Connect with us

LATEST NEWS

ಮಗಳ ಬರ್ತ್‌ಡೇ ಕೇಕ್ ಕಟ್ ಮಾಡುವ ಹೊತ್ತಲ್ಲಿ ಅಮ್ಮನ ಪೋಸ್ಟ್ ಮರ್ಟಂ..! full details of vishala murder mistry

Published

on

ಉಡುಪಿ: ವಿದೇಶದಲ್ಲಿ ನೆಮ್ಮದಿಯಾಗಿದ್ದ ಅ ಮಹಿಳೆ, ಕೆಲ ದಿನಗಳ ಮಗಳ ಜೊತೆಗೆ ಹುಟ್ಟೂರಿಗೆ ಬಂದಿದ್ದಳು. ತಂದೆ-ತಾಯಿ ಜೊತೆ ಮಗಳನ್ನು ಬಿಟ್ಟು, ತನ್ನ ಫ್ಲ್ಯಾಟ್‌ಗೆ ಹೋಗಿ ಬರ್ತಿನಿ ಅಂತ ಹೋದವಳು, ಹಿಂದೆ ಮನೆಗೆ ಬಂದದ್ದು ಮಾತ್ರ ಹೆಣವಾಗಿ. ಎತ್ತು ಮುದ್ದಿಸಬೇಕಾದ ಅಮ್ಮ ಶವವಾಗಿದ್ದಾಳೆ, ತಾಯಿ ಪ್ರೀತಿಯಿಂದ ಪುಟ್ಟ ಕಂದಮ್ಮ ಶಾಶ್ವತವಾಗಿ ವಂಚಿತಳಾಗಿದ್ದಾಳೆ. ಇದು ನಿನ್ನೆ ಬ್ರಹ್ಮಾವರದ ಮಿಲನ ರೆಸಿಡೆನ್ಸಿಯಲ್ಲಿ ಬರ್ಬರವಾಗಿ ಹತ್ಯೆಯಾದ ವಿಶಾಲ‌ ಗಾಣಿಗ ಅವರ ದುರಂತ ಕಥೆ.

ವಿಶಾಲ ಗಾಣಿಗ ಉಡುಪಿ ಜಿಲ್ಲೆಯ ಗಂಗೊಳ್ಳಿ ಮೂಲದ ಮಹಿಳೆ. ವಯಸ್ಸು 35 ಇವರಿಗೆ ಏಳರ ಹರೆಯದ ಮಗಳು ಇದ್ದು, ಪತಿ ದುಬೈನ ಕಂಪೆನಿಯೊಂದರ ಮ್ಯಾನೇಜರ್‌. ಆಸ್ತಿ-ಪಾಸ್ತಿ, ಮನೆ, ಭೂಮಿ ಯಾವುದಕ್ಕೂ ಕೊರತೆ ಇರಲಿಲ್ಲ. ನಿನ್ನೆ ವಿಶಾಲ ಕೊಲೆಯಾಗಿದ್ದಾಳೆ, ಆಕೆಯ ಮೈ ಮೇಲಿನ ಬಂಗಾರ, ಕೈಯಲ್ಲಿ ಇದ್ದ ಹಣ ನೋಡಿ ಆಕೆಯನ್ನು ಕೊಲೆ ಮಾಡಲಾಗಿದೆ ಎನ್ನುವ ಅನುಮಾನ ಶುರುವಾಗಿದೆ.

