Connect with us

LATEST NEWS

ಮೊದಲ ಡೋಸ್‌ ಬಳಿಕ ತರಗತಿಗೆ ಹಾಜರಾಗಿ: ಅಶ್ವತ್ಥನಾರಾಯಣ ಟ್ವೀಟ್

Published

on

ಬೆಂಗಳೂರು: ಹದಿನೆಂಟು ವರ್ಷ ಮೇಲ್ಪಟ್ಟ ಎಲ್ಲ ಕಾಲೇಜು ವಿದ್ಯಾರ್ಥಿಗಳು, ಬೋಧಕ ಹಾಗೂ ಸಹಾಯಕ ಸಿಬ್ಬಂದಿಗೆ ಮೊದಲ ಡೋಸ್‌ ನೀಡಿದ ಬಳಿಕ ತರಗತಿಗಳಿಗೆ ಹಾಜರಾಗಲು ಅವಕಾಶವಿದೆ ಎಂದು ರಾಜ್ಯ ಕೋವಿಡ್‌ ಕಾರ್ಯಪಡೆ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ ಅಶ್ವತ್ಥನಾರಾಯಣ ತಿಳಿಸಿದ್ದಾರೆ.

ಈ ಬಗ್ಗೆ ಡಿಸಿಎಂ ಟ್ವೀಟ್‌ ಮಾಡಿದ್ದು, ಸಂಬಂಧಪಟ್ಟ ಅಧಿಕಾರಿಗಳ ಸಮನ್ವಯದೊಂದಿಗೆ ಹಾಗೂ ಕೇಂದ್ರ ಸರಕಾರದ ಮಾರ್ಗಸೂಚಿಯಂತೆ ಲಸಿಕೆ ಆಭಿಯಾನಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು. ಈಗಾಗಲೇ ಈ ಬಗ್ಗೆ ಆದೇಶ ಹೊರಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಮುಖ್ಯಮಂತ್ರಿಗಳ ಆಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಲಸಿಕೆ ಹಾಕಿದ ನಂತರ ಪದವಿ ತರಗತಿಗಳನ್ನು ಆರಂಭಿಸುವ ಬಗ್ಗೆ ಚರ್ಚಿಸಲಾಯಿತು. ಕಾಲೇಜು ಆರಂಭಕ್ಕೂ ಮೊದಲೇ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ ಹಾಗೂ ಸಹಾಯಕ ಸಿಬ್ಬಂದಿಗೆ ಲಸಿಕೆ ನೀಡಲು ನಿರ್ಣಯ ಕೈಗೊಳ್ಳಲಾಗಿದೆ.ಆಯಾ ಕಾಲೇಜುಗಳಲ್ಲಿಯೇ ಲಸಿಕೆ ಅಭಿಯಾನ ಕೈಗೊಳ್ಳಲಾಗುವುದು. ಇವರೆಲ್ಲರೂ ಲಸಿಕೆ ಪಡೆಯಲು ಆಯಾ ಸಂಸ್ಥೆಗಳಲ್ಲಿ ನೀಡಲಾಗುವ ದೃಢೀಕರಣ ಪತ್ರ ಹಾಜರುಪಡಿಸಬೇಕು. ಪ್ರತಿ ಕಾಲೇಜಿನ ಮುಖ್ಯಸ್ಥರು ಹಾಗೂ ಇನ್ನೊಬ್ಬ ಅಧಿಕಾರಿಯನ್ನು ನೋಡೆಲ್‌ ಅಧಿಕಾರಿಯನ್ನಾಗಿ ನಿಯೋಜನೆ ಮಾಡಲಾಗುವುದು ಎಂದು ಹೇಳಿದರು.

