ಇಂದು ಮುಂಜಾನೆ ಟರ್ಕಿ ಮತ್ತು ಸಿರಿಯಾದಲ್ಲಿ ( Turkey and Syria ) ಸಂಭವಿಸಿದ ಪ್ರಬಲ ಭೂಕಂಪದಲ್ಲಿ 1000 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
ಸ್ತಾಂಬುಲ್ : ಇಂದು ಮುಂಜಾನೆ ಟರ್ಕಿ ಮತ್ತು ಸಿರಿಯಾದಲ್ಲಿ ( Turkey and Syria ) ಸಂಭವಿಸಿದ ಪ್ರಬಲ ಭೂಕಂಪದಲ್ಲಿ 1000 ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದು ಇನ್ನೂ ಹಲವಾರು ಮಂದಿ ಗಾಯಗೊಂಡಿದ್ದಾರೆ.
ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ 7.8 ಎಂದು ದಾಖಲಾಗಿದ್ದು ಹಲವಾರು ಕಟ್ಟಡಗಳು ನೆಲಸಮಗೊಂಡಿವೆ.
ಜನರು ನಿದ್ದೆಯಲ್ಲಿದ್ದಾಗ ಸಂಭವಿಸಿದ ಈ ಭೂಕಂಪನದ ಕಂಪನಗಳು ದೂರದ ಸಿಪ್ರಸ್ ದ್ವೀಪದಲ್ಲೂ ಅನುಭವವಾಗಿದೆ.
ಭೂಕಂಪ ಸ್ಥಳೀಯ ಕಾಲಮಾನ 04:07 ಕ್ಕೆ ಸಂಭವಿಸಿತ್ತು. ನಂತರದ ಕಂಪನಗಳು 15 ನಿಮಿಷಗಳ ನಂತರ ಸಂಭವಿಸಿದ್ದರೆ ಅವುಗಳ ತೀವ್ರತೆ 6.7 ಆಗಿತ್ತು.
ಭೂಕಂಪ ಸಂಭವಿಸಿದಾಗ ಹೆಚ್ಚಿನ ಜನರು ನಿದ್ರಿಸುತ್ತಿದ್ದುದರಿಂದ ಸಾವಿನ ಸಂಖ್ಯೆ ಇನ್ನಷ್ಟು ಏರಿಕೆಯಾಗುವ ಭೀತಿಯಿದೆ.
ಅಲೆಪ್ಪೋ, ಹಮಾ ಮತ್ತು ಲಟಾಕಿಯಾ ಪ್ರದೇಶದಲ್ಲಿ ಸಾವಿರಾರು ಜನ ಕಟ್ಟಡಗಳ ಅವಶೇಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ವರದಿಯಾಗಿದೆ.
ಭೂಕಂಪದ ಪ್ರಬಲತೆಗೆ ಹಾಗೂ ಅದು ಉಂಟುಮಾಡಿರುವ ಸಾವುನೋವುಗಳಿಂದ ಆಘಾತಗೊಂಡ ಟರ್ಕಿಯ ಜನರು ತಮ್ಮ ಮನೆಗಳಿಂದ ಹೊರಬಂದು ನಿಂತಿರುವ ದೃಶ್ಯಗಳು ಕಂಡು ಬಂದಿವೆ.
ರಕ್ಷಣಾ ತಂಡಗಳು ಮನೆಗಳ ಅವಶೇಷಗಳಡಿಯಲ್ಲಿ ಸಿಲುಕಿಕೊಂಡವರಿಗಾಗಿ ಶೋಧಿಸುತ್ತಿವೆ.
ಕಳೆದೊಂದು ಶತಮಾನದ ಅವಧಿಯಲ್ಲಿ ಟರ್ಕಿಯಲ್ಲಿ ಸಂಭವಿಸಿದ ಮೊದಲ ಪ್ರಬಲ ಭೂಕಂಪನ ಇದಾಗಿದೆ.