಸಮಯದಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದ ಈತನಿಗೆ ಚಿಕಿತ್ಸೆ ನೀಡಲಾಗುತ್ತಿತ್ತು. ಏಪ್ರಿಲ್ 25 ರಂದು ಚಿಕಿತ್ಸೆಗಾಗಿ ವೆನ್ಲಾಕ್ ಆಸ್ಪತ್ರೆಯ ಸೆಲ್ ವಾರ್ಡ್ ಗೆ ದಾಖಲಿಸಲಾಗಿತ್ತು. ಸೆಲ್ ವಾರ್ಡನಲ್ಲಿ ಇರುವಾಗಲೇ ಈತ ಜೀವಾಂತ್ಯಗೊಳಿಸಿದ್ದಾನೆ. ಈತನನ್ನು ಉಳಿಸುವ ನಿಟ್ಟಿನಲ್ಲಿ ಸಾಕಷ್ಟು ಪ್ರಯತ್ನಗಳ ನಡೆಸಿದರಾದ್ರೂ ಸಾದ್ಯವಾಗಿಲ್ಲ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

 

Continue Reading

LATEST NEWS

ಐವರು ಮೆಡಿಕಲ್ ವಿದ್ಯಾರ್ಥಿಗಳು ನೀರುಪಾಲು…!

Published

on

ಮಂಗಳೂರು ( ಕನ್ಯಾಕುಮಾರಿ ) : ಮದುವೆ ಸಮಾರಂಭಕ್ಕೆಂದು ಕನ್ಯಾಕುಮಾರಿಗೆ ತೆರಳಿದ್ದ ಐವರು ಮೆಡಿಕಲ್ ವಿದ್ಯಾರ್ಥಿಗಳು ಸಮುದ್ರದಲ್ಲಿ ಮುಳುಗಿ ಅಸು ನೀಗಿದ್ದಾರೆ. ಮದುವೆಗೆ ತೆರಳಿದ್ದ ಸ್ನೇಹಿತರು ಲೇಮುರ್ ಬೀಚ್‌ನಲ್ಲಿ ಈಜಲು ಇಳಿದಾಗ ಈ ಧುರ್ಘಟನೆ ಸಂಭವಿಸಿದೆ. ಒಟ್ಟು ಎಂಟು ವಿದ್ಯಾರ್ಥಿಗಳು ಸಮುದ್ರಲ್ಲಿ ಈಜಲು ಹೋಗಿದ್ದು ಮೂವರನ್ನು ಸ್ಥಳಿಯರು ರಕ್ಷಣೆ ಮಾಡಿದ್ದಾರೆ. ಎಲ್ಲರೂ ತಿರುಚಿನಪಳ್ಳಿಯಲ್ಲಿರುವ ಎಸ್‌ಆರ್‌ಎಂ ಮೆಡಿಕಲ್ ಕಾಲೇಜಿನವರು ಎಂದು ಮಾಹಿತಿ ಲಭ್ಯವಾಗಿದೆ. ತಂಜಾವೂರಿನ ಚಾರುಕವಿ, ನೇಯ್ವೇಲಿಯ ಗಾಯತ್ರಿ, ಕನ್ಯಾಕುಮಾರಿಯ ಸರ್ವದರ್ಶಿತ್, ದಿಂಡಿಗಲ್‌ನ ಪ್ರವೀಣ್ ಸ್ಯಾಮ್ ಹಾಗೂ ಆಂದ್ರದ ವೆಂಕಟೇಶ್‌ ನೀರುಪಾಲದ ಮೆಡಿಕಲ್ ವಿದ್ಯಾರ್ಥಿಗಳಾಗಿದ್ದಾರೆ. ಇಂಟರ್ನ್‌ಗಳಾಗಿದ್ದ ಕರೂರಿನ ನೇಶಿ, ಥೆಂಗಿಯ ಪ್ರಿಯಾಂಕಾ ಹಾಗೂ ಮದುರೈನ ಶರಣ್ಯ ಎಂಬ ಯುವತಿಯರನ್ನು ರಕ್ಷಿಸಲಾಗಿದೆ

ನಿಶೇಧವಿದ್ರೂ ಸಮುದ್ರಕ್ಕೆ ಪ್ರವೇಶ ಮಾಡಿದ್ದರು

ಖಾಸಗಿ ಬೀಚ್‌ ಆಗಿರೋ ಲೆಮುರ್ ಬೀಚ್‌ ಒಳಗೆ ಸಾರ್ವಜನಿಕರಿಗೆ ಪ್ರವೇಶ ನಿರಾಕರಿಲಾಗಿತ್ತು. ಇನ್ನು ಭಾನುವಾರದಂದು ಸಮುದ್ರದಲ್ಲಿ ಭಾರಿ ಅಲೆಗಳು ಇದ್ದ ಕಾರಣ ಯಾರೂ ಸಮುದ್ರಕ್ಕೆ ಇಳಿಯಬಾರದು ಅನ್ನೋ ಎಚ್ಚರಿಕೆ ನೀಡಲಾಗಿತ್ತು. ಹೀಗಿದ್ರೂ ಇವರು ಸಮುದ್ರಕ್ಕೆ ಹೇಗೆ ಹೋದ್ರು ಅನ್ನೋದು ತನಿಖೆ ನಡೆಸಲಾಗುತ್ತಿದೆ. ಮದುವೆಗೆ ಬಂದಿದ್ದ ಸ್ನೇಹಿತರೆಲ್ಲ ಬೇರೆ ಬೇರೆ ಗುಂಪುಗಳಾಗಿ ಚದುರಿ ಹೋಗಿದ್ದು, ಈ ಎಂಟು ಜನ ವಿದ್ಯಾರ್ಥಿಗಳು ಸಮುದ್ರ ಕಿನಾರೆ ಬಂದು ಸಮುದ್ರಕ್ಕೆ ಇಳಿದಿದ್ದಾರೆ.

