Connect with us

LATEST NEWS

ರಾಜ್ಯದಲ್ಲಿ ಜೂ.27-28ರಂದು ವಿಪರೀತ ಮಳೆ ಸಾಧ್ಯತೆ: ಹವಾಮಾನ ಇಲಾಖೆ ಎಚ್ಚರಿಕೆ

Published

on

ದೆಹಲಿ: ಕಳೆದ ಮೂರ್ನಾಲ್ಕು ದಿನಗಳಿಂದ ಕೊಂಚ ಬಿಡುವು ನೀಡಿರುವ ಮಳೆ ಮತ್ತೆ ಆರ್ಭಟಿಸಲಿದೆ ಎದು ಭಾರತೀಯ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮಳೆಯ ಬಗ್ಗೆ ಹೊಸ ಪ್ರಕಟಣೆ ನೀಡಿದ್ದು, ಒಟ್ಟು 13 ರಾಜ್ಯಗಳಲ್ಲಿ ಜೂನ್​ 28ನೇ ತಾರೀಖಿನ ತನಕ ಭಾರೀ ಮಳೆ ಸುರಿಯಲಿದೆ ಎಂಬ ಮುನ್ಸೂಚನೆ ನೀಡಿದೆ. ಆ ವರದಿಯ ಪ್ರಕಾರ ಉತ್ತರ ಪ್ರದೇಶ, ಮಧ್ಯಪ್ರದೇಶ, ಜಾರ್ಖಂಡ್, ಪಶ್ಚಿಮ ಬಂಗಾಳ, ಒಡಿಶಾ, ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾ ಹಾಗೂ ಗುಜರಾತ್ ರಾಜ್ಯಗಳಲ್ಲಿ ಜೂನ್​ 28ರ ತನಕ ವಿಪರೀತ ಮಳೆ ಸುರಿಯುವ ಸಾಧ್ಯತೆ ದಟ್ಟವಾಗಿದೆ.

ಜೂನ್‌ 27-28ರಂದು ಕರ್ನಾಟಕದಲ್ಲಿ ಮತ್ತೆ ಮಳೆ

ಜೂನ್‌ 27ರಂದು ಕರ್ನಾಟಕ ಸೇರಿದಂತೆ ತೆಲಂಗಾಣ, ಆಂಧ್ರಪ್ರದೇಶ, ಅರುಣಾಚಲ ಪ್ರದೇಶ, ತ್ರಿಪುರಾ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಮೇಘಾಲಯ, ಒಡಿಶಾ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಮರುದಿನ ಅಂದರೆ ಜೂನ್‌ 28ರಂದು ಕರ್ನಾಟಕ, ಕೇರಳ, ತಮಿಳುನಾಡು, ತೆಲಂಗಾಣ, ಗೋವಾ, ಪುದುಚೇರಿ, ತ್ರಿಪುರ, ಮೇಘಾಲಯ, ಮಿಜೋರಾಂ, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಪಶ್ಚಿಮ ಬಂಗಾಳ, ಚತ್ತೀಸ್​ಗಡ, ಹಿಮಾಲಯ ಪ್ರಾಂತ್ಯದಲ್ಲಿ ಉತ್ತಮ ಮಳೆಯಾಗಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

LATEST NEWS

ಪಂಚಭೂತಗಳಲ್ಲಿ ಲೀನರಾದ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್…..ಗಣ್ಯರಿಂದ ಅಂತಿಮ ನಮನ

