LATEST NEWS
ಛೀ ಎಂಥ ತಾಯಿ! ತೆರೆದ ಬಾವಿಯಂಚಲ್ಲಿ ಕೂತು ಮಗುವನ್ನು ಕೈಯಲ್ಲಿ ಹಿಡಿದು ರೀಲ್ಸ್
ಈಗಂತೂ ಎಲ್ಲಿ ನೋಡಿದ್ರೂ ರೀಲ್ಸ್ ವಿಡಿಯೋಗಳದ್ದೇ ಹವಾ. ಲೈಕ್ಸ್, ಫಾಲೋವರ್ಸ್, ವೀವ್ಸ್ಗಾಗಿ ಜನ ಚಿತ್ರ ವಿಚಿತ್ರ ಸಾಹಸಗಳಿಗೆ ಕೈ ಹಾಕುತ್ತಿದ್ದಾರೆ. ಪ್ರಾಣಕ್ಕೆ ಅಪಾಯ ತಂದೊಡ್ಡುವ ರೀಲ್ಸ್ ಮಾಡಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದವರು ಹಲವರಿದ್ದಾರೆ. ಹಾಗೆಯೇ ಮಹಿಳೆಯೊಬ್ಬಳು ತೆರೆದ ಬಾವಿಯ ಅಂಚಲ್ಲಿ ಮಗುವನ್ನು ಕೈಯಲ್ಲಿ ಹಿಡಿದು ಡೇಂಜರಸ್ ರೀಲ್ಸ್ ಮಾಡಿದ್ದಾಳೆ. ಈ ವೀಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಮಗುವನ್ನು ಅಪಾಯಕ್ಕೆ ತಳ್ಳಿದ ಆ ಮಹಿಳೆಯ ಮೇಲೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ವೀಡಿಯೋದಲ್ಲಿ ಏನಿದೆ?
RawAndRealMan ಹೆಸರಿನ ಖಾತೆಯಲ್ಲಿ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ತೆರೆದ ಬಾವಿಯ ಅಂಚಲ್ಲಿ ಕುಳಿತ ಮಹಿಳೆಯೊಬ್ಬಳು ಪುಟಾಣಿ ಮಗುವನ್ನು ಒಂದು ಕೈಯಲ್ಲಿ ಹಿಡಿದುಕೊಂಡು ಡೇಂಜರಸ್ ರೀಲ್ಸ್ ಮಾಡಿ ಹುಚ್ಚಾಟ ಮೆರೆಯುತ್ತಿರುವುದನ್ನು ಕಾಣಬಹುದು.
ಸೆಪ್ಟೆಂಬರ್ 18 ರಂದು ಹಂಚಿಕೊಳ್ಳಲಾದ ಈ ಪೋಸ್ಟ್ 71 ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ‘ಆದಷ್ಟು ಬೇಗ ಈ ಮಹಿಳೆಯ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದರೆ, ಮತ್ತೊಬ್ಬರು ‘ಈಕೆಗೆ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವ ಅಗತ್ಯವಿದೆ’ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೂ ಅನೇಕರು ಇದೆಲ್ಲಾ ಎಂಥಾ ಹುಚ್ಚಾಟ ಎಂದು ಕಿಡಿಕಾರಿದ್ದಾರೆ.
ಇದನ್ನೂ ನೋಡಿ:
LATEST NEWS
ಪ್ರತಿದಿನ ಬಟ್ಟೆ ಇಸ್ತ್ರಿ ಮಾಡಿ ಸುಸ್ತಾಗಿದ್ದೀರಾ? ಹೀಗೆ ಮಾಡಿದರೆ ಈ ಸಮಸ್ಯೆಯೇ ಇರುವುದಿಲ್ಲ!
