Thursday, February 9, 2023

ಉಡುಪಿ ಅಕ್ರಮ ಮರಳು ಅಡ್ಡೆಗೆ ಅಧಿಕಾರಿಗಳ ದಾಳಿ : 4 ಬೋಟ್‌ ವಶಕ್ಕೆ..!

ಉಡುಪಿ : ಉಡುಪಿ ಜಿಲ್ಲೆಯ ಮಲ್ಪೆ ಸಮೀಪದ ಪಡು ತೋನ್ಸೆ ಗ್ರಾಮದ ಕಂಬಳ ತೋಟ ಎಂಬಲ್ಲಿ ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದವರ ವಿರುದ್ಧ ಗಣಿ ಇಲಾಖೆ ಕಾರ್ಯಾಚರಣೆ ನಡೆಸಿದೆ.

ಇಲ್ಲಿ ಹರಿಯುವ ಸ್ವರ್ಣಾ ನದಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಬಗ್ಗೆ ದೂರು ಬಂದಿತ್ತು. ಈ ಹಿನ್ನೆಲೆಯಲ್ಲಿ ಗಣಿ ಇಲಾಖಾ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ವೇಳೆ ಮರಳುಗಾರಿಕೆ ನಡೆಸುತ್ತಿದ್ದವರು ಪರಾರಿಯಾಗಿದ್ದಾರೆ. ಆದರೆ ನಾಲ್ಕು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಎರಡು ಪುಟ್ಟ ದೋಣಿಗಳನ್ನು ಮಲ್ಪೆ ಠಾಣೆಗೆ ವರ್ಗಾಯಿಸಿದ್ದು, ಬೃಹತ್ ಗಾತ್ರದ ಎರಡು ದೋಣಿಗಳನ್ನು ಕ್ರೈನ್ ಮೂಲಕ ಮೇಲಕ್ಕೆತ್ತಲಾಗಿದೆ.

ಇರ್ಷಾದ್ ಎಂಬಾತ ಇಲ್ಲಿ ಅಕ್ರಮ ಮರಳುಗಾರಿಕೆ ನಡೆಸುವ ಬಗ್ಗೆ ಈ ಹಿಂದೆಯೂ ದೂರು ಕೇಳಿಬಂದಿಲ್ಲ. ಒಂದು ಬಾರಿ ಇಲ್ಲಿ ಕಾರ್ಯಾಚರಣೆಯನ್ನು ನಡೆಸಿ ಸೀಜ್ ಮಾಡಲಾಗಿತ್ತು.

ಗಣಿ ಅಧಿಕಾರಿಗಳು ದಂಡವನ್ನೂ ಹಾಕಿದ್ದರು.ಅಷ್ಟು ಮಾತ್ರವಲ್ಲದೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವಿಚಾರವಾಗಿಯೂ ದೂರು ದಾಖಲಿಸಿಕೊಳ್ಳಲಾಗಿತ್ತು.

ಇಷ್ಟಾದರೂ ಇರ್ಷಾದ್ ಅಕ್ರಮ ಮರಳುಗಾರಿಕೆ ನಿಲ್ಲಿಸಿರಲಿಲ್ಲ. ಉತ್ತರ ಪ್ರದೇಶದ ಕಾರ್ಮಿಕರನ್ನು ಬಳಸಿ ನಿರಂತರ ಮರಳುಗಾರಿಕೆ ನಡೆಸುತ್ತಲೇ ಇದ್ದ.

ಇದೀಗ ಗಣಿ ಅಧಿಕಾರಿ ಮಹೇಶ್ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದು, ಮಲ್ಪೆ ಠಾಣೆಗೆ ಪ್ರಕರಣ ವರ್ಗಾಯಿಸಲಾಗಿದೆ.

LEAVE A REPLY

Please enter your comment!
Please enter your name here

Hot Topics

ಚಾರ್ಮಾಡಿಯಲ್ಲಿ ಶಿಕಾರಿಗಳ ಗುಂಡೇಟಿಗೆ ಕಡವೆ ಬಲಿ..!

ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ ಸಮೀಪದ ಚಾರ್ಮಾಡಿ ಘಾಟ್‌ನ ಮಲಯಮಾರುತ ಬಳಿ ನಿನ್ನೆ ನಡೆದಿದೆ.ಬೆಳ್ತಂಗಡಿ : ದುಷ್ಕರ್ಮಿಗಳ ಗುಂಡೇಟಿಗೆ ಕಡವೆಯೊಂದು ಬಲಿಯಾದ ಘಟನೆ ಚಿಕ್ಕಮಗಳೂರು ಸಮೀಪದ ಕೊಟ್ಟಿಗೆಹಾರ...

ಭೂಕಂಪಕ್ಕೆ ನಲುಗಿದ ಟರ್ಕಿ-ಸಿರಿಯಾ: 15,000 ದಾಟಿದ ಮೃತರ ಸಂಖ್ಯೆ-ಏರುತ್ತಲೇ ಇದೆ ಸಾವಿನ ಲೆಕ್ಕ..!

ಟರ್ಕಿ: ಭೂಕಂಪದಿಂದ ನಲುಗಿರುವ ಟರ್ಕಿ ಹಾಗೂ ಸಿರಿಯಾದಲ್ಲಿ ಈ ವರೆಗೆ ಸಾವಿಗೀಡಾದವರ ಸಂಖ್ಯೆ 15,000ಕ್ಕೆ ಏರಿಕೆಯಾಗಿ. ಈ ಪೈಕಿ ಟರ್ಕಿಯಲ್ಲಿ ಒಂದರಲ್ಲಿಯೇ 12,391 ಮಂದಿ ಸಾವನ್ನಪ್ಪಿದ್ದರೆ, ಸಿರಿಯಾದಲ್ಲಿ 2,992 ಮಂದಿ ಸಾವನ್ನಪ್ಪಿದ್ದಾರೆ.ಈ ಅಂಕಿ...

ಹಾಸನ: ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ಪತ್ತೆ, ಕೊಲೆ ಶಂಕೆ ..!

ಹಾಸನ :  ಹಣಕಾಸು ವಿಷಯಕ್ಕೆ ಸಂಬಂಧಿಸಿದಂತೆ ಅಪಹರಣಕ್ಕೆ ಒಳಗಾಗಿದ್ದ ಯುವಕನ ಶವ ಪತ್ತೆಯಾದ ಘಟನೆ ಹಾಸನ ಜಿಲ್ಲೆಯ ಯೋಗೀಹಳ್ಳಿಯಲ್ಲಿ ನಡೆದಿದೆ.26 ವರ್ಷ ಪ್ರಾಯದ ಲಿಖಿತ್‌ಗೌಡ ಯಾನೆ ಬಂಗಾರಿ ಕೊಲೆಯಾದ ಯುವಕ. ಈತನನ್ನು ಕೊಲೆ...