Sunday, July 3, 2022

 ಸಹೋದ್ಯೋಗಿಗಳ ಸ್ನಾನದ ದೃಶ್ಯ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸುತ್ತಿದ್ದ ನರ್ಸ್- ವೈಟ್ ಫೀಲ್ಡ್ ಪೊಲೀಸರ ಬಲೆಗೆ..!

 ಸಹೋದ್ಯೋಗಿಗಳ ಸ್ನಾನದ ದೃಶ್ಯ ಸೆರೆಹಿಡಿದು ಪ್ರಿಯಕರನಿಗೆ ಕಳುಹಿಸುತ್ತಿದ್ದ ನರ್ಸ್- ವೈಟ್ ಫೀಲ್ಡ್ ಪೊಲೀಸರ ಬಲೆಗೆ..!

ಬೆಂಗಳೂರು: ಸಹೋದ್ಯೊಗಿಗಳು ಸ್ನಾನ ಮಾಡುವ ದೃಶ್ಯ ಸೆರೆ ಹಿಡಿದು ಪ್ರಿಯಕರನಿಗೆ ಕಳು ಹಿಸುತ್ತಿದ್ದ ನರ್ಸ್‌ವೊಬ್ಬರು ವೈಟ್‌ಫೀಲ್ಡ್‌ ಪೊಲೀ ಸರ ಬಲೆಗೆ ಬಿದ್ದಿದ್ದಾರೆ.ಹಾಸ್ಟೆಲ್‌ ಮೇಲ್ವಿಚಾರಕಿ ನೀಡಿದ ದೂರಿನ ಮೇರೆಗೆ ಆರೋಪಿ ನರ್ಸ್‌ ಅಶ್ವಿ‌ನಿ ಎಂಬಾಕೆಯನ್ನು ವೈಟ್‌ಫೀಲ್ಡ್‌ ಪೊಲೀಸರು ಬಂಧಿಸಿದ್ದಾರೆ.ಆಕೆಯ ಪ್ರಿಯಕರನಿಗಾಗಿ ಹುಡುಕಾಟ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವೈಟ್‌ಫೀಲ್ಡ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಶ್ವಿ‌ನಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಳು. ಆಸ್ಪತ್ರೆ ಆಡಳಿತ ಮಂಡಳಿ ಆಸ್ಪತ್ರೆ ತುರ್ತು ನಿಗಾ ಘಟಕದಲ್ಲಿ ಸೇವೆ ಸಲ್ಲಿಸುವ ನರ್ಸ್‌ಗಳಿಗೆ ಹಾಸ್ಟೆಲ್ ಸೌಲಭ್ಯ ಒದಗಿಸಲಾಗಿತ್ತು.

ಅದರಲ್ಲಿ ಅಶ್ವಿ‌ನಿ ಸೇರಿ ಹಲವಾರು ನರ್ಸ್‌ಗಳು ನೆಲೆಸಿದ್ದರು. ಡಿ.5ರ ಸಂಜೆ 6.45ರಲ್ಲಿ ನರ್ಸ್‌ ಸ್ನಾನ ಮಾಡಲು ಸಂತ್ರಸ್ತೆ ನರ್ಸ್‌ ಶೌಚಗೃಹಕ್ಕೆ ಹೋದಾಗ ಅದರಲ್ಲಿ ಮೊಬೈಲ್‌ ಬಚ್ಚಿಟ್ಟಿರುವುದು ಕಣ್ಣಿಗೆ ಬಿದ್ದಿದೆ.

ಗಾಬರಿಗೊಂಡ ನರ್ಸ್‌, ತಕ್ಷಣ ಬಟ್ಟೆ ಧರಿಸಿ ಮೊಬೈಲ್‌ ತೆಗೆದುಕೊಂಡು ಪರಿಶೀಲನೆ ನಡೆಸಿದಾಗ ವಿಡಿಯೋ ರೆಕಾರ್ಡ್‌ ಆನ್‌ ಆಗಿರುವುದು ಕಂಡುಬಂದಿದೆ.

ಗಾಬರಿಗೊಂಡ ಸಂತ್ರಸ್ಥೆ, ಮೊಬೈಲ್‌ನಲ್ಲಿನ ಫೋಟೋ ಗ್ಯಾಲರಿಯಲ್ಲಿ ಪರಿಶೀಲನೆ ನಡೆಸಿದಾಗ ಹಲವು ಆಸ್ಪತ್ರೆ ಮಹಿಳಾ ಸಿಬ್ಬಂದಿ ಸ್ನಾನದ ದೃಶ್ಯಾವಳಿ ಸೆರೆ ಹಿಡಿದಿರುವುದುಪತ್ತೆಯಾಗಿದೆ.

