Connect with us

    LATEST NEWS

    ಉಡುಪಿ : ಶಿರ್ವ ಸಂತೆಯಲ್ಲಿ ‘ಪಾರ್ಕಿಂಗ್’ ಕಷ್ಟಕರ- ‘ಸಂಚಾರ’ ಸಂಚಕಾರ..!

    Published

    on

    ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತೀಯದ ಜನಸ್ತೋಮದಿಂದ, ರಸ್ತೆ ಬದಿ ವ್ಯಾಪಾರಸ್ತರಿಗೆ, ಹಾಗೂ ಪಾರ್ಕಿಂಗ್ ಗೆ ಸಮಸ್ಯೆಯೂ ಕಾಡುತ್ತಿದ್ದು, ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಉಡುಪಿ: ಉಡುಪಿ ಜಿಲ್ಲೆಯ ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಅತೀಯದ ಜನಸ್ತೋಮದಿಂದ, ರಸ್ತೆ ಬದಿ ವ್ಯಾಪಾರಸ್ತರಿಗೆ, ಹಾಗೂ ಪಾರ್ಕಿಂಗ್ ಗೆ ಸಮಸ್ಯೆಯೂ ಕಾಡುತ್ತಿದ್ದು, ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

    ಉಡುಪಿಯಲ್ಲಿ ನಡೆಯುವ ಸಂತೆಯಲ್ಲಿ ದೂರದೂರಿಂದ ಬರುವ ವ್ಯಾಪರಿಗಳು, ಸ್ಥಳಿಯರು, ಕೃಷಿಕರು ಸೇರಿದಂತೆ ತಮ್ಮ ಜಿವಾನೋಪಾಯಕ್ಕೆ ವ್ಯಾಪರ ಮಾಡಲು ಬರುತ್ತಾರೆ.

    ಆದರೆ ಇದೀಗ ವಾರದ ಸಂತೆಗೆ ಸಮಸ್ಯೆಯಾಗಿದೆ, ವಿಸ್ತಾರವಾದ ಜಾಗವಿಲ್ಲ, ನೂರಾರು ಸಮಸ್ಯೆಗಳ ನಡುವೆ ವ್ಯಾಪರಸ್ತರು ಸಂತೆ ನಡೆಸುತ್ತಿದ್ದಾರೆ.

    ಸದ್ಯ ಶಿರ್ವ – ಬೆಳ್ಮಣ್ ಮಧ್ಯ ಹಾದು ಹೋಗುವ ರಾಜ್ಯ ಹೆದ್ದಾರಿಯ ಪಕ್ಕದಲ್ಲಿ ವಾರದ ಸಂತೆ ನಡೆಯುತ್ತದೆ.

    ತರಕಾರಿ ವ್ಯಾಪಾರಿಗಳು ಫುಟ್ಬಾತ್ ಮತ್ತು ರಾಜ್ಯ ಹೆದ್ದಾರಿಯ ಇಕ್ಕಲೆಗಳಲ್ಲಿ ತರಕಾರಿ ವ್ಯಾಪಾರ ಮಾಡುತ್ತಾರೆ.

    ಇದು ಭಾರೀ ಆತಂಕಕ್ಕೆ ಕಾರಣವಾಗಿದ್ದು, ಹಲವು ಅಪಘಾತಕ್ಕೂ ಎಡೆ ನೀಡಿದೆ.

    ಶಿರ್ವ ಬಸ್ಸು ತಂಗುದಾಣ, ರಿಕ್ಷಾ ನಿಲ್ದಾಣ, ಗೂಡ್ಸ್ ಟೆಂಪೋ , ಟೂರಿಸ್ಟ್ ಕಾರುಗಳು ಹೆದ್ದಾರಿ ಪಕ್ಕದಲ್ಲಿ ನಿಲುಗಡೆಯಾಗುತ್ತಿದೆ.
    ಆದ್ದರಿಂದ ಪಾರ್ಕಿಂಗ್ ಸಮಸ್ಯೆ ಕಾಡುತ್ತಿದೆ.

    ಅಡ್ಡಾದಿಡ್ಡಿ ಸ್ಕೂಟರ್ ಗಳನ್ನು ನಿಲ್ಲಿಸಿ ಸಂತೆಯಲ್ಲಿ ಖರೀದಿ ಮಾಡಲು ಹೋಗುವ ಗ್ರಾಹಕರಿಂದಾಗಿ ಇಲ್ಲಿ ಜಾಗದ ಕೊರತೆ ಇರುವುದರಿಂದ ವಾಹನ ಅಪಘಾತಕ್ಕೆ ಕಾರಣವಾಗುತ್ತಿದೆ.