ಈ ಲಸಿಕಾಕರಣಕ್ಕೆ ಪ್ರತ್ಯೇಕ ಮಾರ್ಗಸೂಚಿ ಇರುತ್ತದೆ. ಅದರಂತೆಯೇ ಲಸಿಕಾಕರಣ ನಡೆಸಲಾಗುವುದು. ಅಲ್ಲದೇ, ನೋಡೆಲ್‌ ಅಧಿಕಾರಿಗಳು ಆಯಾ ಶಿಕ್ಷಣ ಸಂಸ್ಥೆಯಲ್ಲಿನ ಎಲ್ಲ ಅರ್ಹರಿಗೂ ತಪ್ಪದೇ ಲಸಿಕೆ ಕೊಡಿಸಬೇಕು ಹಾಗೂ ಅದರ ಬಗ್ಗೆ ಖಾತರಿ ಮಾಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ. ಲಸಿಕೆ ಪಡೆದ ನಂತರ  ವಿಭಾಗದ ಎಲ್ಲರಿಗೂ ಮೊದಲ ಡೋಸ್‌ ಲಸಿಕೆ ಹಾಕಿದ ನಂತರ ನೇರ ತರಗತಿಗಳನ್ನು ಆರಂಭ ಮಾಡುವ ಬಗ್ಗೆ ನಿರ್ಧರಿಸಲಾಗುವುದು ಎಂದು ಡಾ.ಅಶ್ವತ್ಥನಾರಾಯಣ ಹೇಳಿದರು.

ಲಸಿಕೆ ಕೊಡಲಿ ಬಿಡಲಿ ಕಲಿಕೆ ನಿಲ್ಲುವುದಿಲ್ಲ. ಡಿಜಿಟಲ್‌ ವೇದಿಕೆಯಲ್ಲಿ ಕಲಿಕೆ ಮುಂದುವರಿದಿದೆ. ವ್ಯಾಕ್ಸಿನ್‌ ಪಡೆದ ಮೇಲೆ ವಿದ್ಯಾರ್ಥಿಗಳು ಭೌತಿಕ ತರಗತಿಗಳಿಗೆ ಹಾಜರಾಗಬಹುದು ಅಥವಾ ತಾವಿದ್ದಲ್ಲಿಯೇ ಆನ್‌ಲೈನ್‌ ತರಗತಿಗೆ ಹಾಜರಾಗಬಹುದು ಎಂದರು. ಹಾಜರಾತಿ ಮಾತ್ರ ಕಡ್ಡಾಯ. ಮೊದಲ ಡೋಸ್‌ ಪಡೆದ ನಂತರ ದೇಹದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಲಾರಂಭಿಸುತ್ತದೆ. ಒಂದು ವೇಳೆ ನೇರ ತರಗತಿಗೆ ಹಾಜರಾದ ನಂತರವೂ ಸೋಂಕು ಬಂದರೆ ಜೀವಕ್ಕೆ ಹಾನಿ ಆಗುವುದಿಲ್ಲ. ಹೀಗಾಗಿ ಎಲ್ಲ ವಿದ್ಯಾರ್ಥಿ, ಸಿಬ್ಬಂದಿ ಲಸಿಕೆ ಪಡೆಯಬೇಕು ಎಂದರು. ಇನ್ನು ರಾಜ್ಯದಲ್ಲಿ ಡೆಲ್ಟಾ ಪ್ಲಸ್‌ ಪತ್ತೆಯಾಗಿದ್ದರೂ ಸರ್ಕಾರ ಎಲ್ಲ ರೀತಿಯ ಮುನ್ನೆಚ್ಚರಿಕೆ ವಹಿಸಿದೆ. ಯಾವುದಕ್ಕೂ ಕೊರತೆ ಇಲ್ಲ. ಸದ್ಯಕ್ಕೆ ನಮ್ಮಲ್ಲಿ ಲಭ್ಯ ಇರುವ ಲಸಿಕೆಗಳು ಡೆಲ್ಟಾ ಪ್ಲಸ್‌ ವಿರುದ್ಧ ಪರಿಣಾಮಕಾರಿಯಾಗಿ ಕೆಲಸ ಮಾಡುವ ಶಕ್ತಿ ಹೊಂದಿವೆ ಎಂದು ಡಿಸಿಎಂ ಹೇಳಿದರು.

LATEST NEWS

ಏನಾಶ್ಚರ್ಯ! ರೋಬೋಟ್ ಜೊತೆ ಮದುವೆಯಾಗುತ್ತಿದ್ದಾನೆ ಈ ಯುವಕ!