ಮಂಗಳೂರು: ಪ್ರತಿದಿನ ಬಟ್ಟೆ ಒಗೆಯುವುದು, ಮಡಚುವುದು ಮತ್ತು ಇಸ್ತ್ರಿ ಮಾಡುವುದರಲ್ಲೇ ಅರ್ಧ ದಿನ ಕಳೆದು ಹೋಗುತ್ತದೆ. ಮುಂಜಾನೆ ಅವಸರದಲ್ಲಿ ಹೊರಡುವಾಗ ಬಟ್ಟೆಗಳಲ್ಲಿ ನೆರಿಗೆ ಕಂಡ ಬಂದರೆ ಇಸ್ತ್ರಿ ಮಾಡಲೇ ಬೇಕಾಗುತ್ತದೆ. ನೀವೂ ಕೂಡ ಪ್ರತಿದಿನ ಬಟ್ಟೆ ಇಸ್ತ್ರಿ ಮಾಡಿ ಮಾಡಿ ಸುಸ್ತಾಗಿದ್ದೀರಾ? ಹಾಗಿದ್ರೆ ಇನ್ನು ಮುಂದೆ ಈ ರೀತಿ ಮಾಡಿದರೆ ಪ್ರತಿ ದಿನ ಇಸ್ತ್ರಿ ಅಗತ್ಯವೇ ಬರುವುದಿಲ್ಲ. ಬಟ್ಟೆ ಒಗೆದ ನಂತರ ಬಟ್ಟೆ ಇಸ್ತ್ರಿ ಮಾಡದೆ ಹೊಸದರಂತೆ ಕಾಣಲು ಈ ಸಲಹೆಗಳನ್ನು ಅನುಸರಿಸಿ.
ಈಗ ಅಂಗಡಿಗಳಲ್ಲಿ ಸ್ಟೀಮ್ ಐರನ್ ಬಾಕ್ಸ್, ಕಾರ್ಡ್ ಲೆಸ್ ಐರನ್ ಬಾಕ್ಸ್, ಸ್ಟೀಮ್ ಜನರೇಟರ್ ಐರನ್ ಬಾಕ್ಸ್, ಟ್ರಾವೆಲ್ ಐರನ್ ಬಾಕ್ಸ್ ಹೀಗೆ ಹಲವು ಬಗೆಯ ಐರನ್ ಬಾಕ್ಸ್ ಬರಲಾರಂಭಿಸಿವೆ. ನಿಮ್ಮ ಅಗತ್ಯಗಳಿಗಾಗಿ ನೀವು ಯಾವುದೇ ಐರನ್ ಬಾಕ್ಸ್ ಖರೀದಿಸಿದರೂ, ಅದು ಸುರಕ್ಷಿತವಾಗಿದೆ ಮತ್ತು ದೀರ್ಘಕಾಲ ಉಳಿಯುತ್ತದೆ ಎಂದು ಖಚಿತಪಡಿಸಿಕೊಳ್ಳಿ.
ಸರಳ ಹಂತಗಳು:
- ನಿಮ್ಮ ಬಟ್ಟೆಗಳಲ್ಲಿ ಸುಕ್ಕುಗಳನ್ನು ನೀವು ಗಮನಿಸಿದರೆ, ಸ್ಪ್ರೇ ಬಾಟಲಿಯನ್ನು ತೆಗೆದುಕೊಳ್ಳಿ. ಅದರಲ್ಲಿ ಅರ್ಧ ನೀರು ಮತ್ತು ಅರ್ಧ ಬಿಳಿ ವಿನೆಗರ್ ಮಿಶ್ರಣ ಮಾಡಿ. ನಿಮ್ಮ ಬಟ್ಟೆಗಳನ್ನು ತೊಳೆಯುವ ಮತ್ತು ಒಣಗಿಸುವ ಮೊದಲು ಸುಕ್ಕು ಪ್ರದೇಶವನ್ನು ಸಿಂಪಡಿಸಿ. ಈಗ, ಫ್ಯಾಬ್ರಿಕ್ ಸಂಪೂರ್ಣವಾಗಿ ಒಣಗಿದ ನಂತರ ಸುಕ್ಕುಗಳು ಗೋಚರಿಸುವುದಿಲ್ಲ.
