Connect with us

    DAKSHINA KANNADA

    Ullala: ಕೊಳದಲ್ಲಿ ಮುಳುಗಿ ಯುವಕ  ಮೃತ್ಯು..!

    Published

    on

    ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ ಕೊಳಕ್ಕೆ ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತ ಪಟ್ಟ ಘಟನೆ ಕರ್ನಾಟಕ- ಕೇರಳ ಗಡಿ ಭಾಗದ ಕೆಳಗಿನ ತಲಪಾಡಿ ಬಳಿ ಸಂಭವಿಸಿದೆ.

    ಉಳ್ಳಾಲ: ಸ್ನೇಹಿತರ ಜತೆ ಸ್ನಾನಕ್ಕೆಂದು ತೆರಳಿ ಕೊಳಕ್ಕೆ ಇಳಿದ ಯುವಕನೋರ್ವ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಕರ್ನಾಟಕ- ಕೇರಳ ಗಡಿ ಭಾಗದ ಕೆಳಗಿನ ತಲಪಾಡಿ ಬಳಿ ಸಂಭವಿಸಿದೆ.

    ಕೇರಳದ ಹೊಸಂಗಡಿ ದುರ್ಗಿಪಳ್ಳ ನಿವಾಸಿ  ಹರಿಪ್ರಸಾದ್‌ ಆಚಾರ್ಯ (36) ಮೃತ ಪಟ್ಟವರು.

    ತಲಪಾಡಿಯಲ್ಲಿರುವ ಖಾಸಗಿ ಜಾಗದಲ್ಲಿರುವ ಕೊಳಕ್ಕೆ ಸ್ನಾನಕ್ಕೆಂದು ಬಂದಿದ್ದ ನಾಲ್ವರ ಪೈಕಿ ಹರಿಪ್ರಸಾದ್‌ ನೀರಿನಡಿಯ ಕೆಸರಿನಲ್ಲಿ ಸಿಲುಕಿ ಮುಳುಗಿದ್ದಾರೆ.

    ಇದರಿಂದಾಗಿ ಉಸಿರುಗಟ್ಟಿ ಮೃತ ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

    ಘಟನಾ ಸ್ಥಳಕ್ಕೆ ಮಂಗಳೂರಿನಿಂದ ಅಗ್ನಿ ಶಾಮಕ ದಳದವರು ತೆರಳಿ ಕಾರ್ಯಾಚರಣೆ ನಡೆಸಿ ಮೃತದೇಹ ಮೇಲಕ್ಕೆತ್ತಿದ್ದಾರೆ.

    ಮೃತರು ವೆಲ್ಡಿಂಗ್‌ ವೃತ್ತಿ ನಡೆಸುತ್ತಿದ್ದರು.

    ಹರಿಪ್ರಸಾದ್‌ ಆಚಾರ್ಯ ಅವರು ಅವಿವಾಹಿತರಾಗಿದ್ದು, ತಾಯಿ, ಸಹೋದರರು ಹಾಗೂ ಸಹೋದರಿಯರನ್ನು ಅಗಲಿದ್ದಾರೆ.

    DAKSHINA KANNADA

    ಅಗಲಿದ ಇಬ್ಬರು ಪತ್ರಕರ್ತರಿಗೆ ದ.ಕ. ಪತ್ರಕರ್ತರ ಸಂಘದಿಂದ ಶ್ರದ್ಧಾಂಜಲಿ

    Published

    on

    ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರಾಗಿದ್ದ ಮಂಗಳೂರಿನ ಹಿರಿಯ ಫೋಟೊ ಜರ್ನಲಿಸ್ಟ್ ಅಲ್ಫ್ರೆಡ್ ಡಿಸೋಜ ಮತ್ತು ಕ್ಯಾಮೆರಾಮ್ಯಾನ್ ಚಿಕ್ಕನರಗುಂದ ನಿವಾಸಿ ವೀರೇಶ್ ಕಡ್ಲಿಕೊಪ್ಪ ಅವರು ಇತ್ತೀಚೆಗೆ ನಿ*ಧನರಾಗಿದ್ದು, ಈ ಬಗ್ಗೆ ಶ್ರದ್ಧಾಂಜಲಿ ಸಭೆ ಇಂದು ಮಂಗಳೂರಿನ ಪತ್ರಿಕಾಭವನದಲ್ಲಿ ನಡೆಯಿತು.

    ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ, ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ, ಮಂಗಳೂರು ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಮತ್ತಿತರರು ನುಡಿ ನಮನ ಸಲ್ಲಿಸಿದರು. ಪತ್ರಿಕಾ ಭವನ ಟ್ರಸ್ಟ್‌ ಅಧ್ಯಕ್ಷ ರಾಮಕೃಷ್ಣ ಆರ್‌. ಹಾಗೂ ಸಂಘದ ಇತರ ಪದಾಧಿಕಾರಿಗಳು ಮತ್ತು ಸದಸ್ಯರನ್ನು ಒಳಗೊಂಡಂತೆ ಉಪಸ್ಥಿತರಿದ್ದ ಎಲ್ಲರೂ ಅಗಲಿದ ಇಬ್ಬರು ಪತ್ರಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಿದರು.

     

    ಸಂಘದ ಅಧ್ಯಕ್ಷ ಶ್ರೀನಿವಾಸ್‌ ನಾಯಕ್‌ ಇಂದಾಜೆ ಅವರು ಮಾತನಾಡಿ, ಇಬ್ಬರು ಪತ್ರಕರ್ತರ ಅಗ*ಲಿಕೆಯಿಂದ ಜಿಲ್ಲೆಯ ಮಾಧ್ಯಮ ಲೋಕಕ್ಕೆ ಅಪಾರ ನಷ್ಟವಾಗಿದೆ. ಕ್ಯಾಮೆರಾಮ್ಯಾನ್ ವೀರೇಶ್ ತನ್ನ ಊರು ಚಿಕ್ಕ ನರಗುಂದಕ್ಕೆ ಹೋಗಿದ್ದ ವೇಳೆ ಅಲ್ಲಿ ನಿಧ*ನರಾಗಿದ್ದಾರೆ. ಅವರ ಸಾವಿನ ಬಗ್ಗೆ ಅನೇಕ ಸಂಶಯಗಳಿವೆ. ಹಾಗಾಗಿ ಈ ಬಗ್ಗೆ ತನಿಖೆ ನಡೆಸುವಂತೆ ಸರಕಾರವನ್ನು ಒತ್ತಾಯಿಸಲಾಗುವುದು. ಸ್ಪೀಕರ್ ಯು.ಟಿ. ಖಾದರ್‌ ಅವರನ್ನು ಭೇಟಿಯಾಗಿ ಈ ಕುರಿತಂತೆ ಮನವಿ ಸಲ್ಲಿಸಲಾಗುವುದು ಎಂದು ಹೇಳಿದರು.

    ಪ್ರೆಸ್‌ ಕ್ಲಬ್‌ ಅಧ್ಯಕ್ಷ ಪಿ.ಬಿ. ಹರೀಶ್‌ ರೈ ಅವರು ಫೋಟೊ ಜರ್ನಲಿಸ್ಟ್ ಅಲ್ಫ್ರೆಡ್ ಡಿ’ಸೋಜಾ ಆಕಸ್ಮಿಕವಾಗಿ ಹೃದಯಾಘಾ*ತದಿಂದ ನಿಧ*ನರಾಗಿರುವುದನ್ನು ಉಲ್ಲೇಖಿಸಿ, ಎಲ್ಲಾ ಪತ್ರಕರ್ತರು ಆಗಿಂದಾಗ್ಗೆ ಆರೋಗ್ಯ ತಪಾಸಣೆಯನ್ನು ಮಾಡುತ್ತಿರಬೇಕು. ಕೆಲಸದ ಒತ್ತಡದ ನಡುವೆಯೂ ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಬೇಕೆಂದು ಸಲಹೆ ಮಾಡಿದರು.

    Continue Reading

    BANTWAL

    ಬಂಟ್ವಾಳ: ಭಾರೀ ಗಾಳಿ ಮಳೆಗೆ ತಾಲೂಕಿನ ಕೆಲ ಭಾಗಗಳಲ್ಲಿ ಹಾನಿ

    Published

    on

    ಬಂಟ್ವಾಳ: ರಾತ್ರಿ ಬೀಸಿದ ಗಾಳಿ ಮಳೆಗೆ ಬಂಟ್ವಾಳ ತಾಲೂಕಿನ ಕೆಲವು ಭಾಗದಲ್ಲಿ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಹಾನಿಯಾದ ಘಟನೆ ವರದಿಯಾಗಿದೆ.