    ರಾಜ್ಯ ಹೆದ್ದಾರಿಯಲ್ಲಿ ನಿತ್ಯ ಸಾವಿರಾರು ವಾಹನ ಹೋರಾಟ ಮಾಡುತ್ತದೆ ಅದರ ಜೊತೆಗೆ ಕಾನೂನುಬಾಹಿರವಾಗಿ ಟಿಪ್ಪರ್‌ಗಳು ಸಂಚರಿಸುವುದರಿಂದ ಪಾದಚಾರಿಗಳಿಗೆ ನಡೆದುಕೊಂಡು ಹೋಗಲು ಕಷ್ಟಕರ ಆಗುತ್ತದೆ ಎನ್ನುತ್ತಾರೆ ಸ್ಥಳೀಯರು.

    ಅಲ್ಲದೆ ಇಲ್ಲಿ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ವಾಹನಗಳನ್ನು ನಿಲ್ಲಿಸುವುದರಿಂದ ತೊಂದರೆ ಉಂಟಾಗುತ್ತಿದೆ ಇಲ್ಲಿನ ಜನತೆ ಎನ್ನುತ್ತಾರೆ.

    ವಾರದ ಸಂತೆಗಳು ವಿಶಾಲವಾದ, ವಿಸ್ತಾರವಾದ ಜಾಗದಲ್ಲಿ ಯಾವುದೇ ಅಡ್ಡಿ ಆತಂಕಗಳು ಇಲ್ಲದೇ ನಿರಾತಂಕವಾಗಿ ನಡೆಯಬೇಕು.

     

    ಶಿರ್ವ ಗ್ರಾಮ ಪಂಚಾಯತ್ ಮತ್ತು ಸ್ಥಳೀಯ ಪೊಲೀಸರು ಸೇರಿ ವಾಹನ ಸವಾರರಿಗೆ ಮತ್ತು ಫುಟ್ ಪಾತ್ ನಲ್ಲಿತರಕಾರಿ ಮಾರುವವರಿಗೆ ದಂಡ ವಿಧಿಸಿ ಕ್ರಮ ಕೈಗೊಳ್ಳಬೇಕು.

    ಅತಿ ವೇಗವಾಗಿ ಸಂಚರಿಸುವ ಬಸ್ ಮತ್ತು ಟಿಪ್ಪರ್ ಚಾಲಕರ ವಿರುದ್ಧವೂ ಕಾನೂನು ಕ್ರಮ ಕೈಗೊಳ್ಳಬೇಕು.

    ವಾರದ ಸಂತೆಗೆ ನೂರಾರು ಸಮಸ್ಯೆಗಳಿದ್ದು ಶಿರ್ವ ಗ್ರಾಮ ಪಂಚಾಯತ್ ಅವುಗಳನ್ನು ಸರಿಪಡಿಸುವ ಕಾರ್ಯಕ್ಕೆ ಮುಂದಾಗಬೇಕು ಎಂದು ಸಾರ್ವಜನಿಕರ ಆಗ್ರಹಿಸಿದ್ದಾರೆ.

    ಬೃಹತ್ ಉದ್ಯಮಗಳು ಜೊತೆಗೆ ಮಲ್ಲಿಗೆ ಕೃಷಿಗೆ ಆದ್ಯತೆ ನೀಡುತ್ತಿರುವ ಈ ಊರಿನ ಗ್ರಾಮಸ್ಥರು ಇನ್ನೂ ಮುಂದಿನ ದಿನಗಳಲ್ಲಿ ವಾರದ ಸಂತೆಯಲ್ಲಿ ತರಕಾರಿಗಳನ್ನು ಯಾವುದೇ ಸಮಸ್ಯೆಗಳು ಇಲ್ಲದೆ ಖರೀದಿ ಮಾಡುವಂತಾಗಬೇಕು ಎಂದು ಸ್ಥಳಿಯರು ಹೇಳಿದ್ದಾರೆ.