Published

on

ಮಂಗಳೂರು : ಜಗತ್ತು ಹೊಸ ಹೊಸ ಆವಿಷ್ಕಾರಗಳಲ್ಲಿ ತೊಡಗಿಕೊಳ್ಳುತ್ತದೆ. ಹೊಸ ಆವಿಷ್ಕಾರಗಳು ಜನರ ಹುಬ್ಬೇರಿಸುವಂತೆ ಮಾಡುತ್ತದೆ. ರೋಬೋಟ್ ತಂತ್ರಜ್ಞಾನವೇನೋ ಹಳತು. ಆದ್ರೆ, ಈಗ ಈ ರೊಬೋಟ್ ಬಗ್ಗೆ ನಾವು ಹೇಳುತ್ತಿರುವ ಸುದ್ದಿ ಹೊಸತು. ಹೌದು, ಇಲ್ಲೊಬ್ಬ ರೋಬೋಟ್ ಅನ್ನೇ ಮದುವೆಯಾಗುತ್ತಿದ್ದಾನೆ. ಇದು ಸಾಧ್ಯನಾ ಅನ್ಬೇಡಿ! ಇದು ಸಾಧ್ಯ ಎಂದು ಯುವಕ ಸಾರಲು ಹೊರಟಂತಿದೆ.


ಎಲ್ಲಿ ನಡೆಯಲಿದೆ ಈ ಅಚ್ಚರಿಯ ಘಟನೆ?

ರೋಬೋಟ್ ತಂತ್ರಜ್ಞಾನ ಆವಿಷ್ಕಾರ ಆದಂದಿನಿಂದಲೂ ಅಚ್ಚರಿ ಹುಟ್ಟು ಹಾಕುತ್ತಿರುವುದೇನೋ ಸರಿ. ಆದ್ರೆ ಮದುವೇನೂ ಆಗ್ಬೋದಾ!? ಈ ಹಿಂದೆ ಸಿನಿಮಾವೊಂದರಲ್ಲಿ ರೋಬೋಟ್ ನ್ನು ಮದುವೆಯಾಗಿದ್ದ ಕಥೆ ಹೆಣೆಯಲಾಗಿತ್ತು. ‘ತೇರೆ ಬಾತೋಮೆ ಅಯ್ಸಾ ಉಲ್ಜಾದಿಯಾ’ ಅನ್ನೋ ಈ ಹಿಂದಿ ಸಿನೆಮಾದಲ್ಲಿ ಹೀರೋ ರೋಬೋಟ್ ಅನ್ನು ಮದುವೆಯಾಗಿ, ಸಂಸಾರ ಮಾಡುವ ಕಥೆ ಇದೆ.


ಇದೀಗ ರಾಜಸ್ಥಾನದಲ್ಲಿ ಯುವಕನೊಬ್ಬ ರೋಬೋಟ್‌ ಜೊತೆ ಮದುವೆ ಆಗಲು ಮುಂದಾಗಿದ್ದಾನೆ. ಅಂದಹಾಗೆ, ಈ ಯುವಕ ಸಾಫ್ಟ್ ವೇರ್ ಇಂಜಿನಿಯರ್. ಆತನ ಹೆಸರು ಸೂರ್ಯಪ್ರಕಾಶ್ ಸುಮೋತಾ. ಸಿಕರ್ ಎಂಬ ಗ್ರಾಮವೊಂದರ ಸೂರ್ಯಪ್ರಕಾಶ್ ಸುಮೋತಾ ರೋಬೋಟ್ ಜೊತೆ ಮದುವೆಯಾಗಲು ಮುಂದಾಗಿದ್ದಾರೆ.

ಮದುವೆ ದಿನಾಂಕ ಫಿಕ್ಸ್ ಆಗಿಲ್ಲ :


ಮಾರ್ಚ್ 22 ರಂದು ರೋಬೋಟ್ ಜೊತೆ ಎಂಗೇಜ್ ಮೆಂಟ್ ಮುಗಿಸಿಕೊಂಡಿದ್ದು, ಮದುವೆಯ ದಿನಾಂಕ ಇನ್ನೂ ಫಿಕ್ಸ್ ಆಗಿಲ್ಲ. ರೋಬೋಟ್‌ ಜೊತೆ ಮದುವೆಗೆ ಮುಂದಾಗಿರುವ ಸೂರ್ಯಪ್ರಕಾಶ್ ಸುಮೋತಾ ಮೂಲತಃ ಬಡ ಕೃಷಿ ಕುಟುಂಬದಿಂದ ಬಂದವರು. ತಂದೆ – ತಾಯಿ ಗ್ರಾಮದಲ್ಲಿ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ.

