Home ದೇಶ-ವಿದೇಶ ಮನೆಗೆ ಹೋಗಲು ವಾಹನವಿಲ್ಲವೆಂದು ಸರ್ಕಾರಿ ಬಸ್ಸನ್ನೇ ಕದ್ದ ಭೂಪ...!

ಮನೆಗೆ ಹೋಗಲು ವಾಹನವಿಲ್ಲವೆಂದು ಸರ್ಕಾರಿ ಬಸ್ಸನ್ನೇ ಕದ್ದ ಭೂಪ…!

ಮನೆಗೆ ಹೋಗಲು ವಾಹನವಿಲ್ಲವೆಂದು ಸರ್ಕಾರಿ ಬಸ್ಸನ್ನೇ ಕದ್ದ ಭೂಪ…!

ತೆಲಂಗಾಣ: ತನ್ನ ಮನೆಗೆ ಹೋಗಲು ಬಸ್ಸಿಲ್ಲ ಎಂಬ ಕಾರಣಕ್ಕೆ ಕಳ್ಳನೊಬ್ಬ ಸರ್ಕಾರಿ ಬಸ್ಸನ್ನೇ ಕದ್ದಿರುವ ಘಟನೆ ತೆಲಂಗಾಣದ ವಿಕಾರಾಬಾದ್​ ಜಿಲ್ಲೆಯ ತಾಂಡೂರಿನಲ್ಲಿ ನಡೆದಿದೆ.

ವ್ಯಕ್ತಿಯೊಬ್ಬ ತುಂಬಾ ಹೊತ್ತಿನಿಂದ ಬಸ್‌ ನಿಲ್ದಾಣದ ಬಳಿ ನಿಂತಿದ್ದ. ಬಸ್ಸಿಗೆ ಕಾದು ಸುಸ್ತಾಗಿ ಕೊನೆಗೆ ಸರ್ಕಾರಿ ಬಸ್ಸನ್ನೇ ಕದ್ದು ಪರಾರಿಯಾಗಿದ್ದಾನೆ.

ನಿನ್ನೆ ರಾತ್ರಿ 9 ಗಂಟೆಗೆ ತಾಂಡೂರು ಡಿಪೋದಿಂದ ಓಗಿಪುರಕ್ಕೆ ಟಿಎಸ್​ಆರ್​ಟಿಸಿ ಬಸ್​ ಹೊರಟಿತ್ತು. ಆ ಊರಿಗೆ ಅದು ಕೊನೆಯ ಬಸ್​ ಆಗಿದ್ದು, 15 ಜನ ಪ್ರಯಾಣಿಕರು ಕುಳಿತಿದ್ದರು. ಬಸ್ಸಿನ ಡ್ರೈವರ್​ ಮತ್ತು ಕಂಡಕ್ಟರ್​ ಊಟ ಮಾಡುವುದಕ್ಕೆಂದು ಹೋಟೆಲ್​ಗೆ ಹೋಗಿದ್ದರು. ಈ ಸಮಯಕ್ಕೆ ಬಸ್ಸಿನ ಡ್ರೈವರ್​ ಸೀಟನ್ನು ಹತ್ತಿದ ಕಳ್ಳ ಬಸ್ಸನ್ನು ಸ್ಟಾರ್ಟ್​ ಮಾಡಿ ಓಡಿಸಲಾರಂಭಿಸಿದ್ದಾನೆ.

ಮೊದಲಿಗೆ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಆತ ಬಸ್ಸಿನ ಡ್ರೈವರ್​ ಅಲ್ಲ ಅನ್ನೋದು ಗೊತ್ತಾಗಿರಲಿಲ್ಲ. ಕಂಠ ಪೂರ್ತಿ ಕುಡಿದಿದ್ದ ಕಳ್ಳ ಬಸ್ಸನ್ನು ಅಡ್ಡಾದಿಡ್ಡಿ ಓಡಿಸಲಾರಂಭಿಸಿದಾಗ ಪ್ರಯಾಣಿಕರು ಆತನನ್ನು ಕಂಡಕ್ಟರ್​ ಎಲ್ಲಿ ಎಂದು ಪ್ರಶ್ನಿಸಿದ್ದಾರೆ. ಅದಕ್ಕೆ ಆತ ಕಂಡಕ್ಟರ್​ಗೆ ಹುಷಾರಿಲ್ಲ. ನೀವು ನನಗೇ ಹಣ ನೀಡಿ ಎಂದು ಹೇಳಿದ್ದಾನೆ. ಅನುಮಾನ ಬಂದ ಪ್ರಯಾಣಿಕರು ಡಿಪೋ ಮ್ಯಾನೇಜರ್​ಗೆ ಕರೆ ಮಾಡಿ ವಿಷಯ ಮುಟ್ಟಿಸಿದ್ದಾರೆ. ಅತ್ತ ಊಟ ಮುಗಿಸಿ ಬಂದ ಡ್ರೈವರ್​ ಮತ್ತು ಕಂಡಕ್ಟರ್‌ ಬಸ್‌ ಕಾಣಿಸದೆ ಇರೋದನ್ನು ನೋಡಿ ತಬ್ಬಿಬ್ಬಾಗಿದ್ದಾರೆ.