    ಇಲ್ಲಿನ ಸಮಸ್ಯೆಗಳನ್ನು ಬಗೆಹರಿಸಲು ಸಂಬಂಧಪಟ್ಟ ಅಧಿಕಾರಿಗಳು ಮುಂದಾಗಬೇಕಾಗಿದೆ ಎಂದು ಗ್ರಾಮಸ್ಥರ ಒತ್ತಾಯ.

    LATEST NEWS

    ಅಣ್ಣನ ಪ್ರೀತಿಗೆ ತಮ್ಮ ಬ*ಲಿ; ತಾಯಿಯ ಮುಂದೆಯೇ ಮಗನ ಕೊ*ಲೆ

    Published

    on

    ಮಂಗಳೂರು/ಕಲಬುರಗಿ: ಯುವ ಸಮಾಜದ ಪ್ರೀತಿಗೆ ಮನೆಯಲ್ಲಿ ವಿರೋಧ ಬರುವುದು ಸಹಜ. ಅದರಲ್ಲೂ ಹುಡುಗಿಯ ವಿಚಾರದಲ್ಲಿ ಇದು ಹೆಚ್ಚಾಗಿಯೇ ಕಾಣಬಹುದು. ವಿಪರ್ಯಾಸವೆಂದರೆ ಅಣ್ಣನ ಪ್ರೇಮದ ವಿಚಾರದಲ್ಲಿ ತಮ್ಮ ಬಲಿ*ಯಾದ ಘಟನೆ ನಡೆದಿದೆ.


    ಕಲಬುರಗಿ ನಗರದ ಹೊರವಲಯದಲ್ಲಿರುವ ನಾಗನಹಳ್ಳಿ ಗ್ರಾಮದಲ್ಲಿ ಸುಮಿತ್‌ ಮಲ್ಲಾಬಾದ್ ಎಂಬ 19 ವರ್ಷದ ಯುವಕನನ್ನು ಭೀಕ*ರವಾಗಿ ಕೊ*ಲೆ ಮಾಡಲಾಗಿದೆ. ತಂದೆ-ತಾಯಿಯೊಂದಿಗೆ ಮುಂಬೈನಲ್ಲಿ ವಾಸವಾಗಿದ್ದ ಸುಮಿತ್‌, ಮುಂಬೈನಲ್ಲಿ ಪದವಿ ವಿದ್ಯಾಭ್ಯಾಸ ಮಾಡುತ್ತಿದ್ದ. ಕಳೆದ ವಾರವಷ್ಟೇ ತಾಯಿಯೊಂದಿಗೆ ಕಲಬುರಗಿಗೆ ಆಗಮಿಸಿದ್ದ. ಊರಲ್ಲಿ ಸುಮಿತ್ ಸಹೋದರ ಸಚಿನ್ ಮನೆಯಲ್ಲಿ ವಾಸವಾಗಿದ್ದ. ಸಚಿನ್ ನಾಗನಹಳ್ಳಿ ಗ್ರಾಮದ ತನ್ನದೆ ಏರಿಯಾದ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಈ ವಿಚಾರ ಯುವತಿಯ ಮನೆಯವರಿಗೆ ಗೊತ್ತಾಗಿ ಸಾಕಷ್ಟು ಭಾರಿ ನ್ಯಾಯ ಪಂಚಾಯಿತಿ ಮಾಡಿದ್ದರಂತೆ‌. ಆದರೆ ಅದು ಬಗೆಹರೆದಿರಲಿಲ್ಲ. ನಿನ್ನೆ ಸಂಜೆ (ಸೆ.21) ಸಚಿನ್ ಮನೆಗೆ ಯುವತಿಯ ಸಹೋದರ ಮತ್ತು ಆತನ ಕೆಲ ಸ್ನೇಹಿತರು ಬಂದಿದ್ದಾಗ ಸಚಿನ್ ಮನೆಯಲ್ಲಿರದ ಕಾರಣ ಆತನ ತಾಯಿ ಮತ್ತು ಸಹೋದರನ ಜೊತೆ ಗಲಾಟೆ ತೆಗೆದಿದ್ದಾರೆ. ಬಳಿಕ ಗಲಾಟೆ ವಿಕೋಪಕ್ಕೆ ತೆರಳಿ ಸುಮಿತ್​​ನನ್ನ ಚಾ*ಕುವಿನಿಂದ ಚು*ಚ್ಚಿ ಎಸ್ಕೇಪ್ ಆಗಿದ್ದಾರೆ.
    ಇತ್ತ ಸುಮಿತ್‌ಗೆ ಚಾ*ಕು ಚುಚ್ಚಿ*ದ್ದನ್ನು ಕಂಡ ತಾಯಿ, ಮಗನನ್ನ ಉಳಿಸಿಕೊಳ್ಳಲು ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಹನ್ನೆರೆಡು ಗಂಟೆಗಳ ಕಾಲ ನಡೆದ ಚಿಕಿತ್ಸೆ ಫಲಕಾರಿಯಾಗಿದೆ ಇಂದು ಬೆಳಗ್ಗೆ (ಸೆ.22) ಸಾವನ್ನ*ಪ್ಪಿದ್ದಾನೆ.
    ಈ ಸಂಬಂಧ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ. ಅದೇನೆ ಆಗಲಿ ಯುವತಿಯ ವಿಚಾರದಲ್ಲಿ ಏನು ಮಾಡದ ಅಮಾಯಕ ಯುವಕ ಬಲಿಯಾಗಿರೋದು ನಿಜಕ್ಕೂ ದುರಂತವೆ ಸರಿ.