- ಬಟ್ಟೆ ಒಗೆಯುವಾಗ ಮೊದಲು ಅರ್ಧ ಬಟ್ಟೆಯನ್ನು ವಾಷಿಂಗ್ ಮೆಷಿನ್ ನಲ್ಲಿ ಹಾಕಿ. ಅದರ ಮೇಲೆ 7 ರಿಂದ 8 ಐಸ್ ಕ್ಯೂಬ್ ಗಳನ್ನು ಹಾಕಿ. ಮತ್ತೆಒಗೆಯಿರಿ. ಡ್ರೈಯರ್‌ಗೆ ಕೆಲವು ಐಸ್ ಕ್ಯೂಬ್‌ಗಳನ್ನು ಸೇರಿಸಿ ಮತ್ತು ಬಟ್ಟೆಯನ್ನು ಒಣಗಿಸಿ. ನೀವು ಡ್ರೈಯರ್‌ನಲ್ಲಿ ಐಸ್ ಕ್ಯೂಬ್‌ಗಳನ್ನು ಹಾಕಿದಾಗ, ಶಾಖವು ಐಸ್ ಕ್ಯೂಬ್ ಉಗಿಯಾಗಿ ಬದಲಾಗಲು ಪ್ರಾರಂಭಿಸುತ್ತದೆ. ಈ ಆವಿಗಳು ಬಟ್ಟೆಗಳಲ್ಲಿ ಸುಕ್ಕುಗಳು ಉಂಟಾಗುವುದನ್ನು ತಡೆಯುತ್ತದೆ.
- ಒಗೆದು ಒಣಗಿಸಿದ ನಂತರ ಬಟ್ಟೆಗಳನ್ನು ರ್ಯಾಕ್‌ನಲ್ಲಿ ಸರಳವಾಗಿ ಮಡಿಸಬೇಡಿ. ಇವುಗಳನ್ನು ರ್ಯಾಕ್‌ನಲ್ಲಿ ಬಹಳ ದಿನಗಳ ಕಾಲ ಮಡಚಿಟ್ಟಾಗ ಅವು ಹಲವೆಡೆ ಕಲೆಗಳು ಮತ್ತು ಸುಕ್ಕುಗಟ್ಟುವ ಸಾಧ್ಯತೆ ಹೆಚ್ಚು. ಹಾಗಾಗಿ ಇವುಗಳನ್ನು ತಡೆಯಲು ಹ್ಯಾಂಗರ್ ನಲ್ಲಿ ನೇತು ಹಾಕುವುದು ಉತ್ತಮ. ಈ ಕಾರಣದಿಂದಾಗಿ, ಯಾವುದೇ ಕಲೆಗಳು ಮತ್ತು ಸುಕ್ಕುಗಳು ಇರುವುದಿಲ್ಲ.
- ನೀವು ಹ್ಯಾಂಗರ್ ಹೊಂದಿಲ್ಲದಿದ್ದರೆ ಮತ್ತು ಮಡಚಬೇಕಾದರೆ, ಸುಕ್ಕುಗಳಿಲ್ಲದೆ ಬಟ್ಟೆಗಳನ್ನು ಸರಿಯಾಗಿ ಮಡಚಿ. ಈ ರೀತಿ ಮಾಡಿದರೆ ನಿಮ್ಮ ಶರ್ಟ್ ಮತ್ತು ಉಡುಗೆ ಸುಕ್ಕುಗಟ್ಟುವುದಿಲ್ಲ.
