LATEST NEWS
ಕಾಲ ಬದಲಾಯಿತು.. ಮಗು ಹೆರಲಿರುವ ಅಪ್ಪ, ಕೇರಳದ ಸಹದ್ 8 ತಿಂಗಳ ಗರ್ಭಿಣಿ..!
ಕೋಝಿಕ್ಕೋಡ್ : ಕಾಲ ಬದಲಾಯಿತು.ಭಾರತದ ಮೊದಲ ಟ್ರಾನ್ಸ್ಮ್ಯಾನ್ ತಂದೆಯಾಗಲು ಸಿದ್ಧರಾಗಿದ್ದಾರೆ. ಹೆಣ್ಣಾಗಿ ಹುಟ್ಟಿ ಗಂಡಾಗಿ ಬದಲಾದ ಸಹದ್ ಮತ್ತು ಗಂಡಾಗಿ ಹುಟ್ಟಿ ಹೆಣ್ಣಾಗಿ ಬದಲಾದ ಜಿಯಾ ತಮ್ಮ ಮೊದಲ ಮಗುವನ್ನು ಎದುರು ನೋಡುತ್ತಿದ್ದಾರೆ.
ಸಹದ್ 8 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ತಮ್ಮ ಖುಷಿಯ ಕ್ಷಣವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆಯೇ ದಂಪತಿ ಮಗುವನ್ನು ದತ್ತು ಪಡೆಯಲು ಪ್ರಯತ್ನಿಸಿದ್ದರು.
ಆದರೆ, ದಂಪತಿ ಟ್ರಾನ್ಸ್ಜೆಂಡರ್ ಆಗಿರುವ ಕಾರಣ ಕಾನೂನು ಪ್ರಕ್ರಿಯೆಯು ಸವಾಲಾಗಿತ್ತು.
ಹೀಗಿದ್ದೂ ಸಹದ್ಗೆ ಗಂಡಾಗಿದ್ದರೂ ಗರ್ಭಿಣಿಯಾಗುವ ಯೋಚನೆ ಬಂದಿತ್ತು.’ಜನರು ಏನು ಹೇಳುತ್ತಾರೋ ಎಂಬ ಆತಂಕದಲ್ಲಿ ಆರಂಭದಲ್ಲಿ ಹಿಂಜರಿಯುತ್ತಿದ್ದೆ.
ಅಲ್ಲದೆ ಒಮ್ಮೆ ಕೈಬಿಟ್ಟ ಸ್ತ್ರೀತ್ವಕ್ಕೆ ಮರಳುವುದು ಒಂದು ಸವಾಲಾಗಿ ಪರಿಣಮಿಸಿತು. ಆದರೆ ಜಿಯಾಳ ಪ್ರೀತಿ ಮತ್ತು ತಾಯಿಯಾಗಬೇಕೆಂಬ ಅದಮ್ಯ ಬಯಕೆ ನಿರ್ಧಾರವನ್ನೇ ಬದಲಿಸಿತು’ ಎಂದು ಸಹದ್ ಹೇಳಿದ್ದಾರೆ.
ಕೋಝಿಕ್ಕೋಡ್ ಮೆಡಿಕಲ್ ಕಾಲೇಜಿನ ವೈದ್ಯರ ಮಾರ್ಗದರ್ಶನದಲ್ಲಿ ತಜ್ಞ ಪರೀಕ್ಷೆಗಳನ್ನು ನಡೆಸಿ ಆರೋಗ್ಯ ಸಮಸ್ಯೆ ಇಲ್ಲ ಎಂದು ಖಚಿತಪಡಿಸಿಕೊಂಡ ನಂತರ ದಂಪತಿಗೆ ಚಿಕಿತ್ಸೆ ಆರಂಭಿಸಲಾಯಿತು.
