Sunday, July 3, 2022

ಕುಂದಾಪುರದಲ್ಲಿ ದ್ವಿಚಕ್ರ ವಾಹನಕ್ಕೆ ಟಿಪ್ಪರ್ ಢಿಕ್ಕಿ: ಮಹಿಳೆ ಸಾವು-ಜತೆಗಿದ್ದ ಪತಿ ಹಾಗೂ ಮಗುವಿಗೆ ಗಾಯ

ಕುಂದಾಪುರ: ಟಿಪ್ಪರ್ ಲಾರಿ ಮತ್ತು ದ್ವಿಚಕ್ರ ವಾಹನ ಢಿಕ್ಕಿಯಾಗಿ ಮಹಿಳೆಯೊಬ್ಬರು ಮೃತಪಟ್ಟ ಘಟನೆ ಹೆಮ್ಮಾಡಿಯಲ್ಲಿ ರವಿವಾರ ನಡೆದಿದೆ.


ಸ್ಕೂಟಿಯಲ್ಲಿದ್ದ ಅರೆಹೊಳೆ ಎರುಕೋಣೆ ಸಮೀಪದ ರಾಗಿಹಕ್ಲು ನಿವಾಸಿ ಜ್ಯೋತಿ ಮೃತರು. ಇವರ ಪತಿ ಶರತ್ ಹಾಗೂ ಮಗು ಇಬ್ಬರೂ ಗಾಯಗೊಂಡಿದ್ದಾರೆ.
ಘಟನೆಯ ವಿವರ
ಹೆಮ್ಮಾಡಿ ಕಡೆಯಿಂದ ಕುಂದಾಪುರ ಕಡೆಗೆ ಜ್ಯೋತಿ ತನ್ನ ಗಂಡ ಹಾಗೂ ಮಗಳ ಸಮೇತ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದರು.

ಈ ವೇಳೆ ಅದೇ ದಾರಿಯಲ್ಲಿ ಮಣ್ಣು ತುಂಬಿದ್ದ ಲಾರಿ ಅತೀ ವೇಗದಿಂದ ಬಂದು ಸ್ಕೂಟಿಗೆ ಢಿಕ್ಕಿಯಾಗಿದೆ.

ಬೀಳುತ್ತಿದ್ದ ಮಗುವನ್ನು ಇನ್ನೊಂದು ಮಗ್ಗುಲಿಗೆ ತಪ್ಪಿಸಿದ ಮಹಿಳೆ ಬೊಬ್ಬೆ ಹೊಡೆದರೂ ಕೇಳಿಸದೆ ಆಕೆಯ ಮೇಲೆ ಟಿಪ್ಪರ್ ಹರಿದಿದೆ.

ಮಗು ಹಾಗೂ ಆಕೆಯ ಪತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿದ್ದಾರೆ.

ದಂಪತಿ ಕುಂದಾಪುರದಲ್ಲಿ ವೃದ್ಧಾಶ್ರಮ ಒಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ.

LEAVE A REPLY

Please enter your comment!
Please enter your name here

Hot Topics

ಮಂಗಳೂರಿನ ‘ಕದ್ರಿ‌ ರೋಲರ್ಸ್ ಸ್ಕೇಟಿಂಗ್ ಕ್ಲಬ್’ ಅಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆ

ಮಂಗಳೂರು: ಮಂಗಳೂರಿನಲ್ಲಿ‌ ನೂತನವಾಗಿ "ಕದ್ರಿ‌ ರೋಲರ್ಸ್ ಸ್ಕೇಟಿಂಗ್ ಕ್ಲಬ್(ರಿ)" ಆರಂಭಗೊಂಡಿದ್ದು, ಇದರ ಸ್ಥಾಪಕಾಧ್ಯಕ್ಷರಾಗಿ ಡಾ.ರಾಜೇಶ್ ಹುಕ್ಕೇರಿ ಆಯ್ಕೆಯಾಗಿದ್ದಾರೆ.ನಗರದ ಕೆಪಿಟಿ‌ ಸರ್ಕಲ್ ನ ಬಳಿಯ ಕದ್ರಿ ಪಾರ್ಕ್ ನಲ್ಲಿರುವ "ಅನಘಾಸ್ ಸ್ಕೇಟಿಂಗ್ ಅಕಾಡೆಮಿ"ಯಲ್ಲಿ ಇತ್ತೀಚೆಗೆ...

ವಿಟ್ಲ: ಬಕ್ರೀದ್ ಹಬ್ಬ ಹಿನ್ನೆಲೆ ಜಿಲ್ಲಾ ಗಡಿಪ್ರದೇಶದಲ್ಲಿ ಬಂದೋಬಸ್ತ್‌

ವಿಟ್ಲ: ಬಕ್ರೀದ್ ಹಬ್ಬದ ಪ್ರಯುಕ್ತ ಮುನ್ನೆಚ್ಚರಿಕಾ ಕ್ರಮವಾಗಿ ಹಾಗೂ ಅಕ್ರಮ ಚಟುವಟಿಕೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಕೊಡಂಗೆ ಚೆಕ್ ಪೋಸ್ಟ್‌ನಲ್ಲಿ ದಿನದ 24 ಗಂಟೆಯು ಸಿಬ್ಬಂದಿಗಳು ಇರಲಿದ್ದು, ವಾಹನ ತಪಾಸಣೆ ನಡೆಯಲಿದೆ...

ಸಮಾಜವಾದಿ ಪಕ್ಷದ ಎಲ್ಲ ಘಟಕಗಳನ್ನು ವಿಸರ್ಜಿಸಿದ ಅಖಿಲೇಶ್‌ ಯಾದವ್‌

ಲಖನೌ: ಸಮಾಜವಾದಿ ಪಕ್ಷದ (ಎಸ್‌ಪಿ) ಮುಖ್ಯಸ್ಥ ಅಖಿಲೇಶ್ ಯಾದವ್, ತಕ್ಷಣದಿಂದಲೇ ಜಾರಿಗೆ ಬರುವಂತೆ ಪಕ್ಷದ ಎಲ್ಲ ಘಟಕಗಳನ್ನು ಭಾನುವಾರ ವಿಸರ್ಜಿಸಿದ್ದಾರೆ. ಇದರಲ್ಲಿ ಯುವ ಘಟಕ ಮತ್ತು ಮಹಿಳಾ ಘಟಕಗಳು ಕೂಡ ಸೇರಿವೆ.ತಮ್ಮ ಈ...