ಹತ್ತು ದಿನಗಳ ಹಿಂದೆ, ಮಗಳೊಂದಿಗೆ ಈಕೆ ದುಬೈನಿಂದ ತವರಿಗೆ ಬಂದಿದ್ದರು. ಮನೆಯ ಆಸ್ತಿ ವ್ಯವಹಾರ ಸಂಬಂಧ ಸಹಿ ಹಾಕುವ ಸಲುವಾಗಿ ತವರಿಗೆ ವಾಪಾಸಾಗಿದ್ದು, ವ್ಯವಹಾರಗಳೆಲ್ಲಾ ಮುಗಿದಾಗಿತ್ತು. ತಂದೆ, ತಾಯಿ ಮತ್ತು ಮಗಳ ಜೊತೆ ಬ್ರಹ್ಮಾವರದ ಫ್ಲಾಟ್ ನಲ್ಲೇ ವಾಸವಾಗಿದ್ದು, ಸೋಮವಾರ ಬೆಳಿಗ್ಗೆ ಜೊತೆಗಿದ್ದ ಮೂವರನ್ನೂ ಕುಂದಾಪುರದ ಗುಜ್ಜಾಡಿಯಲ್ಲಿರುವ ಮನೆಗೆ ಬಿಟ್ಟು, ಬ್ಯಾಂಕ್ ಕೆಲಸ ಇದೆ ಎಂದು, ಮತ್ತೆ ಬ್ರಹ್ಮಾವರಕ್ಕೆ ವಾಪಾಸಾಗಿದ್ದರು. ಬ್ರಹ್ಮಾವರದ ರಿಕ್ಷಾವೊದನ್ನು ಗೊತ್ತು ಮಾಡಿ, ಒಟ್ಟು 75 ಕಿಮೀ ದೂರ ಪ್ರಯಾಣಿಸಿದ್ದರು. ಬ್ರಹ್ಮಾವರಕ್ಕೆ ಬಂದವರು ಕೆಲಸದ ನಿಮಿತ್ತ ಬ್ಯಾಂಕ್ ಗೂ ಹೋಗಿದ್ದರು. ಇದಾದ ನಂತರ ಯಾರ ಸಂಪರ್ಕಕ್ಕೂ ಸಿಗಲಿಲ್ಲ. ಗಾಬರಿಗೊಂಡ ತಂದೆ ರಾತ್ರಿ ಮಗಳು ಹೋಗಿ ಬರುತ್ತೇನೆಂದು ಹೇಳಿದ ಫ್ಲ್ಯಾಟ್‌ ‌ಗೆ ಬಂದು ನೋಡಿದಾಗ, ಕೇಬಲ್ ನಿಂದ ಕತ್ತು ಹಿಸುಕಲ್ಪಟ್ಟ ಸತ್ತ ಸ್ಥಿತಿಯಲ್ಲಿ ವಿಶಾಲಳ ಶವ ಪತ್ತೆಯಾಗಿದೆ.

ಮೈಮೇಲಿದ್ದ ಚಿನ್ನಾಭರಣ ಕಾಣೆಯಾಗಿದೆ. ಸುಮಾರು ಎರಡು ಲಕ್ಷ ಮೌಲ್ಯದ ಚಿನ್ನಾಭರಣ ಕಾಣೆಯಾಗಿದೆ. ಮೇಲ್ನೋಟಕ್ಕೆ ಚಿನ್ನಕ್ಕಾಗಿಯೇ ಕೊಲೆ ನಡೆದಿದೆ ಎಂಬ ಸಂಶಯ ಇದೆ. ಹಾಗಾದರೆ ಈ ಕೊಲೆ ನಡೆಸಿದ್ದು ಯಾರು? ಯಾಕೆ? ಅನ್ನೋದು ಯಕ್ಷಪ್ರಶ್ನೆ. ಇತ್ತೀಚೆಗಷ್ಟೇ ಆಸ್ತಿ ವ್ಯವಹಾರ ಮುಗಿದಿತ್ತು. ಈಕೆಯ ಬಳಿ ಸಾಕಷ್ಟು ಹಣ, ಆಭರಣ ಇರಬಹುದು ಎಂಬ ಮಾಹಿತಿ ಇದ್ದವರಿಂದಲೇ ಕೊಲೆ ನಡೆದಿದೆ ಅನ್ನೋದು ಸ್ಪಷ್ಟ. ಒಟ್ಟು 75 ಕಿಮೀ ಆಟೋದಲ್ಲಿ ಪ್ರಯಾಣ ನಡೆಸಿದ್ದರಿಂದ ಈ ವೇಳೆ ವ್ಯವಹಾರದ ಬಗ್ಗೆ ಈಕೆ ಕುಟುಂಬದವರೊಂದಿಗೆ ಸಾಕಷ್ಟು ಚರ್ಚೆ ನಡೆಸಿದ್ದಾರೆ.