ಸಹದ್ ಹೆಣ್ಣಿನಿಂದ ಗಂಡಾಗಿ ಪರಿವರ್ತನೆಯ ಭಾಗವಾಗಿ, ಸ್ತನಗಳನ್ನು ಶಸ್ತ್ರಚಿಕಿತ್ಸೆಯಿಂದ ತೆಗೆದುಹಾಕಲಾಯಿತು. ಆದರೆ ಗರ್ಭಾಶಯ ಇತ್ಯಾದಿಗಳನ್ನು ಬದಲಾಯಿಸಲಾಗಿಲ್ಲ.
ಈ ತೃತೀಯಲಿಂಗಿ ದಂಪತಿಗಳು ಒಂದೆರಡು ತಿಂಗಳಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಲು ನಿರೀಕ್ಷಿಸುತ್ತಿದ್ದಾರೆ.
ಇದರೊಂದಿಗೆ ಭಾರತದಲ್ಲಿ ಮಗುವಿಗೆ ಜನ್ಮ ನೀಡಿದ ಮೊದಲ ಮೂರನೇ ಲಿಂಗದ ದಂಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದ್ದಾರೆ.
ಈಗ ಎಂಟು ತಿಂಗಳ ತುಂಬು ಗರ್ಭಿಣಿಯಾಗಿರುವ ಸಹದ್ ಹೆರಿಗೆಯ ದಿನಾಂಕ ಮಾರ್ಚ್ 4 ಎಂದು ವೈದ್ಯರು ತಿಳಿಸಿದ್ದಾರೆ.
8 ತಿಂಗಳ ಗರ್ಭಿಣಿಯಾಗಿರುವ ಸಹದ್ ಜೋಡಿ ಇದೀಗ ಫೋಟೋ ಶೂಟ್ ಮಾಡಿಕೊಂಡಿದ್ದು, ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿದ್ದಾರೆ.
ತನಗೆ ಮಗುವಾಗದ ಕಾರಣ ಸಹದ್ ಗೆ ಮಗು ಆಗಲಿದೆ ಎಂದೂ ಜಿಯಾ ಹೇಳುತ್ತಾಳೆ. ಮಗು ಜನಿಸಿದ ನಂತರ ಎದೆಹಾಲು ಬ್ಯಾಂಕ್ನಿಂದ ಖರೀದಿಸಿ ಮಗುವಿಗೆ ನೀಡಲು ನಿರ್ಧರಿಸಿದ್ದಾರೆ.
ಭಾರತದ ಮೊದಲ ಟ್ರಾನ್ಸ್ಜೆಂಡರ್ ಜೋಡಿ ಮಗುವಿನ ಆಗಮನದ ನಿರೀಕ್ಷೆಯಲ್ಲಿ ತುಂಬಾ ಖುಷಿಯಾಗಿದ್ದಾರೆ. ಜಿಯಾ ನೃತ್ಯಗಾರ್ತಿ. ಸಹದ್ ಖಾಸಗಿ ಕಂಪನಿಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ.
DAKSHINA KANNADA
ಪಾವಂಜೆ ನದಿಯಲ್ಲಿ ಅಪರಿಚಿತ ಯುವಕನ ಶವ ಪತ್ತೆ..!
ಮುಲ್ಕಿ: ಮಂಗಳೂರು ಹೊರವಲಯದ ಮುಲ್ಕಿಯ ಠಾಣಾ ವ್ಯಾಪ್ತಿಯ ಹಳೆಯಂಗಡಿ ಸಮೀಪದ ಪಾವಂಜೆ ಮಹಾಲಿಂಗೇಶ್ವರ ದೇವಸ್ಥಾನದ ನಂದಿನಿ ನದಿಯ ದಡದಲ್ಲಿ ಸುಮಾರು 19 ರಿಂದ 20 ವರ್ಷದ ಒಳಗಿನ ಪ್ರಾಯದ ಯುವಕನ ಶವ ಪತ್ತೆಯಾಗಿದೆ.
