Friday, August 19, 2022

“ನಿಮ್ಮ ಮನೆಯ ಜಾಗ ಅಗೆಯುವಾಗ ಶವ ಸಿಕ್ಕರೆ ಆ ಜಾಗ ಅವನದಾಗುತ್ತಾ”..?

ಮಂಗಳೂರು: 300-400 ವರ್ಷಗಳ ಹಿಂದೆಯಿಂದಲೂ ಇರುವ ಮಸೀದಿಯ ಬಗ್ಗೆ ಊರಿನವರಿಗೆಲ್ಲಾ ಗೊತ್ತಿದೆ. ಈ ವಿವಾದದ ವಿಚಾರದಲ್ಲಿ ಜಿಲ್ಲಾಧಿಕಾರಿಯೇ ಕೇಂದ್ರಬಿಂದು. ಅವರಿಗೆ ಯಾವ ರಾಜಕೀಯ ಒತ್ತಡ ಇದೆಯೋ ಗೊತ್ತಿಲ್ಲ. ಇದಕ್ಕೆ ಸಂಬಂಧಿಸಿ ನಿಧಾನಗತಿಯಲ್ಲಿ ಹೆಜ್ಜೆ ಹಾಕುತ್ತಿದ್ದಾರೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್ ಅವರು ಆರೋಪಿಸಿದರು.

ಮಳಲಿ ದರ್ಗಾ ನವೀಕರಣಗೊಳಿಸಲು ಕೆಡವಿದಾಗ ಅದರಲ್ಲಿ ಹಿಂದೂ ದೇವಾಲಯದ ಶೈಲಿಯ ಕೆತ್ತನೆಗಳು ಪತ್ತೆಯಾದ ಪ್ರಕರಣದ ಬಗ್ಗೆ ಮಾತನಾಡಿದ ಅವರು ‘ ಇದಕ್ಕೆ ಸಂಬಂಧಿಸಿದ ಎಲ್ಲಾ ದಾಖಲೆಗಳು ಜಿಲ್ಲಾಧಿಕಾರಿಗಳಲ್ಲಿ ಇದೆ. ಊರಿನವರಿಗೆ ಕೂಡಾ ಗೊತ್ತು. ಇತಿಹಾಸ ಪೂರ್ವ ಮಸೀದಿಗಳ ರಚನೆ ರಾಜರ ಆಡಳಿತದ ಕಾಲದಲ್ಲಿ ಇದ್ದಂತೆ ಇತ್ತು.


ಅದು ಕೂಡಾ ಎಲ್ಲರಿಗೂ ಗೊತ್ತಿರುವ ವಿಷಯ. ಕೆಲವರಿಗೆ ಅದರಲ್ಲಿ ಸಂಶಯ ಬಂದಿದೆ. ಆಗ ಡಿಸಿಗೆ ಅರ್ಜಿ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿಯ ಕೆಲಸ ಏನು ದಾಖಲೆ ನೋಡಿ ನಿರ್ಧಾರ ಕೊಡಬೇಕು. ಯಾರಿಗೆ ಅದರಲ್ಲಿ ಅಸಮಾಧಾನ ಇದೆಯೋ ಅವರಿಗೆ ಕೋರ್ಟ್ ಇದೆ.

ಈಗ ಉದಾಹರಣೆಗೆ ನಿಮ್ಮ ಮನೆಯ ಅಡಿಪಾಯ ಅಗೆದು ನೋಡಿದ್ರೆ ಯಾರದ್ದೋ ಡೆಡ್‌ ಬಾಡಿ ಸಿಗಬಹುದು. ಅಂದ ಮಾತ್ರಕ್ಕೆ ಅದು ಅವನ ಜಾಗವಾ? ಜಿಲ್ಲಾಧಿಕಾರಿ ತಕ್ಷಣ ನ್ಯಾಯ ಕೊಡುವ ಕೆಲಸ ಮಾಡಬೇಕು.

ಒಬ್ಬ ಮ್ಯಾಜಿಸ್ಟ್ರೇಟ್‌ಗೆ ಅಧಿಕಾರ ಕೊಡುವುದು ರಾಜಕೀಯ ಒತ್ತಡಕ್ಕೆ ಮಣಿಯದೆ ಎಲ್ಲ ಜವಾಬ್ದಾರಿಯನ್ನು ನಿಭಾಯಿಸಬೇಕು. ರೆಕಾರ್ಡ್ ನೋಡಿ ನ್ಯಾಯ ಕೊಡಿ…ಅಷ್ಟೆ ಎಂದು ಖಾರವಾಗಿ ಪ್ರತಿಕ್ರಿಯಿಸಿದರು.

LEAVE A REPLY

Please enter your comment!
Please enter your name here

Hot Topics

“ಹಿಂದೂಗಳು ಸತ್ರೆ BJPಗೆ ಓಟು ಬರುತ್ತದೆ-ಅಲ್ಪಸಂಖ್ಯಾತರು ಸತ್ತರೆ ಓಟ್ ಸಿಗಲ್ಲ”

ಮಂಗಳೂರು: ಬಿಜೆಪಿಗರಿಗೆ ಹಿಂದೂಗಳು ಸತ್ತರೆ ಅದ್ರಲ್ಲೂ ಬಿಲ್ಲವರು ಸತ್ತರೆ ಮಾತ್ರ ಓಟು ಬರುತ್ತದೆ. ಅಲ್ಪಸಂಖ್ಯಾತರು ಸತ್ತರೆ ಓಟು ಬರೋದಿಲ್ಲ. ಅದಕ್ಕಾಗಿ ಹರೀಶ್ ಪೂಜಾರಿಯವರ ಹತ್ಯೆಯಾಯ್ತು. ಕಾಂಗ್ರೆಸ್ ಪಕ್ಷ ಯಾವಾಗಲೂ ಸಾಮರಸ್ಯವನ್ನು ಬಯಸುವ ಪಕ್ಷ....

ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಎಸೆದಿದ್ದನ್ನು ಖಂಡಿಸಿ ಆ.26 ರಂದು ಮಡಿಕೇರಿ ಎಸ್‌ಪಿ ಕಚೇರಿಗೆ ಮುತ್ತಿಗೆ

ಬೆಂಗಳೂರು: ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಮಡಿಕೇರಿ ಭೇಟಿ ವೇಳೆ ಮೊಟ್ಟೆ ಎಸೆದ ಪ್ರಕರಣವನ್ನು ಕಾಂಗ್ರೆಸ್‌ ಖಂಡಿಸಿದ್ದು, ಆ.26 ರಂದು ಎಸ್‌ಪಿ ಕಚೇರಿಗೆ ಮುತ್ತಿಗೆ ಹಾಕಲು ಕಾಂಗ್ರೆಸ್‌ ಕಾರ್ಯಕರ್ತರು ನಿರ್ಧರಿಸಿದ್ದಾರೆ.ಈ...

ಸಿದ್ದರಾಮಯ್ಯಗೆ ಮೊಟ್ಟೆ ಎಸೆತ ಪ್ರಕರಣ: 9 ಮಂದಿಯ ಬಂಧನ

ಕುಶಾಲನಗರ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಕೋಳಿ ಮೊಟ್ಟೆ ಎಸೆದ ಘಟನೆ ಕುರಿತು ವಶಕ್ಕೆ ತೆಗೆದುಕೊಳ್ಳಲಾದ 9 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿರುವ ಕುಶಾಲನಗರ ಗ್ರಾಮಾಂತರ ಠಾಣೆ ಪೊಲೀಸರು...