LATEST NEWS
ಚೀನಾಗೆ ಚಿಪ್ಪು ಹಂದಿ ಸಾಗಿಸುತ್ತಿದ್ದ ಗ್ಯಾಂಗ್ ಅರೆಸ್ಟ್
ಮಂಗಳೂರು/ಬೆಳಗಾವಿ : ಚಿಪ್ಪು ಹಂದಿಯನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪಿಗಳನ್ನು ಖಾನಾಪುರ ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿದ್ದಾರೆ. ಆರೋಪಿಗಳು ಗುರುವಾರ(ಸೆ.3) ಖಾನಾಪುರ ಕಾಡಿನಲ್ಲಿ ಚಿಪ್ಪು ಹಂದಿಯನ್ನು ಹಿಡಿದು, ಲೋಂಡಾ ಗ್ರಾಮದ ರೇಲ್ವೆ ನಿಲ್ದಾಣಕ್ಕೆ ಬಂದಿದ್ದಾರೆ. ಚೀಲದ ಕೆಳಭಾಗದಲ್ಲಿ ಚಿಪ್ಪು ಹಂದಿ ಇರಿಸಿ, ಮೇಲ್ಭಾಗದಲ್ಲಿ ತರಕಾರಿ ಇಟ್ಟು ಯಾರಿಗೂ ಸಂಶಯ ಬರದಂತೆ ಸಾಗಿಸುತ್ತಿದ್ದರು.
ನಿಲ್ದಾಣದಲ್ಲಿ ಆರೋಪಿಗಳ ಸಂಶಯಾಸ್ಪದ ಓಡಾಟ ಕಂಡು ಅನುಮಾನಗೊಂಡ ಅರಣ್ಯ ಇಲಾಖೆ ಸಿಬ್ಬಂದಿ ಅವರನ್ನು ಹಿಡಿದು ವಿಚಾರಣೆ ನಡೆಸಿದಾಗ ಚಿಪ್ಪು ಹಂದಿ ಸಾಗಾಟ ಬೆಳಕಿಗೆ ಬಂದಿದೆ. ಕೂಡಲೇ ಆರೋಪಿಗಳನ್ನು ಬಂಧಿಸಿ ಚಿಪ್ಪು ಹಂದಿಯನ್ನು ರಕ್ಷಿಸಿದ್ದಾರೆ. ಮತ್ತಿಬ್ಬರು ಪರಾರಿಯಾಗಿದ್ದಾರೆ.
ಚೀನಾಗೆ ಅಕ್ರಮ ಸಾಗಾಟ :
ಅರಣ್ಯ ಇಲಾಖೆ ಅಧಿಕಾರಿಗಳ ಪ್ರಾಥಮಿಕ ತನಿಖೆಯಲ್ಲಿ ಚಿಪ್ಪು ಹಂದಿಯನ್ನು ಚೀನಾಗೆ ಅಕ್ರಮವಾಗಿ ಸಾಗಾಟ ಮಾಡುತ್ತಿರುವ ವಿಚಾರ ತಿಳಿದುಬಂದಿದೆ. ಆರೋಪಿಗಳು ಲೋಂಡಾ ರೇಲ್ವೆ ನಿಲ್ದಾಣದಿಂದ ಕಾರವಾರ ಅಥವಾ ಗೋವಾದ ಬಂದರಿಗೆ ಚಿಪ್ಪು ಹಂದಿಯನ್ನು ಸಾಗಿಸುತ್ತಾರೆ. ಅಲ್ಲಿಂದ ಕೊಲ್ಕತ್ತಾ ಬಂದರಿಗೆ ಹೋಗುವ ಈ ಚಿಪ್ಪು ಹಂದಿಯನ್ನು ಅಲ್ಲಿಂದ ನೇರವಾಗಿ ಹಡಗಿನ ಮೂಲಕ ಚೀನಾಗೆ ರವಾನಿಸಲಾಗುತ್ತದೆ.
ಯಾಕಾಗಿ ಸಾಗಾಟ?
ಚಿಪ್ಪು ಹಂದಿಯ ಚಿಪ್ಪನ್ನು ಪುರುಷತ್ವ ಹೆಚ್ಚಿಸುವ ಔಷಧಕ್ಕೆ ಬಳಸಲಾಗುತ್ತದೆ. ಹೀಗೆ ತಯಾರಿಸಿದ ಔಷಧಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಬಲು ಬೇಡಿಕೆ ಇದೆ. ಹೀಗಾಗಿ ಚಿಪ್ಪು ಹಂದಿಗಳನ್ನು ವ್ಯವಸ್ಥಿತವಾಗಿ ಸಾಗಿಸುವ ತಂಡ ಕಾರ್ಯಪ್ರವೃತ್ತವಾಗಿದೆ.
