ಕೊಡಗು: ಮಗಳಿಗೆ ವಿವಾಹ ಮಾಡಿ ಗಂಡನ ಮನೆಗೆ ಕಾರು ಹತ್ತಿಸಿ ಕಳುಹಿಸಿದ ಅರೆ ಕ್ಷಣದಲ್ಲಿ ತಂದೆ ಮೃತಪಟ್ಟ ದಾರುಣ ಘಟನೆ ಕೊಡಗಿನ ಸೋಮವಾರಪೇಟೆಯಲ್ಲಿ ನಡೆದಿದೆ.
ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ(60) ಮೃತ ದುರ್ದೈವಿ.
ಸೋಮಪಾರಪೇಟೆಯ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಕಿಬ್ಬೆಟ್ಟ ಗ್ರಾಮದ ಕೃಷಿಕ ಚಿನ್ನಪ್ಪ ಎಂಬವರ ದ್ವಿತೀಯ ಪುತ್ರಿಯ ವಿವಾಹ ನಿನ್ನೆ ನಡೆದಿತ್ತು.
ಕಲ್ಯಾಣ ಮಂಟಪದಲ್ಲಿ ತಮ್ಮ ದ್ವಿತೀಯ ಪುತ್ರಿಯ ವಿವಾಹ ಸಮಾರಂಭವನ್ನು ಮುಗಿಸಿ ವಧು-ವರರನ್ನು ಗೋಕಾಕ್‍ಗೆ ಕಳುಹಿಸಿದ ಕೆಲವೇ ಕ್ಷಣಗಳಲ್ಲಿ ಚಿನ್ನಪ್ಪ ಗೌಡ ಅವರಿಗೆ ಹೃದಯಾಘಾತವಾಗಿದೆ.
ತಕ್ಷಣವೇ ಇಲ್ಲಿನ ಸರಕಾರಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಕಿಬ್ಬೆಟ್ಟ ಗ್ರಾಮದಲ್ಲಿ ನಡೆಯಲಿದೆ.