Published

on

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ನಿಧನರಾಗಿದ್ದು ಅವರ ಅಂತ್ಯಕ್ರಿಯೆ ಇಂದು ಕದ್ರಿ ಚಿತಾಗಾರದಲ್ಲಿ ನಡೆಸಲಾಗಿದೆ. ಅನಾರೋಗ್ಯದಿಂದ ಇಹಲೋಕ ತ್ಯಜಿಸಿದ ಮನೋಹರ್ ಪ್ರಸಾದ್ ಅವರ ಸಾವಿನ ಸುದ್ದಿ ಕೇಳಿ ಹಲವಾರು ಅಭಿಮಾನಿಗಳು ಅವರ ಮನೆಗೆ ಭೇಟಿ ನೀಡಿದ್ದಾರೆ. ಶಾಸಕರು , ಸಂಸದರು, ಹಾಗೂ ಹಲವು ಗಣ್ಯರು ಆಗಮಿಸಿ ಪಾರ್ಥಿವ ಶರೀರದ ದರ್ಶನ ಪಡೆದು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಅಂತಿಮ ನಮನ :
ಲೋಬೋ ಲೈನ್‌ನ ನಿವಾಸದಲ್ಲಿ ಕುಟುಂಬಸ್ಥರಿಂದ ಧಾರ್ಮಿಕ ವಿಧಿವಿಧಾನ ಮುಗಿದ ಬಳಿಕ ಮಂಗಳೂರು ಪತ್ರಿಕಾ ಭವನದಲ್ಲಿ ಮೃತರಿಗೆ ಅಂತಿಮ ಗೌರವ ಸಲ್ಲಿಸಲಾಗಿದೆ. ಜಿಲ್ಲಾ ಪತ್ರಕರ್ತ ಸಂಘ ಹಾಗೂ ಪ್ರೆಸ್‌ಕ್ಲಬ್‌ ಮತ್ತು ಪತ್ರಿಕಾ ಭವನ ಟ್ರಸ್ಟ್‌ ವತಿಯಿಂದ ಮನೋಹರ್ ಪ್ರಸಾದ್ ಅವರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಲಾಗಿದೆ.

ಸ್ಪೀಕರ್ ಖಾದರ್, ಸಂಸದ ನಳೀನ್ ಕುಮಾರ್ ಕಟೀಲ್‌, ಮಾಜಿ ಶಾಸಕ ವಿನಯಕುಮಾರ್ ಸೊರಕೆ, ಕಾಪು ಶಾಸಕ ಸುರೇಶ್ ಶೆಟ್ಟಿ ಗುರ್ಮೆ ಸೇರಿದಂತೆ ಹಲವು ರಾಜಕೀಯ ನಾಯಕರು ಆಗಮಿಸಿ ಅಂತಿಮ ಗೌರವ ಸಲ್ಲಿಸಿದ್ದಾರೆ. ಮೂಡಬಿದ್ರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಆಧ್ಯಕ್ಷ ಡಾ.ಮೋಹನ್ ಆಳ್ವಾ ಸಹಿತ ನಾಡಿನ ಹಲವು ಗಣ್ಯರು ಆಗಮಿಸಿ ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.


ನಮ್ಮ ಕುಡ್ಲ ವಾಹಿನಿಯಲ್ಲಿ ಜನಮನ ಕಾರ್ಯಕ್ರಮ ನೀಡಿ ಮನೆ ಮಾತಾಗಿದ್ದ ಮಾತುಗಾರನಿಗೆ ನಮ್ಮ ಕುಡ್ಲ ಸಂಸ್ಥೆಯ ನಿರ್ದೇಶಕ ಲೀಲಾಕ್ಷ ಕರ್ಕೇರಾ ಹಾಗೂ ಸಿಬ್ಬಂದಿ ಅಂತಿಮ ನಮನ ಸಲ್ಲಿಸಿದ್ದಾರೆ. ಪತ್ರಿಕಾ ಭವನದಲ್ಲಿ ಅಂತಿಮ ಗೌರವದ ಬಳಿಕ ಕದ್ರಿ ಚಿತಾಗಾರದಲ್ಲಿ ಸಂಪ್ರದಾಯದಂತೆ ಮೃತರ ಅಂತ್ಯಕ್ರಿಯೆ ನೆರವೇರಿಸಲಾಗಿದೆ.

ಕಣ್ಣೀರಾದ ಜನಾರ್ದನ ಪೂಜಾರಿ :


ಪತ್ರಿಕಾ ಭವನಕ್ಕೆ ಆಗಮಿಸಿದ ಜಿಲ್ಲೆಯ ಹಿರಿಯ ರಾಜಕಾರಣಿ ಮಾಜಿ ಕೇಂದ್ರ ಸಚಿವ ಜನಾರ್ದನ ಪೂಜಾರಿ ಅವರು ಮನೋಹರ್ ಪ್ರಸಾದ್ ಅವರ ಅಂತಿಮ ದರ್ಶನ ಪಡೆದಿದ್ದಾರೆ. ತನ್ನ ರಾಜಕೀಯ ಜೀವನದ ಕಾಲದಲ್ಲಿ ಸಾಕಷ್ಟು ಆತ್ಮೀಯರಾಗಿದ್ದ ಮನೋಹರ್ ಪ್ರಸಾದ್ ಅವರನ್ನು ನೆನೆದು ಪೂಜಾರಿಯವರು ಕಣ್ಣೀರಿಟ್ಟಿದ್ದಾರೆ.

