Thursday, April 22, 2021

ಬೇಟೆಗೆ ಹೋದ 7ಮಂದಿಯಲ್ಲಿ ಓರ್ವ ಗುಂಡೇಟಿಗೆ ಬಲಿ ಮೂವರು ಕೀಟನಾಶಕ ಸೇವಿಸಿ ಆತ್ಮಹತ್ಯೆ..!

ಡೆಹ್ರಾಡೂನ್ : ಕಾಡಿನಲ್ಲಿ ಬೇಟೆಗೆಂದು ತೆರಳಿದ್ದವರಲ್ಲೋರ್ವ  ಅಕಸ್ಮಾತ್ ಗುಂಡೇಟಿಗೆ ಬಲಿಯಾಗಿದ್ದಾನೆ. ಇದರಿಂದ ಗಾಬರಿಗೊಂಡು ಮೂವರು ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದಿರುವ ಘಟನೆ ಉತ್ತರಾಖಂಡ್ ನ ತೆಹ್ರಿ ಜಿಲ್ಲೆಯ ಕುಂದಿಯಲ್ಲಿ ನಡೆದಿದೆ.

ಭಿಲಂಗಣಾ ಬ್ಲಾಕ್​ನಿಂದ 7 ಮಂದಿ ಸ್ನೇಹಿತರು ಶನಿವಾರ ಬೇಟೆಯಾಡಲು ಕಾಡಿಗೆ ತೆರಳಿದ್ದರು ಎನ್ನಲಾಗಿದ್ದು  ಇದರಲ್ಲಿ ಬಂದೂಕನ್ನ ಹೊಂದಿದ್ದ 22 ವರ್ಷದ ರಾಜೀವ್​ ಈ ತಂಡದ ನೇತೃತ್ವ ವಹಿಸಿದ್ದ.

ಈತ ಕಾಲು ಜಾರಿ ನೆಲಕ್ಕೆ ಬಿದ್ದಿದ್ದಾನೆ  ಈ ವೇಳೆ ತನಗರಿವಿಲ್ಲದೆ  ಬಂದೂಕಿನ್ ಟ್ರಿಗರ್​ ಒತ್ತಿ ಹೋಗಿದೆ ಈ ವೇಳೆ ಬಂದೂಕಿನಲ್ಲಿದ್ದ ಗುಂಡು ಸಂತೋಷ್ ಎಂಬಾತನನ್ನ ಸೀಳಿದೆ. ರಕ್ತದ ಮಡುವಿನಲ್ಲಿ ಸಂತೋಷ್​ ಬಿದ್ದಿದ್ದನ್ನ ಕಂಡು ಆತನ ಸ್ನೇಹಿತರು ಗಾಬರಿಗೊಂಡಿದ್ದಾರೆ.

ರಾಜೀವ್​ ಬಂದೂಕಿನ ಸಮೇತ ನಾಪತ್ತೆಯಾಗಿದ್ದರೆ, ಸೋಬನ್​, ಪಂಕಜ್​ ಹಾಗೂ ಅರ್ಜುನ್​ ಎಂಬವರು ಈ ಘಟನೆಯಿಂದ ಮನನೊಂದು ಕೀಟನಾಶಕ ಸೇವಿಸಿದ್ದಾರೆ. ಇದೇ ಬಳಗದಲ್ಲಿದ್ದ ರಾಹುಲ್​ ಹಾಗೂ ಸುಮಿತ್​ ಹಳ್ಳಿಗೆ ವಾಪಸ್ಸಾಗಿದ್ದು ಘಟನೆಯ ಬಗ್ಗೆ ವಿವರಣೆ ನೀಡಿದ್ದಾರೆ.

ಕೂಡಲೇ ಗ್ರಾಮಸ್ಥರು ಕೀಟನಾಶಕ ಸೇವಿಸಿದ್ದ ಮೂವರನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಹೊತ್ತಿಗಾಗಲೇ ಪಂಕಜ್​ ಹಾಗೂ ಅರ್ಜುನ್ ಸಾವನ್ನಪ್ಪಿದ್ದರೆ, ಚಿಕಿತ್ಸೆ ಫಲಕಾರಿಯಾಗದೇ ಸೋಬನ್​ ಕೂಡ ಮೃತಪಟ್ಟಿದ್ದಾನೆ.ಎಲ್ಲಾ ಯುವಕರು 22,23ವರ್ಷ ವಯಸ್ಸಿನ ಯುವಕರಾಗಿದ್ದರು.

Hot Topics

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..!

ಕಾಪುವಿನಲ್ಲಿ ಕಾರು ಅಪಘಾತ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಸಾವು..! ಉಡುಪಿ : ಉಡುಪಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ಮಳೆಯ ನಡುವೆ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಾಪು ಬಳಿ...

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..!

ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಹಳೆಯಂಗಡಿಯಲ್ಲಿ ಹೃದಯ ವಿದ್ರಾವಕ ಘಟನೆ..! ಮಂಗಳೂರು:  ಎಂಟು ವರ್ಷದ ಮಗು ಸೇರಿದಂತೆ ದಂಪತಿ ಸಾಮೂಹಿಕ ಆತ್ಮಹತ್ಯೆ ಮಾಡಿರುವ ದಾರುಣ ಘಟನೆ ಹಳೆಯಂಗಡಿ ಬಳಿಯ ಕಲ್ಲಾಪು ರೈಲ್ವೇ ಗೇಟ್...

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ: ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..! 

ಫೋನಿನಲ್ಲಿ ಮಾತಾಡುತ್ತಿದ್ದ ಯುವಕ ಮೃತ್ಯು ಕೂಪಕ್ಕೆ ವಿಟ್ಲದಲ್ಲಿ ಹೃದಯ ವಿದ್ರಾವಕ ಘಟನೆ..!  ಮಂಗಳೂರು: ಟೆರೇಸ್ ನಲ್ಲಿ ಫೋನ್ ನಲ್ಲಿ ಮಾತನಾಡುತ್ತಿದ್ದ ವೇಳೆ ಆಯತಪ್ಪಿ ಕೆಳಗೆ ಬಿದ್ದು ಯುವಕ ಸಾವನ್ನಪ್ಪಿರುವ ಘಟನೆ ವಿಟ್ಲದ ಕೇಪು ಎಂಬಲ್ಲಿ...