ಇದನ್ನೂ ಓದಿ : ಇನ್ಮುಂದೆ ಕನ್ನಡದಲ್ಲೇ ನಡೆಯಲಿದೆ ರೈಲ್ವೆ ಪರೀಕ್ಷೆ.!
ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದು, ಇವರ ಹಿಂದೆ ಯಾರೆಲ್ಲಾ ಭಾಗಿಯಾಗಿದ್ದಾರೆ? ಹೇಗೆ ಅಕ್ರಮ ನಡೆಯುತ್ತೆ? ಎಂಬಿತ್ಯಾದಿ ಆಯಾಮಗಳಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
LATEST NEWS
ಗೆಜ್ಜೆಗಿರಿ ನವರಾತ್ರಿ ಮಹೋತ್ಸವ ಉದ್ಘಾಟನೆ
ಪುತ್ತೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿ ತುಳುನಾಡಿನ ಕಾರ್ಣಿಕ ಕ್ಷೇತ್ರವಾಗಿ ಬೆಳಗುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ರವರ ಆಪ್ತ ಸಹಾಯಕ ಜಗನ್ನಾಥ್ ಬಂಗೇರ ಮುಗ್ಗಗುತ್ತು ಹೇಳಿದರು. ಅವರು ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ 9 ದಿವಸಗಳ ಕಾಲ ನಡೆಯುವ ನವರಾತ್ರಿ ಮಹೋತ್ಸವ ಕಾರ್ಯಕ್ರಮವನ್ನು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಯಾವುದೇ ಧಾರ್ಮಿಕ ಅಥವಾ ಸಾಮಾಜಿಕ ಕ್ಷೇತ್ರದ ವೇದಿಕೆಯಲ್ಲಿ ಮಾತನಾಡುವುದು ಸುಲಭ ಆದರೆ ಅದನ್ನು ಮುನ್ನಡೆಸುವುದು ಕಷ್ಟ ಒಂದು ಧಾರ್ಮಿಕ ಕ್ಷೇತ್ರ ನಡೆಸಲು ಬಲು ಕಷ್ಟ ನಿಟ್ಟಿನಲ್ಲಿ ಶ್ರೀ ಕ್ಷೇತ್ರ ಎಲ್ಲಾ ಭಕ್ತಾದಿಗಳ ಸಹಕಾರದಿಂದ ಮತ್ತು ಉತ್ತಮ ಆಡಳಿತ ಮಂಡಳಿ ವ್ಯವಸ್ಥೆಯಿಂದ ಕಾರ್ಯಕ್ರಮ ನಡೆಯುತ್ತಿರುವುದು ಸಂತೋಷ ವ್ಯಕ್ತಪಡಿಸಿದರು. ಅವರು ಶ್ರೀ ಕ್ಷೇತ್ರ ಇಂದು ತುಳುನಾಡಿನ ಕಾರ್ಣಿಕ ಕ್ಷೇತ್ರವಾಗಿ ಬೆಳಗುತ್ತಿದೆ ಅಸಂಖ್ಯಾತ ಭಕ್ತರನ್ನು ಹೊಂದಿದೆ. ಎಲ್ಲರನ್ನೂ ಶ್ರೀ ದೇಯಿಬೈದೈತಿ ಕೋಟಿ ಚೆನ್ನಯರು ಅರೋಗ್ಯ ನೀಡಿ ಕ್ಷೇತ್ರ ಬೆಳಗಲು ಆಶೀರ್ವದಿಸಲಿ ಎಂದು ಹೇಳಿ ಶುಭ ಹಾರೈಸಿದರು. ಕಾರ್ಯಕ್ರಮವು ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಪೀತಾಂಬರ ಹೆರಾಜೆ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಆರಂಭದಲ್ಲಿ ಗಣಪತಿ ಹವನ ನೆರವೇರಿಸಲಾಯಿತು ಬಳಿಕ ತೆನೆ ಕಟ್ಡುವ ಮೂಲಕ ಸಂಭ್ರಮಾಚರಣೆ ನಡೆಯಿತು. ನಂತರ ಶ್ರೀ ಧೂಮಾವತಿ ದೇವಸ್ಥಾನದಲ್ಲಿ ಮಹಾಮಂಗಳಾರತಿ, ಮಹಾ ಮಾತೆ ದೇಯಿ ಬೈದೆತಿಗೆ ವಿಶೇಷ ಪುಷ್ಪಲಂಕಾರ ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನೆರವೇರಿತು.