ಹಳೆಯಂಗಡಿ ಪೂಜಾ ಫ್ರೆಂಡ್ಸ್ ನ ಸದಸ್ಯರು ಸ್ಥಳಕ್ಕೆ ಧಾವಿಸಿ ಶವವನ್ನು ಆಂಬುಲೆನ್ಸ್ ಮೂಲಕ ಮೂಲ್ಕಿ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಯುವಕನ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ.
ಕಳೆದ ದಿನಗಳ ಹಿಂದೆ ಇದೇ ಪರಿಸರದ ಚೇಳಾಯರು ಅಣೆಕಟ್ಟಿನ ಬಳಿ ಯುವಕನೊಬ್ಬ ನಾಪತ್ತೆಯಾಗಿದ್ದು, ಈ ಶವ ಆತನದ್ದೇ ಇರಬೇಕು ಇರಬೇಕೆಂಬ ಶಂಕೆ ವ್ಯಕ್ತವಾಗಿದೆ.
ಮುಲ್ಕಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.
DAKSHINA KANNADA
Kadaba: ಹಠಾತ್ ಕಾಡಾನೆ ದಾಳಿ- ವ್ಯಕ್ತಿ ಗಂಭೀರ..!
ಕಡಬ: ವ್ಯಕ್ತಿಯೊಬ್ಬರ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ಗಂಭೀರ ಸ್ಥಿತಿಗೊಂಡು ಆಸ್ಪತ್ರೆಯಲ್ಲಿ ದಾಖಲಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಐತೂರು ಗ್ರಾಮದ ಮರ್ಧಾಳ-ಕೊಣಾಜೆಯಲ್ಲಿ ನಡೆದಿದೆ.
ಐತ್ತೂರು ಗ್ರಾಮದ ಗರ್ತಿಲ ನಿವಾಸಿ ಓಡಿ ಎಂಬವರ ಪುತ್ರ ಕೂಲಿ ಕಾರ್ಮಿಕ ಚೋಮ (56) ಗಾಯಗೊಂಡವರು.
ಚೋಮ ಅವರು ಸಂಜೆ ವೇಳೆ ಕೆಲಸ ಬಿಟ್ಟು ಮನೆಗೆ ತೆರಳುತ್ತಿದ್ದ ಸಂದರ್ಭ ನೆಲ್ಯಡ್ಕ ಶಾಲೆಯ ಸಮೀಪ ಇರುವ ಕಾರ್ತಿಕೇಯ ಭಜನಾ ಮಂದಿರ ಬಳಿ ಆನೆಯೊಂದು ಹಠತ್ ದಾಳಿ ನಡೆಸಿದೆ.
ಪರಿಣಾಮ ವ್ಯಕ್ತಿ ಗಂಭೀರ ಗಾಯಗೊಂಡಿದ್ದಾರೆ.
ಸದ್ಯ ಚೋಮ ಅವರ ಸ್ಥಿತಿಯು ಚಿಂತಾಜನಕವಾಗಿದ್ದು, ಕಡಬದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರಿಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನಲ್ಲಿ ಈ ಹಿಂದೆ ಆನೆ ದಾಳಿಯ ಘಟನೆಗಳು ನಡೆದಿದ್ದು, ಕೃಷಿ ನಾಶದಂತಹ ಘಟನೆಗಳು ದಿನಂಪ್ರತಿ ನಡೆಯುತ್ತಿದೆ ಎನ್ನಲಾಗಿದೆ.
DAKSHINA KANNADA
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಆಯ್ಕೆ
ಮಂಗಳೂರು: ಮಂಗಳೂರು ಸೊಬೆಸ್ಟಿಯನ್ ಹಾಲ್ ನಲ್ಲಿ ನಡೆದ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ಪದಾಧಿಕಾರಿಗಳ ಚುನಾವಣಾ ಪ್ರಕ್ರಿಯೆಯಲ್ಲಿ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯನ್ನೊಳಗೊಂಡ ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ನ ನೂತನ ಅಧ್ಯಕ್ಷರಾಗಿ ಪದ್ಮಪ್ರಸಾದ್ ಜೈನ್ ಆಯ್ಕೆಯಾಗಿದ್ದಾರೆ.