ಮಗ ರೋಬೋಟ್ ಜೊತೆ ಸಂಸಾರ ಮಾಡುತ್ತೇನೆ ಅಂದ್ರೆ ತಂದೆ – ತಾಯಿ ಒಪ್ತಾರೆಯೇ ? ಸೂರ್ಯಪ್ರಕಾಶ ತಂದೆ – ತಾಯಿ ಈ ಮದುವೆಗೆ ಸಮ್ಮತಿ ಸೂಚಿಸಿಲ್ಲ. ಕುಟುಂಬದ ಸದಸ್ಯರು ಸೂರ್ಯಪ್ರಕಾಶ್‌ಗೆ ಓಕೆ ಅಂದಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ತಂದೆ ತಾಯಿ ಕೂಡಾ ಈ ರೋಬೋಟ್ ಜೊತೆಗಿನ ಮದುವೆಯನ್ನು ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ : ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ರೋಬೋ ತಯಾರಿಗೆ 19 ಲಕ್ಷ ಖರ್ಚು :

ಎನ್‌ಎಮ್‌ಎಸ್‌ 5.0 ಗಿಗಾ ಎಂದು ರೋಬೋಟ್‌ಗೆ ಹೆಸರಿಟ್ಟಿದ್ದು, ಈ ರೋಬೋಟ್ ತಯಾರು ಮಾಡಲು ಸೂರ್ಯಪ್ರಕಾಶ್ 19 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ್ದಾರಂತೆ. ರೋಬೋಟನ್ನು ತಮಿಳನಾಡು ಹಾಗೂ ನೋಯ್ಡಾದ ಕಂಪೆನಿಗಳು ಜಂಟಿಯಾಗಿ ತಯಾರು ಮಾಡುತ್ತಿದೆ. ಇನ್ನು ರೋಬೋಟ್‌ಗೆ ಬೇಕಾದ ಸಾಫ್ಟ್‌ವೇರ್‌ ಹಾಗೂ ಅದರ ಕಮಾಂಡ್‌ಗಳನ್ನು ಖುದ್ದು ಸೂರ್ಯಪ್ರಕಾಶ್ ರೆಡಿ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದ ಹಿಂದೆ ರೋಬೋಟ್‌ಗಳನ್ನು ಕೃಷಿಯಲ್ಲಿ ಬಳಕೆ ಮಾಡಿ ಅವುಗಳ ವರ್ತನೆಯನ್ನು ಸೂರ್ಯಪ್ರಕಾಶ ಅಧ್ಯಯನ ಮಾಡಿದ್ದಾನೆ.

ಇದೇ ವೇಳೆ ಮನೆಯವರು ಮದುವೆಗೆ ಒತ್ತಾಯಿಸಿದಾಗ ಈ ರೀತಿ ರೋಬೋಟ್‌ ಜೊತೆ ಮದುವೆ ಆಗುವ ಇಚ್ಚೆ ವ್ಯಕ್ತಪಡಿಸಿದ್ದಾನೆ. ಹೀಗಾಗಿ ಕಳೆದ ಎರಡು ವರ್ಷದಿಂದ ಪರಿಪೂರ್ಣ ಮನುಷ್ಯರಂತೆ ವರ್ತಿಸೋ ರೋಬೋಟ್ ತಯಾರಿಯಲ್ಲಿ ಸೂರ್ಯಪ್ರಕಾಶ್ ತೊಡಗಿಸಿಕೊಂಡಿದ್ದರು.

Continue Reading

LATEST NEWS

ಅಜೆಕಾರು : ಮನೆ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಸಾ*ವು

Published

on

ಕಾರ್ಕಳ : ಭಾರೀ ಸೆಕೆಯಿಂದಾಗಿ ಮನೆಯೊಳಗಡೆ ಮಲಗಲಾಗದೇ ಮನೆ ಟೆರೇಸ್ ಮೇಲೆ ಮಲಗಲು ಹೋಗಿದ್ದ ಶಿಕ್ಷಕ ಗಾಢ ನಿದ್ದೆಯಲ್ಲಿ ಉರುಳಿ ಬಿದ್ದು ಸಾ*ವನ್ನಪ್ಪಿದ ಘಟನೆ ಅಜೆಕಾರು ಕುಮೇರಿಯಲ್ಲಿ ನಡೆದಿದೆ. ಸುಂದರ ನಾಯ್ಕ(55) ಇಹಲೋಕ ತ್ಯಜಿಸಿದ ಶಿಕ್ಷಕ.

