ಭೂಗತ ಪಾತಕಿ ದಾವೂದ್ ಇಬ್ರಾಹಿಂ ಸಹಚರ “ಅಬ್ದುಲ್ ಮಜೀದ್ ಕುಟ್ಟಿ” ಭಯೋತ್ಪಾದನಾ ನಿಗ್ರಹ ದಳದ ವಶಕ್ಕೆ..!
ಅಹಮದಾಬಾದ್: ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ ಕ್ರಿಮಿನಲ್, ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಹಚರ ಅಬ್ದುಲ್ ಮಜೀದ್ ಕುಟ್ಟಿ ಕೊನೆಗೂ ಬಂಧಿಸಲಾಗಿದೆ.
ಕಳೆದ 24 ವರ್ಷಗಳಿಂದ ತಲೆಮರಿಸಿಕೊಂಡಿದ್ದ ಈ ಉಗ್ರನನ್ನ ಇಂದು ಭಯೋತ್ಪಾದನಾ ನಿಗ್ರಹ ದಳ ಜಾರ್ಖಂಡ್ನಲ್ಲಿ ಬಂಧಿಸಿದೆ.ಅಬ್ದುಲ್ ಮಜೀದ್ ಕುಟ್ಟಿ ಮೂಲತ: ಕೇರಳದವನಾಗಿದ್ದಾನೆ. 1996ರ ಶಸ್ತ್ರಾಸ್ತ ಸಂಗ್ರಹ ಪ್ರಕರಣದ ಸುಳಿಯಲ್ಲಿ ಸಿಲುಕಿಕೊಂಡಿದ್ದ ಈತ 106 ಪಿಸ್ತೂಲ್, 750 ಸಿಡಿಮದ್ದುಗಳು ಮತ್ತು 4 ಕೆ.ಜಿ RDX ಸಂಗ್ರಹಿಸಿದ ಆರೋಪ ಎದುರಿಸುತ್ತಿದ್ದ.
ಇದೇ ಪ್ರಕರಣದ ಉಳಿದ ಆರೋಪಿಗಳನ್ನ 1996ರಲ್ಲೇ ಬಂಧಿಸಲಾಗಿತ್ತು. ಅವ್ರ ವಿಚಾರಣೆ ಸಮಯದಲ್ಲಿ ಈತನ ಹೆಸರು ಕೇಳಿ ಬಂದಿತ್ತು. ಅಂದು ತಲೆಮರೆಸಿಕೊಂಡಿದ್ದ ಈ ಕ್ರಿಮಿನಲ್ ಬರೋಬ್ಬರಿ 24 ವರ್ಷಗಳ ನಂತ್ರ ಬಂಧನಕ್ಕೊಳಗಾಗಿದ್ದಾನೆ.