ನ್ಯೂಯಾರ್ಕ್: ಜನಪ್ರಿಯ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟರ್ ಇನ್ನು ಮುಂದೆ ಫ್ರೀಯಾಗಿ ಸಿಗುವುದಿಲ್ಲ ಎಂಬ ಮುನ್ಸೂಚನೆಯನ್ನು ವಿಶ್ವದ ಶ್ರೀಮಂತ ಉದ್ಯಮಿ ಎಲಾನ್ ಮಸ್ಕ್ ನೀಡಿದ್ದಾರೆ.
ಟ್ವಿಟರ್‌ನ್ನು ವಾಣಿಜ್ಯ ಮತ್ತು ಸರ್ಕಾರಿ ಕೆಲಸಕ್ಕೆ ಬಳಸುವ ಬಳಕೆದಾರರಿಗೆ ಸ್ವಲ್ಪ ಶುಲ್ಕವನ್ನು ವಿಧಿಸಿ ಟ್ವಿಟರ್ ಪೇವಾಲ್ ಸ್ವರೂಪವನ್ನು ಪಡೆದುಕೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಉಳಿದಂತೆ ಸಾಮಾನ್ಯ ಬಳಕೆದಾರರಿಗೆ ಇನ್ನು ಮುಂದೆ ಟ್ವಿಟರ್ ಸಂಪೂರ್ಣ ಉಚಿತವಾಗಿಯೇ ಇರುತ್ತದೆ.
ಟ್ವಿಟರ್‌ನ ಶುಲ್ಕ ಆಧರಿತ ಯೋಜನೆಯಲ್ಲಿ ನಿಷ್ಠಾವಂತ ಗ್ರಾಹಕರಿಗೆ ಪ್ರಮುಖ ವಿಶೇಷತೆಗಳ ಲಭ್ಯತೆಯನ್ನು ನೀಡುತ್ತದೆ.