HomeLATEST NEWSಟ್ರಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರು ಸಜೀವ ದಹನ

ಟ್ರಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ ಮೂವರು ಸಜೀವ ದಹನ

ಹರಿಯಾಣ: ಟ್ರಕ್ ಹಾಗೂ ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರಿಗೆ ಬೆಂಕಿ ಹೊತ್ತಿಕೊಂಡ ಪರಿಣಾಮ, ದಂಪತಿ ಸೇರಿದಂತೆ ಮೂವರು ಸ್ಥಳದಲ್ಲೇ ಸಜೀವ ದಹನವಾದ ಘಟನೆ ಹರಿಯಾಣದ ಪಾಣಿಪತ್​ನ ರೋಹ್ಟಕ್​​ ಹೆದ್ದಾರಿಯಲ್ಲಿ ನಡೆದಿದೆ.


ಮೃತಪಟ್ಟ ದುರ್ದೈವಿಗಳನ್ನು ಕರ್ನಾಲ್​ನ ನಿವಾಸಿಗಳು ಎಂದು ಗುರುತಿಸಲಾಗಿದೆ.

ಪಾಣಿಪತ್​​ನಿಂದ ಗೊಹಾನಾ ಕಡೆಗೆ ತೆರಳುತ್ತಿದ್ದ ಕಾರಿಗೆ ಇಸ್ರಾನಾ ಅನಾಜ್ ಮಂಡಿ ಬಳಿ ವೇಗವಾಗಿ ಬಂದ ಟ್ರಕ್​ ಡಿಕ್ಕಿ ಹೊಡೆದಿದ್ದು ಇದೇ ವೇಳೆಗೆ ಕಾರಿಗೆ ಬೆಂಕಿ ಹೊತ್ತಿಕೊಂಡಿದ್ದು, 8 ವರ್ಷದ ಮಗು ಸೇರಿ ದಂಪತಿ ಸಜೀವ ದಹನವಾಗಿದ್ದಾರೆ. ಕಾರು ಚಾಲಕ​ ಗಂಭೀರವಾಗಿ ಗಾಯಗೊಂಡಿದ್ದಾನೆ.

ಪ್ರತಾಪ್​ ವಾಯುಸೇನೆಯುಲ್ಲಿ ಫ್ಲೈಯಿಂಗ್​ ಆಫೀಸರ್​ ಆಗಿ ಈಗಾಗಲೇ ನಿವೃತ್ತರಾಗಿದ್ದಾರೆ. ಇವರಿಗೆ ಮೂವರು ಪುತ್ರರು ಮತ್ತು ಓರ್ವ ಪುತ್ರಿ ಇದ್ದಾರೆ.

ಪತ್ನಿ ಖಾಜಾಗೆ ಹೃದಯದಲ್ಲಿ ಸಮಸ್ಯೆ ಇದ್ದ ಕಾರಣ ಚಿಕಿತ್ಸೆಗೋಸ್ಕರ ಪಾಣಿಪತ್​ಗೆ ತೆರಳಬೇಕಾಗಿತ್ತು. ಅಲ್ಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ದುರ್ಘಟನೆ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಗಾಯಗೊಂಡಿರುವ ಡ್ರೈವರ್​​ ಜಗ್ಬೀರ್​ಗೆ ಚಿಕಿತ್ಸೆ ಮುಂದುವರೆದಿದೆ.

Latest articles

ಕೆಲಸ ಇಲ್ಲದವನು ಎಂದು ಬೈಯುತ್ತಿದ್ದ ಅಜ್ಜಿಯನ್ನು ಕೊಂದು ಸುಟ್ಟು ಹಾಕಿದ ಕಿರಾತಕ ಮೊಮ್ಮಗ

ಮೈಸೂರು: ದುಡಿಯುವ ವಯಸ್ಸಿನಲ್ಲಿ ಪುಂಡ ಪೋಕರಿಯಂತೆ ಅಲೆಯುತ್ತಿದ್ದುದಕ್ಕೆ ಬೈಯುತ್ತಿದ್ದ ಅಜ್ಜಿಯನ್ನು ಸ್ವಂತ ಮೊಮ್ಮಗನೇ ಕೊಂದು ಸುಟ್ಟು ಹಾಕಿ ಶವವನ್ನು...

ಚಿತ್ರದುರ್ಗ : ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಯ್ತು ಅಕ್ರಮ ಗೋಸಾಗಾಟ- ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ..!

ಚಿತ್ರದುರ್ಗದಲ್ಲಿ ರಾತ್ರಿ ವೇಳೆ ಕಳ್ಳರು ಬೀದಿ ಬದಿಯ ಗೋವುಗಳನ್ನು ಕಳ್ಳತನ ಮಾಡಿ ಟೆಂಪೋದಲ್ಲಿ ತುಂಬಿಸಿಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿ...

ಕೇರಳಕ್ಕೆಮುಂಗಾರು ಪ್ರವೇಶ- ಮಂಗಳೂರಿನಲ್ಲಿ ಸಂಜೆ ಬಿರುಸಿನ ಮಳೆ..!

ಕೇರಳದಲ್ಲಿ ಇಂದು ಮುಂಗಾರು ಪ್ರವೇಶಿಸಿದ್ದು ಈ ಹಿನ್ನೆಲೆಯಲ್ಲಿ ಕರಾವಳಿಯ ಬಂದರು ನಗರ ಮಂಗಳೂರಿನಲ್ಲಿ ಇಂದು ಸಂಜೆ ಬಿರುಸಿನ ಮಳೆಯಾಗಿದೆ.ಮಂಗಳೂರು...

ಬೆಂಗಳೂರು: ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ರನ್ನು ಭೇಟಿಯಾದ ಸ್ಪೀಕರ್ ಯು.ಟಿ.ಖಾದರ್

ರಾಜ್ಯ ವಿಧಾನಸಭೆಯ ಸಭಾಧ್ಯಕ್ಷರಾಗಿ ಆಯ್ಕೆಯಾದ ಸ್ಪೀಕರ್ ಯು.ಟಿ.ಖಾದರ್ ಅವರು ಮೊದಲ ಬಾರಿಗೆ ದೆಹಲಿಯಲ್ಲಿ ಉಪರಾಷ್ಟ್ರಪತಿ ಜಗದೀಪ್ ಧನ್ಕರ್ ಅವರನ್ನು...