ಕೋರ್ಸು ಮುಗಿಸುವ ಹಂತದಲ್ಲಿ ನಡೆಯಿತು ದುರ್ಘಟನೆ

ಈ ವಿದ್ಯಾರ್ಥಿಗಳ ಕೋರ್ಸ್‌ ಇನ್ನೇನು ಕೆಲವೇ ದಿನಗಳಲ್ಲಿ ಮುಗಿದು ಎಲ್ಲರೂ ವೈದ್ಯರಾಗುವ ಕನಸು ಕಾಣುತ್ತಿದ್ದರು. ಯಾವ ಆಸ್ಪತ್ರೆಯಲ್ಲಿ ಇಂಟರ್ನ್‌ಶಿಪ್‌ ಮಾಡಬೇಕು, ಯಾವ ನಗರಕ್ಕೆ ಹೋದರೆ ಸೂಕ್ತ ಎಂಬ ಕುರಿತು ಅವರ ಮಧ್ಯೆಯೇ ಚರ್ಚೆ ನಡೆಯುತ್ತಿತ್ತು. ಅವರ ಪೋಷಕರು ಕೂಡ ನೂರಾರು ಕನಸು ಕಂಡಿದ್ದರು. ಆದರೆ, ಮದುವೆಗೆ ಹೋದವರು, ಮದುವೆ ಮುಗಿಸಿ ನೇರ ಮನೆಗೆ ಬಂದಿದ್ರೆ ಎಲ್ಲವೂ ಎನಿಸಿದಂತೆ ನಡೆಯುತ್ತಿತ್ತು. ಆದ್ರೆ ವಿಧಿ ಇವರ ಎಲ್ಲಾ ಕನಸುಗಳನ್ನ ಕಿತ್ತುಕೊಂಡಿದೆ.

Continue Reading

LATEST NEWS

ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣ; ದೇವೇಗೌಡ, ಕುಮಾರಸ್ವಾಮಿ ಹೆಸರು ಬಳಸದಂತೆ ನಿರ್ಬಂಧ..!

Published

on

ಬೆಂಗಳೂರು: ಹಾಸನದ ಬಿಜೆಪಿ- ಜೆಡಿಎಸ್ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಪೆನ್‌ ಡ್ರೈವ್‌ ಪ್ರಕರಣದಲ್ಲಿ ಮಾಜಿ ಪ್ರಧಾನಿ ಎಚ್. ಡಿ.ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೆಸರು ಬಳಸದಂತೆ ಬೆಂಗಳೂರಿನ ನ್ಯಾಯಾಲಯ ನಿರ್ಬಂಧ ಹೇರಿದೆ.

ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಪ್ರಕರಣಕ್ಕೆ ಸಂಬಂಧಿಸಿ ಮಾಧ್ಯಮಗಳು ತಮ್ಮ ಹೆಸರು ಬಳಸುವುದನ್ನು ನಿರ್ಬಂಧಿಸುವಂತೆ ಕೋರಿ‌ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮತ್ತು ಎಚ್.ಡಿ.ಕುಮಾರಸ್ವಾಮಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸತ್ರ ನ್ಯಾಯಾಲಯದ ನ್ಯಾಯಾಧೀಶರು ಎಚ್. ಡಿ ದೇವೇಗೌಡ ಮತ್ತು ಎಚ್. ಡಿ. ಕುಮಾರಸ್ವಾಮಿ ಹೆಸರು ಬಳಸಂತೆ ಮಾಧ್ಯಮಗಳು, ಪತ್ರಿಕೆಗಳು ಮತ್ತು ಸಾಮಾಜಿಕ ಜಾಲತಾಣಗಳಿಗೆ ಮಧ್ಯಂತರ ತಡೆಯಾಜ್ಞೆ ನೀಡಿದ್ದಾರೆ. ‘ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧ ಇಲ್ಲ. ಮಾಧ್ಯಮಗಳಲ್ಲಿ ನಮ್ಮ ಹೆಸರು ಬಳಸುವುದರಿಂದ ತಮ್ಮ ಘನತೆ, ಗೌರವಕ್ಕೆ ಧಕ್ಕೆಯಾಗುತ್ತಿದೆ. ಹೀಗಾಗಿ ಮಧ್ಯಂತರ ತಡೆಯಾಜ್ಞೆ ನೀಡಬೇಕು’ ಎಂದು ಅರ್ಜಿದಾರರು ಮನವಿ ಮಾಡಿದ್ದರು.‌ ಮನವಿ ಆಲಿಸಿದ ನ್ಯಾಯಾಧೀಶರು ಮಾಧ್ಯಮಗಳು ಸತ್ಯಕ್ಕೆ ದೂರವಾದ, ಆಧಾರ ರಹಿತ ಸುದ್ದಿಗಳನ್ನು ಅರ್ಜಿದಾರರ ವಿರುದ್ಧ ಪ್ರಸಾರ ಮಾಡದಂತೆ ನಿರ್ಬಂಧ‌ ವಿಧಿಸಿ ಪ್ರತಿವಾದಿಗಳಿಗೆ ಸಮನ್ಸ್ ಜಾರಿಗೊಳಿಸಿ ವಿಚಾರಣೆ ಮುಂದೂಡಿದ್ದಾರೆ.

 

Continue Reading

LATEST NEWS

Trending