ಈ ನಿಟ್ಟಿನಲ್ಲಿ ರಿಕ್ಷಾ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಜೊತೆಗೆ ಗ್ಯಾಸ್ ಏಜೆನ್ಸಿಯವನೊಬ್ಬ ಈಕೆಯಗೆ ಕರೆ ಮಾಡಿ ಮಾತನಾಡಿದ್ದ. ಆತನ ವಿಚಾರಣೆಯೂ ನಡೆಯಲಿದೆ. ಬ್ರಹ್ಮಾವರದಲ್ಲೇ ಇದ್ದ ವಿಶಾಲ, 45 ಕಿಮೀ ದೂರದ ಗಂಗೊಳ್ಳಿಗೆ ಹೋಗಿ, ತಂದೆ ತಾಯಿಯನ್ನು ಬಿಟ್ಟು , ಮತ್ತೆ ಬ್ಯಾಂಕ್ ಕೆಲಸ ನೆನಪಾಗಿ ಬ್ರಹ್ಮಾವರಕ್ಕೆ ವಾಪಾಸಾಗಿದ್ದರು. ಬ್ಯಾಂಕ್ ನಲ್ಲಿ ಕೆಲಸವಿದೆ ಎಂದು ಮೊದಲೇ ಹೇಳಲಿಲ್ಲ. ಕೇವಲ ಬ್ಯಾಂಕ್ ವ್ಯವಹಾರದ ಉದ್ದೇಶದಿಂದ ಬಂದಿದ್ದರೇ ಅಥವಾ ಈ ವೇಳೆ ಬೇರೆ ಯಾರನ್ನಾದರೂ ಭೇಟಿಯಾಗಿದ್ದರೆ ಅನ್ನೋ ಸಂಶಯವೂ ಇದೆ.


ತನಿಖೆಗೆ ನಾಲ್ಕು ತಂಡ ರಚಿಸಲಾಗಿದೆ. ಚಿನ್ನಾಭರಣ ದರೋಡೆ ಮಾತ್ರವಲ್ಲದೆ, ಇತರ ಕಾರಣಗಳ ಬಗೆಗೂ ವಿಚಾರಣೆ ನಡೆಯುತ್ತಿದೆ. ಎಲ್ಲಾ ಸರಿಯಾಗಿದ್ದರೆ ಇಂದು ಮಗಳ ಹುಟ್ಟುಹಬ್ಬ ನಡೆಯಬೇಕಿತ್ತು. ಸಾಯುವ ಕೆಲವೇ ಗಂಟೆಗಳ ಮೊದಲು ಗಂಡನಿಗೆ ಮೆಸೇಜ್ ಮಾಡಿ ಮಗಳ ಹೆಸರಲ್ಲಿ ಕೇಕ್ ಬುಕ್ ಮಾಡಿರೋದಾಗಿಯೂ ವಿಶಾಲ ಹೇಳಿದರು. ಕೇಕ್ ಕಟ್ ಮಾಡುವ ಹೊತ್ತಲ್ಲಿ ಈಕೆಯ ಪೋಸ್ಟ್ ಮರ್ಟಂ ನಡೆಯುತ್ತಿದೆ. ದುಬೈ ನಲ್ಲಿ ಸುಖವಾಗಿದ್ದ ಮಹಿಳೆ, ಸಾಯೋದಕ್ಕಂತಲೇ ತವರಿಗೆ ಬರುವಂತಾದದ್ದು ದುರಂತವೇ ಸರಿ.