ಪಡುಮಲೆ ಸರ್ವಶಕ್ತಿ ಮಹಿಳಾ ಭಜನಾ ತಂಡದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ,ಸಮಿತಿ ಗೌರವ ಅಧ್ಯಕ್ಷ ಜಯಂತ ನಡುಬೈಲ್, ಉಪಾಧ್ಯಕ್ಷ ರವಿಪೂಜಾರಿ ಚಿಲಿಂಬಿ, ಮೂಕ್ತೇಸರ ಶ್ರೀಧರ ಪೂಜಾರಿ ,ಪ್ರಧಾನ ಕಾರ್ಯದರ್ಶಿ ಉಲ್ಲಾಸ್ ಕೋಟ್ಯಾನ್, ಕೋಶಾಧಿಕಾರಿ ದೀಪಕ್ ಕೋಟ್ಯಾನ್, ಮಾಧ್ಯಮ ವಕ್ತಾರ, ರಾಜೇಂದ್ರ ಚಿಲಿಂಬಿ ,ಜಯರಾಮ್ ಬಂಗೇರ ಕಿನ್ನಿಮಜಲ್, ಸಂತೋಷ್ ಕುಮಾರ್ ಬೈರಂಪಳ್ಳಿ, ನಾಗೇಶ್ ಬೈಕಂಪಾಡಿ, ಹೊನ್ನಪ್ಪ ಪೂಜಾರಿ ಕೈಲಾಡಿ , ಅವಿನಾಶ್ ಆರಡಿ, ಶಂಕರಿ ಪಟ್ಟೆ ಹಾಗೂ ಊರ ಪರವೂರ ಭಕ್ತಾದಿಗಳು ಭಾಗವಹಿಸಿದ್ದರು.
- DAKSHINA KANNADA7 days ago
ಕೆಬಿಬಿಯಲ್ಲಿ ಮಿಂಚಿದ ಮಂಗಳೂರು ಬೆಡಗಿ; ಕೊನೆಗೂ ನನಸಾದ ಅಪೂರ್ವ ಶೆಟ್ಟಿ ಕನಸು
- BIG BOSS4 days ago
BBK11 ವೇದಿಕೆಗೆ ಬರುತ್ತಿದ್ದಂತೆ ರೀಲ್ಸ್ ಸ್ಟಾರ್ ಮೇಲೆ ಕೋಪಗೊಂಡ ಕಿಚ್ಚ: ಇಂತವರನ್ನ ಏಕೆ ಕರೆಸಿದ್ರಿ ಎಂದು ಗರಂ?
- BIG BOSS4 days ago
ಭ್ರಷ್ಟರ ವಿರುದ್ಧ ಗುಡುಗಿದ ಸ್ಪರ್ಧಿ ಲಾಯರ್ ಜಗದೀಶ್ಗೆ ಕಿಚ್ಚ ವಾರ್ನಿಂಗ್..!
- BIG BOSS4 days ago
ಚೈತ್ರಾ ಕುಂದಾಪುರಗೆ ಮೊದಲ ದಿನವೇ ಹೊಸ ಬಿರುದು ಕೊಟ್ಟ ಲಾಯರ್ ಜಗದೀಶ್