ವೃತ್ತಿ ಜೀವನದಲ್ಲಿ ಅಪಾರ ಸ್ನೇಹಿತರನ್ನು ಸಂಪಾದಿಸಿದ್ದ ಮನೋಹರ್ ಪ್ರಸಾದ್ ಅವರ ಅಂತಿಮ ಯಾತ್ರೆಯಲ್ಲೂ ಸಾಕಷ್ಟು ಜನ ಭಾಗವಹಿಸಿ ಗೌರವ ಸಲ್ಲಿಸಿದ್ದಾರೆ. ಈ ವೇಳೆ ಜಿಲ್ಲಾ ಪತ್ರಕರ್ತ ಸಂಘದ ಅಧ್ಯಕ್ಷ ಶ್ರೀನಿವಾಸ್ ನಾಯಕ್ ಇಂದಾಜೆ, ಪ್ರೆಸ್‌ಕ್ಲಬ್‌ ಪಿ.ಬಿ. ಹರೀಶ್ ರೈ, ಪತ್ರಿಕಾ ಭವನ ಟ್ರಸ್ಟ್‌ ರಾಮಕೃಷ್ಣ ಸೇರಿದಂತೆ ಹಲವು ಪತ್ರಕರ್ತರು ಉಪಸ್ಥಿತರಿದ್ದು, ಹಿರಿಯ ಪತ್ರಕರ್ತ ಮನೋಹರ್ ಪ್ರಸಾದ್ ಅವರಿಗೆ ಅಂತಿಮ ಗೌರವ ಸಲ್ಲಿಸಿ ಶೃದ್ಧಾಂಜಲಿ ಕೋರಿದ್ದಾರೆ.

 

 

 

 

Continue Reading

bengaluru

ರಾಮೇಶ್ವರ ಕೆಫೆಯಲ್ಲಿ ಏಕಾಏಕಿ ಸ್ಫೋಟ – ಐವರು ಗಂಭೀರ..!

Published

on

ಬೆಂಗಳೂರು: ಇಲ್ಲಿನ ಇಂದಿರಾನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರ ಕೆಫೆಯಲ್ಲಿ ಇಂದು ಮಧ್ಯಾಹ್ನ ವೇಳೆ ನಿಗೂಢ ವಸ್ತು ಸ್ಫೋಟಗೊಂಡ ಘಟನೆ ನಡೆದಿದ್ದು, ಐವರಿಗೆ ಗಂಭೀರ ಗಾಯಗಳಾಗಿವೆ.

ಕುಂದಲಹಳ್ಳಿಯಲ್ಲಿರೋ ರಾಮೇಶ್ವರಂ ಕೆಫೆಗೆ ಪ್ರತಿದಿನಲೂ ಸುಮಾರು ನಾಲ್ಕರಿಂದ ಐದು ಸಾವಿರ ಮಂದಿ ತಿಂಡಿ ಹಾಗೂ ಊಟಕ್ಕೆ ಬರುತ್ತಿದ್ದರು. ಕುಂದಲಹಳ್ಳಿ ಬಸ್ ಸ್ಟಾಪ್ ಹಿಂದಿನ ಕಾರ್ನರ್ ಜಾಗ ಆಗಿದ್ದರಿಂದ ರಾಮೇಶ್ವರಂ ಕೆಫೆ ಜನನಿಬಿಡ ಪ್ರದೇಶದಲ್ಲಿದೆ.ಈ ಸ್ಫೋಟದಿಂದ ಐವರಿಗೆ ಗಂಭೀರ ಗಾಯಗಳಾಗಿವೆ.