ಸುಂದರ ಅವರು ಆಶ್ರಯ ನಗರದ ನಿವಾಸಿಯಾಗಿದ್ದು, ಕಾರ್ಕಳ ತಾಲೂಕಿನ ಎಣ್ಣೆಹೊಳೆ ಪ್ರಾಥಮಿಕ ಶಾಲಾ ಶಿಕ್ಷಕರಾಗಿದ್ದರು. ಸೆಕೆಯ ಹಿನ್ನೆಲೆಯಲ್ಲಿ ಮನೆಯ ಟೆರೇಸ್ ಮೇಲೆ ಮಲಗಿದ್ದರು. ರಾತ್ರಿ ಸುಮಾರು 10:30 ರ ವೇಳೆಗೆ ಟೆರೇಸ್ ಮೇಲೆ ಮಲಗಲು ತೆರಳಿದ್ದ ಇವರನ್ನು ಮನೆ ಮಂದಿ ಬೆಳಿಗ್ಗೆ 6:30ಕ್ಕೆ ಎಬ್ಬಿಸಲೆಂದು ಹೋದಾಗ ಇವರು ಟೆರೇಸ್‌ನಿಂದ ಕೆಳಕ್ಕೆ ಬಿದ್ದಿರುವುದು ಕಂಡು ಬಂದಿದೆ.

ಇದನ್ನೂ ಓದಿ : ಪ್ರಜ್ವಲ್ ರೇವಣ್ಣ ಪ್ರಕರಣ ; ವೀಡಿಯೋ ಹರಿಬಿಟ್ಟ ಕಾರ್ತಿಕ್ ನಾಪತ್ತೆ! ಮಲೇಷ್ಯಾಕ್ಕೆ ಹೋಗಿರುವ ಶಂಕೆ

ಗಾಢ ನಿದ್ರೆಯಲ್ಲಿ ಆಯತಪ್ಪಿ ಟೆರೇಸ್ ಮೇಲಿಂದ ಕೆಳಗೆ ಬಿದ್ದು ಮೃ*ತಪಟ್ಟಿರುವುದಾಗಿ ಶಂಕೆ ವ್ಯಕ್ತವಾಗಿದೆ. ಮೃತ ಶಿಕ್ಷಕ ಸುಂದರ್ ನಾಯ್ಕ್ ಪತ್ನಿ ಪುತ್ರಿಯರನ್ನು ಅಗಲಿದ್ದಾರೆ.

Continue Reading

DAKSHINA KANNADA

ಸುಬ್ರಹ್ಮಣ್ಯ: ಕೆಎಸ್ಸಾರ್ಟಿಸಿ ಬಸ್‌ಗಳ ಹಗಲು ದರೋಡೆ..! ಏನಿದು ಘಟನೆ?

