Monday, July 4, 2022

ಬಂಟ್ವಾಳ : ಸ್ವಂತ ಮಗನನ್ನೇ ಕೊಂದು ನೇಣಿಗೆ ಶರಣಾದ ತಂದೆ..!

ಬಂಟ್ವಾಳ : ಸ್ವಂತ ಮಗನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿ‌ ಬಳಿಕ  ನೇಣು ಬಿಗಿದುಕೊಂಡು ಮನೆಯೊಳಗೆ ತಂದೆ ಆತ್ಮಹತ್ಯೆ ಮಾಡಿಕೊಂಡ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪುಂಜಾಲಕಟ್ಟೆ‌ಯಲ್ಲಿ ನಡೆದಿದೆ.

ಪುಂಜಾಲಕಟ್ಟೆ ಸರಕಾರಿ ಆಸ್ಪತ್ರೆಯ ಸಮೀಪ ಭಜನಾ ಮಂದಿರದ ಬಳಿಯ ನಿವಾಸಿ ಬಾಬು ನಾಯ್ಕ ( 58) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಆರೋಪಿಯಾಗಿದ್ದಾನೆ.  ಸಾತ್ವಿಕ (17) ಕೊಲೆಯಾದ ಯುವಕನಾಗಿದ್ದಾನೆ.

ಕುಡಿತದ ಚಟ ಹೊಂದಿದ್ದ ಬಾಬು ನಾಯ್ಕ್ ಅವರು ಕೆಲ ದಿನಗಳಿಂದ ಮನೆಯಲ್ಲಿ ಮಗನೊಂದಿಗೆ ಕ್ಷುಲ್ಲಕ ಕಾರಣಕ್ಕಾಗಿ ಗಲಾಟೆ ಮಾಡುತ್ತಿದ್ದ ಎಂದು ಸ್ಥಳೀಯರು ತಿಳಿಸಿದ್ದಾರೆ.

ಬಾಬು ನಾಯ್ಕ್ ಅವರ ಪತ್ನಿ ಕ್ಯಾಶ್ಯೂ ಪ್ಯಾಕ್ಟರಿಗೆ ಕೆಲಸಕ್ಕೆ ತೆರಳಿದ್ದ ವೇಳೆ ಇಂದು ಮಧ್ಯಾಹ್ನ ಗಲಾಟೆ ಮಾಡಿದ್ದು ಬಳಿಕ ಮಗ ಸಾತ್ವಿಕನನ್ನು ಕತ್ತಿಯಿಂದ ಕಡಿದು ಕೊಲೆ ಮಾಡಿದ್ದಾನೆ.

ಕೊಲೆ ಮಾಡಿದ ಬಳಿಕ ಆತನು ಅಲ್ಲೇ ಮನೆಯ ಪಕ್ಕಾಸಿಗೆ ಹಗ್ಗ ದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸುದ್ದಿ ತಿಳಿದು ಜಿ.ಪಂ.ಸದಸ್ಯ ಎಂ.ತುಂಗಪ್ಪ ಬಂಗೇರ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮದ ಬಗ್ಗೆ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.

ಪುಂಜಾಲಕಟ್ಟೆ ಎಸ್.ಐ.ಸೌಮ್ಯ ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

LEAVE A REPLY

Please enter your comment!
Please enter your name here

Hot Topics

ಬಂಟ್ವಾಳದ ವಿಶ್ವ ಹಿಂದು ಪರಿಷತ್ ವತಿಯಿಂದ ರಕ್ತದಾನ ಶಿಬಿರ

ಬಂಟ್ವಾಳ: ವಿಶ್ವಹಿಂದುಪರಿಷತ್ ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ಪ್ರಖಂಡದ ವತಿಯಿಂದ ಕೆಎಮ್‌ಸಿ ಮಂಗಳೂರು ಮತ್ತು ವೆನ್ಲಾಕ್ ಆಸ್ಪತ್ರೆ ಮಂಗಳೂರು ಇವರ ಸಹಯೋಗದೊಂದಿಗೆ ರಕ್ತದಾನ ಶಿಬಿರ ನಡೆಯಿತು.ರಕ್ತದಾನ ಶಿಬಿರದಲ್ಲಿ 180 ಯೂನಿಟ್ ರಕ್ತ ಸಂಗ್ರಹ...

ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಲ್ಲಿದ್ದ ಡೆಡ್‌ ಬಾಡಿ ಎರಡು ದಿನಗಳ ಬಳಿಕ ಪತ್ತೆ

ಉಡುಪಿ: ಎರಡು ದಿನಗಳ ಹಿಂದೆ ಮರವಂತೆ ಸಮುದ್ರಕ್ಕೆ ಬಿದ್ದ ಕಾರಿನಿಂದ ನಾಪತ್ತೆಯಾದ ಓರ್ವನ ಶವ ಇಂದು ಬೈಂದೂರಿನ ಕಂಚುಗೋಡು ಎಂಬಲ್ಲಿ ಪತ್ತೆಯಾಗಿದೆ.ಮೃತನನ್ನು ರೋಶನ್ ಆಚಾರ್ಯ ಎಂದು ಗುರುತಿಸಲಾಗಿದೆ. ಶನಿವಾರ ತಡರಾತ್ರಿ ರಾಷ್ಟ್ರೀಯ ಹೆದ್ದಾರಿ 66ರ...

ಆಸ್ಟ್ರೇಲಿಯಾದಲ್ಲಿ ತುಳು ಕೂಟ ಸಿಡ್ನಿಯಿಂದ ಜು.17ರಂದು ‘ಆಟಿಡ್‌ ಒಂಜಿ ದಿನ’

ಸಿಡ್ನಿ: ತುಳುನಾಡಿನ ಸಾಂಪ್ರದಾಯಿಕ ತಿಂಡಿಗಳನ್ನು ಆಸ್ಟ್ರೇಲಿಯಾದಲ್ಲಿರುವ ಅನಿವಾಸಿ ತುಳುವರಿಗೆ ಉಣಬಡಿಸುವ ನಿಟ್ಟಿನಲ್ಲಿ 'ತುಳು ಕೂಟ ಸಿಡ್ನಿ'ಯು ಜು.17ರಂದು ಸಿಡ್ನಿಯಲ್ಲಿ 'ಆಟಿಡ್‌ ಒಂಜಿ ದಿನ' ಆಯೋಜಿಸಿದೆ.ಜು.17 ರಂದು ಮಧ್ಯಾಹ್ನ 12 ಗಂಟೆಗೆ ಈ ಕಾರ್ಯಕ್ರಮ...