Home ಉಡುಪಿ ಮುಂಬೈ ಲೇಡಿಸ್‌ ಬಾರ್‌ ಮಾಲಕ ಕೊಲೆ ಪ್ರಕರಣ : ನಾಲ್ವರನ್ನು ಬಂಧಿಸಿದ ಉಡುಪಿ ಪೊಲೀಸರು

ಮುಂಬೈ ಲೇಡಿಸ್‌ ಬಾರ್‌ ಮಾಲಕ ಕೊಲೆ ಪ್ರಕರಣ : ನಾಲ್ವರನ್ನು ಬಂಧಿಸಿದ ಉಡುಪಿ ಪೊಲೀಸರು

ಮುಂಬೈ ಲೇಡಿಸ್‌ ಬಾರ್‌ ಮಾಲಕ ಕೊಲೆ ಪ್ರಕರಣ : ನಾಲ್ವರನ್ನು ಬಂಧಿಸಿದ ಉಡುಪಿ ಪೊಲೀಸರು

ಉಡುಪಿ : ನವಿಮುಂಬೈಯ ಮಾಯಾ ಬಾರ್‌ ಮಾಲಕ ವಶಿಷ್ಠ ಸತ್ಯನಾರಾಯಣ ಯಾದವ್ ಎಂಬವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಿನ್ನೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.

ದೆಹಲಿಯ ಹುಸಮನ್‌ಪುರ ನಿವಾಸಿ ಸುಮಿತ್ ಮಿಶ್ರ, ಸುರತ್ಕಲ್ ಚೊಕ್ಕಬೆಟ್ಟುವಿನ ಅಬ್ದುಲ್ ಶುಕೂರ್ ಯಾನೆ ಅದ್ದು , ಮಂಗಳೂರು ತೆಂಕಮಿಜಾರು ಗ್ರಾಮದ ಕಂದಾಲ್‌ಬೆಟ್ಟುವಿನ ಅವಿನಾಶ್ ಕರ್ಕೇರ , ಕರಂಬಳ್ಳಿ ಜನತಾ ಕಾಲನಿಯ ಮುಹಮ್ಮದ್ ಶರೀಫ ಬಂಧಿತ ಆರೋಪಿಗಳು.

ಕೃತ್ಯಕ್ಕೆ ಬಳಸಿ ಕಾರನ್ನು ಪೊಲೀಸರು ವಶಪಡಿಸಿಕೊಳ್ಳಲಾಗಿದೆ. ಫೆಬ್ರವರಿ .4ರಂದು ಮುಂಬೈಯಿಂದ ಉಡುಪಿಗೆ ಬಂದಿದ್ದ ವಶಿಷ್ಟ ತನ್ನ ಗೆಳೆಯರೊಂದಿಗೆ ಉಡುಪಿಯ ಲಾಡ್ಜ್‌ವೊಂದರಲ್ಲಿ ತಂಗಿದ್ದರು.

ಫೆ.9ರಂದು ರಾತ್ರಿ ಕಾರಿನಲ್ಲಿ ಹೋಗುತ್ತಿದ್ದಾಗ ಹಿಂಬದಿಯಲ್ಲಿ ಕುಳಿತಿದ್ದ ಮೂವರು ಆರೋಪಿಗಳು, ಕಾರಿನ ಎದುರು ಸೀಟಿನಲ್ಲಿ ಕುಳಿತಿದ್ದ ವಶಿಷ್ಟ ಸತ್ಯ ನಾರಾಯಣ ಯಾದವ್ ಅವರ ಕುತ್ತಿಗೆಯನ್ನು ಬಿಗಿದು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.

ಬಳಿಕ ಮೃತದೇಹವನ್ನು ಬೆಳ್ಳಂಪಳ್ಳಿ ದೊಡ್ಡಣಗುಡ್ಡೆ ಎಂಬಲ್ಲಿ ಎಸೆದು ಪರಾರಿಯಾಗಿದ್ದರು.

ಫೆ.10ರಂದು ಬೆಳಗ್ಗೆ ಮೃತದೇಹವು ಬೆಳ್ಳಂಪಳ್ಳಿಯ ಪೊದೆಯಲ್ಲಿ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಎಸ್ಪಿ ವಿಷ್ಣುವರ್ಧನ್, ಬ್ರಹ್ಮಾವರ ವೃತ್ತ ನಿರೀಕ್ಷಕ ಅನಂತಪದ್ಮನಾಭ ಹಾಗೂ ಹಿರಿಯಡ್ಕ ಎಸ್ಸೈ ಸುಧಾಕರ್ ತೋನ್ಸೆ ವಿಶೇಷ ತಂಡವನ್ನು ರಚಿಸಿದ್ದು, ತನಿಖೆ ನಡೆಸಿದ ತಂಡ ಆರೋಪಿಗಳನ್ನು ಬಂಧಿಸಿದೆ. ಕೊಲೆಗೆ ಕಾರಣ ಇನ್ನು ತಿಳಿದುಬಂದಿಲ್ಲ.