    Continue Reading

    LATEST NEWS

    ತಿರುಪತಿಯಿಂದ ನಂದಿನಿ ತುಪ್ಪಕ್ಕೆ ಹೆಚ್ಚಿದ ಬೇಡಿಕೆ; ತುಪ್ಪ ಸಾಗಿಸುವ ಟ್ಯಾಂಕರ್‌ಗಳಿಗೆ ಜಿಪಿಎಸ್‌ ಅಳವಡಿಕೆ

    Published

    on

    ಆಂಧ್ರಪ್ರದೇಶ/ಮಂಗಳೂರು: ತಿರುಪತಿ ತಿರುಮಲದಲ್ಲಿ ಲಡ್ಡು ವಿವಾದ ಉಂಟಾದ ಬಳಿಕ ಸರಕಾರ ನಂದಿನಿ ತುಪ್ಪಕ್ಕೆ ಬೇಡಿಕೆ ಇಟ್ಟಿದೆ.  ಒಂದು ತಿಂಗಳ ಹಿಂದೆ ಟಿಟಿಡಿ ಕೆಎಂಎಫ್‌ಗೆ ಟೆಂಡರ್ ನೀಡಿದ ನಂತರ ನಂದಿನಿ ತುಪ್ಪ ಪೂರೈಕೆಯನ್ನು ಪುನಃ ಆರಂಭಿಸಲಾಗಿದೆ ಎಂದು ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಎಂ ಕೆ ಜಗದೀಶ್ ಹೇಳಿದ್ದಾರೆ.

    ತಿರುಪತಿ ಲಡ್ಡು ವಿವಾದದ ಬಳಿಕ ಕೆಎಮ್‌ಎಫ್‌ ಹೈ ಅಲರ್ಟ್‌:
    “ನಾವು ಒಂದು ತಿಂಗಳ ಹಿಂದೆ ತುಪ್ಪವನ್ನು(ಟಿಟಿಡಿಗೆ) ಸರಬರಾಜು ಮಾಡುತ್ತಿದ್ದೇವೆ. ನಾವು ವಾಹನಗಳಿಗೆ ಜಿಪಿಎಸ್ ಸಿಸ್ಟಮ್ ಮತ್ತು ಜಿಯೋ ಲೊಕೇಶನ್ ಸಾಧನಗಳನ್ನು ಅಳವಡಿಸಿದ್ದೇವೆ. ಇದರಿಂದ ವಾಹನ ಎಲ್ಲಿ ನಿಲ್ಲುತ್ತವೆ ಎಂಬುದನ್ನು ನಾವು ಕಂಡುಹಿಡಿಯಬಹುದು. ಇದು ಎಲ್ಲಿಯೂ ಕಲಬೆರಕೆ ಮಾಡದಂತೆ ನೋಡಿಕೊಳ್ಳಲು ಸಹಾಯಕವಾಗುತ್ತದೆ” ಎಂದು ಜಗದೀಶ್ ತಿಳಿಸಿದ್ದಾರೆ.