ಸಿಸಿಟಿವಿ ದೃಶ್ಯಾವಳಿ ಜಾಲಾಡುತ್ತಿರುವ ಪೊಲೀಸರು

ಉಡುಪಿಯ ವಿಶಾಲ ಗಾಣಿಗ ಕೊಲೆ ಪ್ರಕರಣದ ಆರೋಪಿ ಪತ್ತೆಗೆ ನಾಲ್ಕು ತಂಡ ರಚಿಸಿದ್ದೇವೆ. ಉಡುಪಿ, ಮಣಿಪಾಲ, ಬ್ರಹ್ಮಾವರ ಪೊಲೀಸ್ ಠಾಣೆಯ ನಾಲ್ಕು ತಂಡಗಳ ರಚನೆ ನಡೆಸಿದ್ದೇವೆ. ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆದಿದೆ. ಪ್ರಕರಣ ಸಂಬಂಧ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಜಾಲಾಡುತ್ತಿದ್ದಾರೆ. ಶೀಘ್ರ ಆರೋಪಿಗಳ ಬಂಧನ ಮಾಡುತ್ತೇವೆ ಎಂದು ಉಡುಪಿ ಎಸ್ ಪಿ ವಿಷ್ಣುವರ್ಧನ್ ಮಾಹಿತಿ ನೀಡಿದ್ದಾರೆ.

Click to comment

Leave a Reply

Your email address will not be published. Required fields are marked *

LATEST NEWS

ವಧು ಕೇಳಿದ ಆ ಒಂದು ಪ್ರಶ್ನೆ; ತಬ್ಬಿಬ್ಬಾದ ವರ..ಮದುವೆ ಕ್ಯಾನ್ಸಲ್!

Published

on

ಮಂಗಳೂರು : ಇತ್ತೀಚಿನ ದಿನಗಳಲ್ಲಿ ಮದುವೆ ಎಂಬುದರ ಸಂಭ್ರಮ ಹೇಳತೀರದು. ಅದ್ದೂರಿತನವೇ ಮೇಲುಗೈ ಸಾಧಿಸುತ್ತೆ. ಈ ನಡುವೆ ಮದುವೆ ಮುರಿದು ಬೀಳುವ ಘಟನೆಯೂ ಹೆಚ್ಚುತ್ತಲಿದೆ. ಕ್ಷುಲ್ಲಕ ಕಾರಣ ಇರಬಹುದು ಅಥವಾ ಇನ್ಯಾವುದೇ ಕಾರಣ ಇರಬಹುದು ಮದುವೆ ಮುರಿದು ಬೀಳುತ್ತಿದೆ.


ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು ಅನ್ನೋ ಗಾದೆ ಮಾತಿದೆ. ಅಂತೆಯೇ ಇಲ್ಲಿ ವರ ಸುಳ್ಳು ಹೇಳಿದ್ದಾನೆ. ಹಾಗಂತ ಮದುವೆ ಆಗಿಲ್ಲ. ಬದಲಿಗೆ ಸಿಕ್ಕಿ ಬಿದ್ದಿದ್ದಾನೆ. ವಧು ಕೇಳಿದ ಆ ಒಂದು ಪ್ರಶ್ನೆಯಿಂದ ಮದುವೆ ಮುರಿದು ಬಿದ್ದಿದೆ.

ಸುಳ್ಳು ಹೇಳಿ ತಗ್ಲಾಕ್ಕೊಂಡ!

ಸುಳ್ಳು ಹೇಳಿ ಮದುವೆಯಾಗಲು ಹೊರಟಿದ್ದ ವರನ ಅಸಲಿ ವಿಚಾರ ಗೊತ್ತಾಗಿದೆ. ಹೀಗಾಗಿ ಯುವತಿ ಮದುವೆ ನಿರಾಕರಿಸಿದ್ದಾಳೆ. ಅಂದಹಾಗೆ ಈ ಘಟನೆ ನಡೆದಿರೋದು ಉತ್ತರ ಪ್ರದೇಶದ ಪನ್ವಾರಿನಲ್ಲಿ. ಓದು, ಬರಹ ಏನೊಂದು ಬರದ ಅನಕ್ಷರಸ್ಥನೊಬ್ಬ ತಾನು ದೊಡ್ಡ ಸರ್ಕಾರಿ ಅಧಿಕಾರಿ ಎಂದು ಮದುವೆಯಾಗಲು ಹೊರಟಿದ್ದ.