ನೊಂದ ಸಂತ್ರಸ್ತೆ, ಮೊಬೈಲ್‌ ಅನ್ನು ಹಾಸ್ಟೆಲ್ ಮೇಲ್ವಿಚಾರಕಿಗೆ ನೀಡಿ ದೂರು ನೀಡಿದ್ದಾರೆ. ಮೊಬೈಲ್‌ ಮಾಲಕಿ ಅಶ್ವಿ‌ನಿಯನ್ನು ಮೇಲ್ವಿಚಾರಕಿ ಕರೆಸಿ ಆಂತರಿಕ ತನಿಖೆ ನಡೆಸಿದಾಗ  ಸತ್ಯಾಂಶ ಹೊರ ಬಂದಿದೆ.  ಅಶ್ವಿ‌ನಿ ಜತೆಗೆ ಇನ್ನೂ ಕೆಲವರು ಕೈ ಜೋಡಿ ಸಿರುವುದು ಬೆಳಕಿಗೆ ಬಂದಿದೆ.

ಅಶ್ವಿ‌ನಿಯನ್ನು ಸದ್ಯ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವಿಡಿಯೋಗಳನ್ನು ಪ್ರಿಯಕರನಿಗೆ ಕಳುಹಿಸುತ್ತಿರುವುದಾಗಿ  ಒಪ್ಪಿಕೊಂಡಿದ್ದಾಳೆ ಎಂಬುದು ಗೊತ್ತಾಗಿದೆ ಎಂದು ಪೊಲೀಸರು ಹೇಳಿದರು.

LEAVE A REPLY

Please enter your comment!
Please enter your name here

Hot Topics

ಮುಂದಿನ 30-40 ವರ್ಷಗಳು ಬಿಜೆಪಿ ಯುಗ: ಅಮಿತ್‌ ಶಾ

ಹೈದರಾಬಾದ್‌: ಮುಂದಿನ 30-40 ವರ್ಷಗಳು ಬಿಜೆಪಿ ಯುಗವಾಗಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಹೇಳಿದ್ದಾರೆ.ಹೈದರಾಬಾದ್‌ನಲ್ಲಿ ನಡೆಯುತ್ತಿರುವ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅಮಿತ್‌ ಶಾ, ಬಿಜೆಪಿಯ ಅಭಿವೃದ್ಧಿ...

ಮಂಗಳೂರು: ಗೋಕರ್ಣನಾಥೇಶ್ವರ ಕಾಲೇಜಿನ NSS ಘಟಕದಿಂದ ರಕ್ತದಾನ

ಮಂಗಳೂರು: ಶ್ರೀ ಗೋಕರ್ಣನಾಥೇಶ್ವರ ಕಾಲೇಜು ಮಂಗಳೂರು ಇದರ ರಾಷ್ಟೀಯ ಸೇವಾ ಯೋಜನಾ ಘಟಕ ಹಾಗೂ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇದರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಜುಲೈ 2 ರಂದು ಆಯೋಜಿಸಲಾಗಿತ್ತು.ಈ...

“ಮದರಸ ಬಗ್ಗೆ ಹೇಳಿಕೆಯನ್ನು ಉದುರುವಾಗ ನಾಲಗೆ ಹದ್ದು ಬಸ್ತಿನಲ್ಲಿ ಇಟ್ಟು ಮಾತನಾಡುವುದು ಒಳಿತು”

ಮಂಗಳೂರು: ಪ್ರವಾದಿ ನಿಂದನೆಗೈದ ನೂಪುರ್ ಶರ್ಮಾ ರನ್ನು ಬೆಂಬಲಿಸಿ ಹೇಳಿಕೆ ನೀಡಿದ ಕನ್ನಯ್ಯ ಲಾಲ್ ನನ್ನು ಇತ್ತೀಚೆಗೆ ರಾಜಸ್ತಾನದ ಉದಯಪುರದಲ್ಲಿ ಹತ್ಯೆ ಮಾಡಿದ ಆರೋಪಿಗಳು ಸ್ಥಳೀಯ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರು ಆಗಿದ್ದು,ಅಂತಹ...