    ಕೆಎಂಎಫ್, ಟಿಟಿಡಿಗೆ 350 ಟನ್ ತುಪ್ಪ ಪೂರೈಸುವ ಗುತ್ತಿಗೆ ಪಡೆದುಕೊಂಡಿದೆ. ಅಗತ್ಯ ಬಿದ್ದಾಗ ತುಪ್ಪ ಪೂರೈಕೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ವಿಶ್ವವಿಖ್ಯಾತ ತಿರುಪತಿ ಲಡ್ಡು ತಯಾರಿಕೆಯಲ್ಲಿ ಗುಣಮಟ್ಟವಿಲ್ಲದ ಪದಾರ್ಥಗಳು ಮತ್ತು ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿದೆ ಎಂದು ಸ್ವತಃ ಆಂಧ್ರ ಪ್ರದೇಶ ಮುಖ್ಯಮಂತ್ರಿ ಆರೋಪ ಮಾಡಿದ್ದರು. ಅಲ್ಲದೆ ತಿರುಪತಿ ಲಡ್ಡುವಿನಲ್ಲಿ ದನದ ಕೊಬ್ಬು, ಮೀನಿನ ಎಣ್ಣೆ ಬಳಸಿರುವುದು ಲ್ಯಾಬ್ ವರದಿಯಲ್ಲಿ ದೃಢಪಟ್ಟಿದೆ.

    Continue Reading

    LATEST NEWS

    ಪಂಚೆ ಉಟ್ಟು ದೇಸೀ ಸ್ಟೈಲ್ ಅಡುಗೆ ಮಾಡಿದ ಬ್ರಿಟಿಷ್ ಬಾಣಸಿಗ..! ಫಿದಾ ಆದ ನೆಟ್ಟಿಗರು

    Published

    on

    ಹೆಲ್ಸ್ ಕಿಚನ್ ಹಾಗೂ ಮಾಸ್ಟರ್ ಚೆಫ್ ನಂತಹ ಜನಪ್ರಿಯ ಕಾರ್ಯಕ್ರಮಗಳ ನಿರೂಪಕ ಗಾರ್ಡನ್ ರಾಮ್ಸೆ ಇದೀಗ ತನ್ನ ವೇಷಭೂಷಣದ ಮೂಲಕ ಗಮನ ಸೆಳೆದಿದ್ದಾರೆ. ಬ್ರಿಟಿಷ್ ಸೆಲೆಬ್ರಿಟಿ ಬಾಣಸಿಗ ಗಾರ್ಡನ್ ಜೇಮ್ಸ್ ರಾಮ್ಸೆ ಅವರು ತಮ್ಮ ಡಿಫರೆಂಟ್ ಶೈಲಿಯ ಕುಕಿಂಗ್ ಗಳಿಗೆ ಹೆಸರುವಾಸಿಯಾಗಿದ್ದಾರೆ.

    ಇತ್ತೀಚಿನ ದಿನಗಳಲ್ಲಿ ಹೊಸ ಹೊಸ ಅವತಾರದಲ್ಲಿ ಅಡುಗೆ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಸ್ಟೈಲ್‌ಆಗಿ ಪಂಚೆ ತೊಟ್ಟು ದಕ್ಷಿಣ ಕನ್ನಡ ಭಾರತೀಯ ಶೈಲಿಯ ಅಡುಗೆಗಳನ್ನು ಮಾಡಿದ್ದು ಈ ಕುರಿತ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

    ಕಾಶ್ಮೀರದಿಂದ ಕರ್ನಾಟಕಕ್ಕೆ ಬರುತ್ತಿದ್ದ ಸೇನೆಯ ರೈಲನ್ನು ಸ್ಫೋಟಿಸಲು ಯತ್ನ

    ಈ ಕುರಿತ ವಿಡಿಯೋವನ್ನು historyinmemes(ಹಿಸ್ಟೋರಿ ಇನ್‌ ಮೀಮ್ಸ್) ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಸ್ಥಳೀಯ ಭಾರತೀಯ ಉಡುಗೆ ತೊಟ್ಟು ಅಡುಗೆ ಮಾಡಿದ ಗಾರ್ಡನ್ ರಾಮ್ಸೆ” ಎಂಬ ಶೀರ್ಷಿಕೆಯನ್ನು ಬರೆದುಕೊಂಡಿದ್ದಾರೆ. ಸೆ.20ರದು ಹಂಚಿಕೊಂಡಿದ್ದ ವೀಡಿಯೋ 12 ಮಿಲಿಯನ್ ವೀಕ್ಷಣೆಗಳನ್ನು ಪಡೆದುಕೊಂಡಿದೆ.

    Continue Reading

    LATEST NEWS

    Trending