ಆದರೆ, ಈ ಸತ್ಯ ಮದುವೆ ಮನೆಯಲ್ಲೇ ಬಯಲಾಗಿದೆ. ಸಂಶಯಗೊಂಡ ವಧು ವರನ ಬಳಿ, ಎರಡರ ಮಗ್ಗಿ ಹೇಳಲು ತಿಳಿಸಿದ್ದಾಳೆ. ಆಗ ಆತ ತಡವರಿಸಿದ್ದಾರೆ. ಹಾಗಾಗಿ, ಯುವತಿಗೆ ಸತ್ಯಾಂಶ ಗೊತ್ತಾಗಿದೆ. ಎರಡರ ಮಗ್ಗಿ ಬೇಸಿಕ್ ಗಣಿತವೂ ಗೊತ್ತಿಲ್ಲ, ನೀನು ಅಧಿಕಾರಿಯಾಗಲು ಹೇಗೆ ಸಾಧ್ಯ? ಎಂದು ಮದುವೆ ಮುರಿದುಕೊಂಡಿದ್ದಾಳೆ.

ಇದನ್ನೂ ಓದಿ : ಮತ್ತೆ ಬಾಯ್‌ ಫ್ರೆಂಡ್ ಬದಲಾಯಿಸಿದ ಶೃತಿ ಹಾಸನ್..!

ಇಷ್ಟಾದರೂ ಬಿಡದ ಕುಟುಂಬದವರು ವಧುವಿನ ಮನವೊಲಿಸುವ ಯತ್ನ ಮಾಡಿದ್ದಾರೆ. ಆದರೆ, ವಧು ಮಾತ್ರ ಇದಕ್ಕೆ ಒಪ್ಪಿಲ್ಲ. ಹೀಗಾಗಿ ವರದಕ್ಷಿಣೆಯನ್ನು ಹಿಂದಿರುಗಿಸಿದ್ದಾರೆ. ಪರಸ್ಪರ ನೀಡಿದ ಉಡುಗೊರೆ, ಆಭರಣಗಳನ್ನು ಹಿಂದಿರುಗಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

 

Continue Reading

LATEST NEWS

ಮತಗಟ್ಟೆಯನ್ನೇ ಧ್ವಂಸ ಮಾಡಿದ ಗ್ರಾಮಸ್ಥರು!

Published

on

ಚಾಮರಾಜನಗರ : ಲೋಕಸಭಾ ಚುನಾವಣೆಗೆ ನಡೆಯುತ್ತಿರುವ ಮತದಾನ ರಾಜ್ಯದೆಲ್ಲಡೆ ಸುಸೂತ್ರವಾಗಿಯೇ ನಡೆದಿದೆ. ಆದರೆ ಚಾಮರಾಜನಗರದಲ್ಲಿ ಮಾತ್ರ ಜನರು ಮತಗಟ್ಟೆಯನ್ನೇ ಪುಡಿ ಮಾಡಿ ಚುನಾವಣೆಯನ್ನು ಬಹಿಷ್ಕಾರ ಮಾಡಿದ್ದಾರೆ. ಚಾಮರಾಜನಗರದ ಲೋಕಸಭಾ ಕ್ಷೇತ್ರದ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಐದು ಗ್ರಾಮಗಳಲ್ಲಿ ಮತದಾನ ಬಹಿಷ್ಕಾರ ಮಾಡಲಾಗಿತ್ತು. ಈ ವೇಳೆ ಇಂಡಿಗನತ್ತ ಎಂಬ ಗ್ರಾಮದಲ್ಲಿ ಮತಗಟ್ಟೆಯನ್ನು ಗ್ರಾಮಸ್ಥರು ಧ್ವಂಸ ಮಾಡಿದ್ದಾರೆ.