    ಬಿಸಿ ರೋಡಿನ ಸರ್ಕಲ್ ಸಹಿತ ಅನೇಕ ಭಾಗದಲ್ಲಿ ವಿದ್ಯುತ್ ಕಂಬ, ಕಾಂಪೌಂಡ್, ಮರಗಳು ಉರುಳಿಬಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮಂಗಳವಾರ ರಾತ್ರಿ ಸುಮಾರು 9.30ರ ವೇಳೆ ಭಾರಿ ಗಾಳಿ ಮಳೆಯಾಗಿದ್ದು, ಇದರಿಂದ ಬಿ.ಸಿ.ರೋಡ್ ಸರ್ಕಲ್ ಬಳಿ ಸಹಿತ ಹಲವೆಡೆ ಒಟ್ಟು 5 ವಿದ್ಯುತ್ ಕಂಬಗಳು ಉರುಳಿಬಿದ್ದು ಮೆಸ್ಕಾಂ ಇಲಾಖೆಗೆ ಲಕ್ಷಾಂತರ ರೂ ನಷ್ಟ ಸಂಭವಿಸಿದೆ. ಬಿ.ಸಿ.ರೋಡ್ ಸ್ಪರ್ಶ ಕಲಾ ಮಂದಿರ ಬಳಿ ಬೃಹತ್ ಮರವೊಂದು ಉರುಳಿಬಿದ್ದಿದ್ದು, ಅನಾಹುತವನ್ನೇ ಉಂಟುಮಾಡಿದೆ.

    ಇನ್ನು ಬಂಟ್ವಾಳ ತಾಲೂಕಿನ ಮಾಧ್ವ ಬಳಿ ಮನೆಯ ಕಾಂಪೌಂಡ್ ಕುಸಿದು ಬಿದ್ದಿದ್ದು, ಅಪಾರ ಹಾನಿಯಾಗಿದೆ.

    Continue Reading

    BANTWAL

    ವಿಟ್ಲ: ಯುವಕ ನೇಣು ಬಿಗಿದು ಆತ್ಮಹ*ತ್ಯೆ..!

    Published

    on

    ವಿಟ್ಲ: ವಿಟ್ಲ ಬುಡೋಳಿ ಮಡಲ ನಿವಾಸಿ ಸುಶಾಂತ್(25 ವ) ಮನೆಯಲ್ಲಿ ನೇಣು ಬಿಗಿದು ಆತ್ಮಹ*ತ್ಯೆ ಮಾಡಿಕೊಂಡಿದ್ದಾರೆ. ಸುಶಾಂತ್ ರವರು ಇತ್ತೀಚೆಗೆ ಮಿನಿ ಬಸ್‌ ಖರೀದಿಸಿದ್ದು ಬಸ್ಸನ್ನು ತಾನೇ ಚಾಲನೆ ಮಾಡಿಕೊಂಡು ಕೆಲಸ ನಿರ್ವಹಿಸುತ್ತಿದ್ದರು. ಈತ ಸಂಘಟನೆಯ ಜೊತೆಗೆ ಸಾಮಾಜಿಕ ಸೇವಾಕಾರ್ಯಗಳನ್ನು ಮಾಡಿಕೊಂಡಿದ್ದರು. ಗ್ರಾಮದಲ್ಲಿ ಉತ್ತಮ ಯುವಕನಾಗಿ ಗುರುತಿಸಿಕೊಂಡಿದ್ದ ಈತನ ಸಾವಿಗೆ ಸ್ಪಷ್ಟ ಕಾರಣ ಇನ್ನೂ ತಿಳಿದು ಬಂದಿಲ್ಲ. ವಿಟ್ಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೆತ್ತಿಕೊಂಡಿದ್ದಾರೆ.

    ಸುರತ್ಕಲ್: ಖಾಸಗಿ ಬಸ್ ಢಿ*ಕ್ಕಿ; ದ್ವಿಚಕ್ರ ಸವಾರನಿಗೆ ಗಾ*ಯ

    Continue Reading

    LATEST NEWS

    Trending