ಇತ್ತ ತನ್ನ ಊರು ಬಂದ ನಂತರ ಬಸ್ಸಿಂದ ಇಳಿದು ಕಳ್ಳ ಪರಾರಿಯಾಗಿದ್ದಾನೆ. ಸದ್ಯ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಕಳ್ಳನನ್ನು ಗುರುತಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

- Advertisment -

RECENT NEWS

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ

ವಿಟ್ಲ ಪೆರುವಾಯಿಯಲ್ಲಿ ಲಾಕ್‌ ಡೌನ್ ಉಲ್ಲಂಘಿಸಿ ವ್ಯವಹಾರ : ಡಿಢೀರ್‌ ದಾಳಿ ನಡೆಸಿದ ಪಿಡಿಒ ಬಂಟ್ವಾಳ : ಲಾಕ್ ಡೌನ್ ಹೆಸರಿನಲ್ಲಿ ಪೆರುವಾಯಿ ವ್ಯವಸಾಯ ಸಹಕಾರಿ ಸಂಘದ ಕಟ್ಟಡದಲ್ಲಿ ಗ್ರಾಮ ಪಂಚಾಯಿತಿ ಅನುಮತಿ ಪಡೆಯದೇ...

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!?

ಕೇರಳ ಗಡಿ ದಾಟಿ ಬಂದ ಮಹಿಳೆಯಲ್ಲಿ ಕೊರೋನಾ ಸೋಂಕು : ಆತಂಂಕದಲ್ಲಿ ಮಂಗಳೂರು ಜನತೆ..!!? ಮಂಗಳೂರು : ಕೇರಳ ಗಡಿ ತೆರವಿನಿಂದ ಮಂಗಳೂರಿಗರಿಗೆ ಮತ್ತೆ ಆತಂಕ ಶುರುವಾಗಿದೆ. ಕಾಸರಗೋಡಿನಿಂದ ಚಿಕಿತ್ಸೆಗಾಗಿ ಬಂದಿದ್ದ ಮಹಿಳೆಯಲ್ಲಿ...

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್

ಖಾಸಾಗಿ ಆಸ್ಪತ್ರೆ- ಲ್ಯಾಬ್‌ಗಳಲ್ಲಿ ಕೊರೊನಾ ವೈರಸ್‌ ಪರೀಕ್ಷೆಗಳಿಗೆ ಹಣ ಪಡೆಯುವಂತಿಲ್ಲ : ಸುಪ್ರೀಂ ಕೋರ್ಟ್ ನವದೆಹಲಿ : ಇನ್ನು ಮುಂದೆ ಕೊರೋನಾ ಸೋಂಕಿಗೆ ಸಂಬಂಧಿಸಿದ ಪರೀಕ್ಷೆಗಳು ಸಂಪೂರ್ಣ ಉಚಿತ. ಹೀಗೆಂತಾ ಸರ್ವೋಚ್ಚಾ ನ್ಯಾಯಾಲಯದ ಮಹತ್ವದ...

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..!

ಲಾಕ್ ಡೌನ್ ನಡುವೆ ಬಂಟ್ವಾಳ ಚರ್ಚಿನಲ್ಲಿ ಕಳ್ಳರ ಕೈಚಳಕ : ಮೂರು ಹುಂಡಿಗಳಿಗೆ ಕನ್ನ..! ಬಂಟ್ವಾಳ : ಲಾಕ್ ಡೌನ್ ನಡುವೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳ್ಳರ ಕೈಚಳ ಮುಂದುವರೆದಿದೆ.ಬಂಟ್ವಾಳದ ಚರ್ಚ್ ಒಂದಕ್ಕೆ ನುಗ್ಗಿದ...