ಚುನಾವಣೆ ಬಹಿಷ್ಕಾರಿಸಿದ್ದ 5 ಗ್ರಾಮ :

ಮೂಲ ಸೌಕರ್ಯದಿಂದ ವಂಚಿತರಾಗಿದ್ದ ಈ ಗ್ರಾಮದ ಜನರು ತಮ್ಮ ಹಕ್ಕಿಗಾಗಿ ಹಲವು ಹೋರಾಟ ನಡೆಸಿದ್ದರು. ಆದರೆ, ಚುನಾವಣೆಯಲ್ಲಿ ಆಶ್ವಾಸನೆ ನೀಡಿ ಹೋಗುವ ಜನ ಪ್ರತಿನಿಧಿಗಳು ಬಳಿಕ ಇತ್ತ ಸುಳಿಯುತ್ತಿರಲಿಲ್ಲ. ಹೀಗಾಗಿ ಐದು ಗ್ರಾಮಗಳ ಜನರು ಈ ಬಾರಿ ಮತ ಕೇಳಲು ಬರಬೇಡಿ, ನಾವು ಮತದಾನ ಮಾಡೋದಿಲ್ಲ ಎಂದಿದ್ದರು.

ಚುನಾವಣೆ ಬಹಿಷ್ಕಾರ ಮಾಡಿದ್ದರೂ ಕಾನೂನು ರೀತಿಯಲ್ಲಿ ಗ್ರಾಮದಲ್ಲಿ ಮತಗಟ್ಟೆಯನ್ನು ತೆರೆಯಲಾಗಿತ್ತು. ಇಂಡಿಗನತ್ತ, ತೇಕಣೆ, ಮೆಂದಾರೆ ಈ ಗ್ರಾಮದಲ್ಲಿ ಯಾವೊಬ್ಬ ಗ್ರಾಮಸ್ಥರೂ ಮತದಾನ ಮಾಡಿಲ್ಲ. ಇನ್ನು ಪಡಸಲನತ್ತ ಗ್ರಾಮದಲ್ಲಿ 85 ಮತದಾರು ಇದ್ದು ಇಬ್ಬರು ಮತದಾನ ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ.

ಇಂಡಿಗನತ್ತ ಗ್ರಾಮದಲ್ಲಿ ಮತಗಟ್ಟೆ ತೆರೆಯುವುದಕ್ಕೆ ಗ್ರಾಮಸ್ಥರು ಸಾಕಷ್ಟು ವಿರೋಧ ವ್ಯಕ್ತಪಡಿಸಿದ್ದರು. ಆದಾಗ್ಯೂ, ಚುನಾವಣಾ ಆಯೋಗ ಇಲ್ಲಿ ಮತಗಟ್ಟೆ ತೆರೆದು ‘ಮತದಾನ ಮಾಡಲು ಬನ್ನಿ’ ಎಂದು ಜನರನ್ನು ಕರೆದಿದ್ದರು. ಆದ್ರೆ ರೊಚ್ಚಿಗೆದ್ದ ಜನರು ಮತದಾನ ಕೇಂದ್ರದ ಒಳಗೆ ನುಗ್ಗಿ ಇವಿಎಂ ಮೆಷಿನ್ ಸಹಿತ ಮೇಜು ಕುರ್ಚಿ ಎಲ್ಲವನ್ನೂ ಧ್ವಂಸ ಮಾಡಿದ್ದಾರೆ.

ಕನಿಷ್ಠ ಮೂಲಭೂತ ಸೌಕರ್ಯವಾದ ಕುಡಿಯುವ ನೀರು, ರಸ್ತೆ, ವಿದ್ಯುತ್, ಆರೋಗ್ಯ, ಶಿಕ್ಷಣ ಯಾವುದೂ ಇಲ್ಲದ ನಮ್ಮ ಗ್ರಾಮದ ಮತ ಯಾಕೆ ಬೇಕು? ಎಂದು ಜನ ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ : ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

ಪೊಲೀಸ್ ಲಾಠಿ ಚಾರ್ಜ್…ಕೆರಳಿದ ಗ್ರಾಮಸ್ಥರು!