Published

on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ಸೇರಿದಂತೆ ಆಸುಪಾಸಿನ ಜನತೆಗೆ ಸರಕಾರಿ ಬಸ್ಸು ಸಿಬ್ಬಂದಿ ಹಗಲು ದರೋಡೆ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಕುಕ್ಕೆ ಕೆಎಸ್‌ಆರ್‌ಟಿಸಿ ಡಿಪೋದಿಂದ ಹೊರಡುವ ಸರಕಾರಿ ಬಸ್ ಸಿಬ್ಬಂದಿ ಹಗಲು ದರೋಡೆ ನಡೆಸುತ್ತಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಏಪ್ರಿಲ್ 28ರಂದು ಹುಬ್ಬಳ್ಳಿ ಕಡೆಯ ದಂಪತಿ ಕುಕ್ಕೆ ಸುಬ್ರಹ್ಮಣ್ಯದಿಂದ ಹುಬ್ಬಳ್ಳಿ‌ಗೆ ಹೋಗುವ ಸಲುವಾಗಿ ಬಿಎಂಟಿಸಿಯ KA 57 F 3463 ನಂಬರಿನ ಬಸ್ಸಿಗೆ ಹತ್ತಿದ್ದು, ಕುಕ್ಕೆ ಸುಬ್ರಹ್ಮಣ್ಯ ರೋಡ್ ಅಥವಾ ನೆಟ್ಟಣ ರೈಲ್ವೆ ನಿಲ್ದಾಣಕ್ಕೆ ಬಸ್ ಹೋಗುತ್ತದೆ ಎಂದು ಬಸ್ಸಿನ ಸಿಬ್ಬಂದಿ ಹೇಳಿದ್ದಾರೆ ಎನ್ನಲಾಗಿದೆ. ಈ ಭಾಗದ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಮತ್ತು ಬಸ್ಸಿನ ಸಿಬ್ಬಂದಿ ಹೇಳಿದ್ದನ್ನೇ ನಂಬಿದ ಹುಬ್ಬಳ್ಳಿ ಈ ದಂಪತಿ ಬೆಂಗಳೂರು ಮಹಾನಗರ ಪಾಲಿಕೆಯ ಡಿಪೋ ನಂಬರ್‌2ರ ಈ ಸರಕಾರಿ ಬಸ್ ಹತ್ತಿದ್ದಾರೆ. ಬಸ್ಸಿನ ನಿರ್ವಾಹಕ ಮಹಿಳೆಗೆ ಧರ್ಮಸ್ಥಳ ದಿಂದ ಸುಬ್ರಹ್ಮಣ್ಯ ಎಂಬುದಾಗಿ ಉಚಿತ ಟಿಕೆಟ್ ನೀಡಿದ್ದೂ, ಜೊತೆಯಲ್ಲಿ ಇದ್ದ ಪತಿ ಮತ್ತು ಮಕ್ಕಳಿಂದ 150 ರೂಪಾಯಿ ಹಣ ಪಡೆದು ಟಿಕೆಟ್ ನೀಡಿಲ್ಲ ಎನ್ನಲಾಗಿದೆ. ಇಷ್ಟು ಹಣ ಪಡೆದು ಇವರನ್ನು ಕುಕ್ಕೆ ಸುಬ್ರಹ್ಮಣ್ಯದಿಂದ ಸುಮಾರು ಮೂರು ಕಿಲೋ ಮೀಟರ್ ದೂರದ ಕೈಕಂಬ ಎಂಬಲ್ಲಿ ಬಸ್ಸಿಂದ ಇಳಿಸಿ ಹೋಗಿದ್ದಾರೆ. ನಂತರದಲ್ಲಿ ಈ ದಂಪತಿಗಳು ತಮ್ಮ ಮಕ್ಕಳೊಂದಿಗೆ ಸುಮಾರು ಆರು ಕಿಲೋ ಮೀಟರ್ ದೂರ ನಡೆದು ಕುಕ್ಕೆ ಸುಬ್ರಹ್ಮಣ್ಯ ರೋಡ್ (ನೆಟ್ಟಣ) ರೈಲು ನಿಲ್ದಾಣ ತಲುಪಿದ್ದಾರೆ. ನಂತರದಲ್ಲಿ ಸ್ಥಳೀಯರಲ್ಲಿ ತಮಗಾದ ಅನ್ಯಾಯದ ಬಗ್ಗೆ ಕಣ್ಣೀರಿಟ್ಟು ಇಂತಹ ಬಸ್ಸ್‌ಗಳ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

subrahmanya

ಇಂತಹ ಘಟನೆಗಳು ಈ ಭಾಗದಲ್ಲಿ ಪದೇಪದೇ ಮರುಕಳಿಸುತ್ತಿದ್ದೂ,ಈ ಬಗ್ಗೆ ಹಲವು ಬಾರಿ ಮೇಲಧಿಕಾರಿಗಳಿಗೆ ತಿಳಿಸಿದರೂ ಸಹಾ ಈ ತನಕ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಮುಂದೆ ಓದಿ..;ನಾಯಿಗಳಿಗೂ ಬಂತು ಆಧಾರ್‌ ಕಾರ್ಡ್‌.!! ಇನ್ಮುಂದೆ ನಾಯಿಗೂ ಸ್ಕ್ಯಾನ್ ಕಾರ್ಡ್..! ಏನಿದು?

ಆದುದರಿಂದ ಈ ಭಾಗದಲ್ಲಿ ನಡೆಯುವ ಈ ಹಗಲು ದರೋಡೆಗೆ ಅಧಿಕಾರಿಗಳೂ ಸಾಥ್ ನೀಡುತ್ತಿದ್ದಾರೆ ಎನ್ನಲಾಗಿದೆ. ಆದುದರಿಂದ ಸಂಬಂಧಿಸಿದ ಅಧಿಕಾರಿಗಳು ಈ ಬಗ್ಗೆ ಕ್ರಮಕ್ಕೆ ಮುಂದಾಗಬೇಕು ಎಂದು ರೈಲು ಬಳಕೆದಾರರ ವೇದಿಕೆ ನೆಟ್ಟಣ ಸಂಘವು ಆಗ್ರಹಿಸಿದೆ.

Continue Reading

LATEST NEWS

Trending