ಸಂಚಾಲಕರಾಗಿ ಕರುಣಾಕರ್ ಕಾನಂಗಿ ಮಂಗಳೂರು, ಪ್ರಧಾನ ಕಾರ್ಯದರ್ಶಿಯಾಗಿ ದಯಾನಂದ ಬಂಟ್ವಾಳ, ಕೋಶಾಧಿಕಾರಿಯಾಗಿ ನವೀನ್ ರೈ ಪಂಜಳ, ಉಪಾಧ್ಯಕ್ಷರಾಗಿ ರಮೇಶ್ ಕಲಾ ಶ್ರೀ ಮಂಗಳೂರು, ಜಯಕರ್ ಸುವರ್ಣ ಉಡುಪಿ, ಜೊತೆ ಕಾರ್ಯದರ್ಶಿ ಹರೀಶ್ ಪಿ ಕೋಟ್ಯಾನ್ ಮುಲ್ಕಿ, ಹೆರಿಕ್ ಡಿಸೋಜ ಬ್ರಹ್ಮಾವರ, ಸಂಘಟನಾ ಕಾರ್ಯದರ್ಶಿ ಕೃಷ್ಣರಾವ್ ಕಾಪು, ರಮೇಶ್ ಹೊಸಬೆಟ್ಟು ಸುರತ್ಕಲ್, ಛಾಯಾ ಕಾರ್ಯದರ್ಶಿ ರವಿ ಕೋಟ್ಯಾನ್ ಮೂಡಬಿದ್ರಿ, ಕ್ರೀಡಾ ಕಾರ್ಯದರ್ಶಿ ರಂಜಿತ್ ಕುಂದಾಪುರ, ಭಾರದ್ವಾಜ್ ಬೆಳ್ತಂಗಡಿ, ಸಾಂಸ್ಕೃತಿಕ ಕಾರ್ಯದರ್ಶಿ ಚಿದಾನಂದ್ ಉಳ್ಳಾಲ ಮಾಧ್ಯಮ ಕಾರ್ಯದರ್ಶಿ ಹರೀಶ್ ರಾವ್ ಆಯ್ಕೆಯಾಗಿದ್ದಾರೆ.
ಈ ಚುನಾವಣಾ ಪ್ರಕ್ರಿಯೆಯನ್ನು ಎಸ್ ಕೆಪಿಎ ಯ ನಿಕಟ ಪೂರ್ವ ಜಿಲ್ಲಾಧ್ಯಕ್ಷ ಆನಂದ್ ಬಂಟ್ವಾಳ್ ಅವರು ನಡೆಸಿಕೊಟ್ಟರು.
- bangalore6 days ago
ಹುಡುಗಿ ಚೇಂಜ್ ಆದ್ರೂ ಡ್ರೆಸ್ ಚೇಂಜ್ ಆಗಿಲ್ಲ ಅಲ್ವಾ ಶೆಟ್ರೇ?
- bengaluru5 days ago
ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ನಟ ವಿಜಯ ರಾಘವೇಂದ್ರ ಭೇಟಿ..!
- DAKSHINA KANNADA4 days ago
2ನೇ ಮದುವೆಯಾದ ಕಿರುತೆರೆ ನಟಿ ಜ್ಯೋತಿ ರೈ …!
- DAKSHINA KANNADA5 days ago
ಮುಂದಿನ ವರ್ಷದಿಂದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ 3 ಬೋರ್ಡ್ ಎಕ್ಸಾಮ್- ಮಧು ಬಂಗಾರಪ್ಪ