ಸುರತ್ಕಲ್‌ನಲ್ಲಿ ಕಾರ್ಯಾಚರಿಸುತಿದ್ದ ಟೋಲ್‌ಗೇಟ್‌ನ್ನು ಮುಚ್ಚಿ ಅದನ್ನು ಹೆಜಮಾಡಿ ಟೋಲ್‌ಗೆ ವಿಲೀನಗೊಳಿಸಿ ಟೋಲ್ ಶುಲ್ಕ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ತೀವ್ರವಾಗಿ ವಿರೋಧಿಸಿದ್ದಾರೆ.
ಉಡುಪಿ : ಸುರತ್ಕಲ್‌ನಲ್ಲಿ ಕಾರ್ಯಾಚರಿಸುತಿದ್ದ ಟೋಲ್‌ಗೇಟ್‌ನ್ನು ಮುಚ್ಚಿ ಅದನ್ನು ಹೆಜಮಾಡಿ ಟೋಲ್‌ಗೆ ವಿಲೀನಗೊಳಿಸಿ ಟೋಲ್ ಶುಲ್ಕ ಹೆಚ್ಚಳ ಮಾಡುವ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ನಿರ್ಧಾರವನ್ನು ಉಡುಪಿ ಶಾಸಕ ಕೆ.ರಘುಪತಿ ಭಟ್ ತೀವ್ರವಾಗಿ ವಿರೋಧಿಸಿದ್ದಾರೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಈ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಶಾಸಕರು ಎನ್‌ಹೆಚ್‌ಎಐ ನಿರ್ಧಾರ ಖಂಡಿತ ತಪ್ಪು.
ಸುರತ್ಕಲ್ ಟೋಲ್‌ನ್ನು ಮುಚ್ಚಿ, ಅಲ್ಲಿ ವಸೂಲಿ ಮಾಡುತಿದ್ದ ಶುಲ್ಕವನ್ನು ಹೆಜಮಾಡಿ ಟೋಲ್ ಶುಲ್ಕಕ್ಕೆ ಸೇರಿಸುವುದು ತಾಂತ್ರಿಕವಾಗಿಯೂ ಸರಿಯಲ್ಲ.
ಸುರತ್ಕಲ್ ಟೋಲ್‌ಗೇಟ್‌ಗೂ, ಹೆಜಮಾಡಿ ಟೋಲ್‌ಗೂ ಯಾವುದೇ ಸಂಬಂಧವಿಲ್ಲ.
ಹೆಜಮಾಡಿಯ ಟೋಲ್‌ನ್ನು ನವಯುಗ ಕಂಪೆನಿ ನಿರ್ವಣೆ ಮಾಡಿ ಶುಲ್ಕ ಸಂಗ್ರಹಿಸುತ್ತಿದೆ. ಉಡುಪಿ ಜಿಲ್ಲೆಯಲ್ಲಿ ಈಗ ಮೂರು ಕಡೆಗಳಲ್ಲಿ ಟೋಲ್ ಸಂಗ್ರಹ ನಡೆಯುತ್ತಿದೆ.
ಸುರತ್ಕಲ್ ಟೋಲ್‌ನ್ನು ಬಂಟ್ವಾಳಕ್ಕೆ ಸಂಬಂಧಿಸಿದ ಕಂಪೆನಿ ಪಡೆಯುತ್ತಿದ್ದು, ನವಯುಗ ಅಲ್ಲಿ ಯಾವ ಕಾಮಗಾರಿಯನ್ನೂ ಮಾಡಿಲ್ಲ. ಈಗ ನವಯುಗ ಅಲ್ಲಿನ ಟೋಲ್‌ನ್ನು ಉಡುಪಿಯ ಜನತೆಯಿಂದ ಪಡೆಯುವುದು ಸರಿಯಲ್ಲ ಎಂದರು.
ಹೆಜಮಾಡಿ ಟೋಲ್ ನಿಂದ ತೊಂದರೆಗೊಳಗಾಗುವುದು ಉಡುಪಿಯ ಜನತೆಯಾಗಿದ್ದು ತಮ್ಮದಲ್ಲದ ತಪ್ಪಿಗೆ ಅಧಿಕ ಶುಲ್ಕ ಪಾವತಿಸುವಂತಾಗಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಈ ನಿರ್ಧಾರವನ್ನು ವಿರೋಧಿಸಿ ತಾನು ಕೇಂದ್ರ ಸರಕಾರಕ್ಕೆ, ನಮ್ಮ ಸಂಸದರಿಗೆ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ನಿರ್ಧಾರವನ್ನು ರದ್ದು ಪಡಿಸುವಂತೆ ಒತ್ತಾಯಿಸುವುದಾಗಿ ಹೇಳಿದರು.