ಜನರು ಮತಗಟ್ಟೆ ಧ್ವಂಸಕ್ಕೆ ಮುಂದಾಗುತ್ತಿದ್ದಂತೆ ಭದ್ರತೆಯಲ್ಲಿದ್ದ ಪೊಲೀಸರು ಲಾಠಿ ಚಾರ್ಚ್ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳಿಗೆ ಹಾಗೂ ಪೊಲೀಸರಿಗೆ ಹಲ್ಲೆ ಮಾಡಿದ ಜನರು ಬಳಿಕ ಕಲ್ಲು ತೂರಾಟ ನಡೆಸಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗೂ ಅಧಿಕಾರಿಗಳಿಗೆ ಗಾಯಗಳಾಗಿದೆ.

ಪೊಲೀಸರು ಮಹಿಳೆಯರು ಪುರುಷರು ಎಂದು ನೋಡದೆ ಎಲ್ಲರ ಮೇಲೂ ಲಾಠಿ ಚಾರ್ಚ್ ಮಾಡಿರುವುದು ಗ್ರಾಮಸ್ಥರನ್ನು ಕೆರಳಿಸಿದೆ. ಸದ್ಯಕ್ಕೆ ಹೆಚ್ಚುವರಿ ಪೊಲೀಸರನ್ನು ನಿಯೋಜಿಸಲಾಗಿದ್ದು, ಮತದಾನ ಕೇಂದ್ರವನ್ನು ಬಂದ್ ಮಾಡಲಾಗಿದೆ.

Continue Reading

LATEST NEWS

ಸುಡುಬಿಸಿಲಿನಲ್ಲೂ ಮತದಾನ; ಇಹಲೋಕ ತ್ಯಜಿಸಿದ 6 ಮಂದಿ

Published

on

ಮಂಗಳೂರು (ಕೇರಳ) : ಸುಡು ಬಿಸಿಲಿನ ಬೇಗೆಯ ನಡುವೆ ಜನರು ಮತದಾನ ಕೇಂದ್ರಕ್ಕೆ ಬಂದು ಮತದಾನ ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಚುನಾವಣೆಯ ವೇಳೆ ಕರ್ತವ್ಯದಲ್ಲಿದ್ದ ಸಹಾಯಕ ರಿಟರ್ನಿಂಗ್ ಆಫೀಸರ್ ಒಬ್ಬರು ಹೃದಯಾಘಾ*ತದಿಂದ ಅಸುನೀಗಿದ್ದಾರೆ. ಆದರೆ, ಕೇರಳದಲ್ಲಿ ಚುನಾವಣೆಯಲ್ಲಿ ಮತದಾನ ಮಾಡಿದ ಆರು ಜನ ಮೃ*ತ ಪಟ್ಟಿದ್ದಾರೆ. ಬಿಸಿಲಿನ ತಾಪಕ್ಕೆ ಆರು ಜನ ಸಾ*ವನಪ್ಪಿದ್ದಾರೆ ಎನ್ನಲಾಗಿದೆ.

ಘಟನೆಯ ವಿವರ :

ಪಾಲಕ್ಕಾಡಿನ ಒಟ್ಟಪಾಲಂ ಚುನಂಗಾಡ್ ಎಂಬಲ್ಲಿ ಮತದಾನ ಮಾಡಿ ಮನೆಗೆ ವಾಪಾಸಾಗಿದ್ದ ವಾಣಿವಿಲಾಸಿನಿ ಮಾಡೆಲ್ ಕಟ್ಟಿಲ್ ಚಂದ್ರು ಎಂಬವರು ಅಸು ನೀಗಿದ್ದಾರೆ. ಇನ್ನು ತೆಂಕುರಿಸ್ಸಿ ವಡಕ್ಕೆತ್ತಾರ ಜೆಎಲ್‌ಪಿ ಶಾಲೆಯಲ್ಲಿ ಮತ ಚಲಾಯಿಸಿದ ವಾಪಾಸಾದ ಮಡಕ್ಕೆತ್ತರ ಮೂಲದ 35 ವರ್ಷದ ಶಬರಿ ಎಂಬವರು ಕೂಡಾ ಇದೇ ರೀತಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಜಿಲ್ಲಾಸ್ಪತ್ರೆಗೆ ಸಾಗಿಸಲಾಗಿತ್ತಾದರೂ ಆ ವೇಳೆ ಅವರ ಪ್ರಾಣ ಪಕ್ಷಿ ಹಾರಿ ಹೋಗಿತ್ತು. ಇನ್ನು ಪಾಲಕ್ಕಾಡ್ ವಲಯೋಡಿಯಲ್ಲಿ ಮತದಾನ ಮಾಡಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಪುದುಶೇರಿಯ ಕಂದನ್ ಎಂಬವರಿಗೂ ಹೃದಯಾಘಾ*ತವಾಗಿದೆ.