ಈ ಬಗ್ಗೆ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಬಂಧಿತರಲ್ಲಿ ಸುಮಿತ್ ಮಿಶ್ರ, ವಶಿಷ್ಠ ಅವರ ಮಾಯ ಬಾರ್‌ನ ಉದ್ಯೋಗಿಯಾಗಿದ್ದು, ಮೂರು ತಿಂಗಳು ಹಿಂದೆ ವಶಿಷ್ಟರೊಂದಿಗೆ ಜಗಳವಾಡಿ ಕೆಲಸ ಬಿಟ್ಟಿದ್ದನು.

ಅದೇ ರೀತಿ ಉಳಿದ ಮೂವರು ಆರೋಪಿಗಳು ಎಕೆಎಂಎಸ್ ಬಸ್‌ನಲ್ಲಿ ಉದ್ಯೋಗಿಗಳಾಗಿದ್ದಾರೆ.

ವಿಡಿಯೋಗಾಗಿ..

- Advertisment -

RECENT NEWS

ದಿಲ್ಲಿ ಹಿಂಸಾಚಾರ ಪ್ರಕರಣ: ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ

ದಿಲ್ಲಿ ಹಿಂಸಾಚಾರ ಪ್ರಕರಣ: ಮೃತಪಟ್ಟವರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಘೋಷಣೆ ನವದೆಹಲಿ: ದಿಲ್ಲಿ ಹಿಂಸಾಚಾರದ ವೇಳೆ ಗಂಭೀರ ಗಾಯಗೊಂಡಿದ್ದ ಮತ್ತಷ್ಟು ಮಂದಿ ಆಸ್ಪತ್ರೆಗಳಲ್ಲಿ ಮೃತಪಟ್ಟಿದ್ದು, ಚರಂಡಿಗಳಿಂದ ಕೆಲ ಮೃತದೇಹಗಳನ್ನು ವಶಪಡಿಸಿಕೊಳ್ಳಲಾಗಿದೆ....

ಬಿಎಸ್‌ವೈ ಹುಟ್ಟುಹಬ್ಬ ಹಿನ್ನಲೆ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ

ಬಿಎಸ್‌ವೈ ಹುಟ್ಟುಹಬ್ಬ ಹಿನ್ನಲೆ 30 ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ ವಿತರಣೆ ಉಡುಪಿ: ಕಾಟಿಪಳ್ಳ ಬ್ರಹ್ಮಶ್ರೀ ನಾರಾಯಣಗುರು ಶಿಕ್ಷಣ ಟ್ರಸ್ಟ್ ಇದರ ಅಂಗಸಂಸ್ಥೆಯಾದ ಶ್ರೀ ನಾರಾಯಣಗುರು ಅನುದಾನಿತ ಪ್ರೌಢಶಾಲೆಯಲ್ಲಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪರ ಜನ್ಮದಿನದ ಪ್ರಯುಕ್ತ...

ಮ.ನ.ಪಾ ದ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ

ಮ.ನ.ಪಾ ದ ನೂತನ ಮೇಯರ್ ಆಗಿ ದಿವಾಕರ್, ಉಪಮೇಯರ್ ವೇದಾವತಿ ಆಯ್ಕೆ ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ 21 ನೇ ಅವಧಿಗೆ ಮೇಯರ್-ಉಪಮೇಯರ್ ಚುನಾವಣೆ ನಡೆದಿದ್ದು, ಕಂಟೋನ್ಮೆಂಟ್ ವಾರ್ಡ್ ನ ದಿವಾಕರ್ ಅವರು ಮೇಯರ್...

ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾಗಿ ವಿನಯ್‌ ಎಲ್‌ ಶೆಟ್ಟಿ ಆಯ್ಕೆ

ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿ ಸದಸ್ಯರಾಗಿ ವಿನಯ್‌ ಎಲ್‌ ಶೆಟ್ಟಿ ಆಯ್ಕೆ ಮಂಗಳೂರು: ಮಾಜಿ ಭಜರಂಗ ದಳದ ಜಿಲ್ಲಾ ಸಂಚಾಲಕರೂ ಆಗಿರುವ ವಿನಯ್‌ ಎಲ್‌ ಶೆಟ್ಟಿ ಅವರಿಗೆ ಸರ್ಕಾರ ಹೊಸ ಜವಾಬ್ದಾರಿ ವಹಿಸಿದೆ. ಕರ್ನಾಟಕ...