ಕೂಡಲೇ ಮೂವರನ್ನು ಬ್ರೂಕ್​ ಫೀಲ್ಡ್​ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಸಾಗಿಸಲಾಗಿದೆ.ಓರ್ವ ವ್ಯಕ್ತಿಯನ್ನು ಮಣಿಪಾಲ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರಲ್ಲಿ ಇಬ್ಬರು ಗ್ರಾಹಕರಾಗಿದ್ದು, ಉಳಿದವರು ಹೋಟೆಲ್​ ಸಿಬ್ಬಂದಿಗಳಾಗಿದ್ದಾರೆ. ಸ್ಫೋಟದಲ್ಲಿ ತೀವ್ರವಾಗಿ ಗಾಯಗೊಂಡ ಸ್ವರ್ಣ ನಾರಯಣಪ್ಪ ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಫಾರುಕ್, ದಿಪಾಂಶು ಎಂಬ ಗಾಯಾಳುಗಳು ಜನರಲ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Continue Reading

LATEST NEWS

Konaje: ಪತ್ನಿಯ ಸಾವಿನ ಸುದ್ದಿ ಕೇಳಿ ಪತಿ ಆತ್ಮಹತ್ಯೆ- ಸಾವಿನಲ್ಲೂ ಒಂದಾದ ವೃದ್ಧ ದಂಪತಿ!

Published

on

ಕೊಣಾಜೆ : ಅತ್ತ ಪತ್ನಿ ಹೃದಯಾಘಾತದಿಂದ ನಿಧನರಾಗಿದ್ದರೆ, ಇತ್ತ ನೊಂದ ಪತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಣಾಜೆಯ ಗ್ರಾಮಚಾವಡಿ ಎಂಬಲ್ಲಿ ನಡೆದಿದೆ. ಮೀನಾಕ್ಷಿ ಪೂಜಾರಿ(59) ಮತ್ತು ಶೇಷಪ್ಪ ಪೂಜಾರಿ(63) ಸಾವಿನಲ್ಲೂ ಒಂದಾದ ಜೋಡಿ.ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮೀನಾಕ್ಷಿ ಅವರಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ,  ಮಂಗಳವಾರ ರಾತ್ರಿ ತೀವ್ರ ಎದೆನೋವು ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮರುದಿನ ಮೀನಾಕ್ಷಿ ಅವರು ಮೃತಪಟ್ಟಿದ್ದು, ಈ ವಿಚಾರ ಮನೆಗೆ ಬಂದ ಸಂಬಂಧಿಯೊಬ್ಬರು ತಿಳಿಸಿದ್ದಾರೆ. ವಿಷಯ ತಿಳಿಸಿ ಪಕ್ಕದ ಅಂಗಡಿಗೆ ತೆರಳಿದ್ದ ಸಂಬಂಧಿ ವಾಪಾಸಾಗುವಷ್ಟರಲ್ಲಿ ಶೇಷಪ್ಪ ಪೂಜಾರಿ ಕೀಟನಾಶಕ ಸೇವಿಸಿದ್ದಾರೆ. ತಕ್ಷಣ ಅವರ ಕೈನಿಂದ ಕೀಟನಾಶಕ ಎಳೆದು ತೆಗೆದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ರೂ ಶೇಷಪ್ಪ ಪೂಜಾರಿ ಇಹಲೋಕ ತ್ಯಜಿಸಿದ್ದಾರೆ. ಶೇಷಪ್ಪ ಪೂಜಾರಿ ಶಾಲಾ ಬಸ್ ಚಾಲಕರಾಗಿ ಕೆಲಸ ಮಾಡುತ್ತಿದ್ದು. ಈ ದಂಪತಿಗೆ ಮಕ್ಕಳಿಲ್ಲದ ಕೊರಗು ಕೂಡಾ ಇತ್ತು. ಗುರುವಾರ ದಂಪತಿ ಶವವನ್ನು ಒಟ್ಟಿಗೆ ಮನೆಗೆ ತಂದಿದ್ದು, ಎಲ್ಯಾರ್ ಸ್ಮಶಾನದಲ್ಲಿ ಅಂತ್ಯಸಂಸ್ಕಾರ ಮಾಡಲಾಗಿದೆ. ಈ ಬಗ್ಗೆ ಕೊಣಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading

LATEST NEWS

Trending