ಇನ್ನು ನಿರಾಮರತ್ತೂರು ಮೂಲದ ಅಲುಕನಕತ್ ಸಿದ್ದಿಕ್ ಮೌಲ್ವಿ ಎಂಬವರು ಮಲಪ್ಪುರಂನ ತಿರೂರಿನಲ್ಲಿ ಮತದಾನ ಮಾಡಿ ಮನೆಗೆ ಬಂದಿದ್ದಾರೆ. ಆದರೆ ಮನೆಗೆ ಬಂದು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಅವರಿಗೂ ಹೃದಯಾಘಾ*ತವಾಗಿದೆ. ಅವರಿಗೆ 65 ವರ್ಷ ವಯಸ್ಸಾಗಿತ್ತು ಎಂದು ತಿಳಿದು ಬಂದಿದೆ.

ಕೋಝಿಕ್ಕೋಡ್‌ನ ಕಚ್ಚರಾ ಶಾಲೆಯಲ್ಲಿ ಸಿಪಿಎಂ ಬೂತ್ ಏಜೆಂಟ್ ಆಗಿದ್ದ ನಿವೃತ್ತ ಕೆಸ್‌ಇಬಿ ಇಂಜಿನಿಯರ್ ಅನೀಸ್ ಅಹಮ್ಮದ್ ಎಂಬವರು ಅಲಪ್ಪುಳ ಕಾಕಜಾಮನ್‌ನಲ್ಲಿ ಮತ ಚಲಾಯಿಸಿದ್ದರು. ಅವರಿಗೂ ಹೃದಯಾಘಾ*ತ ಉಂಟಾಗಿ ಸಾ*ವನ್ನಪ್ಪಿದ್ದಾರೆ. ಇನ್ನು, ಸೋಮರಾಜನ್ ಎಂಬ 82 ವರ್ಷದ ಪ್ರಾಯದ ವಯೋ ವೃದ್ಧರೊಬ್ಬರು ಕುಡಾ ಮತ ಚಲಾಯಿಸಿದ ಬಳಿಕ ಸಾ*ವನ್ನಪ್ಪಿದ್ದಾರೆ.

ಇದನ್ನೂ ಓದಿ : ಮತದಾನ ಮಾಡುವ ಫೋಟೊ ಕ್ಲಿಕ್ಕಿಸಿ ಶೇರ್ ಮಾಡಿದ ಯುವಕ; ಎಫ್ ಐ ಆರ್ ದಾಖಲಿಸಿದ ಚುನಾವಣಾ ಆಯೋಗ

ಆರು ಜನರ ಈ ಹೃದಯಾಘಾ*ತಕ್ಕೆ ಕಾರಣ ಏನು ಅನ್ನೋದು ಇನ್ನೂ ಗೊತ್ತಾಗಿಲ್ಲ. ಆದ್ರೆ ಬಿಸಿಲಿನ ತಾಪಕ್ಕೆ ಇವರು ಮೃ*ತ ಪಟ್ಟಿದ್ದಾರೆ ಎಂದು ಅನುಮಾನಿಸಲಾಗಿದೆ. ಒಟ್ಟಾರೆ ಬಿಸಿಲಿನ ನಡುವೆಯೂ ಬಂದು ತಮ್ಮ ಹಕ್ಕು ಚಲಾಯಿಸಿದ ಇವರು ಇಹಲೋಕ ತಜ್ಯಸಿರುವುದು ನಿಜಕ್ಕೂ ವಿಷಾದನೀಯ.

Continue Reading

LATEST NEWS

Trending